ನಮ್ಮ ಕರ್ನಾಟಕದವರು ಕರ್ನಾಟಕದಲ್ಲಿ ಹುಟ್ಟಿ ಬೆಳೆದವರು ಯಾರಿಗೂ ಕಡಿಮೆ ಇಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಕರ್ನಾಟಕ, ಕನ್ನಡ ಭಾಷೆಯನ್ನು ಎಲ್ಲಾ ಕಡೆ ಪಸರಿಸಿದ್ದಾರೆ. ಅಂಥ ನಾಯಕಿಯರಲ್ಲಿ ದೀಪಿಕಾ ಪಡುಕೋಣೆ ಅವರು ಸಹ ಒಬ್ಬರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ದೀಪಿಕಾ ಪಡುಕೋಣೆ, ಖ್ಯಾತ ಸ್ಪೋರ್ಟ್ಸ್ ಪರ್ಸನ್ ಪ್ರಕಾಶ್ ಪಡುಕೋಣೆ ಅವರ ಮಗಳು. ದೀಪಿಕಾಕ್ ಹುಟ್ಟಿದ್ದು, ಬೆಳೆದದ್ದು, ಓದಿದ್ದು, ಕೆರಿಯರ್ ಶುರು ಮಾಡಿದ್ದು, ಮೊದಲು ಸಿನಿಮಾದಲ್ಲಿ ಅಭಿನಯಿಸಿದ್ದು ಎಲ್ಲವೂ ಇಲ್ಲೇ. ರಿಯಲ್ ಸ್ಟಾರ್ ಉಪೇಂದ್ರ ಅವರ ಐಶ್ವರ್ಯ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರು ಮೊದಲ ಬಾರಿಗೆ ನಟಿಸಿದ್ದು.
ಬಳಿಕ ಬಾಲಿವುಡ್ ನಲ್ಲಿ ನಟ ಶಾರುಖ್ ಖಾನ್ ಅವರ ಜೊತೆಗೆ ಓಂ ಶಾಂತಿ ಓಂ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಓಂ ಶಾಂತಿ ಓಂ ದೀಪಿಕಾ ಅವರಿಗೆ ಬಾಲಿವುಡ್ ನಲ್ಲಿ ಅತಿದೊಡ್ಡ ಲಾಂಚ್ ಎಂದು ಹೇಳಿದರು ತಪ್ಪಲ್ಲ. ರಾತ್ರೋರಾತ್ರಿ ಬಾಲಿವುಡ್ ನಲ್ಲಿ ಸ್ಟಾರ್ ಆಗಿ ಹೋದರು ದೀಪಿಕಾ ಪಡುಕೋಣೆ. ಈಗ ಅವರು ಹಾಲಿವುಡ್ ವರೆಗು ಬೆಳೆದು ನಿಂತಿದ್ದಾರೆ. ಬೆಂಗಳೂರಿನ ದೀಪಿಕಾ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವುದು ನಿಜಕ್ಕೂ ಎಲ್ಲರಿಗೂ ಸಂತೋಷದ ವಿಷಯ. ಕನ್ನಡತಿಯಾಗಿ ದೀಪಿಕಾ ಪಡುಕೋಣೆ ಅವರು ಕನ್ನಡವನ್ನು ಮಾತನಾಡಿ, ಬಾಲಿವುಡ್ ನವರಿಗೂ ಕನ್ನಡ ಹೇಳಿಕೊಡುವುದು ಸಂತೋಷದ ವಿಷಯ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಈ ಹಿಂದೆ ದೀಪಿಕಾ ಪಡುಕೋಣೆ ಅವರು ಅಭಿಷೇಕ್ ಬಚ್ಚನ್ ಅವರಿಗೆ, ಶಾರುಖ್ ಖಾನ್ ಅವರಿಗೆ ಕನ್ನಡ ಹೇಳಿಕೊಡುವುದನ್ನು ನೋಡಿದ್ದೇವೆ. ಇದೀಗ ದೀಪಿಕಾ ಪಡುಕೋಣೆ ಅವರು ಬಾಲಿವುಡ್ ನ ಖ್ಯಾತ ಸಿಂಗರ್ ದಿಲ್ಜಿತ್ ಗೆ ಕನ್ನಡ ಹೇಳಿಕೊಟ್ಟಿದ್ದಾರೆ. ಅವರು ಕನ್ನಡ ಕಲಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮೊನ್ನೆ ಬೆಂಗಳೂರಿನಲ್ಲಿ ನಡೆದ ದಿಲ್ಜಿತ್ ಅವರ ಕಾನ್ಸರ್ಟ್ ಗೆ ದೀಪಿಕಾ ಅವರು ಸಹ ಬಂದಿದ್ದರು. ಬಹಳ ಸಮಯದ ನಂತರ ಬೆಂಗಳೂರಿಗೆ ಬಂದಿದ್ದಾರೆ ದೀಪಿಕಾ, ಮಗು ಹುಟ್ಟಿದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು. ಹಾಗಾಗಿ ದೀಪಿಕಾ ಪಡುಕೋಣೆ ಅವರನ್ನು ನೋಡಿ ಜನರು ಕೂಡ ತುಂಬಾ ಸಂತೋಷಪಟ್ಟಿದ್ದಾರೆ.
ಈ ಕಾನ್ಸರ್ಟ್ ನಲ್ಲಿ ದಿಲ್ಜಿತ್ ಅವರು ಹಾಡುತ್ತಿದ್ದ ಹಾಡುಗಳನ್ನ ಕೇಳುತ್ತಾ ಎಂಜಾಯ್ ಮಾಡಿದ್ದಾರೆ ದೀಪಿಕಾ. ಹಾಗೆಯೇ ಸ್ಟೇಜ್ ಮೇಲೆ ಹೋದಾಗ ಕನ್ನಡದಲ್ಲಿ ಮಾತನಾಡಿ, ನಮಸ್ಕಾರ ಬೆಂಗಳೂರು ಎಂದು ಹೇಳುತ್ತಾರೆ. ನಮಸ್ಕಾರ ಹೇಗಿದ್ದೀರಾ ಇದೆಲ್ಲಾ ನನಗೂ ಗೊತ್ತು ಎಂದು ದಿಲ್ಜಿತ್ ಹೇಳಿದಾಗ, ಸ್ಕೂಲ್ ನಲ್ಲಿ ನಾನು ಕನ್ನಡ ಓದಿದ್ದೀನಿ ಎಂದು ಹೇಳಿದ ದೀಪಿಕಾ, ನಾನು ನಿಮ್ಮನ್ನು ಪ್ರೀತಿಸ್ತೀನಿ ಎಂದು ಹೇಳಿ, ದಿಲ್ಜಿತ್ ಅವರಿಂದಲೂ ಈ ಮಾತುಗಳನ್ನು ಹೇಳಿಸಿದ್ದಾರೆ. ದೀಪಿಕಾ ಕನ್ನಡ ಮಾತಾಡಿ, ದಿಲ್ಜಿತ್ ಅವರ ಕೈಯಲ್ಲೂ ಕನ್ನಡ ಮಾತನಾಡಿಸಿರುವುದಕ್ಕೆ ಅಭಿಮಾನಿಗಳು ಫುಲ್ ಖುಷಿ ಪಟ್ಟಿದ್ದಾರೆ.
ಕಾನ್ಸರ್ಟ್ ಎಂಜಾಯ್ ಮಾಡಿದ ದೀಪಿಕಾ, ಫ್ರೆಂಡ್ಸ್ ಜೊತೆಯಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುತ್ತಾ ಎಂಜಾಯ್ ಮಾಡಿದ್ದಾರೆ. ದೀಪಿಕಾ ಅವರು ಕಾನ್ಸರ್ಟ್ ಗೆ ಬಂದಿದ್ದ ಫೋಟೋಸ್ ಮತ್ತು ವಿಡಿಯೋಗಳು ವೈರಲ್ ಆಗಿದೆ. ಇನ್ನು ಮಗುವಾದ ಮೇಲೆ ಕೂಡ ದೀಪಿಕಾ ಪಡುಕೋಣೆ ಅವರು ಅಷ್ಟೇ ಸುಂದರವಾಗಿ, ಗ್ಲಾಮರಸ್ ಆಗಿದ್ದಾರೆ ಎನ್ನುವುದು ಕೂಡ ನೆಟ್ಟಿಗರು ಗಮನ ಸೆಳೆದಿದೆ. ದೀಪಿಕಾ ಅವರ ಮುಖದಲ್ಲಿ ಗ್ಲೋ ಅದೇ ರೀತಿ ಇದೆ ಎನ್ನುತ್ತಿದ್ದಾರೆ. ಇನ್ನು ದೀಪಿಕಾ ಅವರು ಮಗುವಾದ ಮೇಲೆ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಅಭಿಮಾನಿಗಳು ಸಹ ಕಾಯುತ್ತಿದ್ದಾರೆ.