ಬಿಗ್ ಬಾಸ್ ಸೀಸನ್ 09ಕ್ಕೆ ಸೀಸನ್ 08 ಅಭ್ಯರ್ಥಿ ದಿವ್ಯಾ ಉರುಡುಗ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದರು. ಪ್ರತಿವಾರ ದಿವ್ಯಾ ನಾಮಿನೇಟ್ ಆಗಿ ಕೊನೆಯದಾಗಿ ಸೇವ್ ಆಗ್ತಾ ಇದ್ದಾರೆ. ಅದಕ್ಕೆ ದಿವ್ಯಾ ಉರುಡುಗ ಆತ್ಮೀಯ ಗೆಳೆಯ ಪ್ರೀತಿಯ ಸಂದೇಶ ಕಳಿಸಿದ್ದಾರೆ ದಿವ್ಯಾ ಉರುಡುಗ ಅವರಿಗೆ ಬೈಕ್ ರೇಸರ್ ಅರವಿಂದ್ ಕೆ. ಪಿ ಮುದ್ದಾಗಿ ಪ್ರೀತಿಯ ಸಂದೇಶವನ್ನ ಕೊಟ್ಟಿದ್ದಾರೆ. ಕೆಲವು ಟಾಸ್ಕ್ ಗಳಲ್ಲಿ ಬಿಗ್ ಬಾಸ್ ಸೀಸನ್ 9ರಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಎಲ್ಲರಿಗೂ ಪೈಪೋಟಿ ನೀಡುತ್ತಿದ್ದಾರೆ. ಇದರ ಮಧ್ಯೆ ದಿವ್ಯಾಗೆ ಬಿಗ್ ಬಾಸ್ ಆಟ ಬಿಟ್ಟು ಕೊಡಬೇಡ.

ಬಿಂದಾಸ್ ಆಗಿ ಆಡು ಅಂತಾ ಸೋಷಿಯಲ್ ಮೀಡಿಯಾದಲ್ಲಿ ಅರವಿಂದ್ ಬರೆದುಕೊಂಡಿದ್ದಾರೆ. ಕಂಬಳಿಹುಳವನ್ನು ಕೈಬಿಟ್ಟರೆ, ಅದು ಎಂದಿಗೂ ಸುಂದರವಾದ ಚಿಟ್ಟೆಯಾಗುವುದಿಲ್ಲ ನೆವರ್ ಗಿವ್ ಅಪ್ʼ ಎಂದು ಅರವಿಂದ್, ದಿವ್ಯಾ ಉರುಡುಗಗೆ ಬೆಂಬಲ ನೀಡಿದ್ದಾರೆ. ಕಿಚ್ಚ ಸುದೀಪ್ ದೀಪಾವಳಿ ಪ್ರಯುಕ್ತ ಸದಸ್ಯರಿಗೆ ಲೆಟರ್ ಕಳುಹಿಸಿದ್ದರು. ದಿವ್ಯಾ ಉರುಡುಗ ಅವರಿಗೆ ʻʻವಿರಹ ವೇದನೆ ಮುಂದುವರಿಯಲಿʼʼಎಂದು ಬರೆದು ಕಳುಹಿಸಿದ್ದರು.
ಪಂಚಾಯಿತಿಯಲ್ಲಿ ಗಿಫ್ಟ್ ಕೊಡುವುದಾದರೆ ಯಾರಿಗೆ ಯಾವ ಗಿಫ್ಟ್ ಕೊಡುತ್ತೀರಾ ಎಂಬ ಪ್ರಶ್ನೆಗೆ ರೂಪೇಶ್ ಶೆಟ್ಟಿ ಅವರು ದಿವ್ಯಾ ಉರುಡುಗ ಅವರಿಗೆ ಬೈಕ್ ಗಿಫ್ಟ್ ಮಾಡುತ್ತೇನೆ ಎಂದಿದ್ದರು. ಈಗಾಗಲೇ 10 ವಾರಗಳನ್ನ ದೊಡ್ಮನೆಯಲ್ಲಿ ಪೂರೈಸಿರುವ ದಿವ್ಯಾ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದೆ. ದಿವ್ಯಾ ಉರುಡುಗ ಗೆದ್ದು ಬರಲಿ ಎಂಬುದೇ ಅರವಿಂದ್ ಮತ್ತು ಅಭಿಮಾನಿಗಳ ಆಶಯ. ಈ ಬಾರಿಯಾದ್ರೂ ದಿವ್ಯಾ ಬಿಗ್ ಬಾಸ್ ಗೆಲ್ತಾರಾ? ಅಥವಾ ಟಾಪ್ 5 ನಲ್ಲದ್ರೂ ಇರ್ತಾರಾ, ಇಲ್ವೋ ಎಂಬ ಗೊಂದಲಗಳು ಶುರುವಾಗಿವೆ.