ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ರಿಲೀಸ್ ಅಂದರೆ ಅಭಿಮಾನಿಗಳಿಗೆ ಹಬ್ಬ. ರಜನಿ ಸ್ಟೈಲ್, ಡಯಲಾಗ್, ಮಾಸ ಎಂಟ್ರಿಗೆ ಫಿದಾ ಆಗದವರೇ ಇಲ್ಲ. ಇದೀಗ ‘ಪೇಟಾ’ ಸಿನಿಮಾದ ನಂತರ ಎರಡು ವರ್ಷಗಳ ಬಳಿಕ ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ ಪ್ರಪಂಚದಾದ್ಯಂತ 10 ಭಾಷೆಗಳಲ್ಲಿ ತೆರೆಕಂಡು, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಈ ಸಿನಿಮಾ ಎರಡನೇ ದಿನ ಗಳಿಸಿದ್ದೆಷ್ಟು ಕೋಟಿ ಗೊತ್ತಾ?.

ಜೈಲರ್ ಸಿನಿಮಾ ಬಿಡುಗಡೆಯಾದ ಮೊದಲ ದಿನ ಭಾರತ ಸೇರಿದಂತೆ ವಿಶ್ವದಾದ್ಯಂತ 80 ಕೋಟಿ ಕಲೆಕ್ಷನ್ ಮಾಡಿದ್ದು, ಎರಡನೇ ದಿನ 100 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಇದರೊಂದಿಗೆ ರಜನಿ ಸಿನಿಮಾ ಬಿಡುಗಡೆಯಾದ ಎರಡನೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಅಧಿಕೃತ ಮಾಹಿತಿ ದೊರೆತಿಲ್ಲವಾದರೂ, ಈ ಸಿನಿಮಾ ವಾರಾಂತ್ಯದಲ್ಲಿ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುವುದಂತು ನಿಶ್ಚಿತ.
10 ಭಾಷೆಗಳಲ್ಲಿ ತೆರೆಕಂಡಿರುವ ಜೈಲರ್ ಸಿನಿಮಾವನ್ನು ನೆಲ್ಸನ್ ನಿರ್ದೇಶನ ಮಾಡಿದ್ದು, ಅನಿರುದ್ಧ್ ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ರಜನಿಕಾಂತ್ ಅವರೊಂದಿಗೆ ಕ್ಯಾಮ್ಯೋ ರೋಲ್ ನಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ಮೋಹನ್ ಲಾಲ್, ತಮನ್ನಾ, ಜಾಕಿ ಶ್ರಾಫ್, ಯೋಗಿ ಬಾಬು ಸೇರಿದಂತೆ ಅನೇಕ ಸ್ಟಾರ್ ನಟರು ನಟಿಸಿದ್ದಾರೆ. ಸದ್ಯ, ಜೈಲರ್ ವಿಶ್ವದಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ನಿರ್ದೇಶಕ ನೆಲ್ಸನ್ ಹಾಗೂ ರಜನಿಗೆ ‘ಜೈಲರ್’ ಕಮ್ಯಾಕ್ ಸಿನಿಮಾಗಿದೆ.



