ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ ವರ್ಷಗಳು ಉರುಳಿದ್ದರು, ಅಪ್ಪು ಅವರನ್ನು ನಾವ್ಯಾರು ಸಹ ಇವತ್ತಿಗೂ ಮರೆತಿಲ್ಲ. ಅವರು ಯಾವಾಗಲೂ ನಮ್ಮ ಜೊತೆ ನಮ್ಮ ನೆನಪಿಗಳಲ್ಲೇ ಇದ್ದಾರೆ. ಕುಟುಂಬದ ವಿಷಯಕ್ಕೆ ಬರೋದಾದರೆ, ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅಪ್ಪು ಅವರ ಎಲ್ಲಾ ಕೆಲಸಗಳನ್ನು ನನಸು ಮಾಡುವುದಕ್ಕೆ ಒಂದೊಂದೇ ಹೆಜ್ಜೆ ಇಡುತ್ತಿದ್ದಾರೆ. ಅಪ್ಪು ಅವರು ಇದ್ದಾಗ ಹೊಸಬರಿಗೆ ಅವಕಾಶ ಕೊಡುವುದಕ್ಕಾಗಿ ಶುರುವಾದ ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಅಶ್ವಿನಿ ಅವರು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಒಳ್ಳೊಳ್ಳೆಯ ಸಿನಿಮಾಗಳನ್ನು ಪಿ.ಆರ್.ಕೆ ಪ್ರೊಡಕ್ಷನ್ಸ್ ಮೂಲಕ ಹೊರತರುತ್ತಿದ್ದಾರೆ.

ಅದರ ಜೊತೆಗೆ ಈಗ ಅಪ್ಪು ಅವರ 20 ವರ್ಷಗಳ ಹಿಂದಿನ ಕನಸನ್ನು ನನಸು ಮಾಡುವುದಕ್ಕೆ ಮುಂದಾಗಿದ್ದಾರೆ ಅಶ್ವಿನಿ. ಅಪ್ಪು ಅವರಿಗೆ ಶಿಕ್ಷಣ ಕ್ಷೇತ್ರಕ್ಕೆ ಬಂದು, ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸಲು ಸಹಾಯ ಆಗುವಂಥ ಒಂದು ಸಂಸ್ಥೆಯನ್ನು ಶುರು ಮಾಡಬೇಕು ಎಂದು ಆಸೆ ಇತ್ತು. ಅದೇ ರೀತಿ ಈಗ ಅಶ್ವಿನಿ ಅವರು ಶಿಕ್ಷಣ ಕ್ಷೇತ್ರಕ್ಕೆ ಕಾಲಿಡುತ್ತಿದ್ದು, ನಿನ್ನೆಯಷ್ಟೇ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಪ್ರತಿಷ್ಠಿತ ಕಾರ್ಯಕ್ರಮ ಆಗಿರುವ ವುಮೆನ್ ಅಚಿವರ್ಸ್ ಅವಾರ್ಡ್ಸ್ ನಲ್ಲಿ ಅಶ್ವಿನಿ ಅವರು ತಮ್ಮ ಹೊಸ ಶಾಲೆಯ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಶಾಲೆಯ ಹೆಸರು ಅನಾವರಣಗೊಂಡಿದೆ. ಸುನಿತಾ ಗೌಡ, ಸ್ಪೂರ್ತಿ ವಿಶ್ವಾಸ್, ಶ್ರುತಿ ಕಿರಣ್ ಹಾಗೂ ಡಾ. ಬಿಂದು ರಾಣಾ ಇವರೆಲ್ಲರೂ ಅಶ್ವಿನಿ ಅವರ ಜೊತೆಗಿದ್ದರು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಹಾಗೆಯೇ ಇವರೆಲ್ಲರೂ ಸೇರಿ ಈ ಸ್ಕೂಲ್ ಶುರು ಮಾಡುತ್ತಿದ್ದು, ಅಶ್ವಿನಿ ಅವರು ಶುರು ಮಾಡುತ್ತಿರುವ ಈ ಶಾಲೆಗೆ ಜ್ಯೂನಿಯರ್ ಟೋಸ್ ಇಂಟರ್ನ್ಯಾಷನಲ್ ಎಂದು ಹೆಸರಿಡಲಾಗಿದೆ. ಇದೊಂದು ವಿಭಿನ್ನವಾಗಿರುವ ಪ್ರೀ ಸ್ಕೂಲ್ ಆಗಿರಲಿದ್ದು, ಮಕ್ಕಳಿಗೆ ಅತ್ಯುನ್ನತ ಮಟ್ಟದಲ್ಲಿ ಶಿಕ್ಷಣ ಸಿಗಲಿದೆ. ಜನಪ್ರಿಯ ಶಿಕ್ಷಣ ತಜ್ಞೆ ಡಾ. ಸುನಿತಾ ಗೌಡ ಹಾಗೂ ಬಿಂದು ರಾಣಾ ಇವರಿಬ್ಬರು ಜೊತೆಯಾಗಿ ತಯಾರಿಸಿರುವ ಪಠ್ಯಕ್ರಮ ಈ ಶಾಲೆಯ ಮಕ್ಕಳಿಗೆ ಇರಲಿದೆ. ಮಕ್ಕಳು ಚಿಕ್ಕವರಾಗಿದ್ದಾಲೇ ಅವರಲ್ಲಿ ಉದ್ಯಮಶೀಲತೆ, ನಾಯಕತ್ವ ಗುಣ, ಸೃಜನಶೀಲತೆ ಇದೆಲ್ಲವೂ ಶುರುವಾಗಬೇಕು, ಇದೆಲ್ಲವನ್ನು ಮಕ್ಕಳು ಕಲಿಯಬೇಕು ಎನ್ನುವ ಉದ್ದೇಶದಿಂದ ಈ ಹೊಸ ಶಾಲೆಯನ್ನು ಶುರು ಮಾಡಿದ್ದಾರೆ ಅಶ್ವಿನಿ ಮೇಡಮ್.
ಇಂಡಿಯನ್ ವುಮೆನ್ ಅಚೀವರ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಸ್ಪೂರ್ತಿ, ಶಿಕ್ಷಣ ಸಚಿವರಾದ ಡಾ. ಎಂ.ಸಿ ಸುಧಾಕರ್, ಶಿಕ್ಷಣ ತಜ್ಞೆ ಐಶ್ವರ್ಯ ಡಿ.ಕೆ.ಎಸ್ ಹೆಗ್ಡೆ ಇವರೆಲ್ಲರ ಸಮ್ಮುಖದಲ್ಲಿ ಶಾಲೆಯ ಅನಾವರಣ ನಡೆದಿದೆ. ಕಾರ್ಯಕ್ರಮದಲ್ಲಿ ಸಂತೋಷವಾಗಿ ಮಾತನಾಡಿದ ಅಶ್ವಿನಿ ಅವರು, ಶಿಕ್ಷಣ ಕ್ಷೇತ್ರಕ್ಕೆ ಬರಬೇಕು ಅನ್ನೋದು 20 ವರ್ಷಗಳ ಹಿಂದೆ ನಾನು ಮತ್ತು ಅಪ್ಪು ಅವರು ಕಂಡ ಕನಸು, ಈಗ ನನಸಾಗುತ್ತಿರೋದು ಸಂತೋಷವಾಗಿದೆ. ಮಕ್ಕಳ ಸಾಮರ್ಥ್ಯ ಹೆಚ್ಚಾಗುವಂಥ ಶಾಲೆಗಳನ್ನು ನಿರ್ಮಿಸಬೇಕು ಎನ್ನುವುದು ಈ ಶಾಲೆಯ ಮುಖ್ಯ ಗುರಿ.. ಎಂದು ಹೇಳಿದ್ದಾರೆ ಅಶ್ವಿನಿ ಅವರು.
ಬೆಂಗಳೂರಿನಲ್ಲಿ 5 ವಿವಿಧ ಕೇಂದ್ರಗಳಲ್ಲಿ ಶಾಲೆಯನ್ನು ಶುರು ಮಾಡಲಾಗುತ್ತದೆ, ಬಳಿಕ ದೇಶದ ಎಲ್ಲೆಡೆ ವಿಸ್ತರಿಸುವ ಪ್ಲಾನ್ ಹೊಂದಿದ್ದಾರೆ. ಈ ಶಾಲೆಯಲ್ಲಿ ಮಕ್ಕಳಿಗೆ ಅನುಕೂಲ ಆಗುವಂಥ ಹೊಸ ಯೋಜನೆಗಳು, ಸೌಲಭ್ಯಗಳು ಸಿಗಲಿದ್ದು, ಒಳ್ಳೆಯ ಶಿಕ್ಷಕರು ಇರಲಿದ್ದಾರೆ. ಜೊತೆಗೆ ಅನುಭವ ಇರುವ ಶಿಕ್ಷಣ ತಜ್ಞರು ಇರಲಿದ್ದಾರೆ. ಹೊಸ ಪಠ್ಯಕ್ರಮಗಳು ಈ ಶಾಲೆಯಲ್ಲಿ ಇರಲಿದ್ದು, ಸಣ್ಣ ಮಕ್ಕಳು ಎರಡು ವರ್ಷದಿಂದ 6 ವರ್ಷದ ಒಳಗಿನ ಮಕ್ಕಳಿಗೆ ಈ ಶಾಲೆಯಲ್ಲಿ ಶಿಕ್ಷಣ ಸಿಗಲಿದೆ. ಈ ಹೊಸ ರೀತಿಯ ಶಿಕ್ಷಣ ನಮ್ಮ ದೇಶದ ಎಲ್ಲಾ ಮಕ್ಕಳಿಗೆ ಸಿಗಬೇಕು ಎನ್ನುವುದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಆಸೆ ಆಗಿದೆ. ಅಪ್ಪು ಅವರ ಕನಸು ಯಶಸ್ವಿಯಾಗಲಿ ಎಂದು ನಾವು ಸಹ ಹಾರೈಸೋಣ.