ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯ ಹಂತಕ್ಕೆ ಬಂದಿದೆ. ಫಿನಾಲೆ ನಡೆಯುವುದಕ್ಕೆ ಉಳಿದಿರುವುದು ಇನ್ನು ಕೆಲವೇ ದಿನಗಳು ಮಾತ್ರ. ಜನವರಿ 26ರಂದು ಫಿನಾಲೆ ನಡೆಯುತ್ತದೆ ಎಂದು ಸುದೀಪ್ ಅವರು ಸಹ ತಿಳಿಸಿದ್ದಾರೆ. ಈ ವಾರ ಮನೆಯ ಒಳಗಿರುವ ಸ್ಪರ್ಧಿಗಳಿಗೆ ಬಹಳ ಮುಖ್ಯವಾದ ವಾರ ಆಗಿತ್ತು, ಈ ವಾರದ ಟಾಸ್ಕ್ ನಲ್ಲಿ ಆಡಿ ಗೆಲ್ಲುವ ಒಭ ಸ್ಪರ್ಧಿ, ಫಿನಾಲೆಗೆ ಡೈರೆಕ್ಟ್ ಟಿಕೆಟ್ ಪಡೆಯುತ್ತಾರೆ ಎಂದು ಸುದೀಪ್ ಅವರು ವೀಕೆಂಡ್ ಎಪಿಸೋಡ್ ನಲ್ಲಿ ತಿಳಿಸಿದ್ದರು. ಈ ವಾರ ನಾಲ್ವರು ಫಿನಾಲೆ ಟಿಕೆಟ್ ಕಂಟೆಂಡರ್ಸ್ ಆಗಿದ್ದು, ಅವರಲ್ಲಿ ಫಿನಾಲೆಗೆ ಆಯ್ಕೆ ಆಗುವವರು ಯಾರು ಎನ್ನುವ ಪ್ರಶ್ನೆ ಈಗ ಶುರುವಾಗಿದೆ.
ಈ ವಾರ ಬಿಗ್ ಬಾಸ್ ಕೊಟ್ಟ ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡುವುದರ ಜೊತೆಗೆ ಇನ್ನು ಹಲವು ಘಟನೆಗಳು ವಿಚಾರಗಳು ನಡೆದ ಬಳಿಕ ರಜತ್, ಹನುಮಂತ, ತ್ರಿವಿಕ್ರಂ ಮತ್ತು ಭವ್ಯ ಫಿನಾಲೆ ಟಿಕೆಟ್ ಕಂಟೆಂಡರ್ಸ್ ಆಗಿದ್ದು, ಇವರಲ್ಲಿ ಒಬ್ಬರಿಗೆ ಡೈರೆಕ್ಟ್ ಫಿನಾಲೆ ಟಿಕೆಟ್ ಸಿಗಲಿದೆ. ರಜತ್ ಈ ವಾರ ಮನೆಯ ಕ್ಯಾಪ್ಟನ್ ಆಗಿದ್ದರು. ಇವರು ಸಹ ಕೆಲವರಿಗೆ ಮನೆಯ ಒಳಗಿರಲು ಅರ್ಹತೆ ಇಲ್ಲ ಎಂದು ಹೇಳಿ ಟಿಕೆಟ್ ಟು ಹೋಮ್ ಎಂದು ಬೋರ್ಡ್ ನೀಡಿದರು. ಆದರೆ ಇವರು ಮಾಡಿದ ಆಯ್ಕೆಗಳು ಯಾರಿಗು ಇಷ್ಟವಾಗಿರಲಿಲ್ಲ. ಧನರಾಜ್ ಹಾಗೂ ಎಲ್ಲಾ ಮಹಿಳಾ ಸ್ಪರ್ಧಿಗಳು ಸಹ ಮನೆಗೆ ಹೋಗಲು ಅರ್ಹರು ಎಂದು ನಿರ್ಧರಿಸಿದ್ದರು ರಜತ್.

ಆದರೆ ಟಾಸ್ಕ್ ಗಳಲ್ಲಿ ಪರ್ಫಾರ್ಮೆನ್ಸ್ ಗಳ ವಿಚಾರದಲ್ಲಿ ಒಂದಷ್ಟು ಬದಲಾವಣೆ ಆಗಿ, ರಜತ್ ಅವರು ಮಾಡಿದ ಆಯ್ಕೆಯಲ್ಲಿ ಸ್ವಲ್ಪ ಬದಲಾವಣೆ ಆಗಿದ್ದು, ಭವ್ಯ ಹನುಮಂತ ರಜತ್ ಹಾಗೂ ತ್ರಿವಿಕ್ರಂ ನಾಲ್ವರು ಫಿನಾಲೆ ಕಂಟೆಂಡರ್ಸ್ ಆಗಿದ್ದಾರೆ. ಇದು ಮನೆಯ ಹೊರಗೆ ಇರುವ ಜನರಿಗೆ ಸರಿಯಾಗಿ ನಡೆದಿದೆ ಎಂದು ಅನ್ನಿಸುತ್ತಿಲ್ಲ. ಮೋಕ್ಷಿತಾ, ಉಗ್ರಂ ಮಂಜು, ಮೋಕ್ಷಿತಾ ಹಾಗೂ ಧನರಾಜ್ ಭವ್ಯ ಗಿಂತ ಅರ್ಹರು ಎನ್ನುವುದು ಜನರ ಅಭಿಪ್ರಾಯ. ಆದರೆ ಶೋನಲ್ಲಿ ನಡೆಯುತ್ತಿರುವುದು ಏನು? ಫೇವರಿಸಮ್ ನಡೆಯುತ್ತಿದೆಯಾ ಎನ್ನುವ ಒಂದು ಚರ್ಚೆ ಸಹ ಶುರುವಾಗಿದೆ. ಒಟ್ಟಿನಲ್ಲಿ ಈ ಸೀಸನ್ ತೆಗೆದುಕೊಳ್ಳಲಾಗುತ್ತಿರುವ ಹಲವು ತೀರ್ಮಾನಗಳು ಹೊರಗಿರುವ ಜನರಿಗೆ ಒಪ್ಪಿಗೆ ಆಗುತ್ತಿಲ್ಲ..
ಬಿಗ್ ಬಾಸ್ ಶೋ ನೋಡುವ ಜನರಿಗೆ ಬೇಕು ಎಂದೇ ಭವ್ಯ ಅವರಿಗೆ ಸಪೋರ್ಟ್ ಮಾಡಲಾಗುತ್ತಿದೆ, ಅವರು ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿಯಲ್ಲಿ ನಟಿಸಿದರು ಎನ್ನುವ ಕಾರಣಕ್ಕೆ ಅವರಿಗೆ ಸಪೋರ್ಟ್ ಮಾಡುತ್ತಿದ್ದಾರೆ, ಇಲ್ಲಿಯವರೆಗು ತಲುಪುವ ಅರ್ಹತೆ ಭವ್ಯ ಅವರಿಗೆ ಇಲ್ಲ, ಇನ್ನು ಕೆಲವು ಸ್ಪರ್ಧಿಗಳ ವಿಚಾರದಲ್ಲಿ ಸಹ ಹಾಗೆ ಆಗಿದೆ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಚಾನೆಲ್ ನವರು ತಮಗೆ ಬೇಕಾದ ಸ್ಪರ್ಧಿಯನ್ನು ಫಿನಾಲೆಗೆ ಕರೆತರಲು ಪ್ಲಾನ್ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಣಿಸುತ್ತಿರುವುದಂತೂ ಸುಳ್ಳಲ್ಲ. ಒಟ್ಟಿನಲ್ಲಿ ಯಾರಿಗೆ ಫಿನಾಲೆ ಟಿಕೆಟ್ ಸಿಗುತ್ತದೆ ಎನ್ನುವುದನ್ನ ತಿಳಿಯಲು ಇಂದಿನ ಸಂಚಿಕೆ ಪ್ರಸಾರ ಆಗುವವರೆಗೂ ಕಾದು ನೋಡಬೇಕಾಗುತ್ತದೆ.
ಇನ್ನು ಜನವರಿ 26ರಂದು ಗ್ರ್ಯಾಂಡ್ ಫಿನಾಲೆ ಇದ್ದು ಇನ್ನು 2 ವಾರಗಳ ಸಮಯ ಉಳಿದಿದೆ. ಫೈನಲ್ ಗೆ ಆಯ್ಕೆಯಾಗುವ 5 ಸ್ಪರ್ಧಿಗಳು ಯಾರ್ಯಾರು ಎನ್ನುವ ಕುತೂಹಲ ಒಂದು ಕಡೆಯಾದರೆ, ಈ ಬೆಳವಣಿಗೆ ನೋಡಿದರೆ ಆಯ್ಕೆ ಆಗಬಹುದಾದ ಸ್ಪರ್ಧಿ ಯಾರಿರಬಹುದು ಎಂದು ಜನರು ಗೆಸ್ ಕೂಡ ಮಾಡುತ್ತಿದ್ದಾರೆ. ಹಾಗೆಯೇ ಈ ವರ್ಷ ಸುದೀಪ್ ಅವರ ಕೊನೆಯ ಸೀಸನ್ ಆಗಿದ್ದು, ಸುದೀಪ್ ಅವರು ಈಗಾಗಲೇ ತಮ್ಮ ನಿರ್ಧಾರ ತಿಳಿಸಿದ್ದಾರೆ. ಮುಂದಿನ ವರ್ಷದಿಂದ ಬಿಗ್ ಬಾಸ್ ಶೋಗೆ ಹೊಸ ನಿರೂಪಕರು ಬರುತ್ತಾರೆ ಎನ್ನಲಾಗುತ್ತಿದ್ದು, ಹೊಸಬರು ಬಂದರೆ ಇದೇ ರೀತಿ ರೀಚ್ ಸಿಗುತ್ತಾ ಎನ್ನುವುದನ್ನು ಮುಂದಿನ ಸೀಸನ್ ನಲ್ಲಿ ನೋಡಬೇಕಿದೆ.