ಬಿಜೆಪಿಯ ಮಾಜಿ ಶಾಸಕ ಬಸವರಾಜ ದಡೆಸುಗೂರ್ ಆಗಿಂದಾಗ್ಲೇ ಸುದ್ದಿಯಾಗುತ್ತಲೇ ಇರುತ್ತಾರೆ. ಕಳೆದ ಕೆಲವು ವರ್ಷಗಳ ಹಿಂದೆ ಮಹಿಳಾ ಅಧಿಕಾರಿ ವಿಚಾರವಾಗಿ ಸುದ್ದಿಯಾಗಿದ್ದರು. ಬಳಿಕ ಪಿಎಸ್ ಐ ನೇಮಕಾತಿ ಅಕ್ರಮ ವಿಚಾರವಾಗಿ ಸುದ್ದಿಯಾಗಿದ್ದರು. ಬಳಿಕ ಪ್ರೀತಿ ವಂಚನೆ ಹೀಗೆ ಅನೇಕ ವಿಚಾರವಾಗಿಯೂ ಕನಕಗಿರಿಯ ಮಾಜಿ ಶಾಸಕ ಸುದ್ದಿಯಾಗಿದ್ದೂ ಇದೆ. ಈಗ ಮತ್ತೊಮ್ಮೆ ಬಸವರಾಜ ದಡೆಸುಗೂರ್ ಹೆಸರು ಮುನ್ನಲೆಗೆ ಬಂದಿದೆ. ಅದರು ಎರಡನೇ ಮದುವೆ ಅನ್ನೋ ಕಾರಣಕ್ಕೆ.
ಹೌದು, ಕಳೆದ ಕೆಲವು ವರ್ಷಗಳ ಹಿಂದೆ ಮದುವೆ ಮಾಡಿಕೊಳ್ಳುವುದಾಗಿ ಮಹಿಳಾ ಅಧಿಕಾರಿಯೊಬ್ಬರನ್ನ ಬಳಸಿಕೊಂಡು ಅವರಿಗೆ ಕೈ ಕೊಟ್ಟಿದ್ದರು ಅಂತ ಆ ಮಹಿಳೆ ಸಿಎಂಗೆ ದೂರು ನೀಡುವ ತನಕವೂ ಹೋಗಿದ್ದರು. ಬಳಿಕ ಅದು ಅಲ್ಲಿಗೆ ನಿಂತಿತ್ತು. ಇದಾದ ಕೆಲ ದಿನಗಳ ಬಳಿಕ ಒಂದು ಆಡಿಯೋ ವೈರಲ್ ಆಯ್ತು. ಕನಕಗಿರಿ ಕ್ಷೇತ್ರದಲ್ಲಿ ಈ ಆಡಿಯೋ ಭಾರೀ ಸಂಚಲನ ಮೂಡಿಸಿತು. ಇಷ್ಟೆಲ್ಲಾ ಆಗಿದ್ದೆ ಅವರ ಸೋಲಿಗೂ ಕಾರಣವಾಯ್ತು ಅನ್ನೋ ಮಾತುಗಳು ಇವೆ.

ಆದರೆ ಈಗ ಮತ್ತೆ ಬಸವರಾಜ ದಡೇಸುಗೂರ್ ಮುನ್ನಲೆಗೆ ಬಂದಿದ್ದಾರೆ. ಸದ್ದಿಲ್ಲದೆ ಆ ಸರ್ಕಾರಿ ಅಧಿಕಾರಿಯನ್ನೇ ಮದುವೆಯಾದ್ರಾ ಮಾಜಿ ಶಾಸಕ ಅನ್ನೋ ಮಾತು ಕೇಳಿ ಬರ್ತಾ ಇದೆ. ಮಾಜಿ ಶಾಸಕ ಬಸವರಾಜ್ ದಡೇಸುಗೂರ್ ನನ್ನ ಪತಿ ಎಂದು ಒಪ್ಪಿಕೊಂಡಿದ್ದಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿಡಿ. ಅವರ ಒಂದು ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಚರ್ಚೆಗೆ ಅವಕಾಶ ನೀಡಿದೆ.
ಇದೇ ಮಹಿಳೆ ಹಿಂದೆ ಶಾಸಕರ ಭವನದ ಬಳಿ ಬಂದು ರಂಪಾಟ ಮಾಡಿದ್ದರು. ಈಕೆ ಯಾರು ಅಂತ ಹುಡುಕಿದಾಗ ಸಿಕ್ಕ ಉತ್ತರ ಈಗಿನ ವಿಜಯನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿಡಿ ಶ್ವೇತಾ ಅಂತ. ಆಕೆ ಈಗ ನಾನು ದಡೆಸುಗೂರ್ ಹೆಂಡತಿ ಅಂತ ಹೇಳಿ ಕೊಂಡಿದ್ದಾರೆ. ಹೊಸಪೇಟೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕಚೇರಿಗೆ ಉಪಲೋಕಾಯುಕ್ತ ವೀರಪ್ಪ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡುವಾಗ ಪೋನ್ ಪೇ ಟ್ರ್ಯಾನ್ಸಾಕ್ಷನ್ ಮಾಡಿರುವುದರ ಕುರಿತು ಪ್ರಶ್ನೆ ಮಾಡಿದ್ದಾರೆ.
ಈ ವೇಳೆ ನಗುತ್ತಾ ಮನೆಯವ್ರಿಗೆ ಮಾಡಿದ್ದೀನಿ ಎಂದಿದ್ದಾರೆ. ಯಾರು ನಿಮ್ಮ ಮನೆಯವ್ರು, ಏನು ಕೆಲಸ ಮಾಡ್ತಾರೆ ಅಂತಾ ಉಪಲೋಕಾಯುಕ್ತರು ಪ್ರಶ್ನೆ ಮಾಡಿದ್ದಾರೆ. ಆಗ ನನ್ನ ಪತಿ ಪೊಲಿಟಿಷಿಯನ್ ಎಂದಿದ್ದಾರೆ ಶ್ವೇತಾ. ಯಾರು ಅವರು ಎಂದಾಗ ಮಾಜಿ ಶಾಸಕ ಬಸವರಾಜ ದಡೇಸೂಗೂರ ಕನಕಗಿರಿಯ ಮಾಜಿ ಶಾಸಕರು ಎಂದು ಹೇಳುವ ಮೂಲಕ ಬಸವರಾಜ್ ದಡೆಸೂಗೂರ್ ನನ್ನ ಪತಿ ಅಂತ ಒಪ್ಪಿಕೊಂಡಿದ್ದಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿಡಿ.
ಈ ಹಿಂದೆ ದಡೇಸುಗೂರ್ ಮತ್ತು ಈ ಮಹಿಳಾ ಅಧಿಕಾರಿಯ ಮಾತುಗಳ ಆಡಿಯೋ ವೈರಲ್ ಆದಾಗ ಅದಕ್ಕೊಂದು ಸಮಜಾಯಿಸಿ ಕೊಟ್ಟಿದ್ದರು ಮಾಜಿ ಶಾಸಕ. ಅವರು ನನ್ನ ದೂರದ ಸಂಬಂಧಿ ಎಂದು ಹೇಳಿದ್ದರು. ಇವರನ್ನು ಬೇರೆಡೆಯಿಂದ ಹೊಸಪೇಟೆಗೆ ವರ್ಗಾವಣೆ ಮಾಡಿಸಿಕೊಂಡಿದ್ದೆ ದಡೇಸುಗೂರ್ ಎನ್ನಲಾಗಿದೆ. ಈಗ ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿಡಿ ಶ್ವೇತಾ ಅವರೇ ನನ್ನ ಪತಿ ಎಂದಿದ್ದಾರೆ. ಇದಕ್ಕೇನು ಸಮರ್ಥನೆ ಕೊಡ್ತಾರೆ ಬಸವರಾಜ ದಡೇಸುಗೂರ್ ಗೊತ್ತಿಲ್ಲ.