ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ 10 ವಾರಗಳ ಮನೆಯ ವಾಸ ಮುಗಿದು, ಇದೀಗ 11ನೇ ವಾರಕ್ಕೆ ಕಾಲಿಡಲು ಸಜ್ಜಾಗಿದೆ. ಇನ್ನೇನು ನಾಳೆ ವೀಕೆಂಡ್ ಬರಲಿದೆ ,ಇಂದು ಶುಕ್ರವಾರ, ಇವತ್ತಿನ ದಿನ ಈ ವಾರದ ಟಾಸ್ಕ್ ಗಳ ಅನುಸಾರ ಉತ್ತಮ ಪ್ರದರ್ಶನ ನೀಡಿದವರನ್ನು ಮತ್ತು ಕಳಪೆ ಪ್ರದರ್ಶನ ನೀಡಿದವರನ್ನು ಆಯ್ಕೆ ಮಾಡಲಾಗುತ್ತದೆ. ಅಂತೆಯೇ ಈ ವಾರದ ಉತ್ತಮ ಮತ್ತು ಕಳಪೆ ವಿಚಾರಕ್ಕೆ ಕಲರ್ಸ್ ಕನ್ನಡ ವಾಹಿನಿ ಶೇರ್ ಮಾಡಿರುವ ಪ್ರೊಮೋದಲ್ಲಿ ಮನೆಯ ಸ್ಪರ್ಧಿಗಳೆಲ್ಲರು ಸೇರಿ ಚೈತ್ರ ಕುಂದಾಪುರ ಅವರನ್ನು ಕಳಪೆ ಎಂದು ಆಯ್ಕೆ ಮಾಡಿದ್ದು, ಇದಕ್ಕೆ ಚೈತ್ರಾ ಅವರು ಕೋಪಗೊಂಡು ಮನೆಯವರೆಲ್ಲರ ಎದುರು ಕೂಗಾಡಿದ್ದಾರೆ.

ಹೌದು, 10ನೇ ವಾರ ಮುಗಿಯುವ ವೇಳೆಗೆ ಬಿಗ್ ಬಾಸ್ ಮನೆಯೊಳಗೆ ಉಳಿದುಕೊಂಡಿರುವುದು 12 ಜನ ಸ್ಪರ್ಧಿಗಳು. ಇವರಲ್ಲಿ ಈ ವಾರದ ಹೊಸ ಕ್ಯಾಪ್ಟನ್ ಆಗಿ ಆಯ್ಕೆಯಾಗಿ ಬಂದಿರುವುದು ನಟಿ ಗೌತಮಿ ಜಾಧವ್ ಅವರು. ಗೌತಮಿ ಅವರು ಈ ವಾರ ಕ್ಯಾಪ್ಟನ್ ಆಗಿದ್ದು, ಮನೆಯಲ್ಲಿ ಯಾವ ರೀತಿ ಬದಲಾವಣೆ ತರುತ್ತಾರೆ, ಮುಂದಿನ ವಾರ ಗೌತಮಿ ಅವರ ಕ್ಯಾಪ್ಟನ್ಸಿಯಲ್ಲಿ ಎಲ್ಲವೂ ಹೇಗಿರುತ್ತದೆ ಎಂದು ನೋಡುವುದಕ್ಕೆ ವೀಕ್ಷಕರು ಕಾಯುತ್ತಿದ್ದಾರೆ. ಇನ್ನು ಈ ವಾರ ಅಂದರೆ ನಾಳೆ ಎಲಿಮಿನೇಟ್ ಆಗಿ ಮನೆಯಿಂದ ಹೊರಬರುವ ಸ್ಪರ್ಧಿ ಯಾರಾಗಬಹುದು ಎನ್ನುವ ಕುತೂಹಲ ಕೂಡ ಶುರುವಾಗಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಇದರ ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರ ಟಾಸ್ಕ್ ನಲ್ಲಿ ಪರ್ಫಾರ್ಮ್ ಮಾಡಿರುವುದರ ಅನುಸಾರ, ಉತ್ತಮ ಪ್ರದರ್ಶನ ನೀಡಿದವರು ಯಾರು, ಕಳಪೆ ಪ್ರದರ್ಶನ ನೀಡಿದವರು ಯಾರು ಎನ್ನುವುದನ್ನು ಮನೆಯ ಸ್ಪರ್ಧಿಗಳ ವೋಟಿಂಗ್ ನ ಅನುಸಾರ ಡಿಸೈಡ್ ಮಾಡಲಾಗುತ್ತದೆ. ಅದೇ ರೀತಿ ಈ ವಾರ ಕಳಪೆ ಎಂದು ಚೈತ್ರ ಅವರನ್ನು ಆಯ್ಕೆ ಮಾಡಲಾಗಿದ್ದು, ಚೈತ್ರಾ ಅವರು ತಮ್ಮ ಹೆಸರು ಹೇಳುತ್ತಿದ್ದ ಹಾಗೆ ಎಲ್ಲಾ ಸ್ಪರ್ಧಿಗಳ ಮೇಲೆ ಕೋಪಗೊಂಡಿದ್ದಾರೆ. ನಿಮಗೆಲ್ಲಾ ನಾನೊಬ್ಬಳು ಈಸಿ ಟಾರ್ಗೆಟ್ ಆಗಿಬಿಟ್ಟಿದ್ದೀನಿ ಎಂದು ಕೂಗಾಡಿದ್ದಾರೆ ಚೈತ್ರ. ಮಂಜಣ್ಣ ಚೈತ್ರ ಹೆಸರು ಹೇಳುವಾಗ ಈ ರೀತಿ ಮಾಡಿದ್ದಾರೆ..

ಮಂಜು ಅವರು ಏನು ಹೇಳದೇ ತಮ್ಮ ಕಾರಣ ನೀಡಿ, ಹೊರಗಡೆ ಹೋಗಿದ್ದಾರೆ. ಎಲ್ಲರೂ ಹೀಗೆ ಚೈತ್ರ ಅವರ ಹೆಸರನ್ನು ತೆಗೆದುಕೊಂಡಿದ್ದಕ್ಕೆ, ಮೋಕ್ಷಿತಾ, ಐಶ್ವರ್ಯ ಎಲ್ಲರ ಜೊತೆಗೂ ಬೇಸರ ಹೊರ ಹಾಕಿದ್ದಾರೆ ಚೈತ್ರಾ, ಜೊತೆಗೆ ಮಂಜಣ್ಣ ತಮ್ಮ ಟೀಮ್ ಗೆ ಸನ್ನೆ ಮಾಡಿ ಹೇಳಿದರು ಎಂದು ಕೂಡ ಹೇಳಿದ್ದು, ಈ ಮಾತನ್ನ ಕೇಳಿ ಐಶ್ವರ್ಯ ಅವರು ಶಾಕ್ ಆಗಿದ್ದಾರೆ. ಇನ್ನು ಚೈತ್ರ ಅವರು ಜೈಲಿನಲ್ಲಿ ಇರುವಷ್ಟು ಸಮಯ ಮನೆಯವರಿಗೆ ಟಾರ್ಚರ್ ತಪ್ಪಿದ್ದಲ್ಲ ಎಂದು ಹೇಳಬಹುದು. ಹಾಗೆಯೇ ಚೈತ್ರ ಅವರು ಇದು ಎರಡನೇ ಸಾರಿ ಜೈಲಿಗೆ ಹೋಗುತ್ತಿದ್ದಾರೆ. ಇದರಿಂದಲು ಅವರಿಗೆ ಬೇಸರವಾಗಿದೆ.
ಚೈತ್ರಾ ಕುಂದಾಪುರ ಅವರು ಮೊನ್ನೆಯಷ್ಟೇ ಕೋರ್ಟ್ ನಲ್ಲಿ ತಮ್ಮ ಕೇಸ್ ವಿಚಾರಣೆ ಇದೆ ಎನ್ನುವ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದರು. ಒಬ್ಬ ವ್ಯಕ್ತಿಯಿಂದ ಎಲೆಕ್ಷನ್ ಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಕೊಡಿಸುವುದಾಗಿ ಹೇಳಿ, 5 ಕೋಟಿ ಹಣ ಪಡೆದು, ಮೋ**ಸ ಮಾಡಿದ್ದಾರೆ ಎನ್ನುವ ಆರೋಪ ಚೈತ್ರ ಅವರ ಮೇಲಿತ್ತು, ಇದಕ್ಕಾಗಿ ಜೈಲಿಗೆ ಕೂಡ ಹೋಗಿಬಂದಿದ್ದರು ಚೈತ್ರ. ಈಗಲೂ ಅದೇ ಕೇಸ್ ವಿಚಾರಣೆ ನಡೆದಿತ್ತು, ಇದೀಗ ಚೈತ್ರ ಅವರು ಕೇಸ್ ನಲ್ಲಿ ವಿಚಾರಣೆ ಮುಗಿಸಿಕೊಂಡು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಅಲ್ಲಿಯೂ ಸಹ ಅವರಿಗೆ ಕಳಪೆ ಎಂದು ಕೊಟ್ಟು, ಜೈಲಿನ ವಾಸಕ್ಕೆ ಕಳಿಸಲಾಗಿದೆ.
ಬಿಗ್ ಬಾಸ್ ಹೇಳೋವರೆಗೂ ಚೈತ್ರ ಕುಂದಾಪುರ ಜೈಲಿನಲ್ಲೇ ಇರಬೇಕಾಗಿದೆ..