ರಚಿತಾ ರಾಮ್ ಪ್ರಸ್ತುತ ಕನ್ನಡ ಚಿತ್ರರಂಗದಲ್ಲೇ ಚಿರಪರಿಚಿತ ಹೆಸರು. ಕೆನ್ನೆಯ ಮೇಲಿನ ಕ್ಯೂಟ್ ಡಿಂಪಲ್ ಹಾಗೂ ಸೌಂದರ್ಯದ ಮೂಲಕ ಎಲ್ಲರ ಹೃದಯ ಕದ್ದ ಚೋರಿ. ನಗುವನ್ನು ಚೆಲ್ಲುತ್ತಾ ಪಡ್ಡೆ ಹುಡುಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವ ಬೆಡಗಿ. ಎಲ್ಲದಕ್ಕೂ ಹೆಚ್ಚಾಗಿ ಇವರ ಹೈಟ್ ಗೆ ಮನಸೋಲದವರಿಲ್ಲ.ಯಾವುದೇ ಕಾಂಟ್ರವರ್ಸಿ ಗಳಲ್ಲಿ ತಮ್ಮನ್ನು ತೊಡಿಗಿಸಿಕೊಳ್ಳದೇ ತಾನಾಯ್ತು ತನ್ನ ಕೆಲಸವಾಯ್ತು ಎಂದು ಕೇವಲ ಕೆಲಸದ ಮೇಲೆಯೇ ಆಸಕ್ತಿ ವಹಿಸುವ ವ್ಯಕ್ತಿತ್ವ ಇವರದು. ಸದಾ ಹಸನ್ಮುಖಿ ಹಾಗೂ ಇನ್ನೊಬ್ಬರನ್ನೂ ನಗಿಸಿ ತಾನೂ ಖುಷಿ ಪಡುವ ಮೃದು ಸ್ವಭಾವಿ.

ಜೀ ಕನ್ನಡದಲ್ಲಿ ಪ್ರಸಾತವಾಗುತ್ತಿದ್ದ ಅರಸಿ ಧಾರವಾಹಿಯ ಮೂಲಕ ರಚಿತಾ ಮೊಟ್ಟಮೊದಲು ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಚಿಕ್ಕ ವಯಸ್ಸಿನಿಂದಲೇ ನೃತ್ಯದ ಕಡೆ ಆಸಕ್ತಿ ಹೊಂದಿದ್ದ ಇವರು ತನ್ನ ತಂದೆಯ ಸಹಾಯದಿಂದ ಭರತನಾಟ್ಯ ಕಲಿತು ನಟರಾಜನನ್ನು ಒಲಿಸಿಕೊಂಡರು. ಡಾನ್ಸ್ ಹಾಗೂ ಆಕ್ಟಿಂಗ್ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರಿಂದ ಧಾರವಾಹಿಯಿಂದ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಾರೆ. ಚಾಲೆಂಜಿಂಗ್ ಸ್ಟಾರ್ ಜೊತೆ ನಾಯಕಿಯಾಗಿ ಕಾಣಿಸಿಕೊಂಡ ಇವರ ಮೊದಲ ಚಿತ್ರ ಬುಲ್ ಬುಲ್ ಸಾಕಷ್ಟು ಮನ್ನಣೆಗೆ ಪಾತ್ರವಾಗುತ್ತದೆ.
ಈ ಮೂಲಕ ಡಿಂಪಲ್ ಕ್ವೀನ್ ಎಂದೂ ಕರೆಸಿಕೊಳ್ಳುತ್ತಾರೆ. ಈ ವರೆಗೆ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಕನ್ನಡ ಚಿತ್ರರಂಗದಲ್ಲಿ ಯಶಸ್ಸನ್ನು ಕಂಡಿದ್ದಾರೆ ರಚಿತಾ ರಾಮ್.
ಮಾಡೆಲಿಂಗ್ ನಲ್ಲೂ ಆಸಕ್ತಿ ಹೊಂದಿರುವ ಇವರು ಈ ಮೊದಲು ವಿವಿಧ ಉಡುಗೆಗಳನ್ನು ತೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸೌಂದರ್ಯದ ಗಣಿಯೇ ಆಗಿರುವ ರಚಿತಾ ರಾಮ್ ಇತ್ತೀಚೆಗೆ ಕೆಂಪು ಬಣ್ಣದ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡು, ಫೋಟೋ ಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ .
ಈ ಫೋಟೋಗಳು ಸಾಕಷ್ಟು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಕೆಂಪು ಸೀರೆಯ ಚೆಲುವೆಗೆ ಇನ್ಸ್ಟಾಗ್ರಾಮ್ ನಲ್ಲಿ 6ಲಕ್ಷಕ್ಕೂ ಹೆಚ್ಚು ಲೈಕ್ಸ್ ಹಾಗೂ ಸಾವಿರಕ್ಕೂ ಹೆಚ್ಚು ಕಾಮೆಂಟ್ಸ್ ಗಳು ದೊರೆತಿದೆ. ಈ ಫೋಟೋದ ಕೆಳಗೆ ಮನುಷ್ಯನಿಗೆ ಯಾವುದೂ ಅಸಾಧ್ಯವಲ್ಲ, ಮನಸು ಮಾಡಿದರೆ ಎಲ್ಲವೂ ಸಾಧ್ಯ ಎಂಬ ಶೀರ್ಷಿಕೆಯ ಮೂಲಕ ಜನರನ್ನು ಪ್ರೇರೇಪಿಸಲು ಮುಂದಾಗಿದ್ದಾರೆ. ಅಷ್ಟೆ ಅಲ್ಲದೆ ಸ್ಟೇ ಫೋಕಸ್ಡ್ ಎಂಬ ಹ್ಯಾಶ್ಟ್ಯಾಗ್ ನ್ನೂ ನೀಡಿದ್ದಾರೆ. ರಚಿತಾ ರಾಮ್ ಮತ್ತೆ ಹೊಸ ಚಿತ್ರದ ಮೂಲಕ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಾರಾ ಎಂಬುವುದನ್ನು ಕಾದು ನೋಡಬೇಕಿದೆ.