ಏಕದಿನ ವಿಶ್ವಕಪ್ ಪಂದ್ಯಾಟಕ್ಕೆ ಸರಿಸುಮಾರು 12 ವರ್ಷಗಳ ನಂತರ ಭಾರತ ಆತಿಥ್ಯ ವಹಿಸುತ್ತಿದೆ. ಶೀಘ್ರದಲ್ಲೇ ಆರಂಭವಾಗಲಿರುವ ಏಕದಿನ ವಿಶ್ವಕಪ್ ಪಂದ್ಯದ ವೇಳಾ ಪಟ್ಟಿ ಈಗಾಗಲೇ ಬಿಡುಗಡೆಯಾಗಿದೆ. 2012ರಲ್ಲಿ ಭಾರತ-ಬಾಂಗ್ಲಾದೇಶ- ಶ್ರೀಲಂಕಾ ಒಗ್ಗೂಡಿ ಪಂದ್ಯದ ಆತಿಥ್ಯ ವಹಿಸಿತ್ತು. ಆಗ ಎಂ.ಎಸ್ ದೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಶ್ರೀಲಂಕಾವನ್ನು ಮಣಿಸಿ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಟ್ಟಿತ್ತು. ಇದೇ ಹೊತ್ತಿಗೆ ಹಿರಿಯ ಆಟಗಾರ ಸೆಹ್ವಾಗ್ 2011ರ ವೇಳೆಗೆ ಧೋನಿ ನಂಬಿದ್ದ ಮೂಢನಂಬಿಕೆ ನಂಬಿಕೆಯೊಂದರ ಬಗ್ಗೆ ತುಟಿ ಬಿಚ್ಚಿದ್ದಾರೆ.

1983ರ ಬಳಿಕ ಭಾರತ ಮತ್ತೆಂದೂ ಏಕದಿನ ವಿಶ್ವಕಪ್ ಗೆದ್ದಿಲ್ಲ. ಆದರೆ 2011ರಲ್ಲಿ ಎಂ.ಎಸ್.ಧೋನಿ ನಾಯಕತ್ವದಲ್ಲಿ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಟ್ರೋಫಿಯನ್ನು ಭಾರತ ಬಾಚಿಕೊಂಡಿತು. ಇದೇ ಸಮಯದಲ್ಲಿ ಟೀಂ ಇಂಡಿಯಾದ ನಾಯಕನಾಗಿದ್ದ ಧೋನಿ ಟೂರ್ನಿಯುದ್ದಕ್ಕೂ ಮೂಡನಂಬಿಕೆಯೊಂದನ್ನು ಬಲವಾಗಿ ನಂಬುತ್ತಿದ್ದರು ಎಂಬ ಅಚ್ಚರಿಯ ಸಂಗತಿಯನ್ನು ಸೆಹ್ವಾಗ್ ಹೇಳಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಸ್ಟಾರ್ ಸ್ಪೋರ್ಟ್ಸ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಶ್ರೀಲಂಕಾ ಸ್ಪಿನ್ನರ್ ಮುತ್ತಯ್ಯ ಮುರಳಿಧರನ್ ಜೊತೆಗೆ ಮಾತಿಗಿಳಿದ ವಿರೇಂದ್ರ ಸೆಹ್ವಾಗ್, ‘ಪ್ರತಿಯೊಬ್ಬ ಮನುಷ್ಯನೂ ಒಂದಲ್ಲ ಒಂದು ಮೂಢನಂಬಿಕೆಯನ್ನು ನಂಬುತ್ತಾನೆ. ಹಾಗೆಯೇ 2011ರ ಏಕದಿನ ವಿಶ್ವಕಪ್ ವೇಳೆ ಎಂ.ಎಸ್.ಧೋನಿ ಕಿಚಡಿ ಕುರಿತಾದ ಮೂಢನಂಬಿಕೆಯನ್ನು ಹೊಂದಿದ್ದರು. ಟೂರ್ನಿಯುದ್ದಕ್ಕೂ ಧೋನಿ ಕಿಚಡಿಯನ್ನು ಬಿಟ್ಟು ಬೇರೆನ್ನನ್ನೂ ತಿನ್ನುತ್ತಿರಲಿಲ್ಲ’ ಎಂದಿದ್ದಾರೆ.
ಜೊತೆಗೆ ‘2011ರ ವಿಶ್ವಕಪ್ ಪಂದ್ಯದ ವೇಳೆ ನಾವು ಹೋದಲ್ಲೆಲ್ಲ ಕ್ರಿಕೆಟ್ ಪ್ರೇಮಿಗಳು ಗೆಲುವಿಗಾಗಿ ಹವಣಿಸುತ್ತಿದ್ದರು. ಧೋನಿಯೂ ಕೂಡ ಟೂರ್ನಿಯ ಪ್ರತಿ ದಿನ ಕಿಚಡಿ ತಿನ್ನುತ್ತಿದ್ದರು. ಒಂದು ವೇಳೆ ರನ್ ಹೊಡೆಯದಿದ್ದರೂ, ಮೂಢನಂಬಿಕೆಗಳು ನಮ್ಮ ಕೈ ಹಿಡಿಯುತ್ತವೆ ಮತ್ತು ನಾವು ಪಂದ್ಯಾಟ ಗೆಲ್ಲಬಹುದು ಎನ್ನುತ್ತಿದ್ದರು’ ಎಂದು ಎಂ.ಎಸ್. ಧೋನಿ ನಂಬುತ್ತಿದ್ದ ಮೂಢನಂಬಿಕೆಯನ್ನು ಬಹಿರಂಗ ಪಡಿಸಿದ್ದಾರೆ.