ಡೆವಿಲ್ ಚಿತ್ರದ ಎರಡನೇ ಹಾಡಿನಲ್ಲಿ ಹೊಸ ಫೀಲ್ ಇದೆ. ಡ್ಯುಯೆಟ್ ಹಾಡು ಇದಾಗಿದೆ. ಆದರೆ, ಇಲ್ಲಿ ಮಾಸ್ ಎನರ್ಜಿ ಇದೆ. ದರ್ಶನ್ ಫ್ಯಾನ್ಸ್ ಇಷ್ಟಪಡೋ ರೀತಿನೇ ಇದೆ.
Challenging Star ದರ್ಶನ್ ಅಭಿನಯದ ಡೆವಿಲ್ ಚಿತ್ರದ ಎರಡನೇ ಸಾಂಗ್ Onde Ondu Sala ರಿಲೀಸ್ ಆಗಿದೆ. ಈ ಹಾಡು ಪ್ರಮೋದ್ ಮರವಂತೆ ಬರೆದ ಡ್ಯುಯೆಟ್ ಸಾಂಗ್ ಆಗಿದೆ. ಇದರಲ್ಲಿ ನಟಿ ರಚನಾ ರೈ ಹಾಗೂ ದರ್ಶನ್ ಲುಕ್ ಆ್ಯಂಡ್ ಫೀಲ್ ಎರಡೂ ಆಕರ್ಷಕವಾಗಿಯೇ ಇವೆ. ಬಿಕಿನಿ ತೊಟ್ಟು ರಚನಾ ರೈ ಸಮುದ್ರ ತೀರದಲ್ಲಿ ನಡೆದು ಬರ್ತಾರೆ. ದರ್ಶನ್ ಸಮುದ್ರದ ತೀರದಲ್ಲಿಯೇ ಸ್ಟೈಲ್ ಆಗಿಯೇ ಬರ್ತಾರೆ. ತುಂಬಾನೆ ಎನರ್ಜಿ ಇರೋ ಡ್ಯುಯೆಟ್ ಸಾಂಗ್ ಆಗಿದೆ. ಈ ಹಾಡಿನಲ್ಲಿ ದರ್ಶನ್ ತುಂಬಾನೆ ಚೆನ್ನಾಗಿ ಕಾಣಿಸುತ್ತಿದ್ದಾರೆ. ರಚನಾ ರೈ ಬೋಲ್ಡ್ ಅನಿಸುತ್ತಾರೆ.
ಒಂದೇ ಒಂದು ಸಲ ಸೋತು ಬಿಡು ನೀ ಒಂದೇ ಒಂದು ಮಾತು ಆಡದೆ ಅಂತ ಈ ಸಾಂಗ್ ಶುರು ಆಗುತ್ತದೆ. ಗಾಯಕ ಕಪಿಲ್ ಕಪಿಲನ್ ಹಾಗೂ ಚಿನ್ಮಯಿ ಶ್ರೀಪಾದ್ ಇದನ್ನ ಹಾಡಿದ್ದಾರೆ.ಅಜನೀಶ್ ಲೋಕನಾಥ್ ಸಂಗೀತ ಅದಕ್ಕೂ ಹೆಚ್ಚಾಗಿ ದರ್ಶನ್ ಇಲ್ಲಿ ವೇರಿ ಹ್ಯಾಂಡ್ಸಮ್ ಆಗಿಯೇ ಕಾಣಿಸಿಕೊಂಡಿದ್ದಾರೆ. ರಚನಾ ರೈ ಬಿಕಿನಿ ತೊಟ್ಟು ಸಮುದ್ರ ತೀರದಲ್ಲಿ ಕಿಚ್ಚು ಹಚ್ಚಿದ್ದಾರೆ.
ಒಂದೆ ಒಂದು ಸಲ ಹಾಡನ್ನ ಒಳ್ಳೆ ಲೋಕೇಷನ್ ಅಲ್ಲಿಯೇ ತೆಗೆದಿದ್ದಾರೆ. ಇಡೀ ಹಾಡು ತುಂಬಾನೆ ಬ್ಯೂಟಿಫುಲ್ ಆಗಿಯೇ ಬಂದಿದೆ. ಕ್ಯಾಮರಾಮನ್ ಸುಧಾಕರ್ ಎಸ್.ರಾಜ್ ಅವರ ಕ್ಯಾಮರಾವರ್ಕ್ನ ಕಮಾಲ್ ಇಲ್ಲಿ ಜೋರಾಗಿಯೇ ಇದೆ.



