ನಟ ದರ್ಶನ್ ಅವರ ಬಗ್ಗೆ ಇಂದು ಎಷ್ಟೇ ವಿವಾದಗಳು ಕೇಳಿಬರುತ್ತಿರಬಹುದು. ಅವರು ಮಾಡಿದ ಕೆಲಸದ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಿರಬಹುದು. ಇದೆಲ್ಲವು ಒಂದು ಕಡೆಯಾದರೆ, ಮತ್ತೊಂದು ಕಡೆ ದರ್ಶನ್ ಅವರು ತುಂಬಾ ಒಳ್ಳೆಯ ವ್ಯಕ್ತಿ ಎನ್ನುವುದು ಅಷ್ಟೇ ಸತ್ಯ. ದರ್ಶನ್ ಅವರು ಸರಳತೆಗೆ ಹಲವು ಸಾರಿ ಜನರ ಮನಸ್ಸು ಗೆದ್ದಿದ್ದಾರೆ. ಒಬ್ಬ ಸ್ಟಾರ್ ಹೀರೋ ಎನ್ನುವ ಅಹಂ ಇಲ್ಲದೇ ದರ್ಶನ್ ಅವರು ಎಲ್ಲಾ ಕಡೆ ಓಡಾಡುತ್ತಾರೆ, ಇಷ್ಟ ಆಗಿದ್ದನ್ನು ತಿನ್ನುತ್ತಾರೆ ಎನ್ನುವುದು ಈಗಾಗಲೇ ಅವರ ಫ್ಯಾನ್ಸ್ ಗೆ ಗೊತ್ತಿರುವ ವಿಷಯ. ಇಂಥದ್ದೇ ಒಂದು ಘಟನೆಯನ್ನು ನಟ ಸೃಜನ್ ಲೋಕೇಶ್ ಅವರು ತಮ್ಮ ಮಜಾ ಟಾಕೀಸ್ ಕಾರ್ಯಕ್ರಯದಲ್ಲಿ ನೆನಪು ಮಾಡಿಕೊಂಡಿದ್ದಾರೆ. ಮೋರಿ ಪಕ್ಕ ಇದ್ದ ಒಂದು ವಡಾ ಪಾವ್ ಅಂಗಡಿಯಲ್ಲಿ ಕೂತು ವಡಾ ಪಾವ್ ತಿಂದಿದ್ದರಂತೆ ನಟ ದರ್ಶನ್. ಈ ಅಪರೂಪದ ನೆನಪನ್ನು ಸೃಜನ್ ಲೋಕೇಶ್ ಶೇರ್ ಮಾಡಿಕೊಂಡಿದ್ದಾರೆ.

ನಟ ದರ್ಶನ್ ಅವರ ಲೈಫ್ ಶುರುವಾಗಿದ್ದು ಹೇಗೆ ಎಂದು ನಮಗೆಲ್ಲಾ ಗೊತ್ತೇ ಇದೆ. ದರ್ಶನ್ ಅವರು ಕನ್ನಡದ ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಅವರ ಮಗ. ಸ್ಟಾರ್ ನಟನ ಮಗ ಆಗಿದ್ದರು ಸಹ ಅವರ ತಂದೆಗೆ ಮಕ್ಕಳು ಚಿತ್ರರಂಗಕ್ಕೆ ಬರುವುದು ಇಷ್ಟವಿರಲಿಲ್ಲ. ತೂಗುದೀಪ ಶ್ರೀನಿವಾಸ್ ಅವರು ಮಕ್ಕಳು ಚೆನ್ನಾಗಿ ಓದಿ, ಬೇರೆ ಏನಾದರೂ ಒಳ್ಳೆಯ ಕೆಲಸ ಮಾಡಿ ಜೀವನ ನಡೆಸಬೇಕು ಎಂದು ಆಸೆ ಇತ್ತು. ಆದರೆ ವಿಧಿ ಬರೆದಿದ್ದೆ ಬೇರೆ. ತೂಗುದೀಪ ಶ್ರೀನಿವಾಸ್ ಅವರು ತೀರಿಕೊಂಡ ನಂತರ ದರ್ಶನ್ ಅವರ ಕುಟುಂಬ ಬಹಳ ಕಷ್ಟದಲ್ಲಿತ್ತು. ಆಗ ದರ್ಶನ್ ಅವರು ಅನೇಕ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ, ಮನೆ ನೋಡಿಕೊಂಡಿದ್ದಾರೆ. ಹಾಲು ಮಾರುವ ಕೆಲಸವನ್ನು ಕೂಡ ಮಾಡಿದ್ದಾರೆ. ಹಿರಿಯ ಕಲಾವಿದನ ಮಗ ಆಗಿದ್ದರು ಸಹ ಚಿತ್ರರಂಗಕ್ಕೆ ಬರುವ ಹಾದಿ ಸುಲಭ ಆಗಿರಲಿಲ್ಲ.

ಹೌದು, ದರ್ಶನ್ ಅವರು ಹೀರೋ ಆಗುವುದಕ್ಕೆ ಹೆಸರು ಮಾಡುವುದಕ್ಕೆ ಆ ಜರ್ನಿ ಸುಲಭ ಅಂತೂ ಆಗಿರಲಿಲ್ಲ. ದರ್ಶನ್ ಅವರು ಕೆಲಸ ಶುರು ಮಾಡಿದ್ದು ಲೈಟ್ ಬಾಯ್ ಆಗಿ, ಸಣ್ಣ ಸಣ್ಣ ಕೆಲಸಗಳನ್ನು ಮಾಡಿಕೊಂಡು ಬಂದು, ಕೆಲವು ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ, ನಂತರವೇ ದರ್ಶನ್ ಅವರಿಗೆ ಹೀರೋ ಆಗಿ ನಟಿಸುವ ಅವಕಾಶ ಸಿಕ್ಕಿದ್ದು. ಮೊದಲ ಸಿನಿಮಾ ಸೂಪರ್ ಹಿಟ್ ಆಯಿತು. ಬಳಿಕ ಸಿಕ್ಕ ಒಂದೊಂದು ಅವಕಾಶಗಳು, ಯಶಸ್ಸುಗಳು, ಪಾತ್ರಗಳ ಆಯ್ಕೆ ಇದರ ಮೂಲಕ ದರ್ಶನ್ ಅವರಿಗೆ ಇದ್ದ ಜನಪ್ರಿಯತೆ, ಅವರ ಅಭಿಮಾನಿ ಬಳಗ ಎಲ್ಲವೂ ಕೂಡ ಬೆಳೆಯುತ್ತಾ ಹೋಯಿತು. ಇಂದು ಸುಮಾರು 60 ಸಿನಿಮಾಗಳಲ್ಲಿ ನಟಿಸಿರುವ ದರ್ಶನ್ ಅವರಿಗೆ ನಮ್ಮ ರಾಜ್ಯದಲ್ಲಿ ಅತಿದೊಡ್ಡ ಮಾಸ್ ಫ್ಯಾನ್ ಬೇಸ್ ಇದೆ ಎಂದು ಹೇಳಿದರೂ ತಪ್ಪಲ್ಲ. ಅಷ್ಟು ಇವರಿಗೆ ಅಭಿಮಾನಿಗಳ ಸಪೋರ್ಟ್ ಇದೆ.

ಇನ್ನು ದರ್ಶನ್ ಅವರು ಸಹ ಅದೇ ರೀತಿ, ಅಭಿಮಾನಿಗಳನ್ನು ಕಂಡರೆ ಅವರಿಗೆ ಬಹಳ ಪ್ರೀತಿ ಇದೆ. ದರ್ಶನ್ ಅವರು ತಮ್ಮ ಫ್ಯಾನ್ಸ್ ಅನ್ನು ಪ್ರೀತಿಯಿಂದ ಸೆಲೆಬ್ರಿಟಿಸ್ ಎಂದು ಕರೆಯುತ್ತಾರೆ. ತಮ್ಮ ಎದೆಯ ಮೇಲೆ ಸೆಲೆಬ್ರಿಟಿಸ್ ಎಂದು ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ಅಂಥದ್ದೊಂದು ಸ್ಥಾನ ಕೊಟ್ಟಿದ್ದಾರೆ ಡಿಬಾಸ್. ಇನ್ನು ಅಭಿಮಾನಿಗಳು ಕೂಡ ಅದೇ ರೀತಿ. ಏನೇ ನಡೆದರು ದರ್ಶನ್ ಅವರನ್ನು ಅವರ ಫ್ಯಾನ್ಸ್ ಬಿಟ್ಟುಕೊಡೋದಿಲ್ಲ. ದರ್ಶನ್ ಅವರನ್ನು ಕಂಡರೆ ಫ್ಯಾನ್ಸ್ ಗೆ ಅಷ್ಟು ಪ್ರೀತಿ ಇದೆ. ಅವರ ಹೆಸರಲ್ಲಿ ಒಳ್ಳೆಯ ಕೆಲಸಗಳನ್ನು, ದಾನ ಧರ್ಮಗಳನ್ನು ಸಹ ಮಾಡುತ್ತಾ ಬಂದಿದ್ದಾರೆ. ಪ್ರೀತಿಯಿಂದ ದರ್ಶನ್ ಅವರನ್ನು ಡಿಬಾಸ್ ಎಂದು ಕರೆಯುತ್ತಾರೆ. ದರ್ಶನ್ ಅವರ ಬಗ್ಗೆ ಅನೇಕ ವಿಚಾರಗಳು ಸಹ ಆಗಾಗ ವೈರಲ್ ಆಗುತ್ತದೆ.

ಇದೀಗ ಮಜಾ ಟಾಕೀಸ್ ಸಂಚಿಕೆಯಲ್ಲಿ ಸೃಜನ್ ಲೋಕೇಶ್ ಅವರು ದರ್ಶನ್ ಅವರ ಕುರಿತಾಗಿ ಒಂದು ಆಸಕ್ತಿಕರ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ವಾರ ಮಜಾ ಟಾಕೀಸ್ ಗೆ ಬರುತ್ತಿರುವುದು ಸ್ಯಾಂಡಲ್ ವುಡ್ ನ ಸ್ಟಾರ್ ನಟಿಯರು. ನಟಿ ಶರಣ್ಯ, ಮಾನ್ವಿತ ಕಾಮತ್ ಬಂದಿದ್ದಾರೆ. ಶರಣ್ಯ ಅವರು ರಸ್ತೆಬದಿಯಲ್ಲಿ ಪಾನಿಪುರಿ ತಿನ್ನುವಾಗ ನೋಡಿದ ಕೆಲವು ಫ್ಯಾನ್ಸ್, ಅದು ಶರಣ್ಯ ಅಲ್ವಾ ಎಂದು ಹೇಳಿ ಶರಣ್ಯ ಅವರನ್ನು ನೋಡಿ, ಅವರು ತುಂಬಾ ಸಿಂಪಲ್ ಆಗಿ ಹೋಗಿದ್ದರಿಂದ ಗುರುತು ಹಿಡಿಯುವುದಕ್ಕೆ ಕಷ್ಟವಾಗಿ, ಹೇ ಇದು ಶರಣ್ಯ ಅಲ್ಲ ಅವರು ಯಾಕೆ ಇಲ್ಲಿ ಬಂದು ತಿಂತಾರೆ, ಹಾಕಿರೋ ಚಪ್ಪಲಿ ನೋಡಿದ್ರೆ ಹಾಗಿದೆ ಎಂದು ಹೇಳಿಕೊಂಡು ಹೋದರಂತೆ. ಈ ಘಟನೆ ಬಗ್ಗೆ ಶರಣ್ಯ ಹೇಳಿದಾಗ ಸೃಜನ್ ಲೋಕೇಶ್ ದರ್ಶನ್ ಅವರ ಬಗ್ಗೆ ಒಂದು ಘಟನೆಯನ್ನು ಶೇರ್ ಮಾಡಿಕೊಂಡಿದ್ದಾರೆ.

ದಿನಕರ್ ತೂಗುದೀಪ ಅವರ ಮದುವೆ ನಡೆದಿದ್ದು ಶಿರಡಿಯಲ್ಲಿ, ದರ್ಶನ್, ಸೃಜನ್ ಹಾಗೂ ಇಡೀ ಕುಟುಂಬ ಶಿರಡಿಯಲ್ಲಿ ಇದ್ದಾಗ ಮದುವೆಯ ಹಿಂದಿನ ರಾತ್ರಿ ದರ್ಶನ್ ಅವರಿಗೆ ವಡಾ ಪಾವ್ ತಿನ್ನಬೇಕು ಎಂದು ಅನ್ನಿಸಿ, ಸೃಜನ್ ದರ್ಶನ್ ಹಾಗೂ ಇನ್ನು ಕೆಲವರು ವಡಾ ಪಾವ್ ತಿನ್ನೋಕೆ ಹೋದರಂತೆ. ರಸ್ತೆಬದಿಯಲ್ಲಿ ಒಂದು ಸಣ್ಣ ವಡಾ ಪಾವ್ ಅಂಗಡಿ ಇತ್ತು, ಆ ಅಂಗಡಿ ಪಕ್ಕದಲ್ಲೇ ಬೆಂಚ್ ಇತ್ತು, ಅದರ ಪಕ್ಕದಲ್ಲೇ ಒಂದು ಮೋರಿ ಇತ್ತಂತೆ. ಮೋರಿ ಪಕ್ಕದಲ್ಲಿ ಇರೋ ಬೆಂಚ್ ಮೇಲೆ ಕೂತು ದರ್ಶನ್ ಅವರು ವಡಾ ಪಾವ್ ತಿನ್ನುತ್ತಿದ್ದರಂತೆ. ಕರ್ನಾಟಕಕ್ಕೆ ಸೇರಿದ ಇಬ್ಬರು ಮೂರು ಜನ ಅಲ್ಲೇ ಹೋಗುತ್ತಿದ್ದವರು ಇವರನ್ನು ನೋಡಿ, ಇದು ದರ್ಶನ್ ಅವರೇನಾ ಎಂದು ನೋಡಿ ಗೊತ್ತಾಗದೇ Confuse ಆಗಿ ಹೋಗಿ, ಮತ್ತೆ ಬಂದು ನೋಡುತ್ತಿದ್ದರಂತೆ. ಕೊನೆಗೆ ಅವರ ಮಗು ಅಪ್ಪಾ ದರ್ಶನ್ ಎಂದು ಹೇಳಿತಂತೆ.
ಆ ವ್ಯಕ್ತಿ ಬಂದು, confusion ಅಲ್ಲಿ ಸೃಜನ್ ಲೋಕೇಶ್ ಅವರ ಕೈಗೆ ಹಿಡಿದುಕೊಂಡು ಸಾರ್ ನಾನು ನಿಮ್ಮ ದೊಡ್ಡ ಅಭಿಮಾನಿ ಸಾರ್ ಎಂದು ಹೇಳಿದರಂತೆ. ಆಗ ಸೃಜನ್ ಅವರು ಅಲ್ಲಿ ಅಲ್ಲಿ ಎಂದು ದರ್ಶನ್ ಅವರನ್ನು ತೋರಿಸಿದರಂತೆ. ಆ ವ್ಯಕ್ತಿ ದರ್ಶನ್ ಅವರ ಕೈ ಹಿಡ್ಕೊಂಡು ದರ್ಶನ್ ಸಾರ್ ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಹೇಳಿದರಂತೆ. ಈ ಒಂದು ಘಟನೆಯನ್ನು ಸೃಜನ್ ಲೋಕೇಶ್ ಅವರು ನೆನಪು ಮಾಡಿಕೊಂಡಿದ್ದಾರೆ. ಇದೆಲ್ಲವನ್ನು ಕೇಳಿದರೆ ದರ್ಶನ್ ಅವರು ಎಷ್ಟು ಸರಳ ವ್ಯಕ್ತಿತ್ವ ಹೊಂದಿರುವವರು ಎಂದು ಗೊತ್ತಾಗುತ್ತದೆ. ಅಷ್ಟು ದೊಡ್ಡ ಸ್ಟಾರ್ ಹೀರೋ, ಅಂಥ ಚಿಕ್ಕ ಅಂಗಡಿಯಲ್ಲಿ ಕೂತು ವಡಾ ಪಾವ್ ತಿಂತಾರೆ ಅಂದ್ರೆ ನಂಬೋಕೆ ಆಗುತ್ತಾ ಹೇಳಿ? ದರ್ಶನ್ ಅವರ ಸರಳತೆ ಎಂಥದ್ದು ಅಂತ ಇದರಿಂದಲೇ ಗೊತ್ತಾಗುತ್ತೆ. ಇನ್ನು ಈಗಷ್ಟೇ ದರ್ಶನ್ ಅವರ ಡೆವಿಲ್ ಸಿನಿಮಾ ಶೂಟಿಂಗ್ ಮತ್ತೆ ಶುರುವಾಗಿದ್ದು, ಈ ವರ್ಷವೇ ತೆರೆಕಾಣುವ ಸೂಚನೆ ಇದೆ.