ಬಿಗ್ ಬಾಸ್ ಕನ್ನಡ ಸೀಸನ್11 ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ನಿನ್ನೆಯಷ್ಟೇ ಮನೆಯ ಕಟ್ಟ ಕಡೆಯ ಕಿಚ್ಚನ ಪಂಚಾಯಿತಿ ಸಂಚಿಕೆ ನಡೆದಿದ್ದು, ಮುಂದಿನ ವಾರ ಫಿನಾಲೆ ನಡೆಯಲಿದೆ, ಫಿನಾಲೆಯಲ್ಲಿ ಸಿಗಲಿದ್ದಾರೆ. ಈ ಸೀಸನ್ ಮುಗಿಯಲು ಉಳಿದಿರುವುದು ಇನ್ನು ಒಂದು ವಾರ ಮಾತ್ರ. ಈ ವಾರದ ಡಬಲ್ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಧನರಾಜ್ ಹಾಗೂ ಗೌತಮಿ ಇಬ್ಬರು ಹೊರಬಂದಿದ್ದಾರೆ. ಇವರಿಬ್ಬರು ಫಿನಾಲೆಯಲ್ಲಿ ಇರುವುದಕ್ಕೆ ಅರ್ಹತೆ ಹೊಂದಿರುವ ವ್ಯಕ್ತಿಗಳು ಎಲಿಮಿನೇಟ್ ಆಗಬಾರದಿತ್ತು ಎನ್ನುವುದು ಜನರ ಅಭಿಪ್ರಾಯ. ಮಾಜಿ ಬಿಗ್ ಬಾಸ್ ಸ್ಪರ್ಧಿ ಕಿರಿಕ್ ಕೀರ್ತಿ ಅವರು ಇದೀಗ ಧನರಾಜ್ ಅವರ ಬಗ್ಗೆ ಪೋಸ್ಟ್ ಮಾಡಿದ್ದಾರೆ.
ಕನ್ನಡಪರ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದವರು ಕಿರಿಕ್ ಕೀರ್ತಿ. ಆದರೆ ಇವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ಬಿಗ್ ಬಾಸ್ ಶೋ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಬಿಗ್ ಬಾಸ್ ಇಂದ ಸಿಕ್ಕ ಜನಪ್ರಿಯತೆ ಕೀರ್ತಿ ಅವರನ್ನು ಇನ್ನಷ್ಟು ಎತ್ತರಕ್ಕೆ ಕರೆದುಕೊಂಡು ಹೋಗಿದೆ. ಈಗ ಇವರು ಜವಾಬ್ದಾರಿಯುತ ಜರ್ನಲಿಸ್ಟ್ ಸಹ ಆಗಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಆಗಿರುವ ಕಿರಿಕ್ ಕೀರ್ತಿ ಅವರು ಬಿಗ್ ಬಾಸ್ ಶೋ ಅನ್ನು ತಪ್ಪದೇ ಪ್ರತಿ ಸೀಸನ್ ನೋಡುತ್ತಾರೆ. ಆಗಾಗ ಶೋ ಬಗ್ಗೆ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ.. ಅದೇ ರೀತಿ ಧನರಾಜ್ ಅವರ ಬಗ್ಗೆ ಸಹ ಬರೆದಿದ್ದಾರೆ.

ಈ ಸೀಸನ್ ನಲ್ಲಿ ಧನರಾಜ್ ಅವರು ಬಹಳ ಪ್ರಮುಖವಾದ ಸ್ಪರ್ಧಿಗಳಲ್ಲಿ ಒಬ್ಬರು. ಇವರು ಕಾಮಿಡಿ ಇಂದ ಹೆಚ್ಚು ಹೆಸರುವಾಸಿ ಆಗಿದ್ದರು. ಮನೆಯಲ್ಲಿ ಒಳ್ಳೆಯ ಎಂಟರ್ಟೈನ್ಮೆಂಟ್ ಕೊಡುತ್ತಾ ಎಲ್ಲರನ್ನು ನಕ್ಕು ನಗಿಸುತ್ತಿದ್ದರು. ಇವರ ಹಾಗೂ ಹನುಮಂತನ ಫ್ರೆಂಡ್ಶಿಪ್ ಸಹ ಜನರಿಗೆ ತುಂಬಾ ಇಷ್ಟವಾಗಿತ್ತು. ಯಾರ ಜೊತೆಗೂ ಜಗಳ ಮಾಡಿಕೊಳ್ಳದೇ, ತಮ್ಮ ಪಾಡಿಗೆ ತಾವಿದ್ದ ಒಳ್ಳೇ ಹುಡುಗ ಧನರಾಜ್. ಹನುಮಂತ ಫಿನಾಲೆಗೆ ಬಂದಿರುವ ಹಾಗೆ ಧನರಾಜ್ ಸಹ ಬರಬೇಕು ಎನ್ನುವುದು ನೋಡುಗರ ಆಸೆ ಆಗಿತ್ತು, ಆದರೆ ನಿನ್ನೆ ನಡೆದ ಭಾನುವಾರದ ಸಂಚಿಕೆಯಲ್ಲಿ ಧನರಾಜ್ ಎಲಿಮಿನೇಟ್ ಆಗಿದ್ದಾರೆ. ಇದರಿಂದ ಬಿಗ್ ಬಾಸ್ ವೀಕ್ಷಕರಿಗೆ ಬೇಸರ ಆಗಿದ್ದಂತೂ ನಿಜ..
ಕೀರ್ತಿ ಅವರು ಧನರಾಜ್ ಅವರ ಬಗ್ಗೆ ಬರೆದಿರುವುದು ಏನು ಎಂದರೆ.. “ಈ ಸೀಸನ್ನ ಬಿಗ್ಬಾಸ್ನಲ್ಲಿ ನಂಗೆ ತುಂಬಾ ಇಷ್ಟವಾದ ಕಂಟೆಸ್ಟೆಂಟ್ಗಳಲ್ಲಿ ಒಬ್ಬ ಧನರಾಜ್ ಆಚಾರ್… ಸಹೋದರ ತನಗೆ ಸಿಕ್ಕ ಎಲ್ಲಾ ಅವಕಾಶಗಳನ್ನು ಅದ್ಭುತವಾಗಿ ಬಳಸಿಕೊಂಡ… ತನ್ನ ಶಕ್ತಿಮೀರಿ ಟಾಸ್ಕ್ ಆಡಿದ್ದ… ಪ್ರತೀ ಕ್ಷಣ ಮನರಂಜನೆ ಕೊಟ್ಟಿದ್ದಾನೆ…ನಕ್ಕಿದ್ದಾನೆ…ನಗಿಸಿದ್ದಾನೆ… ಮನಸಾರೆ ಆಟವಾಡಿದ್ದಾನೆ… ತನ್ನ ವ್ಯಕ್ತಿತ್ವಕ್ಕೆ ತಕ್ಕಂತೆ ನಡೆದುಕೊಂಡಿದ್ದಾನೆ… ಸ್ನೇಹ ಉಳಿಸಿಕೊಂಡಿದ್ದಾನೆ… ಮನಸ್ಸಿಗೆ ಅನಿಸಿದ್ದನ್ನು ಮುಖದ ಮೇಲೆ ಹೇಳಿದ್ದಾನೆ… ಕಪ್ ಗೆಲ್ಲದಿದ್ದರೂ ಗೆದ್ದು ಬೀಗಿದ್ದಾನೆ… ಕಪ್ ಗೆಲ್ಲೋ ಅಷ್ಟು ಆಡಿದ್ದಾನಾ ಗೊತ್ತಿಲ್ಲ… ಆದ್ರೆ ಫಿನಾಲೆ ವಾರದಲ್ಲಿರೋ ಎಲ್ಲಾ ಯೋಗ್ಯತೆ ಇತ್ತು ಧನ್ರಾಜ್ಗೆ…

ಫಿನಾಲೆಗೆ ವಾರ ಬಾಕಿ ಇದ್ದಾಗ ಮನೆಯಿಂದ ಹೊರಹೋಗೋ ಸಂಕಟ ಸಾಮಾನ್ಯವಾದುದ್ದಲ್ಲ… ಬೇಜಾರಗಬೇಡ ತಮ್ಮ… ನಿನ್ನ ತಾಕತ್ತು ಇನ್ನೂ ಇದೆ… ನೀನು ಸೋತಿಲ್ಲ… ಸೋಲಲ್ಲ…ಮತ್ಯಾವತ್ತೂ ಕಣ್ಣೀರು ಹಾಕಬೇಡ.. ಭವಿಷ್ಯ ಉಜ್ವಲವಾಗಿರಲಿ…ಬದುಕು ಬಂಗಾರವಾಗಲಿ… U gave ur best… ಸಕಲವೂ ಸನ್ಮಂಗಳವಾಗಲಿ… ” ಎಂದು ಬರೆಯುವ ಮೂಲಕ ಧನರಾಜ್ ಅವರ ಮುಂದಿನ ಪ್ರಾಜೆಕ್ಟ್ ಗಳು ಮತ್ತು ಅವರ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಕಿರಿಕ್ ಕೀರ್ತಿ. ಧನರಾಜ್ ಅವರು ಮುಂದೆ ಯಾವ ಶೋನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ..