ಎರಡನೇ ಬಾರಿ ರಾಜ್ಯವನ್ನು ಮುಖ್ಯಮಂತ್ರಿಯಾಗಿ ಮುನ್ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಮಾಸ್ ಲೀಡರ್ ಅಂದರೆ ತಪ್ಪಲ್ಲ. ಆದರೆ ಇಂತಹಾ ನಾಯಕನಿಗೆ 2004ರ ನಂತರ ಸ್ವಂತ ಮನೆ ಅನ್ನೋದು ಇಲ್ಲ. ಇಷ್ಟು ವರ್ಷ ಬಾಡಿಗೆ ಮನೆಯಲ್ಲೇ ವಾಸಿಸಿದ ಸಿದ್ದರಾಮಯ್ಯ ಸದ್ಯ, ಮೈಸೂರಿನಲ್ಲಿ ಐಶಾರಾಮಿ ಬಂಗಲೆ ಕಟ್ಟಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಈ ದುಬಾರಿ ಬಂಗಲೆ ಹೇಗಿದೆ?, ಈ ಮನೆಯ ವಿಶೇಷತೆಗಳು ಏನು? ಎಂಬುದನ್ನ ನೋಡೋಣ ಬನ್ನಿ.

ಸಾಂಸ್ಕೃತಿಕ ನಗರಿ ಮೈಸೂರಿನ ಕುವೆಂಪು ನಗರದ ವಿಶ್ವ ಮಾನವ ಜೋಡಿ ರಸ್ತೆಯಲ್ಲಿ ಸಿದ್ದರಾಮಯ್ಯ ಅವರ ಕನಸಿನ ಮನೆ ನಿರ್ಮಾಣವಾಗುತ್ತಿದೆ. ಇತ್ತೀಚೆಗಷ್ಟೇ, ಸಿದ್ದರಾಮಯ್ಯ ಅವರು ಪುತ್ರ ರಾಕೇಶ್ ಪುಣ್ಯ ತಿಥಿ ಕಾರ್ಯಕ್ಕೆ ಆಗಮಿಸಿದ್ದ ವೇಳೆ ನಿರ್ಮಾಣ ಹಂತದಲ್ಲಿರುವ ತಮ್ಮ ಬಂಗಲೆಯನ್ನು ವೀಕ್ಷಿಸಿದರು ಜೊತೆಗೆ ಎಂಜಿನಿಯರ್ ಮತ್ತು ಅಧಿಕಾರಿಗಳೊಂದಿಗೆ ಕಾಮಗಾರಿಯ ಬಗ್ಗೆ ಮಾತನಾಡಿದ್ದರು.
ಶಾಸಕ, ಸಚಿವ, ವಿರೋಧ ಪಕ್ಷದ ನಾಯಕ ಅಷ್ಟೇ ಯಾಕೆ ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದರೂ ಕೂಡ ಸಿಎಂ ಸಿದ್ದರಾಮಯ್ಯ ಅವರಿಗೆ ಸ್ವಂತ ಮನೆ ಇರಲಿಲ್ಲ. ಅವರು ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದರು. 2004 ರಲ್ಲಿ ತಮ್ಮ ಸ್ವಂತ ಮನೆ ಮಾರಾಟ ಮಾಡಿದ ನಂತರ ಮೂರು ಬಾಡಿಗೆ ಮನೆಗಳನ್ನು ಅವರು ಖರೀದಿಸಿದ್ದಾರೆ. ಐದು ವರ್ಷಗಳ ಹಿಂದೆಯೇ ಈ ನೂನತ ಮನೆಯ ಕಾಮಗಾರಿ ಆರಂಭವಾಗಿದ್ದರೂ ಕೂಡ ಕೆಲವು ಕಾರಣಗಳಿಂದ ಕಾಮಗಾರಿ ವಿಳಂಬವಾಗಿತ್ತು.
ಇದೀಗ ಸಿಎಂ ಸಿದ್ದರಾಮಯ್ಯ ಅವರ ನೂತನ ನಿವಾಸದ ಕಾಮಗಾರಿ ಭರದಿಂದ ಸಾಗುತ್ತಿದೆ. 85+120 ಚದರ ಅಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಾಣವಾಗುತ್ತಿದೆ. ಸೆಂಟ್ರಲೈಸ್ಡ್ ಏರ್ ಕೂಲಿಂಗ್-ಎಸಿ ವ್ಯವಸ್ಥೆಯನ್ನು ಸಹ ಅಳವಡಿಸಲಾಗುತ್ತಿದೆ. ಮನೆ ಎರಡು ಮುಖ್ಯದ್ವಾರಗಳಿವೆ. ಶೇ. 80 ಕಾಮಗಾರಿ ಪೂರ್ಣಗೊಂಡಿದ್ದು, 2024ರ ಫೆಬ್ರವರಿಯಲ್ಲಿ ಹೊಸ ಮನೆಯ ಗೃಹಪ್ರವೇಶ ನಡೆಯುವ ಸಾಧ್ಯತೆ ಇದೆ ಎಂಬ ಮೂಲಗಳು ತಿಳಿಸಿವೆ.