ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಬಣ್ಣ ಹಚ್ಚಿರುವುದು ಎಲ್ಲರಿಗೂ ತಿಳಿದಿದೆ.ಇದು ನನ್ನ ಕಂಬ್ಯಾಕ್ ಸಿನಿಮಾವಲ್ಲ ಬದಲಾಗಿ ಸೆಕೆಂಡ್ ಇನ್ನಿಂಗ್ಸ್ಗೆ ಟೀಸರ್ ಅಷ್ಟೇ ಎಂದಿರುವ ಗೌರಮ್ಮ `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಪಾತ್ರದ ಗೌಪ್ಯತೆ ಕಾಪಾಡಿಕೊಂಡಿದ್ದಾರೆ.ಎಲ್ಲರೂ ಕಾತುರದಿಂದ ಕಾಯುತ್ತಿದ್ದ ಈ ಸಿನಿಮಾ ಜುಲೈ 21ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಹಾಗಾದ್ರೆ ಈ ಸಿನಿಮಾದ ಸ್ಟೋರಿ ಏನು? ಹೇಗಿತ್ತು ಈ ಸಿನಿಮಾ ಎಂದು ಈ ಲೇಖನದ ಮೂಲಕ ನಾವು ನಿಮಗೆ ಹೇಳುತ್ತೇವೆ.

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ಮೋಹಕತಾರೆ ರಮ್ಯಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಟೀಸರ್ ನಿಂದಲೇ ರಮ್ಯಾ ಯಾವುದೋ ಲೆಕ್ಚರರ್ ಪಾತ್ರ ಮಾಡಿರಬಹುದು ಎಂದು ತಿಳಿಯುತ್ತದೆ. ಅಭಿಮಾನಿಗಳಂತೂ ಮೋಹಕತಾರೆಯ ಆಕ್ಟಿಂಗ್ ನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ಕಾಯುತ್ತಿದ್ದರು. ಇದೀಗ ಸಿನಿಮಾ ರಿಲೀಸ್ ಆಗಿದ್ದು ಕರುನಾಡಿನಾದ್ಯಂತ 120ಕ್ಕಿಂತ ಅಧಿಕ ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿದೆ. ಹಾಗೂ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನವನ್ನೂ ನೀಡುತ್ತಿದೆ. ಶೂಟಿಂಗ್ ಪ್ರಾರಂಭವಾದ ದಿನದಿಂದ ಸಕತ್ ಸೌಂಡ್ ಮಾಡುತ್ತಿರೋ ಈ ಸಿನಿಮಾ ಕ್ಕೆ ಅಪ್ಪು ಸಾಥ್ ಕೊಟ್ಟಿದ್ದಾರೆ.
ರಿಷಬ್ ಶೆಟ್ಟಿ, ಲೂಸಿಯಾ ಪವನ್, ದಿಗಂತ್, ಶೈನ್ ಇವರೆಲ್ಲರ ಸ್ಪೆಷಲ್ ಅಪೀಯರೆನ್ಸ್ ಈ ಸಿನಿಮಾಕ್ಕೆ ಪ್ಲಸ್ ಪಾಯಿಂಟ್. ಈ ಸಿನಿಮಾವನ್ನು ಸುಮಾರು 80ರಿಂದ 100ದಿನ ಹಾಸ್ಟೆಲ್ ನಲ್ಲಿ ರಾತ್ರಿ ವೇಳೆ ಶೂಟಿಂಗ್ ಮಾಡಿದ್ದಾರೆ. ಈ ಸಿನಿಮಾಕ್ಕೆ 6000 ಹುಡುಗರನ್ನು ಆಡಿಷನ್ ಮಾಡಿ ಕೊನೆಗೆ 500ಜನರನ್ನು ಆಯ್ಕೆ ಮಾಡಿದ್ದಾರೆ. ಇವರೆಲ್ಲಾ ರಂಗ ಭೂಮಿ ಕಲಾವಿದರೇ ಆಗಿದ್ದಾರೆ.
ಸಿನಿಮಾದಲ್ಲಿ ಮೋಹಕತಾರೆ ರಮ್ಯಾ ನಟಿಸಿದ್ದಾರೆ ಅನ್ನುದಕ್ಕೆ ಹೆವಿ ಹೈಪ್ ಸೃಷ್ಟಿ ಆಗಿತ್ತು. ಆದರೆ ಮೊದಲಿಗೆ ಅವರ ಎಂಟ್ರಿ ಆಗುತ್ತದೆ. ಅವರು ಈ ಸಿನಿಮಾದಲ್ಲಿ ಗೆಸ್ಟ್ ರೋಲ್ ಮಾತ್ರ ಮಾಡಿದ್ದಾರೆ. ಲೆಕ್ಚರರ್ ಪಾತ್ರ ವಹಿಸಿ ಸಾಕಷ್ಟು ಜನರ ಮನ ಗೆದಿದ್ದಾರೆ. ಮೊದಲಿಗೆ ಕಾಣಿಸಿಕೊಂಡ ರಮ್ಯಾ ಮತ್ತೆಲ್ಲೂ ಫಸ್ಟ್ ಹಾಫ್ ನಲ್ಲಿ ಕಾಣಿಸಿಕೊಂಡಿಲ್ಲ.
ಇದು ಸಿನಿಮಾದೊಳಗೊಂದು ಸಿನಿಮಾ ಕಥೆ. ಯಾಕಂದ್ರೆ ಈ ಸಿನಿಮಾ ಹಾಸ್ಟೆಲ್ ಹುಡುಗ್ರು ಶಾರ್ಟ್ ಫಿಲಂ ಮಾಡುವ ಕಸರತ್ತಿಗೆ ಬಗೆಗಿದೆ.ಹಾಸ್ಟೆಲ್ ವಾರ್ಡೆನ್ ನ ಸಾವಿನ ಘಟನೆ ಇಟ್ಟುಕೊಂಡು ಸಿನಿಮಾ ಪ್ರಾರಂಭವಾಗುತ್ತದೆ. ಮೊದಲರ್ಧದಲ್ಲೇ ರಿಷಬ್ ಎಂಟ್ರಿ ಇರುತ್ತದೆ. ಯಾವ ಪಾತ್ರ ಏನು ಅಭಿನಯ ಎನ್ನುದಕ್ಕೆ ಸಿನಿಮಾ ನೋಡಿಯೇ ಉತ್ತರ ಸಿಗುತ್ತದೆ. ಒಟ್ಟಾರೆಯಾಗಿ ಹಾಸ್ಟೆಲ್ ಹುಡುಗರ ತರ್ಲೆ ಕೀಟಲೆಗಳೇ ಈ ಸಿನಿಮಾದ ಕಥಾನಕ.
ಈಗಿನ ಯುವಕರಿಗೆ ಸಂಬಂಧಿಸಿದ ಕಥೆಯನ್ನೊಳಗೊಂಡ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶಿಸಿದ್ದಾರೆ. ಪ್ರತಿ ಬಾರಿ ವಿಭಿನ್ನ ಮಾದರಿಯ ಮೂಲಕ ಪ್ರಚಾರ ಮಾಡುತ್ತಿರುವ ಹಾಸ್ಟೆಲ್ ಹುಡುಗರನು ಸಿನಿಮಾವನ್ನು ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸಲಿದ್ದಾರೆ ಅಜನೀಶ್ ಲೋಕನಾಥ್ ಈ ಸಿನಿಮಾಕ್ಕೆ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. ಒಟ್ಟಾರೆಯಾಗಿ ಒಳ್ಳೆಯ ಕಂಟೆಂಟ್ ಹೊಂದಿರುವ ಈ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.