ಸುಶ್ಮಿತಾ ಸೇನ್ ಅವರ ಸಿನಿ ಜೀವನವು ಏರಿಳಿತಗಳಿಂದ ಕೂಡಿದೆ. ಆದರೆ 26 ವರ್ಷಗಳ ಹಿಂದೆ ಅವರು ಫಿಲಿಪೈನ್ಸ್ನಲ್ಲಿ ನಡೆದ 43ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿಜೇತರಾದ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ. 1994 ರಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದ ಸ್ವಲ್ಪ ಸಮಯದ ನಂತರ, ಅವರು ತಮ್ಮ ಕುಟುಂಬದೊಂದಿಗೆ ಲಾಸ್ ಏಂಜಲೀಸ್ನಲ್ಲಿ ಮೂರು ವರ್ಷಗಳನ್ನು ಕಳೆದರು. ಮಾಡೆಲಿಂಗ್ ಅನ್ನೇ ವೃತ್ತಿಯಾಗಿ ತೆಗೆದುಕೊಳ್ಳಲು ನಿರ್ಧರಿಸಿದ್ದ ಅವರು ನಂತರ ಹಿಂದಿ ಚಿತ್ರರಂಗದ ಪ್ರಸಿದ್ಧ ನಟಿಯರಲ್ಲಿ ಒಬ್ಬರಾದರು.
ಒಮ್ಮೆ ನಿರ್ದೇಶಕ ಮಹೇಶ್ ಭಟ್ ಸುಶ್ಮಿತಾ ಅವರನ್ನು ಭೇಟಿಯಾಗಲು ಕರೆದರು. ಆಗ ಸುಶ್ಮಿತಾ ಅವರಿಗೆ ಫೋನ್ ಮಾಡಿ, ‘ನೀವು ಯಾವುದೇ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲು ನನ್ನನ್ನು ಕರೆದಿದ್ದರೆ, ನನಗೆ ಆಸಕ್ತಿ ಇಲ್ಲ. ನಾನು ಸುಳ್ಳು ಹೇಳಲಾರೆ.’ ಎಂದಿದ್ದರು. ಆದರೂ ಒಟ್ಟಿಗೆ ಕಾಫಿ ಕುಡಿಯಲೇಬೇಕು ಎಂದು ಮಹೇಶ್ ಭಟ್ ಹಠ ಹಿಡಿದರು. ಆಗ ಅವರು ಭೇಟಿಯಾದರು. “ನೀವು ನಟಿಸುವ ಅಗತ್ಯವಿಲ್ಲ. ಏಕೆಂದರೆ ಆ ಪಾತ್ರ ಇರುವುದೇ ಮಿಸ್ ಯುನಿವರ್ಸ್ ಕುರಿತು. ನೀವು ನಿರ್ವಹಿಸಬಹುದು, ಅದು ಸುಶ್ಮಿತಾ ಸೇನ್ ಆಗಿ” ಎಂದು ನಿರ್ದೇಶಕ ಮಹೇಶ್ ಭಟ್ ಸುಶ್ಮಿತಾ ಅವರಿಗೆ ಮನವರಿಕೆ ಮಾಡಿದರು. ಚಿತ್ರವು ವಿಶ್ವ ಸುಂದರಿಯ ಪ್ರಯಾಣವನ್ನು ಆಧರಿಸಿದ್ದು, ಅದನ್ನು ‘ದಸ್ತಕ್’ (1996) ಹೆಸರಿನಲ್ಲಿ ನಿರ್ಮಿಸಿದರು. ಹೀಗೆ ಈ ಚಿತ್ರವನ್ನು ಸುಶ್ಮಿತಾ ಅವರಿಗೆ ಆಫರ್ ಮಾಡಿದಾಗ “ತಾನು ಚಲನಚಿತ್ರ ಕುಟುಂಬಕ್ಕೆ ಸೇರಿಲ್ಲ ಮತ್ತು ಹೇಗೆ ನಟಿಸಬೇಕೆಂದು ತಿಳಿದಿಲ್ಲದ ಕಾರಣ, ಬೇಡ” ಎಂದು ಮೊದಲಿಗೆ ತಿರಸ್ಕರಿಸಿದ್ದರು.

ನಟಿಗೆ ಕೋಪ ತರಿಸಿದ ನಿರ್ದೇಶಕ
‘ದಸ್ತಕ್’ ಒಂದು ದೊಡ್ಡ ಬಜೆಟ್ ಚಿತ್ರವಾಗಿದ್ದು, ಸ್ವಿಟ್ಜರ್ಲೆಂಡ್ನ ಸೆಶೆಲ್ಸ್ನಲ್ಲಿ ಚಿತ್ರೀಕರಿಸಲಾಗಿದೆ. ಸುಶ್ಮಿತಾ ಸೇನ್ ನಟಿಸಲು ಯೋಜಿಸಿದ್ದ ಏಕೈಕ ಚಿತ್ರ ಇದಾಗಿತ್ತು. ಯಾವುದೇ ತಯಾರಿ ಇಲ್ಲದಿದ್ದರೂ ತಕ್ಷಣ ಅವರನ್ನು ಚಿತ್ರದ ಮುಹೂರ್ತಕ್ಕೆ ಕರೆಯಲಾಯಿತು. ಸುಶ್ಮಿತಾ ಅವರು ಹೇಳಿರುವಂತೆ “ನಾನು ನನ್ನ ವ್ಯಾನಿಟಿ ವ್ಯಾನ್ನಿಂದ ಹೊರಬಂದೆ ಮತ್ತು ನನ್ನನ್ನು ಭೇಟಿ ಮಾಡಲು ಹಲವಾರು ಮಾಧ್ಯಮದವರು ಸರದಿಯಲ್ಲಿ ನಿಂತಿದ್ದರು” ಎಂದು ಅವರು ನೆನಪಿಸಿಕೊಂಡಿದ್ದಾರೆ. ಆಗ ಭಟ್ ಸಾಹೇಬರು ‘ಅವರು ನೋಡಲಿ’ ಎಂದರಂತೆ.
“ಇದೆಲ್ಲದರ ನಂತರ ನನ್ನ ಶುಭ ಸಮಯ. ನಾನು ನನ್ನ ಶಾಟ್ ನೀಡುವ ಮೊದಲು, ನನ್ನ ಸಂಪೂರ್ಣ ದೃಶ್ಯವನ್ನು ಬದಲಾಯಿಸಲಾಗಿತ್ತು” ಎಂದು ತಿಳಿಸಿದ್ದಾರೆ ಸುಶ್ಮಿತಾ. ಈ ಚಿತ್ರದ ಶೂಟಿಂಗ್ನ ಮೊದಲ ದಿನವೇ ಅವರು ತುಂಬಾ ಅಳುತ್ತಾರೆ. ಅದೇ ಶಾಟ್ ಅನ್ನು ರಿಪೀಟ್ ಆಗಿ ರೀಟೇಕ್ಗಳನ್ನು ತೆಗೆದುಕೊಂಡರೂ, ಸರಿಯಾದ ಶಾಟ್ ನೀಡಲು ಆಕೆಗೆ ಸಾಧ್ಯವಾಗಲಿಲ್ಲ, ಇದರಿಂದಾಗಿ ಆಕೆ ನಿರ್ದೇಶಕರ ಕೋಪವನ್ನು ಎದುರಿಸಬೇಕಾಯಿತು. ಮಹೇಶ್ ಭಟ್ ಅವರು ದೃಶ್ಯಕ್ಕಾಗಿ ನಿಜವಾಗಿಯೂ ಕೋಪ ತರಿಸಲು ಬಯಸಿದ್ದರು. ಏಕೆಂದರೆ ಇದರಿಂದ ಸುಶ್ಮಿತಾ ಅವರು ಉತ್ತಮ ಶಾಟ್ ನೀಡಬಹುದು ಎಂಬುದು ಲೆಕ್ಕಚಾರವಾಗಿತ್ತು. ಕೊನೆಗೆ ಅದು ಸಂಭವಿಸಿತು.