ಮೂಗಿನ ರಕ್ತಸ್ರಾವ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ತನಕ ಇರುವಂತಹ ರಕ್ತಸ್ರಾವ ವಾಗಿರುತ್ತದೆ. ಹೆಚ್ಚಾಗಿ ಬೇಸಿಗೆ ಸಮಯದಲ್ಲಿ ಕಾಣಿಸುತ್ತದೆ. ದೇಹದಲ್ಲಿ ಹೆಚ್ಚಿನ ಉಷ್ಣತೆಯಾದಾಗ ಹೆಚ್ಚಾಗುತ್ತದೆ. ಕೇವಲ ಮೂಗಿನ ಭಾಗದಲ್ಲಿ ಮತ್ತು ವಾಂತಿ ಆದಾಗ ನಿಮ್ಮ ಕಫದಲ್ಲಿ ರಕ್ತ ಹೋಗುತ್ತಿದ್ದರೆ ಉಷ್ಣತೆಯ ಅನುಭವ, ನಮ್ಮ ದೇಹದ ಯಾವುದೇ ಭಾಗದಲ್ಲಿ ರಕ್ತಸ್ರಾವಗಳು ಕಂಡು ಬಂದರೆ ಅದಕ್ಕೆ ಮೂಲ ಕಾರಣಸಿಗುತ್ತದೆ. ಬೇಸಿಗೆಯಲ್ಲಿ ದೇಹವನ್ನು ತಂಪು ಮಾಡದೆ ಇದ್ದಾಗ ಇಂತಹ ತೊಂದರೆಗಳು ಕಾಣಿಸುತ್ತದೆ.
ಜೊತೆಗೆ ಆಹಾರ ಕ್ರಮದಲ್ಲಿ ಹಣ್ಣುಗಳನ್ನು ಬಳಸಬೇಕು. ನೀರಿನ ಅಂಶ ದಿನಕ್ಕೆ ನಾಲ್ಕು ಲೀಟರ್ ನಷ್ಟು ಹೆಚ್ಚಳ ಮಾಡಿಕೊಳ್ಳುವುದು ಉತ್ತಮ. ಇದರಲ್ಲಿ ಮಜ್ಜಿಗೆ, ಪಾನಕಗಳು, ನಿಂಬೆಹಣ್ಣುಗಳು ಹೀಗೆ ತಂಪುದಾಯಕ ಪಾನಕಗಳನ್ನು ಬಳಸುವುದರಿಂದ ದೇಹ ತಂಪನ್ನು ಮಾಡಿಕೊಳ್ಳಬಹುದು. ಇದನ್ನು ಸರಿಯಾಗಿ ಪಾಲಿಸಿದರೆ ಇಂತಹ ತೊಂದರೆಗಳು ಕಾಣಿಸುವುದಿಲ್ಲ. ಇಂತಹ ತೊಂದರೆಗಳು ಬಂದಾಗ ಯಾವ ತರದ ಮನೆಮದ್ದುಗಳನ್ನು ಮಾಡುವುದೆಂದರೆ ಈರುಳ್ಳಿಯನ್ನು ಜಜ್ಜಿ ತಲೆಗೆ ಪಟ್ಟಿ ಹಾಕುವುದರಿಂದ ಒಳ್ಳೆಯದು.
ಬಿಳಿ ಉತ್ತರಾಣಿ ಸೊಪ್ಪನ್ನು ಅರೆದು ಶೋಧಿಸಿ ಹಾಲಲ್ಲಿ ಬೆರೆಸಿ ಕುಡಿಯುತ್ತ ಬಂದರೆ ದೇಹವನ್ನು ತಂಪು ಮಾಡುತ್ತದೆ. ಮುಟ್ಟಿದರೆ ಮುನಿ ಸೊಪ್ಪನ್ನು ತೊಳೆದು ವೃದ್ಧಿ ಕಷಾಯ ಸೇವನೆ ಮಾಡುವುದರಿಂದ ರಕ್ತಸ್ರಾವ ನಿವಾರಣೆ ಮಾಡಿಕೊಳ್ಳಬಹುದು. ಗರಿಕೆ ಹುಲ್ಲಿನ ರಸವನ್ನು ಕುಡಿಯುವುದರಿಂದ ರಕ್ತಸ್ರಾವ ನಿವಾರಣೆಯಾಗುತ್ತದೆ. ನಿಂಬೆರಸದಲ್ಲಿ ಜೇನನ್ನು ಬೆರೆಸಿ, ಕುಡಿಯುವುದರಿಂದ ಮೂಗಿನಲ್ಲಿ ರಕ್ತಸ್ರಾವ ನನ್ನು ತಡೆಯಬಹುದು. ಮೂಗಿನಲ್ಲಿ ಹುಣ್ಣು ಆಗಿದ್ದರೆ ಈ ಸಂಪಿಗೆ ಹೂಗಳಿಂದ ಹುಣ್ಣುಗಳು ಕಡಿಮೆಯಾಗುತ್ತದೆ.
ಹಾಗೆ ಈರುಳ್ಳಿಯನ್ನು ಜಜ್ಜಿ ನೆಲ್ಲಿಯಲ್ಲಿ ಹಂಚಿ ಕೊಡುವುದರಿಂದ ದೇಹವನ್ನು ತಂಪು ಮಾಡುತ್ತದೆ. ಜೀರಿಗೆ ನೀರು ಕಷಾಯ ಜೀರಿಗೆ ಹಾಕಿದ ಮಜ್ಜಿಗೆ ಇವುಗಳನ್ನೆಲ್ಲ ಸೇವನೆ ಮಾಡುವುದರಿಂದ ಉತ್ತಮ. ಬಾರ್ಲಿ ಅಕ್ಕಿಯ ನೀರು ಕುಡಿಯುವುದರಿಂದ ಉಷ್ಣತೆ ರಕ್ತಸ್ರಾವನ್ನು ತಡೆಗಟ್ಟಬಹುದು.