ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಅಂದ್ರೆ ಕನ್ನಡ ಚಿತ್ರರಂಗದ ಶೋಮ್ಯಾನ್ ಎಂದು ಹೇಳುತ್ತಾರೆ. ಇವರ ಸಿನಿಮಾಗಳು ಅಂದ್ರೆ ಅಭಿಮಾನಿಗಳಿಗೆ ಬಹಳ ಇಷ್ಟ. ಒಂದು ಕಾಲದಲ್ಲಿ ಇವರು ಹೀರೋಯಿನ್ ಗಳನ್ನು ಕಲರ್ ಫುಲ್ ಆಗಿ, ಸುಂದರವಾಗಿ ತೋರಿಸುವ ಕಾರಣಕ್ಕೆ ಎಲ್ಲರಿಗೂ ಬಹಳ ಇಷ್ಟ ಆಗಿರುವವರು. ಖ್ಯಾತ ಬಾಲಿವುಡ್ ನಟಿಯರು, ಬೇರೆ ಭಾಷೆಯ ನಟಿಯರನ್ನು ಕನ್ನಡಕ್ಕೆ ಕರೆತಂದವರು ಕ್ರೇಜಿಸ್ಟಾರ್. ನಾಯಕಿಯರನ್ನು ಹಾಡುಗಳಲ್ಲಿ ಮತ್ತು ಸಿನಿಮಾಗಳಲ್ಲಿ ಬಹಳ ಸುಂದರವಾಗಿ, ಅವರ ಬ್ಯೂಟಿಯನ್ನು ಬಹಳ ಸ್ಪೆಶಲ್ ಆಗಿ ತೋರಿಸುತ್ತಾರೆ. ಹೀಗೆ ಹೀರೋಯಿನ್ ಗಳನ್ನು ಬಹಳ ಸ್ಪೆಷಲ್ ಆಗಿ ತೋರಿಸಿದ ಸಿನಿಮಾಗಳಲ್ಲಿ ಮಲ್ಲ ಕೂಡ ಒಂದು. ಈ ಸಿನಿಮಾದ ಯಮ್ಮೊ ಯಮ್ಮೊ ಹಾಡಿಗೆ ತರಿಸಿದ ಕಾಸ್ಟ್ಯೂಮ್ ಬೆಲೆ ಎಷ್ಟು ಗೊತ್ತಾ?

ರವಿಚಂದ್ರನ್ ಅವರು ಸಿನಿಮಾಗಳ ವಿಷಯ ಎಂದು ಬಂದರೆ, ಬಹಳ ಗ್ರ್ಯಾಂಡ್ ಆಗಿ ತೆರೆಮೇಲೆ ಸಿನಿಮಾವನ್ನು ತೋರಿಸುತ್ತಾರೆ. ಇವರ ಸಿನಿಮಾಗಳನ್ನು ನೋಡಿದರೆ, ಎಂಥವರಿಗೆ ಆದರೂ ಸಿನಿಮಾ ಅಂದ್ರೆ ವಾವ್ ಅನ್ನಿಸುತ್ತದೆ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಸಂಗೀತಗಾರನಾಗಿ, ಎಡಿಟರ್ ಆಗಿ ಹೀಗೆ ಎಲ್ಲಾ ಕೆಲಸದಲ್ಲಿ ಸಹ ರವಿಚಂದ್ರನ್ ಅವರು ಸಕ್ರಿಯವಾಗಿದ್ದಾರೆ. ಹೀಗೆ ಸಿನಿಮಾಗೆ ಸಂಬಂಧಿಸಿರುವ ಎಲ್ಲಾ ವಿಭಾಗದಲ್ಲಿ ಸಹ ತೊಡಗಿಸಿಕೊಂಡಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಟಿಯರನ್ನು ಬಹಳ ಸುಂದರವಾಗಿ ತೆರೆಮೇಲೆ ತೋರಿಸುವ ಕಾರಣಕ್ಕೆ ಎಲ್ಲರಿಗೂ ಹೆಚ್ಚು ಇಷ್ಟ ಆಗ್ತಾರೆ. ಅವರ ಯಾವುದೇ ಸಿನಿಮಾ ಆದರೂ ಹೀರೋಯಿನ್ ಗಳನ್ನು ಬಹಳ ಸ್ಪೆಷಲ್ ಆಗಿ ತೋರಿಸುತ್ತಾರೆ..

ರವಿಚಂದ್ರನ್ ಅವರ ಸಿನಿಮಾ ಆಫರ್ ಬಂದರೆ ನಟಿಯರಿಗೂ ಕೂಡ ಇದೇ ಕಾರಣಕ್ಕೆ ಹಿಂದೆ ಮುಂದೆ ನೋಡದೇ ಡೇಟ್ಸ್ ಕೊಡಬೇಕು ಎಂದು ಅನ್ನಿಸುತ್ತದೆ. ಈ ರೀತಿಯಾಗಿ ರವಿಚಂದ್ರನ್ ಅವರು ಸಾಕಷ್ಟು ಹೊರಭಾಷೆಯ ನಟಿಯರನ್ನು ಕನ್ನಡಕ್ಕೆ ಕರೆತಂದಿದ್ದಾರೆ. ಕನ್ನಡದ ನಟಿಯರನ್ನು ಸಹ ಅದೇ ರೀತಿ ಬಹಳ ಸುಂದರವಾಗಿ ತೋರಿಸಿದ್ದಾರೆ. ಹೀರೋಯಿನ್ ಗಳಿಗೆ ಇವರು ಅಂದ್ರೆ ವಿಶೇಷವಾದ ಪ್ರೀತಿ. ರವಿಚಂದ್ರನ್ ಅವರು ಅಂದ್ರೆ ಅಷ್ಟು ಸ್ಪೆಷಲ್. ರವಿಚಂದ್ರನ್ ಅವರ ಕೆರಿಯರ್ ನಲ್ಲಿ ಬಹಳ ವಿಶೇಷವಾದ ಸಿನಿಮಾಗಳಲ್ಲಿ ಒಂದು ಮಲ್ಲ. ಇದು ರವಿಚಂದ್ರನ್ ಅವರನ್ನು ಮತ್ತೆ ಗೆಲುವಿನ ಹಾದಿಗೆ ಕರೆತಂದ ಸಿನಿಮಾ ಎಂದು ಹೇಳಿದರು ಸಹ ತಪ್ಪಲ್ಲ. ಏಕಾಂಗಿ ಸಿನಿಮಾವನ್ನು ಬಹಳ ಪ್ರೀತಿಯಿಂದ ಮಾಡಿದ್ದರು ಕ್ರೇಜಿಸ್ಟಾರ್.
ಇದು ರವಿಚಂದ್ರನ್ ಅವರ ಕನಸಿನ ಸಿನಿಮಾ ಆಗಿತ್ತು, ಬಹಳ ಇಷ್ಟಪಟ್ಟು ಈ ಸಿನಿಮಾ ಮಾಡಿದ್ದರು, ಆದರೆ ಏಕಾಂಗಿ ಸಿನಿಮಾ ಅವರು ನಿರೀಕ್ಷೆ ಮಾಡಿದ ಹಾಗೆ ಯಶಸ್ವಿ ಆಗಲಿಲ್ಲ, ಬಾಕ್ಸ್ ಆಫೀಸ್ ನಲ್ಲಿ ಸೋತಿತು. ಈ ಕಾರಣಕ್ಕೆ ರವಿಚಂದ್ರನ್ ಅವರು ಮತ್ತೆ ಸಿನಿಮಾ ಮಾಡೋದಿಲ್ಲ ಎಂದು ಕುಳಿತಿದ್ದರು, 6 ತಿಂಗಳ ಕಾಲ ಮನೆಯಲ್ಲೇ ಇದ್ದರಂತೆ. ಆ ವೇಳೆ ಸ್ನೇಹಿತರು ರವಿಚಂದ್ರನ್ ಅವರನ್ನು ಮತ್ತು ಅವರ ಪತ್ನಿಯನ್ನು ಕರೆದು ಒಂದು ಪಾರ್ಟಿ ಕೊಟ್ಟು, ಮತ್ತೆ ಸಿನಿಮಾ ಮಾಡಿ ಎಂದು ಹೇಳಿದರಂತೆ. ಆಗ ರವಿಚಂದ್ರನ್ ಅವರು ಮೊದಲಿಗೆ ಸಿನಿಮಾ ಮಾಡೋದಿಲ್ಲ ಎಂದು ಹೇಳಿದರೂ ಸಹ ಕೆಲ ದಿನಗಳ ನಂತರ ಒಂದು ಸಿನಿಮಾ ಮಾಡ್ತೀನಿ, ಆ ಸಿನಿಮಾ ನಿಮಗೆಲ್ಲಾ ಇಷ್ಟ ಆಗುತ್ತದೆ ಎಂದು ಹೇಳಿದರು.

ಆಗ ಶುರು ಮಾಡಿದ ಸಿನಿಮಾ ಮಲ್ಲ. ಈ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಸೂಪರ್ ಹಿಟ್ ಆಯಿತು ಎಂದು ನಮಗೆಲ್ಲಾ ಗೊತ್ತೇ ಇದೆ. ಈ ಸಿನಿಮಾದಲ್ಲಿ ಪ್ರಿಯಾಂಕ ಉಪೇಂದ್ರ ಅವರು ನಾಯಕಿ ಆದರು, ಸಿನಿಮಾ ಬಿಡುಗಡೆ ಆದ ನಂತರ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಗಿತ್ತು. ದೊಡ್ಡ ಮಟ್ಟದಲ್ಲಿ ಹಣಗಳಿಕೆ ಕೂಡ ಮಾಡಿತು. ಕೋಟಿ ರಾಮು ಅವರು ನಿರ್ಮಾಣ ಮಾಡಿದ ಸಿನಿಮಾ ಇದು. ಮಲ್ಲ ಸಿನಿಮಾದ ಹಾಡುಗಳು ಸಹ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿತ್ತು. ಕರುನಾಡೇ, ಮಸ್ತು ನೀ ಮಸ್ತು, ಈ ಪ್ರೀತಿಯ ಮರೆತು ಈ ಹಾಡುಗಳೆಲ್ಲಾ ಸಖತ್ ಹಿಟ್ ಆಗಿದ್ದವು. ಯಮ್ಮೊ ಯಮ್ಮೊ ನೋಡ್ದೆ ನೋಡ್ದೆ ಹಾಡು ಇನ್ನೊಂದು ರೀತಿಯಲ್ಲಿ ಜನರಿಗೆಲ್ಲಾ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಈ ಹಾಡನ್ನು ಚಿತ್ರೀಕರಣ ಮಾಡುವಾಗ ರವಿಚಂದ್ರನ್ ಅವರ ಬಳಿ ಹಣ ಇರಲಿಲ್ಲ.
ತರಿಸಿದ್ದ 4 ದೀಪದ ಕಂಬಗಳನ್ನು ಬಳಸಿ ಶೂಟಿಂಗ್ ಶುರು ಮಾಡಿದರಂತೆ. ಈ ಹಾಡಿಗಾಗಿ ವಿಶೇಷವಾದ ಕಾಸ್ಟ್ಯೂಮ್ ಅನ್ನು ಮುಂಬೈ ಇಂದ ತರಿಸಿದ್ದರಂತೆ ಕ್ರೇಜಿಸ್ಟಾರ್, ಆ ಕಾಸ್ಟ್ಯೂಮ್ ಬೆಲೆ 20 ವರ್ಷಗಳ ಹಿಂದೆಯೇ 2 ಲಕ್ಷ ಆಗಿತ್ತು. ಅಷ್ಟು ದುಬಾರಿ ಬೆಲೆಯ ಕಾಸ್ಟ್ಯೂಮ್ ಮತ್ತು ಅದಕ್ಕೆ ತಕ್ಕಂಥ ಒಡವೆಗಳನ್ನು ಧರಿಸಿದ್ದರು. ಹಾಡಿನ ಚಿತ್ರೀಕರಣ ಹಾಗೂ ಕಾಸ್ಟ್ಯೂಮ್ ಎರಡು ಕೂಡ ಸಿಕ್ಕಾಪಟ್ಟೆ ಸ್ಪೆಷಲ್. ಸಿನಿಮಾ ಬಿಡುಗಡೆ ಆದಮೇಲೆ ಈ ಹಾಡು ಯಾವ ಮಟ್ಟಿಗೆ ಹಿಟ್ ಆಗಿತ್ತು, ಈಗಲೂ ಈ ಹಾಡು ಎಲ್ಲಾ ಸಮಯಕ್ಕೂ ವೈರಲ್ ಆಗಿರುವ ಹಾಡುಗಳಲ್ಲಿ ಒಂದು. ಇಂಥದ್ದೊಂದು ಸೂಪರ್ ಹಿಟ್ ಹಾಡನ್ನು ಮಲ್ಲ ಸಿನಿಮಾ ಮೂಲಕ ಕೊಟ್ಟರು ಕ್ರೇಜಿಸ್ಟಾರ್ ರವಿಚಂದ್ರನ್ ಅವರು.