ಬೆಂಗಳೂರು, 07-05-2025: ಜೀ಼ ಕನ್ನಡ ವಾಹಿನಿ ತನ್ನ ವಿಶಿಷ್ಟವಾದ ಕಾರ್ಯಕ್ರಮಗಳೊಂದಿಗೆ ವೀಕ್ಷಕರನ್ನು ಮನರಂಜಿಸುತ್ತಾ ಬಂದಿದೆ. ಆಕರ್ಷಕ ಧಾರಾವಾಹಿಗಳು, ರೋಚಕ ರಿಯಾಲಿಟಿ ಶೋಗಳು ಮತ್ತು ಬ್ಲಾಕ್ಬಸ್ಟರ್ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ಗಳ ಮೂಲಕ ಜೀ಼ ಕನ್ನಡ ವಾಹಿನಿ ನಿರಂತರವಾಗಿ ಮೊದಲ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜೀ಼ ಕನ್ನಡ ವಾಹಿನಿ ಮಗದೊಮ್ಮೆ ತನ್ನ ಪ್ರೇಕ್ಷಕರಿಗೆ ಮತ್ತೊಂದು ಮನರಂಜನೆಯನ್ನ ನೀಡಲು ಇದೇ ಭಾನುವಾರ ಮಧ್ಯಾಹ್ನ 3 ಗಂಟೆಗೆ ಶರಣ್ ಅಭಿನಯದ ‘ಛೂ ಮಂತರ್’ಸಿನೆಮಾವನ್ನು ನಿಮಗಾಗಿ ಹೊತ್ತುತರುತ್ತಿದೆ.

ಡೈನಮೊ (ಶರಣ್), ಆರ್ ಜೆ (ಚಿಕ್ಕಣ್ಣ), ಆಕಾಂಕ್ಷಾ (ಅದಿತಿ) ಮತ್ತು ನಕುಲ್ ಛೂಮಂತರ್ ಆ್ಯಂಡ್ ಕಂಪನಿ ಎಂಬ ಘೋಸ್ಟ್ ಹಂಟರ್ ನಡೆಸುತ್ತಿರುತ್ತಾರೆ ಮತ್ತು ಇವರಿಗೆ ಆತ್ಮಗಳ ಭೇಟೆಯಾಡೋದು ಕೆಲಸವಾಗಿರುತ್ತದೆ. ಭಾರತದ ಟಾಪ್ 10 ಹಾಂಟೆಡ್ ಹೌಸ್ ಗಳ ಸಾಲಿಗೆ ಉತ್ತರಾಖಂಡದ ನೈನಿತಾಲ್ ನಲ್ಲಿರುವ ಮಾರ್ಗನ್ ಹೌಸ್ ಸೇರ್ಪಡೆಯಾಗಿರುವ ವಿಷಯ ತಿಳಿಯುತ್ತದೆ. ಬ್ರಿಟಿಷರ ಕಾಲದ ನಿಧಿ ಇರುವ ಈ ಮಾರ್ಗನ್ ಹೌಸ್ ಗೆ ಹೋಗ್ತಾರೆ. ಹಾಸ್ಯದಿಂದ ಶುರುವಾಗುವ ಈ ಚಿತ್ರ ಅಲ್ಲಿ ನಿಜವಾಗಿಯೂ ದೆವ್ವದ ಕಾಟ ಇರುವುದು ತಿಳಿದು ಸೀರಿಯಸ್ ಟ್ವಿಸ್ಟ್ ಪಡೆಯುತ್ತದೆ. ಆ ಮನೆಯಲ್ಲಿರುವ ಅತೃಪ್ತ ಆತ್ಮಗಳು ದೆವ್ವಗಳು ಇವರ ತಂಡಕ್ಕೆ ಹೇಗೆ ಕಾಟ ಕೊಡುತ್ತವೆ? ಡೈನಮೋ ಮತ್ತು ತಂಡ ಇದರಿಂದ ಹೇಗೆ ಹೊರಬರುತ್ತಾರೆ ಎನ್ನುವುದೇ ಈ ಚಿತ್ರದ ಕಥೆ.
ನಟ ಶರಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಾರರ್ ಹಾಗು ಕಾಮಿಡಿ ಸಿನಿಮಾ ‘ಛೂ ಮಂತರ್’ ಗೆ ನವನೀತ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಟಿ ಅದಿತಿ ಪ್ರಭುದೇವ, ಚಿಕ್ಕಣ್ಣ, ಗುರುಕಿರಣ್, ಪ್ರಥಮ್, ಮೇಘನಾ ಗಾಂವ್ಕಾರ್, ರಜಿನಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಶರಣ್-ಚಿಕ್ಕಣ್ಣ ಜೋಡಿ ವೀಕ್ಷಕ ಪ್ರಭುಗಳಿಗೆ ಹಾಸ್ಯದ ಕಚಗುಳಿ ನೀಡುವುದರಲ್ಲಿ ಎರಡನೇ ಮಾತಿಲ್ಲ. ಹಾರರ್ ಕಥೆಯ ಜೊತೆಗೆ ಕಾಮಿಡಿ ಟಚ್ ಇರುವ ‘ಛೂ ಮಂತರ್’ ವೀಕ್ಷಕರಿಗೆ ಮನರಂಜನೆಯ ಹಬ್ಬವೇ ಸರಿ.
ಆತ್ಮಗಳ ಕಾಟದಿಂದ ಗೌತಮ್ ಮತ್ತು ತಂಡ ಹೇಗೆ ಹೊರಗೆ ಬರುತ್ತೆ ಅಥವಾ ಅಲ್ಲಿಯೇ ಸಿಕ್ಕಿ ಹಾಕಿಕೊಳ್ಳುತ್ತಾರಾ ಅಂತ ತಿಳ್ಕೊಳೋಕೆ ವೀಕ್ಷಿಸಿ ‘ಛೂ ಮಂತರ್’ ಭಾನುವಾರ ಮಧ್ಯಾಹ್ನ 3 ಗಂಟೆಗೆ.



