ಬಿಗ್ ಬಾಸ್ ಕನ್ನಡ ಸೀಸನ್ 11 ಈಗ 11ನೇ ವಾರದಲ್ಲಿ ಸಾಗುತ್ತಿದೆ. ಈ ವೇಳೆ ಒಳಗಿರುವ ಸ್ಪರ್ಧಿಗಳಿಗೆ ಕಾಂಪಿಟೇಶನ್ ತುಂಬಾ ಟಫ್ ಆಗಿದೆ. ಹಾಗೆಯೇ ಹೊರಗಡೆ ಕೂಡ ಕಾಂಪಿಟೇಶನ್ ಜೋರಾಗಿದೆ. ಎಲ್ಲಾ ಸ್ಪರ್ಧಿಗಳಿಗೆ ಅಭಿಮಾನಿ ಬಳಗ ಇದ್ದು, ಅವರೆಲ್ಲರೂ ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಸಪೋರ್ಟ್ ಮಾಡುತ್ತಾ ಇದ್ದಾರೆ. ಆದರೆ ಕೆಲವರು ಬೇರೆ ಸ್ಪರ್ಧಿಗಳನ್ನು ಟ್ರೋಲ್ ಸಹ ಮಾಡುತ್ತಿದ್ದಾರೆ. ಇದೇ ಥರ ಮೋಕ್ಷಿತಾ ಅವರಿಗೂ ಆಗಿದೆ. ಬಿಗ್ ಬಾಸ್ ಮನೆಯೊಳಗೆ ಇರುವ ಸ್ಟ್ರಾಂಗ್ ಸ್ಪರ್ಧಿಗಳಲ್ಲಿ ಮೋಕ್ಷಿತಾ ಅವರು ಸಹ ಒಬ್ಬರು. ಕಳೆದ ಒಂದೆರಡು ದಿನಗಳಿಂದ ಅವರ ಬಗ್ಗೆ ಕೆಲವು ಸುದ್ದಿಗಳು ಕೇಳಿಬರುತ್ತಿದ್ದು, ಇದು ನಿಜವೋ ಸುಳ್ಳೋ ಎನ್ನುವ ಬಗ್ಗೆ ಅವರ ಕುಟುಂಬದ ಕಡೆಯಿಂದ ಕ್ಲಾರಿಟಿ ಸಿಕ್ಕಿಲ್ಲ.

ಹೌದು, ನಟಿ ಮೋಕ್ಷಿತಾ ಅವರು ಜನರಿಗೆ ಪರಿಚಯ ಆಗಿದ್ದು ಪಾರು ಧಾರಾವಾಹಿ ಮೂಲಕ. ಈ ಧಾರವಾಹಿ ಎಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತು, ಮೋಕ್ಷಿತಾ ಅವರಿಗೆ ಎಷ್ಟು ಜನಪ್ರಿಯತೆ ತಂದುಕೊಟ್ಟಿತು ಎನ್ನುವ ವಿಷಯ ಸಹ ಗೊತ್ತೇ ಇದೆ. ಈ ಧಾರಾವಾಹಿ ಇಂದ ಹಾಗೆಯೇ ಮೋಕ್ಷಿತಾ ಅವರು ತಮ್ಮ ಕುಟುಂಬವನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ, ಸ್ಪೆಷಲ್ ಚೈಲ್ಡ್ ಆಗಿರುವ ತಮ್ಮನನ್ನು ಸ್ವಂತ ಮಗನ ಹಾಗೆ ನೋಡಿಕೊಳ್ಳುತ್ತಿದ್ದಾರೆ ಎನ್ನುವ ವಿಷಯಕ್ಕೆ ಜನರಿಗೆ ತುಂಬಾ ಇಷ್ಟವಾಗಿದ್ದರು. ಆದರೆ ಈಗ ಇವರ ಬಗ್ಗೆ ಬೇರೆಯದೇ ಸುದ್ದಿ ಕೇಳಿಬರುತ್ತಿದೆ.
8 ವರ್ಷಗಳ ಹಿಂದೆ, ಐಶ್ವರ್ಯಾ ಎನ್ನುವ ಎಂಬಿಎ ಓದಿರುವ ಹುಡುಗಿ ತನ್ನ ಬಾಯ್ ಫ್ರೆಂಡ್ ಜೊತೆಗೆ ಸೇರಿ, ತಾನು ಪಾಠ ಹೇಳಿಕೊಡುತ್ತಿದ್ದ ಹುಡುಗಿಯನ್ನೇ ಅಪಹರಿಸಿ 20 ಲಕ್ಷ ಡಿಮ್ಯಾಂಡ್ ಮಾಡಿದ್ದರು, ಆದರೆ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡು. ಈ ಕೇಸ್ ಬಗ್ಗೆ ಮಾಧ್ಯಮಗಳಲ್ಲಿ ಸಹ ಚರ್ಚೆಯಾಗಿತ್ತು. ಮಕ್ಕಳ ಕಳ್ಳಿ ಎಂದು ಆಕೆಯನ್ನು ಕರೆಯಲಾಗಿತ್ತು, ಅದೇ ಹುಡುಗಿ ಮೋಕ್ಷಿತಾ, ಈ ಘಟನೆ ಆದ ನಂತರ ಐಶ್ವರ್ಯ ಎಂದು ಇದ್ದ ಹೆಸರನ್ನು ಮೋಕ್ಷಿತಾ ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಷ್ಟು ವರ್ಷಗಳ ಕಾಲ ಇಲ್ಲದೇ ಈಗ ಈ ಸುದ್ದಿ ವೈರಲ್ ಆಗಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!

ಬಿಗ್ ಬಾಸ್ ಮನೆಯ ಒಳಗೆ ಮೋಕ್ಷಿತಾ ಅವರು ಸ್ಟ್ರಾಂಗ್ ಸ್ಪರ್ಧಿ ಆಗಿ ಹೊರಹೊಮ್ಮುತ್ತಿರುವ ಈ ವೇಳೆಯಲ್ಲಿ ಅವರ ಬಗ್ಗೆ ಈ ರೀತಿಯ ಸುದ್ದಿ ವೈರಲ್ ಆಗಿ, ನೆಗಟಿವ್ ಪ್ರಚಾರ ಆಗುತ್ತಿದೆ. ಹಲವರು ಮೋಕ್ಷಿತಾ ಅವರನ್ನು ಸಪೋರ್ಟ್ ಮಾಡುತ್ತಿದ್ದಾರೆ, ಇನ್ನು ಕೆಲವರು ಮೋಕ್ಷಿತಾ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಕೂಡ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಮೋಕ್ಷಿತಾ ಅವರ ಬಗ್ಗೆ ಬಹಳ ಚರ್ಚೆ ಅಂತೂ ಆಗುತ್ತಿದೆ. ಈ ವೇಳೆ ನಟಿ ಸಂಗೀತ ಶೃಂಗೇರಿ ಅವರು ಮೋಕ್ಷಿತಾ ಅವರ ಪರವಾಗಿ ನಿಂತಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ವಿಷಯದ ಬಗ್ಗೆ ಪೋಸ್ಟ್ ಮಾಡಿ, ಜನರಿಗೆ ಬುದ್ಧಿಯನ್ನು ಹೇಳಿದ್ದಾರೆ.
“ಗುಂಪನ್ನು ಕುರುಡಾಗಿ ಅನುಸರಿಸಬೇಡಿ. ಯಾರ ಬಗ್ಗೆ ಆದರೂ ನಿರ್ಧಾರ ಕೈಗೊಳ್ಳುವ ಮುನ್ನ ಆಲೋಚಿಸಿ ಬೆಂಬಲಿಸಿರಿ. ಕಾಮೆಂಟ್ ಮಾಡುವ ಜನರಿಗೆ ನಿಜವಾದ ಮುಖಗಳಿವೆಯೋ ಇಲ್ಲವೋ ಎಂಬುದು ನಿಮಗೆ ಗೊತ್ತಿಲ್ಲ. ಅಪರಿಚಿತ ವ್ಯಕ್ತಿಯ ಹೇಳಿಕೆಯನ್ನು ನಂಬುತ್ತೀರಾ? ಅದು ಯಾರಾದರೂ ಹಣ ಕೊಟ್ಟು ಅಥವಾ ಏರ್ಪಡಿಸಿದ ಕೆಲಸ ಆಗಿರಬಹುದಲ್ಲವೇ? ಇದು ಯಾರನ್ನಾದರೂ ಬೆಂಬಲಿಸಬೇಕೆಂದು ಹೇಳಿದ ಮಾತಲ್ಲ. ಇದು ಕೇವಲ ಒಂದು ಚಿಂತನೆ. ಪ್ರಸ್ತುತ ಪರಿಸ್ಥಿತಿಗೆ ಸಂಬಂಧವಿಲ್ಲದ ವಿಷಯಗಳ ಬಗ್ಗೆ, ಏನೋ ಅರ್ಥಹೀನ ನಕಾರಾತ್ಮಕ ಹಲವಾರು ಪುಟಗಳಲ್ಲಿ ಏಕೆ ಹರಡುತ್ತೀರಿ?” ಎಂದು ಬರೆದುಕೊಂಡಿದ್ದಾರೆ ನಟಿ ಸಂಗೀತ ಶೃಂಗೇರಿ.