ಆರ್ಯವರ್ಧನ್ ಗುರೂಜಿ ಭವಿಷ್ಯವನ್ನು ಕೆಲವರು ನಂಬ್ತಾರೆ. ಕೆಲವರು ನಂಬಲ್ಲ. ಆರ್ಯವರ್ಧನ್ ಗುರೂಜಿ ದಿವ್ಯಾ ಹುಟ್ಟಿದ ದಿನಾಂಕ ಕೇಳಿ, ಶಾ*ಕ್ ಆಗುವ ರೀತಿ ಭವಿಷ್ಯ ನುಡಿದಿದ್ದಾರೆ. ಆರ್ಯವರ್ಧನ್ ಗುರೂಜಿ ಮತ್ತು ರಾಕೇಶ್ ಮಾತನಾಡುತ್ತಿದ್ದಾಗ, ದಿವ್ಯಾ ಅಲ್ಲಿಗೆ ಬರುತ್ತಾರೆ. ಆಗ ದಿವ್ಯಾ ಉರುಗಾಗೆ ನಿಮ್ಮ ಹುಟ್ಟಿದ ದಿನಾಂಕ ಹೇಳಿ ಅಂತಾರೆ. ಹುಟ್ಟಿದ ದಿನಾಂಕ ನೋಡಿ ಈ ಭವಿಷ್ಯ ಹೇಳಿದ್ದಾರೆ. 7ನೇ ದಿನಾಂಕದಂದು ಹುಟ್ಟಿದವರಿಗೆ 8ನೇ ತಾರೀಖಿನವರು ಲೈಫ್ ಪಾರ್ಟ್ನರ್ ಆಗೋಕೆ ಆಗಲ್ಲ. ಬೆಸ್ಟ್ ಫ್ರೆಂಡ್ ಆಗಿರ್ತಾರೆ. ಲೈಫ್ ಪಾರ್ಟ್ನರ್ ಆದರೆ ಅವರು ಡಿವೋರ್ಸ್ ಆಗ್ತಾರೆ ಎಂದರು ಆರ್ಯವರ್ಧನ್ ಗುರೂಜಿ ಭವಿಷ್ಯ ಹೇಳಿದ್ದಾರೆ. ನಿನ್ನ ಹುಟ್ಟಿದ ದಿನಾಂಕದ ಪ್ರಕಾರ, ನೀನು-ಅರವಿಂದ್ ಮದುವೆ ಆದ್ರೆ ಡಿ*ವೋ*ರ್ಸ್ ಆಗುತ್ತೆ ಎಂದು ದಿವ್ಯಾ ಉರುಡುಗಾಗೆ ಹೇಳಿದ್ದಾರೆ. ಅದನ್ನು ಕೇಳಿ ದಿವ್ಯಾ ಬೇಸರ ಮಾಡಿಕೊಂಡಿದ್ದಾರೆ.

ಆರ್ಯವರ್ಧನ್ ಗುರೂಜಿ ಹೇಳಿದ ಭವಿಷ್ಯವನ್ನು ದಿವ್ಯಾ ನಂಬ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಬೇಸರ ಅಂತು ಮಾಡಿಕೊಂಡರು. ಏನ್ ಹೀಗೆ ಹೇಳ್ತಾರೆ ಎಂದುಕೊಂಡರು. ನಮಸ್ಕಾರ ನಿಮ್ಮ ಜ್ಯೋತಿಷ್ಯಕ್ಕೆ. ನಾನು ಇಲ್ವೇ ಇಲ್ಲ ಇದಕ್ಕೆ ಎಂದು ದಿವ್ಯಾ ಎದ್ದು ಹೊರಟುಬಿಟ್ಟಿದ್ದಾರೆ. ಬೆಳ್ ಬೆಳಗ್ಗೆ ಸುಮ್ಮನೆ ಕೂತ್ಕೊತೀರಾ ಸ್ವಲ್ಪ. ಎಲೆ ಅಡಿಕೆ ಹಾಕಿಕೊಂಡು ನಿಮಗೆ ಫೋನ್ ಮಾಡಲಿಲ್ಲ ಅಂದ್ರೆ ನೋಡಿ..’’ ಎಂದು ಆರ್ಯವರ್ಧನ್ ಗುರೂಜಿಗೆ ದಿವ್ಯಾ ಉರುಡುಗ ಆವಾಝ್ ಹಾಕಿದರು.
ನಮಗೆ 8ನೇ ತಾರೀಖಿನವರು ಬೆಸ್ಟ್ ಫ್ರೆಂಡ್ಸ್ ಆಗ್ತಾರಂತೆ. ಯಾವುದೇ ಕಾರಣಕ್ಕೂ ಲೈಫ್ ಪಾರ್ಟ್ನರ್ ಆಗಲ್ಲ ಅಂತ ಹೇಳಿದರು. ನಾನು ಎದ್ದು ಬಂದೆ’’ ಎಂದು ದಿವ್ಯಾ ಉರುಡುಗ ಹೇಳಿದಾಗ, ‘’ಅವರು 8?’’ ಎಂದು ರೂಪೇಶ್ ಶೆಟ್ಟಿ ಪ್ರಶ್ನಿಸಿದರು. ಅದಕ್ಕೆ ‘’ಹೌದು.. ಅಯ್ಯಯ್ಯೋ.. ದೇವರೇ…ನಾನು ಫಸ್ಟ್ ಆಫ್ ಆಲ್ ಇದೆಲ್ಲಾ ಕೇಳಲ್ಲ. ಇವರೆಲ್ಲಾ ಕೇಳ್ತಿದ್ರಲ್ಲ ಅಂತ ಸುಮ್ಮನೆ ಕೂತಿದ್ದೆ’’ ಎಂದು ಹೇಳಿದರು ದಿವ್ಯಾ ಉರುಡುಗ.
ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದಲ್ಲಿ ಅರವಿಂದ್.ಕೆ.ಪಿ ಹಾಗೂ ದಿವ್ಯಾ ಉರುಡುಗ ಸ್ಪರ್ಧಿಸಿದ್ದರು. ಇಬ್ಬರೂ ‘ಬಿಗ್ ಬಾಸ್’ ಮನೆಯಲ್ಲಿ ಆತ್ಮೀಯವಾಗಿದ್ದರು. ಅರವಿಂದ್.ಕೆ.ಪಿ ಹಾಗೂ ದಿವ್ಯಾ ಉರುಡುಗ ಮಧ್ಯೆ ಸಂಥಿಂಗ್ ಸಂಥಿಂಗ್ ಶುರುವಾಗಿದ್ದು ‘ಬಿಗ್ ಬಾಸ್’ ಮನೆಯಲ್ಲೇ. ‘ಬಿಗ್ ಬಾಸ್’ ಕಾರ್ಯಕ್ರಮದಿಂದ ಹೊರಗೆ ಬಂದ್ಮೇಲೂ ಇಬ್ಬರೂ ಜೊತೆಯಾಗೇ ಇದ್ದರು. ಇದೀಗ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮಕ್ಕೆ ದಿವ್ಯಾ ಉರುಡುಗ ಸ್ಪರ್ಧೆಗೆ ಇಳಿದಾಗ ಅರವಿಂದ್.ಕೆ.ಪಿ ಅವರೇ ಡ್ಯಾನ್ಸ್ ಪರ್ಫಾಮೆನ್ಸ್ ನೀಡಿ ಶುಭ ಹಾರೈಸಿದ್ದರು.