ಚಂದನ ವನದ ಚಂದದ ಜೋಡಿಗಳಾದ ಭುವನ್ ಹಾಗೂ ಹರ್ಷಿಕಾ ವಿವಾಹ ಅದ್ದೂರಿಯಾಗಿ ನಡೆದಿದೆ.ಕೊಡವ ಸಂಪ್ರದಾಯದಂತೆ ಈ ಜೋಡಿ ಸಪ್ತಪದಿ ತುಳಿದಿವೆ. ಕಳೆದ ದಿನ ಊರುಕೋಡು ಶಾಸ್ತ್ರ ಮುಗಿದಿದ್ದು, ಕೊಡವ ಸಂಪ್ರದಾಯದಂತೆ ಹುಡುಗಿಯ ತಾಯಿ ತಾಳಿ ಕಟ್ಟಿದ್ದಾರೆ. ಭುವನ್ ಹಾಗೂ ಹರ್ಷಿಕಾ ಸಂತೋಷದಿಂದ ಸಂಪ್ರದಾಯಗಳಲ್ಲಿ ತಲ್ಲೀನರಾಗಿದ್ದಾರೆ.

ಇವರಿಬ್ಬರ ವಿವಾಹ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಶಾಸಕ ಮುರುಗೇಶ್ ನಿರಾಣಿ ಸೇರಿದಂತೆ ರಾಜಕೀಯ ಹಾಗೂ ಸಿನಿಮಾ ನಟನಟಿಯರು ಆಗಮಿಸಿ ವಧು-ವರರನ್ನು ಆಶೀರ್ವದಿಸಿದ್ದಾರೆ. ಇತ್ತೀಚೆಗಷ್ಟೇ ಈ ಜೋಡಿಯ ಲಗ್ನ ಪತ್ರಿಕೆ ಕಾರ್ಯಕ್ರಮ ಇಗ್ಗತಪ್ಪ ದೇವಾಲಯದಲ್ಲಿ ನೆರವೇರಿತ್ತು. ಕೊಡವ ಸಂಪ್ರದಾಯದಂತೆ ವಿವಾಹ ನಡೆಯುತ್ತಿದೆ.


ಸಿನಿಮಾ ನಟನಟಿಯರಾಗಿರುವ ಹರ್ಷಿಕಾ ಪುಣಚ್ಚ ಹಾಗೂ ಭುವನ್ ಪೊನ್ನಣ್ಣ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಹಲವು ಸಮಾಜ ಮುಖಿ ಕೆಲಸಗಳಲ್ಲಿ ಒಟ್ಟಿಗೆ ಕೈ ಜೋಡಿಸಿದ್ದರು. ಎರಡು ಕುಟುಂಬದಲ್ಲಿ ಸಂತಸ ಮನೆ ಮಾಡಿದ್ದು, ಈ ಜೋಡಿ ತಮ್ಮ ಮೂಲ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ, ಈ ಜೋಡಿಯ ಮದುವೆ ಫೋಟೋಗಳು ವೈರಲ್ ಆಗುತ್ತಿದೆ.