2011ರಲ್ಲಿ ತೆರೆಕಂಡಿದ್ದ ಸಂಜು ವೆಡ್ಸ್ ಗೀತಾ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು ಎನ್ನುವ ವಿಷಯ ಗೊತ್ತೇ ಇದೆ. ನಾಗಶೇಖರ್ ಅವರು ನಿರ್ದೇಶಿಸಿ, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಹಾಗೂ ನಟ ಶ್ರೀನಗರ ಕಿಟ್ಟಿ ನಾಯಕ ನಾಯಕಿಯಾಗಿ ಅಭಿನಯಿಸಿದ್ದ ಈ ಸಿನಿಮಾ, ಬ್ಲಾಕ್ ಬಸ್ಟರ್ ಆಗಿತ್ತು. ಸಿನಿಮಾದ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದವು. ಇದೀಗ ಸಂಜು ವೆಡ್ಸ್ ಗೀತಾ2 ಸಿನಿಮಾ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಈ ಬಾರಿ ಶ್ರೀನಗರ ಕಿಟ್ಟಿ ಅವರಿಗೆ ನಾಯಕಿ ಆಗಿರುವುದು ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು.

ರಚಿತಾ ರಾಮ್ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಭಾರಿ ಬೇಡಿಕೆ ಇದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ರಚಿತಾ ರಾಮ್ ಅವರು ಸೂಪರ್ ಹಿಟ್ ಸಿನಿಮಾಗಳ ಭಾಗವಾಗಿದ್ದಾರೆ. ಸಂಜು ವೆಡ್ಸ್ ಗೀತಾ ಸಿನಿಮಾದಲ್ಲಿ ಇವರ ಅಭಿನಯ ತುಂಬಾ ಚೆನ್ನಾಗಿ ಮೂಡಿಬಂದಿದ್ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಶ್ರೀನಗರ ಕಿಟ್ಟಿ ಅವರ ಪಾತ್ರ ಸಹ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಹೇಳಲಾಗುತ್ತಿದೆ. ಶುಕ್ರವಾರ ಅಂದರೆ ಜನವರಿ 17ರಂದು ಸಂಜು ವೆಡ್ಸ್ ಗೀತ2 ಸಿನಿಮಾ ತೆರೆಕಂಡಿದೆ. ಮೊದಲಿಗೆ ಈ ಸಿನಿಮಾ ತೆರೆಕಾಣಬೇಕಿದ್ದು ಬೇರೆ ದಿವಸ..
ಆದರೆ ಸ್ವಲ್ಪ ತಡವಾಗಿ ಜನವರಿ 17ರಂದು ಸಂಜು ವೆಡ್ಸ್ ಗೀತಾ ಸಿನಿಮಾ ತೆರೆಕಂಡಿದೆ. ಈ ಸಿನಿಮಾ ಪ್ರಚಾರಕ್ಕೆ ನಾಯಕ ಶ್ರೀನಗರ ಕಿಟ್ಟಿ, ನಿರ್ದೇಶಕ ನಾಗಶೇಖರ್, ನಿರ್ಮಾಪಕರು ಹಾಗೂ ಬರಹಗಾರರು ಮಾತ್ರ ಬಂದಿದ್ದು ಎಲ್ಲರು ನೋಡಿದ್ದಾರೆ. ನಾಯಕಿ ಆಗಿರುವ ರಚಿತಾ ರಾಮ್ ಅವರಾಗಲಿ ಅಥವಾ ಇನ್ಯಾವುದೇ ಕಲಾವಿದರಾಗಲಿ ಸಂಜು ವೆಡ್ಸ್ ಗೀತಾ2 ಸಿನಿಮಾ ಪ್ರೊಮೋಷನ್ ಗೆ ಬಂದಿಲ್ಲ. ಇದರಿಂದ ಚಕ್ರವರ್ತಿ ಚಂದ್ರಚೂಡ್ ಅವರಿ ಮಾತನಾಡಿ, ಅಸಮಾಧಾನ ಹೊರಹಾಕಿದ್ದಾರೆ. ರಚಿತಾ ರಾಮ್ ಅವರು ಪ್ರಚಾರಕ್ಕೆ ಬರಬೇಕಿತ್ತು ಎನ್ನುವುದು ಅವರ ಅಭಿಪ್ರಾಯ ಆಗಿದ್ದು, ಅವರು ಹೇಳಿದ್ದೇನು ಎಂದರೆ..
“ಆರ್ಟಿಸ್ಟ್ ಗಳು ಬಣ್ಣ ಹಚ್ಚೇಬೇಕಿರೋದು ಮುಖಕ್ಕೆ, ನಾಲಿಗೆಗೆ ಅಲ್ಲ. ಆ ರೀತಿ ನಾಲಿಗೆಗೆ ಬಣ್ಣ ಹಾಕೊಂಡವರು ಬಗಳಷ್ಟು ಜನ ಜೀವಂತವಾಗಿಲ್ಲ, ಒಳ್ಳೇ ಜೀವನ ಸಾಗಿಸ್ತಿರೋರು ಮುಖಕ್ಕೆ ಬಣ್ಣ ಹಾಕೊಂಡವರು ಮಾತ್ರ. ಈ ಮಾತನ್ನ ಹೇಳಿದ್ದು ಖ್ಯಾತ ನಿರ್ದೇಶಕರೊಬ್ಬರು, ಅದನ್ನೇ ನಾನು ಹೇಳ್ತಿದ್ದೀನಿ. ಪ್ರೊಮೋಶನ್ ಗೆ ಕಲಾವಿದರು ಬರದೇ ಇರೋದು ಯಾಕೆ ಅಂತ ನಾವು ಮಾತಾಡೋಕೆ ಆಗಲ್ಲ, ನಮ್ಮ ತಲೆಯಲ್ಲಿ ಈಗ ಪೇಪರ್ ವರ್ಕ್ ಅದು ಇದು ಅಂತ ಎಷ್ಟೊಂದು ವಿಷಯ ಓಡಾಡುತ್ತಿದೆ. ನಾನು ಒಬ್ಬ ಬರಹಗಾರನಾಗಿ ಈಗ ಹೇಳ್ತೀನಿ, ಪ್ರತಿಯೊಬ್ಬ ಕಲಾವಿದರಿಗೂ ಶೂಟಿಂಗ್ ಇರುತ್ತೆ..

ಪ್ರವಾಸ ಇರುತ್ತೆ, ಅವರ ಪ್ರಸನಲ್ ಲೈಫ್ ಇರುತ್ತದೆ. ಹೀಗೆಲ್ಲಾ ಇದ್ದಾಗ ಯಾವಾಗಲೂ ನಾವು ಫಿಲ್ಮ್ ಚೇಂಬರ್ ಗೆ ಹೋಗಿ ಕಂಪ್ಲೇಂಟ್ ಕೊಟ್ಟು ಪ್ರೊಮೋಷನ್ ಗೆ ಬರೋ ಹಾಗೆ ಮಾಡಲು ಆಗೋದಿಲ್ಲ. ಆದ್ರೆ ಸೋಷಿಯಲ್ ಮೀಡಿಯಾ ಈಗ ಎಲ್ಲರ ಹತ್ತಿರ ಇದೆ ಆರಾಮಾಗಿ ಬರೆದು, ಪೋಸ್ಟ್ ಮಾಡಬಹುದು. ಕೆಲಸ ಮಾಡಿದ್ದೀವಿ, ಪೇಮೆಂಟ್ ಬಂದಿದೆ, ಡಬ್ಬಿಂಗ್ ಮಾಡಿದ್ದೀವಿ ಅಂತ ಸುಮ್ಮನಾಗ್ತಾರೆ. ಹಿಂದೆ ಹಿರಿಯರು ಸಿನಿಮಾ ಪ್ರೊಮೋಶನ್ ಗೆ ಬಂದರೆ ಪೇಮೆಂಟ್ ಕ್ಲಿಯರ್ ಆಗೋದು ಅಂತ ಮಾಡಿದ್ರು.. ಈಗ ಹಾಗೆಲ್ಲಾ ಆಗೋದಿಲ್ಲ..” ಎಂದಿದ್ದಾರೆ ಚಕ್ರವರ್ತಿ ಚಂದ್ರಚೂಡ್.
ಶಿವಣ್ಣ ಅವರು ಟ್ರೀಟ್ಮೆಂಟ್ ಗೆ ಹೋಗಿದ್ದರು 45 ಸಿನಿಮಾ ಪ್ರೊಮೋಟ್ ಮಾಡಿದ್ದಾರೆ, ಕಲಾವಿದರು ಅವರನ್ನ ನೋಡಿ ಕಲೀಬೇಕು ಎಂದಿದ್ದಾರೆ.