ಬಿಗ್ ಬಾಸ್ ಓಟಿಟಿ ಮೂಲಕ ಖ್ಯಾತಿ ಘಳಿಸಿದ ನಟ ರೂಪೇಶ್ ಶೆಟ್ಟಿ ಬಿಗ್ ಬಾಸ್ ಸೀಸನ್ 9 ಟಿವಿ ಶೋನಲ್ಲೂ ಮಿಂಚುತ್ತಿದ್ದಾರೆ. ಈಗಾಗ್ಲೆ ಸಾನ್ಯಾ ಐಯ್ಯರ್ ಮನೆಯಿಂದ ಹೊರ ಹೋದ ನೋವಿನಲ್ಲಿರುವ ರೂಪೇಶ್ ಶೆಟ್ಟಿಗೆ ಇದೀಗ ಬಿಗ್ ಬಾಸ್ ದೊಡ್ಡ ಶಿಕ್ಷೆಯೊಂದನ್ನು ನೀಡಿದೆ. ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ಅವರು ತುಂಬಾನೇ ಕ್ಲೋಸ್ ಆಗಿದ್ದರು. ಒಟಿಟಿಯಿಂದ ಈ ಜೋಡಿ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದರು. ಆದರೆ ಕಳೆದ ವಾರದ ಎಲಿಮಿನೇಷನ್ನಲ್ಲಿ ಅವರು ಮನೆಯಿಂದ ಹೊರ ಹೋಗಿದ್ದಾರೆ. ಈ ವಾರದ ಆರಂಭದ ದಿನಗಳಲ್ಲಿ ರೂಪೇಶ್ ಶೆಟ್ಟಿ ಅವರು ಡಲ್ ಆಗಿದ್ದರು. ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಟಾಸ್ಕ್ ಆಡುತ್ತಾ ದಿನ ಕಳೆಯುತ್ತಿದ್ದಾರೆ. ಆದರೆ ಇದೀಗ ಶಿಕ್ಷೆಗೆ ಬಲಿಯಾಗಿದ್ದಾರೆ.

ಬಿಗ್ ಬಾಸ್ ಮೊದಲನೇ ಸೀಸನ್ ನಿಂದಲೂ ಕೆಲವೊಂದು ನಿಯಮಗಳನ್ನು ಹಾಕಿಕೊಂಡು ಬಂದಿದೆ, ಆ ನಿಯಮಗಳನ್ನು ಉಲ್ಲಂಘಿಸಿದರೆ ಬಿಗ್ ಬಾಸ್ ದೊಡ್ಡ ಶಿಕ್ಷೆಯನ್ನೇ ನೀಡುತ್ತದೆ. ಇದೀಗ ರೂಪೇಶ್ ಶೆಟ್ಟಿ ಮಾಡಿದ ಸಣ್ಣ ತಪ್ಪಿಗೆ ಬಿಗ್ ಬಾಸ್ ದೊಡ್ಡ ಶಿಕ್ಷೆಯನ್ನೇ ನೀಡಿದೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಒಂದಷ್ಟು ವಸ್ತುಗಳನ್ನು ನೀಡಲಾಗುತ್ತದೆ. ಇದನ್ನು ಡ್ಯಾಮೇಜ್ ಮಾಡಿದರೆ ತಪ್ಪಿತಸ್ಥರಿಗೆ ಬಿಗ್ ಬಾಸ್ ಶಿಕ್ಷೆ ನೀಡುತ್ತದೆ.
ಈಗ ರೂಪೇಶ್ ಶೆಟ್ಟಿ ಅವರು ಮನೆಯ ಗಾಜಿನ ಲೋಟವನ್ನು ಒಡೆದು ಹಾಕಿದ್ದಾರೆ. ಇದನ್ನು ಬಿಗ್ ಬಾಸ್ ಗಮನಿಸಿ, ಅವರಿಗೆ ಪನಿಶ್ಮೆಂಟ್ ನೀಡಿದೆ. ರೂಪೇಶ್ ಶೆಟ್ಟಿ ನಿತ್ಯ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯುತ್ತಾರೆ. ಈ ಕಾರಣಕ್ಕೆ ಕಾಫಿ ಕಪ್ನ ಗಾತ್ರದ ಲೋಟ ಕೊಟ್ಟು ಅದರಲ್ಲಿ ಮಾತ್ರ ನೀರು ಕುಡಿಯುವಂತೆ ಆದೇಶ ಹೊರಡಿಸಿದ್ದಾರೆ ಬಿಗ್ ಬಾಸ್. ಇದನ್ನು ಕೇಳಿ ರೂಪೇಶ್ ಶೆಟ್ಟಿಗೆ ಶಾಕ್ ಆಗಿದೆ. ಅನಿವಾರ್ಯವಾಗಿ ಅವರು ಅದರಲ್ಲೇ ನೀರು ಕುಡಿಯೋಕೆ ಶುರು ಮಾಡಿದ್ದಾರೆ.
ಈ ಮೊದಲು ರೂಪೇಶ್ ರಾಜಣ್ಣ ಕೂಡ ಗ್ಲಾಸ್ ಒಡೆದಿದ್ದರು. ಆದರೆ, ಅವರಿಗೆ ಬಿಗ್ ಬಾಸ್ ಪನಿಶ್ಮೆಂಟ್ ನೀಡಿಲ್ಲ. ಈ ಬಗ್ಗೆ ರೂಪೇಶ್ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ. ಈ ಪನಿಶ್ಮೆಂಟ್ನಿಂದ ಮನೆ ಮಂದಿಗೆ ಹಾಗೂ ವೀಕ್ಷಕರಿಗೆ ಸಖತ್ ಮಜಾ ಸಿಕ್ಕಿದೆ. ಅಮೂಲ್ಯ ಗೌಡ ಅವರು ರೂಪೇಶ್ ಅವರ ಗಾಜಿನ ಲೋಟವನ್ನು ಕಿತ್ತುಕೊಂಡು ಓಡಿದ್ದಾರೆ. ಇದರಿಂದ ರೂಪೇಶ್ ಪೇಚಿಗೆ ಸಿಲುಕಿದ್ದಾರೆ. ಈ ಪನಿಶ್ಮೆಂಟ್ನಿಂದ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದಂತೂ ನಿಜ.