ಇಂದು ವೈಕುಂಠ ಏಕಾದಶಿ, ಇದು ನಮ್ಮ ಸನಾತನ ಧರ್ಮದ ಅನುಸಾರ ಬಹಳ ವಿಶೇಷವಾದ ದಿವಸ. ಈ ದಿವಸ ನಾರಾಯಣ ಸ್ವಾಮಿಯ ಆರಾಧನೆ ಮಾಡಲಾಗುತ್ತಿದೆ. ವೈಕುಂಠ ಏಕಾದಶಿಯನ್ನು ಬಹಳಷ್ಟು ದೇವಸ್ಥಾನಗಳಲ್ಲಿ ಆಚರಿಸಿ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತದೆ. ಈ ದಿವಸ ಸ್ವರ್ಗದ ಬಾಗಿಲು ಎಲ್ಲರಿಗೂ ತೆರೆದಿರುತ್ತದೆ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಎಲ್ಲರೂ ಕೂಡ ಈ ದಿನ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಮಾಡಿಸಿ, ದೇವರ ಆಶೀರ್ವಾದ ಪಡೆಯುತ್ತಾರೆ. ಇಂದು ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಅವರು ಸಹ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ..
ಹೌದು, ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಇಂದು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು, ಪೂಜೆ ಮಾಡಿಸಿದ್ದಾರೆ. ಅಶ್ವಿನಿ ಅವರನ್ನು ದೇವಸ್ಥಾನದಲ್ಲಿ ನೋಡಿ ಫ್ಯಾನ್ಸ್ ಖುಷಿಯಾಗಿದ್ದು, ಪುನೀತ್ ರಾಜ್ ಕುಮಾರ್ ಅವರ ಪತ್ನಿಯಾಗಿ ಅವರಂತೆಯೇ ಒಳ್ಳೆಯ ಕೆಲಸಗಳಲ್ಲಿ ಅಶ್ವಿನಿ ಅವರು ಸಹ ತೊಡಗಿಕೊಳ್ಳುತ್ತಿದ್ದಾರೆ ಎನ್ನುವ ಸಂತೋಷ ಅಭಿಮಾನಿಗಳಲ್ಲಿ ಇದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿ ದರ್ಶನ ಪಡೆದಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಸ್ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅಪ್ಪು ಅವರು ಹೋದ ನಂತರ ಎಷ್ಟೆಲ್ಲಾ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ ಎಂದು ನಮಗೆ ಗೊತ್ತೇ ಇದೆ. ಹಲವು ಜನರಿಗೆ ಸಹಾಯ ಮಾಡುತ್ತಲಿದ್ದಾರೆ. ಕಷ್ಟ ಎಂದು ಮನೆಯ ಹತ್ತಿರ ಹೋದವರಿಗೆ ಸಹಾಯ ಮಾಡದೇ ಕಳಿಸಿದವರಲ್ಲ ಅಶ್ವಿನಿ ಮೇಡಂ. ಪಾರ್ವತಮ್ಮ ರಾಜ್ ಕುಮಾರ್ ಅವರ ಹಾಗೆ ಇವರು ಕೂಡ ಕಷ್ಟಕ್ಕೆ ಮರುಗುವ ಮನಸ್ಸಿರುವವರು, ಕಷ್ಟದಲ್ಲಿ ಇರುವವರಿಗೆ ತಮ್ಮಿಂದ ಸಾಧ್ಯ ಆದಷ್ಟು ಸಹಾಯ ಮಾಡುವ ಮನೋಭಾವ ಹೊಂದಿರುವವರು ಅಶ್ವಿನಿ ಮೇಡಂ. ಇದೇ ಕಾರಣಕ್ಕೆ ಇವರು ಅಭಿಮಾನಿಗಳಿಗೆ ತುಂಬಾ ಇಷ್ಟ ಆಗುತ್ತಾರೆ.
ಎಲ್ಲಾ ಅಭಿಮಾನಿಗಳು ಸಹ ಇವರಲ್ಲಿ ಅಪ್ಪು ಅವರನ್ನು ಕಾಣುತ್ತಾರೆ ಎಂದರೆ ತಪ್ಪಲ್ಲ. ಅಪ್ಪು ಅವರ ಎಲ್ಲಾ ಕನಸುಗಳನ್ನು ನನಸು ಮಾಡುವಲ್ಲಿ ಅಶ್ವಿನಿ ಅವರು ಹೆಜ್ಜೆ ಇಡುತ್ತಿದ್ದಾರೆ. ಅಪ್ಪು ಅವರು ಇದ್ದಾಗಲೇ ಶುರುವಾಗಿದ್ದು ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆ, ಈ ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಬೇಕು, ಒಳ್ಳೆಯ ಸಿನಿಮಾಗಳನ್ನು ಜನರಿಗೆ ನೀಡಬೇಕು ಎನ್ನುವುದು ಪುನೀತ್ ರಾಜ್ ಕುಮಾರ್ ಅವರ ಆಸೆ ಆಗಿತ್ತು, ಅದನ್ನು ಅಶ್ವಿನಿ ಅವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಹಲವಾರು ಹೊಸ ನಿರ್ದೇಶಕರು, ಕಲಾವಿದರು, ತಂತ್ರಜ್ಞರಿಗೆ ಕೆಲಸ ಕೊಡುತ್ತಿದ್ದಾರೆ. ಹಲವರಿಗೆ ಒಳ್ಳೆಯದನ್ನು ಮಾಡಿದ್ದಾರೆ..
ಜೊತೆಗೆ ಅಪ್ಪು ಅವರಿಗೆ ಶಿಕ್ಷಣ ಕ್ಷೇತ್ರಕ್ಕೆ ಬಂದು, ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡಬೇಕು ಎನ್ನುವ ಆಸೆ ಇತ್ತು. ಅದನ್ನು ಸಹ ಅಶ್ವಿನಿ ಅವರು ನನಸು ಮಾಡುವ ಹಾದಿಯಲ್ಲಿದ್ದಾರೆ. ಶೀಘ್ರದಲ್ಲೇ ಮಕ್ಕಳಿಗಾಗಿ ಹೊಸ ಶಾಲೆ ಶುರುವಾಗಲಿದೆ. ಅದಕ್ಕಾಗಿ ಎಲ್ಲಾ ತಯಾರಿಗಳು ಸಹ ನಡೆಯುತ್ತಿದೆ. ಹಾಗೆಯೇ ಅಶ್ವಿನಿ ಅವರು ಯುವ ರಾಜ್ ಕುಮಾರ್ ಅಭಿನಯಿಸಲಿರುವ ಎರಡನೇ ಸಿನಿಮಾ ಎಕ್ಕ ಸಿನಿಮಾವನ್ನು ನಿರ್ಮಾಣ ಮಾಡುತ್ತಲಿದ್ದು, ಅವರಿಗೂ ಸಾಥ್ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಅಪ್ಪು ಅವರು ವಿಧಿವಶರಾದ ನಂತರ ಅವರಂತೆಯೇ ಇದ್ದು, ಅಪ್ಪು ಅವರು ಮಾಡುತ್ತಿದ್ದಂಥ ಎಲ್ಲಾ ಕೆಲಸಗಳನ್ನು ಅಶ್ವಿನಿ ಅವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದು ನಿಜಕ್ಕೂ ಸಂತೋಷ ಪಡುವ ವಿಷಯ..