ಕಲರ್ಸ್ ಕನ್ನಡ ವಾಹಿನಿಯ ಹೊಸ ರಿಯಾಲಿಟಿ ಶೋ ಬಾಯ್ಸ್ ವರ್ಸಸ್ ಗರ್ಲ್ಸ್ ಕಳೆದ ವೀಕೆಂಡ್ ಇಂದ ಶುರುವಾಗಿದೆ. ಬಿಗ್ ಬಾಸ್ ಮುಗಿದ ಮೇಲೆ ಶುರುವಾಗಿರುವ ಹೊಸ ಶೋ ಇದು. ಈ ಶೋನಲ್ಲಿ ಬಿಗ್ ಬಾಸ್ ಮನೆ ಇಂದಲೇ ಐದಾರು ಸದಸ್ಯರು ಬಂದಿದ್ದಾರೆ. ಇವರುಗಳ ಪೈಕಿ ಭವ್ಯ ಗೌಡ ಅವರು ಸಹ ಬರುತ್ತಾರೆ ಎನ್ನಲಾಗಿತ್ತು. ಬಿಗ್ ಬಾಸ್ ನ ಫಿನಾಲೆ ವೀಕ್ ನಲ್ಲಿ ಅನುಪಮಾ ಅವರು ಶೋ ಪ್ರೊಮೋಟ್ ಮಾಡಲು ಬಂದಾಗ, ಭವ್ಯ ಅವರು ಈ ಶೋಗೆ ಆಯ್ಕೆಯಾಗಿದ್ದಾರೆ ಎನ್ನುವ ವಿಷಯವನ್ನು ಸಹ ತಿಳಿಸಿದ್ದರು. ಭವ್ಯ ಸಹ ಸಂತೋಷದಿಂದ ಒಪ್ಪಿಕೊಂಡಿದ್ದರು. ಆದರೆ ಶೋ ಶುರುವಾದಾಗ ಭವ್ಯ ಗೌಡ ಇರಲಿಲ್ಲ. ಇವರು ಯಾಕೆ ಬಂದಿಲ್ಲ ಎನ್ನುವ ಪ್ರಶ್ನೆ ಅವರ ಫ್ಯಾನ್ಸ್ ಗಳಲ್ಲಿ ಇತ್ತು, ಇದೀಗ ಭವ್ಯ ಅವರೇ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯ ಮನೆಮಗಳು ಭವ್ಯ ಎಂದು ಹೇಳಿದರೆ ತಪ್ಪಲ್ಲ. ಸೋಶಿಯಲ್ ಮೀಡಿಯಾ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ಭವ್ಯ ಅವರಿಗೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿದ್ದೇ ಕಲರ್ಸ್ ಕನ್ನಡದಿಂದ. ಗೀತಾ ಧಾರಾವಾಹಿಯಲ್ಲಿ ನಾಯಕಿಯಾಗಿ ಆಯ್ಕೆಯಾದ ಭವ್ಯ, ಕಿರುತೆರೆಯಲ್ಲಿ ಎಷ್ಟರ ಮಟ್ಟಿಗೆ ಹೆಸರು ಮಾಡಿದರು ಅನ್ನೋ ವಿಷಯ ಗೊತ್ತೇ ಇದೆ. ಗೀತಾ ಧಾರಾವಾಹಿ ಮೂಲಕ ಇವರಿಗೆ ಹೆಸರು, ಜನಪ್ರಿಯತೆ ಎಲ್ಲವೂ ಸಿಕ್ಕಿದೆ. ಗೀತಾ ಪಾತ್ರ ಇವರಿಗೆ ಹೇಳಿ ಮಾಡಿಸಿದ ಹಾಗಿತ್ತು,ಗೀತಾ ವಿಜಯ್ ಜೋಡಿ ಸಹ ಎಲ್ಲರ ಮೆಚ್ಚಿನ ಜೋಡಿ ಆಗಿತ್ತು. ಇವರಿಬ್ಬರ ಪಾತ್ರಗಳೂ ಸಹ ಜನರಿಗೆ ಅಷ್ಟೇ ಇಷ್ಟವಾಗಿತ್ತು. ಎರಡು ಮೂರು ವರ್ಷ ಬಂದ ಧಾರವಾಹಿ ಕೊನೆಗೆ ಸುಖಾಂತ್ಯಗೊಂಡಿತು. ಈ ಧಾರಾವಾಹಿ ಬಳಿಕ ಭವ್ಯ ಇನ್ಯಾವ ಪ್ರಾಜೆಕ್ಟ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ.

ಧಾರಾವಾಹಿ ಮುಗಿದ ಬೆನ್ನಲ್ಲೇ ಭವ್ಯ ಅವರು ಬಂದಿದ್ದು ಬಿಗ್ ಬಾಸ್ ಶೋಗೆ. ಈ ಶೋ ಮೂಲಕ ಭವ್ಯ ಜನರಿಗೆ ಇನ್ನಷ್ಟು ಹತ್ತಿರವಾದರು. ಆದರೆ ಇವರ ಬಗ್ಗೆ ಕೆಲವು ನೆಗಟಿವ್ ವಿಚಾರಗಳು ಸಹ ಬಿಗ್ ಬಾಸ್ ಮನೆಯ ಒಳಗೆ ಇದ್ದಾಗ ವೈರಲ್ ಆದವು. ಭವ್ಯ ಹೆಚ್ಚಾಗಿ ಕಾಣಿಸಿಕೊಂಡಿದ್ದು ತ್ರಿವಿಕ್ರಂ ಅವರ ಜೊತೆಗೆ. ಈ ಕಾರಣಕ್ಕೆ ಭವ್ಯ ಸುದ್ದಿಯಾಗಿದ್ದು, ಕೊನೆಯ ವೇಳೆಗೆ ತ್ರಿವಿಕ್ರಂ ಅವರನ್ನು ಭವ್ಯ ತಮಗೆ ಬೇಕಾದ ಉಪಯೋಗಿಸಿಕೊಂಡರು ಎನ್ನುವ ಹಾಗೆ ಭಾಸವಾಯಿತು. ಆದರೆ ಅಲ್ಲಿಯವರೆಗೂ ಎಲ್ಲಾ ವಿಷಯಕ್ಕೂ ತ್ರಿವಿಕ್ರಂ ಅವರ ಜೊತೆಗೇ ಇದ್ದರು. ಅವರ ಬೆಸ್ಟ್ ಫ್ರೆಂಡ್ ಎಂಬಂತೆ ಇದ್ದರು. ಆದರೆ ಹೊರಗಡೆ ಇವರಿಗೆ ಬಹಳ ಜನ ಇದು ಸರಿ ಇಲ್ಲ ಎಂದು ಹೇಳಿದ್ದು ಇದೆ. ಒಟ್ಟಿನಲ್ಲಿ ಇದೆಲ್ಲಾ ಏನೇ ನಡೆದರು ಫಿನಾಲೆ ತಲುಪಿದರು ಭವ್ಯ. ಇವರು ಫಿನಾಲೆ ವರೆಗು ಬರುತ್ತಾರೆ ಎಂದು ಹೆಚ್ಚು ಜನ ಊಹಿಸಿರಲಿಲ್ಲ.
ಆದರೆ ಭವ್ಯ ಅವರು ಹೇಗೋ ಮಾಡಿ ಫಿನಾಲೆ ವರೆಗು ತಲುಪಿದರು. ಫಿನಾಲೆಯಲ್ಲಿ ಗೆಲ್ಲುವ ನಿರೀಕ್ಷೆಯನ್ನು ಸಹ ಹೊಂದಿದ್ದರು. ಆದರೆ ಅದು ನಿಜವಾಗಲಿಲ್ಲ. 6ನೇ ಸ್ಥಾನಕ್ಕೆ ಭವ್ಯ ಗೌಡ ಎಲಿಮಿನೇಟ್ ಆದರು. ಇವರಿಗೆ ಬಿಗ್ ಬಾಸ್ ಮನೆಯ ಒಳಗೆ ಇದ್ದಾಗಲೇ ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಗೆ ಬರುವ ಅವಕಾಶ ಸಿಕ್ಕಿತ್ತು. ಪ್ರೊಮೋಷನ್ ಗೆ ಬಂದಾಗಲೇ ಭವ್ಯ ಅವರನ್ನು ಈ ಶೋಗೆ ಆಯ್ಕೆ ಮಾಡಲಾಗಿತ್ತು. ಆದರೆ ಭವ್ಯ ಅವರು ಸಂಚಿಕೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಇದರಿಂದ ಅವರ ಫ್ಯಾನ್ಸ್ ಗೆ ಮತ್ತು ನೆಟ್ಟಿಗರಿಗೆ ಆಶ್ಚರ್ಯ ಆಗಿತ್ತು. ಭವ್ಯ ಅವರು ಶೋ ರಿಜೆಕ್ಟ್ ಮಾಡಿದ್ದಾರೆ ಎನ್ನುವ ಒಂದು ಸುದ್ದಿ ಸಹ ವೈರಲ್ ಆಗಿತ್ತು, ಆದರೆ ಈ ಎಲ್ಲಾ ಪ್ರಶ್ನೆಗಳಿಗೆ ಈಗ ಭವ್ಯ ಗೌಡ ಅವರೇ ಉತ್ತರ ಕೊಟ್ಟಿದ್ದಾರೆ. ಯಾವ ಯಾಕೆ ಬಾಯ್ಸ್ ವರ್ಸಸ್ ಗರ್ಲ್ಸ್ ಶೋಗೆ ಬರಲಿಲ್ಲ ಎಂದು ತಿಳಿಸಿದ್ದಾರೆ.

ಒಂದು ಇಂಟರ್ವ್ಯೂನಲ್ಲಿ ಮಾತನಾಡಿರುವ ಭವ್ಯ ಗೌಡ ಅವರಿಗೆ ಬಿಗ್ ಬಾಸ್ ಮನೆಯಲ್ಲಾದ ಅನುಭವಗಳ ಬಗ್ಗೆ ಕೇಳಿ, ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಬಗ್ಗೆ ಕೇಳಿದಾಗ ಉತ್ತರ ಕೊಟ್ಟಿರುವ ಅವರು, ನನಗೆ ಹುಷಾರಿರಲಿಲ್ಲ, ಆ ಕಾರಣಕ್ಕೆ ಶೂಟಿಂಗ್ ಗೆ ಹೋಗಲು ಆಗಲಿಲ್ಲ. ಅಷ್ಟರಲ್ಲಾಗಲೇ ಶೂಟಿಂಗ್ ಶುರುವಾಗಿಬಿಟ್ಟಿತ್ತು, ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಇಂಥದ್ದೊಂದು ಅವಕಾಶ ಬಂದರೆ ಯಾರು ಬಿಡುತ್ತಾರೆ ಹೇಳಿ.. ನಾನು ಬಾಯ್ಸ್ ವರ್ಸಸ್ ಗರ್ಲ್ಸ್ ಶೋಗೆ ಹೋಗಬೇಕು ಎಂದು ತುಂಬಾ ಟ್ರೈ ಮಾಡಿದೆ.. ಆದರೆ ಆಗಲಿಲ್ಲ. ಇನ್ನೇನು ಮಾಡೋದು ಸರಿ ಮುಂದೆ ಬೇರೆ ಯಾವುದಾದರೂ ಶೋ ನೋಡೋಣ ಅಂತ ಸುಮ್ಮನೆ ಆದೇ. ಹುಷಾರಿರಲಿಲ್ಲ ಅನ್ನೋದು ಕಾರಣ ಅಷ್ಟೇ, ಇನ್ನೇನು ಇಲ್ಲ.. ಎಂದು ಹೇಳುವ ಮೂಲಕ ಎಲ್ಲಾ ಗಾಸಿಪ್ ಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ ಭವ್ಯ ಗೌಡ..
ಆದರೆ ಅಭಿಮಾನಿಗಳು ಇವರ ಮಾತನ್ನು ನಂಬುವುದಕ್ಕೆ ಸಿದ್ದವಿಲ್ಲ. ಏಕೆಂದರೆ ಭವ್ಯ ಗೌಡ ಅವರು ಬಿಗ್ ಬಾಸ್ ಮನೆ ಇಂದ ಹೊರಗಡೆ ಬಂದಾಗಿನಿಂದ ಸಹ ಇಂಟರ್ವ್ಯೂ ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೊರಗಡೆ ಹೋಗಿ ಬಂದಿದ್ದಾರೆ.. ಇದೆಲ್ಲವೂ ಚೆನ್ನಾಗಿಯೇ ನಡೆಯುವಾಗ ಭವ್ಯ ಅವರು ಹುಷಾರಿಲ್ಲದ ಕಾರಣ ಶೋ ಇಂದ ಹೊರಗಡೆ ಬಂದಿರುವುದಾಗಿ ಹೇಳೋದನ್ನ ನಂಬೋಕೆ ಹೇಗೆ ಸಾಧ್ಯ, ಇಲ್ಲಿ ಬೇರೆ ಏನೋ ಆಗಿರಬಹುದು ಎಂದು ಹೇಳುತ್ತಿದ್ದಾರೆ ನೆಟ್ಟಿಗರು ಮತ್ತು ಭವ್ಯ ಅವರ ಫ್ಯಾನ್ಸ್. ಒಟ್ಟಿನಲ್ಲಿ ಒಳ್ಳೆಯ ಅವಕಾಶ ಭವ್ಯ ಅವರ ಕೈತಪ್ಪಿ ಹೋಯಿತಲ್ಲ ಎನ್ನುವುದೇ ಎಲ್ಲರಲ್ಲಿ ಇರುವ ಬೇಸರ. ಈ ಶೋಗೆ ಭವ್ಯ ಅವರು ಬಂದಿದ್ದರೆ ಇನ್ನು ಹೆಚ್ಚು ಮನರಂಜನೆ ಕೊಡುತ್ತಿದ್ದರು. ಬೇರೆ ಶೋ ಮೂಲಕ ಇವರು ಬೇಗ ತಮ್ಮ ಅಭಿಮಾನಿಗಳ ಎದುರು ಬರಲಿ ಎಂದು ಹಾರೈಸೋಣ.

ಇನ್ನು ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಅಂತು ಕಲರ್ ಫುಲ್ ಆಗಿದೆ. ಅನುಪಮಾ ಗೌಡ ಆಂಕರಿಂಗ್ ಜೊತೆಗೆ ತಾರಾ ಅವರು ಶ್ರುತಿ ಅವರು ಇದ್ದಾರೆ. ಇನ್ನು ಹುಡುಗಿಯರ ತಂಡದ ಕ್ಯಾಪ್ಟನ್ ಆನೆ ವಿನಯ್ ಗೌಡ ಆಗಿದ್ದರೆ, ಹುಡುಗಿಯರ ತಂಡದ ಕ್ಯಾಪ್ಟನ್ ಮೊಗ್ಗಿನ ಮನಸ್ಸಿನ ಹುಡುಗಿ ಶುಭಾ ಪೂಂಜಾ. ಈ ಶೋ ನಲ್ಲಿ ಬಿಗ್ ಬಾಸ್ ಇಂದ ಹನುಮಂತ, ಧನರಾಜ್, ರಜತ್, ಚೈತ್ರಾ ಆಚಾರ್, ಐಶ್ವರ್ಯ ಸಿಂಧೋಗಿ ಮತ್ತು ಶೋಭಾ ಶೆಟ್ಟಿ ಇದ್ದಾರೆ. ಇನ್ನುಳಿದಂತೆ ಫುಲ್ ಮಜಾ ಕೊಡೋದಕ್ಕೆ ಬೇರೆ ಸ್ಪರ್ಧಿಗಳು, ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಸಹ ಇದ್ದು, ಮೊದಲ ವಾರದಲ್ಲಿ ಸಿಕ್ಕ ಮನರಂಜನೆ, ಮುಂದಿನ ವಾರಗಳಲ್ಲಿ ಸಿಗುತ್ತಾ ಎಂದು ಕಾದು ನೋಡಬೇಕಿದೆ. ಈ ಯುನಿಕ್ ಶೋ ಹೆಚ್ಚು ಜನರಿಗೆ ಹೆಚ್ಚು ಇಷ್ಟ ಆಗಿರುವುದಂತೂ ಖಂಡಿತ ಆಗಿದೆ.