ನಟ ದರ್ಶನ ಈಗ ಹೇಗಂದೆರೆ ಹಾಗೆ ಎಲ್ಲೆಂದರೆ ಅಲ್ಲಿ ಹೋಗೋ ಹಾಗಿಲ್ಲ, ಇರೋ ಹಾಗೂ ಇಲ್ಲ. ಯಾಕಂದ್ರೆ ಅವರ ಇಡೀ ಜವಾಬ್ದಾರಿಯನ್ನ ಪತ್ನಿ ವಿಜಯಲಕ್ಷ್ಮಿ ತೆಗೆದುಕೊಂಡಿರೋದು ಗೊತ್ತಿರೋ ವಿಚಾರವೇ. ಈಗಾಗಲೇ ಜೈಲಿನಿಂದ ಬಿಡುಗಡೆಯಾದ ಬಳಿಕವಂತೂ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಮಾಡೋಕೂ ಪರ್ಮಿಷನ್ ಬೇಕು ಅನ್ನೋ ರೀತಿ ಆಗಿದೆಯಂತೆ.
ಹೌದು, ಪತ್ನಿಯಾದವಳು ತನ್ನ ಪತಿಯ ಶ್ರೇಯಸ್ಸಿಗಾಗಿ ಎಷ್ಟು ಕಷ್ಟ ಪಡ್ತಾಳೆ ಅನ್ನೋದಕ್ಕೆ ಉದಾಹರಣೆ ವಿಜಯಲಕ್ಷ್ಮಿ. ಯಾವಾಗ ನಟ ದರ್ಶನ್ ಕೊಲೆ ಕೇಸ್ ನಲ್ಲಿ ಅರೆಸ್ಟ್ ಆಗಿ ಜೈಲಿಗೆ ಹೋದ್ರೋ ಅಂದಿನಿಂದಲೂ ಕೂಡ ಆತ ಹೊರಗೆ ಬರಬೇಕು ಅಂತ ಹೋರಾಡಿದ ಏಕೈಕ ಮಹಿಳೆ. ಹಾಗಾಗಿಯೇ ಇಂದು ತಮ್ಮ ಕೈಯಲ್ಲೇ ದರ್ಶನ್ ನ ಇಟ್ಟುಕೊಂಡಿದ್ದಾರೆ ವಿಜಯಲಕ್ಷ್ಮಿ.
ಈಗ ಪತಿಯ ಶತ್ರು ಸಂಹಾರಕ್ಕೆ ವಿಜಯಲಕ್ಷ್ಕಿ ಮುಂದಾಗಿದ್ದಾರೆ ಎನ್ನಲಾಗಿದೆ. ಕಾರಣ ಶತ್ರು ಸಂಹಾರ ಪೂಜೆ ಮಾಡಿಸಿದ್ರಾ ದರ್ಶನ್ ಅನ್ನೋದು ಸದ್ಯದ ಚರ್ಚೆ. ಯಾಕಂದ್ರೆ ದರ್ಶನ್ ಮತ್ತು ಅವರ ಕುಟುಂಬ ಹೋಗಿರುವುದು ಫೇಮಸ್ ಶತ್ರು ಸಂಹಾರ ದೇವಸ್ಥಾನಕ್ಕೆ. ಹೀಗಾಗಿ ಇಂತಹದೊಂದು ಚರ್ಚೆ ಮುನ್ನೆಲೆಗೆ ಬಂದಿದೆ.
ಹೌದು, ದರ್ಶನ್
ಕೇರಳದ ಪ್ರಸಿದ್ದ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಕೇರಳದ ಕಣ್ಣೂರಿನ ಮಾಡಾಯಿಕಾವು ದೇವಸ್ಥಾನದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಮಗ ಹಾಗೂ ನಟ ಧನ್ವೀರ್ ಜೊತೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಮಡಾಯಿಯ ಕಾವು ಶ್ರೀಭಗವತೀ ದೇವಸ್ಥಾನ ಮಾಟ ಮಂತ್ರಕ್ಕೆ ಫೇಮಸ್ ಅನ್ನೋದು ಅನೇಕರ ಭಾವನೆ. ಈ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ಕೂಡ ನಡೆಯುತ್ತದೆ.

ಹೀಗಾಗಿ ನಟ ದರ್ಶನ್ ಶತ್ರು ಸಂಹಾರ ಪೂಜೆಗೆ ಪ್ರಸಿದ್ದವಾದ ಕೇರಳದ ದೇವಸ್ಥಾನಲ್ಲಿ ಕುಟುಂಬ ಸಮೇತ ಬಂದು ಪೂಜೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಹಲವು ರಾಜಕಾರಣಿಗಳು ಶತ್ರು ಸಂಹಾರ ಪೂಜೆ ಮಾಡಿಸಿದ್ದಾರೆ, ಮಾಡಿಸುತ್ತಲೇ ಇರುತ್ತಾರೆ. ಈಗ ದರ್ಶನ್ ಕೂಡ ಈ ದೇವಸ್ಥಾನದಲ್ಲಿ ಕಾಣಿಸಿಕೊಂಡಿರೋದು ಇಂತಹದೊಂದು ಚರ್ಚೆಗೆ ಕಾರಣವಾಗಿದೆ.
ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜಾಮೀನಿನ ಮೇಲೆ ದರ್ಧನ್ ಹೊರ ಬಂದಿದ್ದಾರೆ. ಸದ್ಯ ಜೈಲಿನಿಂದ ಬಿಡುಗಡೆ ಆಗಿ ಬಂದ ಬಳಿಕ ದೇವಸ್ಥಾನಗಳಿಗೆ ಭೇಟಿ ನೀಡ್ತಾ ಇದ್ದಾರೆ ನಟ ದರ್ಶನ್. ತಾವು ಹರಕೆ ಮಾಡಿಕೊಂಡ ಎಲ್ಲಾ ದೇವಸ್ಥಾನಗಳಿಗೆ ಹೋಗಿ ಹರಕೆ ತೀರಿಸುವ ಕೆಲಸ ಮಾಡ್ತಾ ಇದ್ದಾರೆ ದರ್ಶನ್ ಪತ್ನಿ ವಿಜಯಲಕ್ಷ್ಮಿ. ಈಗ ಮತ್ತೊಂದು ದೇವಸ್ಥಾನಕ್ಕೆ ದರ್ಶನ್ ಕರೆದುಕೊಂಡು ಹೋಗಿದ್ದಾರೆ.