ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡುವ ಸಂತೋಷವೇ ಬೇರೆ. ಅಪ್ಪು ಅವರ ಹೊಸ ಸಿನಿಮಾಗಳನ್ನು ನೋಡುವ ಭಾಗ್ಯ ಅಭಿಮಾನಿಗಳಾಗಿ ನಮಗೆ ಇಲ್ಲ, ಅವರ ಹಳೆಯ ಸಿನಿಮಾಗಳನ್ನು ಮತ್ತೆ ನೋಡುವ ಅವಕಾಶ ಸಿಗುತ್ತಿರುವುದಕ್ಕೆ ಸಂತೋಷ ಪಡಬೇಕು. ಈಗಾಗಲೇ ಅಪ್ಪು ಅವರ ಎರಡು ಸಿನಿಮಾಗಳು ಮರು ಬಿಡುಗಡೆಯಾಗಿ ದಾಖಲೆ ಬರೆದಿದೆ. ಒಂದು ರೀರಿಲೀಸ್ ಸಿನಿಮಾ ಇಷ್ಟರ ಮಟ್ಟಿಗೆ ಹಿಟ್ ಆಗಿ, ದೊಡ್ಡ ಮಟ್ಟದಲ್ಲಿ ಹೊಸ ಸಿನಿಮಾಗಿಂತ ಹೆಚ್ಚಾಗಿ ಪ್ರದರ್ಶನ ಪಡೆಯುತ್ತಿರುವುದು ನೋಡೋಕೆ ಸಂತೋಷ ಆಗುತ್ತದೆ. ಜನರು ಮತ್ತೆ ಥಿಯೇಟರ್ ಗೆ ಬಂದು ಹೌಸ್ ಫುಲ್ ಬೋರ್ಡ್ ನೋಡೋಕೆ ಪುನೀತ್ ರಾಜ್ ಕುಮಾರ್ ಅವರ ಸಿನಿಮಾವೇ ಬರಬೇಕಾಯಿತು. ಅಪ್ಪು ಅವರ ಸಿನಿಮಾ ಅಂದ್ರೆ ಫ್ಯಾಮಿಲಿಗಳು ಬರೋ ಸಿನಿಮಾ ಎಂದರು ತಪ್ಪಲ್ಲ..

ಇನ್ನು ರೀರಿಲೀಸ್ ಟ್ರೆಂಡ್ ಅನ್ನು ಶುರು ಮಾಡಿದ್ದು ಕೂಡ ದೊಡ್ಮನೆ ಕುಟುಂಬವೇ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಬಹಳಷ್ಟು ವರ್ಷಗಳ ಹಿಂದೆ ಡಾ. ರಾಜ್ ಕುಮಾರ್ ಅವರ ಸಿನಿಮಾಗಳು ಮತ್ತೆ ಬಿಡುಗಡೆಯಾಗಿ ಈ ರೀತಿ ಹಿಟ್ ಆಗುತ್ತಿದ್ದವು. ಅವರ ಹಳೆಯ ಸಿನಿಮಾಗಳನ್ನು ಹೊಸ ತಂತ್ರಜ್ಞಾನದ ಜೊತೆಗೆ ಬಿಡುಗಡೆ ಮಾಡಲಾಗುತ್ತಿತ್ತು. ಆ ಸಿನಿಮಾಗಳನ್ನೆಲ್ಲ ಥಿಯೇಟರ್ ನಲ್ಲಿ ನೋಡೋಕೆ ಜನರು ಮುಗಿ ಬೀಳುತ್ತಿದ್ದರು. ಹಾಗಿತ್ತು ಅಣ್ಣಾವ್ರ ಸಿನಿಮಾಗಳ ಕ್ರೇಜ್. ಆಗಲು ಕೂಡ ರೀರಿಲೀಸ್ ಸಿನಿಮಾಗಳು ಅದ್ಭುತವಾಗಿ ಪ್ರದರ್ಶನಗೊಂಡು ಹೊಸ ಸಿನಿಮಾದಂತೆಯೇ ಹಣಗಳಿಕೆ ಸಹ ಮಾಡಿದೆ. ಈ ಟ್ರೆಂಡ್ ಹುಟ್ಟು ಹಾಕಿದ್ದೇ ಅಣ್ಣಾವ್ರು ಎಂದು ಹೇಳಿದರೂ ಸಹ ತಪ್ಪಲ್ಲ. ಅವರ ಸಿನಿಮಾ ನೋಡೋ ಭಾಗ್ಯ ಎಲ್ಲರಿಗು ಸಿಗಲ್ಲ ಬಿಡಿ..

ಇನ್ನು ವಿಷ್ಣುದಾದ ಅವರ ಕೆಲವು ಸಿನಿಮಾಗಳು ಸಹ ಇದೇ ರೀತಿ ರೀರಿಲೀಸ್ ಆಗಿದೆ. ಕೆಲ ವರ್ಷಗಳ ಹಿಂದೆ ವಿಷ್ಣುವರ್ಧನ್ ಅವರ ಮೊದಲ ಸಿನಿಮಾ ನಾಗರಹಾವು ಬಿಡುಗಡೆ ಆಗಿತ್ತು. ರವಿಚಂದ್ರನ್ ಅವರ ತಂದೆ ಈ ಸಿನಿಮಾ ನಿರ್ಮಾಣ ಮಾಡಿದ್ದರು. ರವಿಚಂದ್ರನ್ ಅವರು ಹಾಗೂ ಅವರ ತಮ್ಮ ಬಾಲಾಜಿ ಅವರು ಪ್ಲಾನ್ ಮಾಡಿ, ಕನ್ನಡರ ಎವರ್ ಗ್ರೀನ್ ಕಲ್ಟ್ ಸಿನಿಮಾ ಎಂದು ಹೆಸರುವಾಸಿ ಆಗಿದ್ದ ನಾಗರಹಾವು ಸಿನಿಮಾವನ್ನು ಹೊಸ ತಂತ್ರಜ್ಞಾನಕ್ಕೆ ತಂದು, ಕೆಲವೇ ಕೆಲವು ಹೊಸ ಬದಲಾವಣೆಗಳನ್ನು ಮಾಡಿ ಸಿನಿಮಾವನ್ನು ಮರುಬಿಡುಗಡೆ ಮಾಡಿದ್ದರು. ಆರೇಳು ವರ್ಷಗಳ ಹಿಂದೆ ತೆರೆಕಂಡಿದ್ದ ನಾಗರಹಾವು ಸಿನಿಮಾ ಸಹ ದೊಡ್ಡ ಮಟ್ಟದಲ್ಲಿಯೇ ಸುದ್ದಿಯಾಗಿತ್ತು. ಸೂಪರ್ ಹಿಟ್ ಆಗಿತ್ತು, ಜನರು ಮುಗಿಬಿದ್ದು ಥಿಯೇಟರ್ ಗೆ ಬಂದು ಈ ಸಿನಿಮಾವನ್ನು ನೋಡಿದ್ದರು.

ಇನ್ನು ರೀರಿಲೀಸ್ ಟ್ರೆಂಡ್ ನಲ್ಲಿ ಮತ್ತೊಬ್ಬರು ಹೆಚ್ಚು ಸುದ್ದಿಯಾಗೋದು ಅಂದ್ರೆ ಶಿವಣ್ಣ ಅವರು. ಇವರ ಓಂ ಸಿನಿಮಾ ರೀರಿಲೀಸ್ ಟ್ರೆಂಡ್ ನಲ್ಲಿ ರೆಕಾರ್ಡ್ ಗಳನ್ನೇ ಸೃಷ್ಟಿಸಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ರೀರಿಲೀಸ್ ಆದ ಸಿನಿಮಾ ಎಂದರೆ ಅದು ಓಂ ಎಂದು ಹೇಳಲಾಗುತ್ತದೆ. ಓಂ ಸಿನಿಮಾದ ಕ್ರೇಜ್ ಅಂಥದ್ದು, ಶಿವಣ್ಣ ಅವರು ಪಕ್ಕಾ ಮಾಸ್ ಅವತಾರದಲ್ಲಿ ಕಾಣಿಸಿಕೊಂಡ ಮೊದಲ ಸಿನಿಮಾ ಓಂ. ಈ ಸಿನಿಮಾದ ಕ್ರೇಜ್ ಯಾವಾಗಲೂ ನೆಕ್ಸ್ಟ್ ಲೆವೆಲ್. ಯಾವುದಾದರೂ ಥಿಯೇಟರ್ ನಲ್ಲಿ ಕಲೆಕ್ಷನ್ ಇಲ್ಲ ಎಂದರೆ ಓಂ ಸಿನಿಮಾ ಪ್ರದರ್ಶನ ಮಾಡುತ್ತಿದ್ದರಂತೆ, ಹೆಚ್ಚು ಜನ ಸಿನಿಮಾ ನೋಡೋಕೆ ಬಂದು, ಥಿಯೇಟರ್ ಕಲೆಕ್ಷನ್ ಇಂಪ್ರೂವ್ ಆಗುತ್ತಿತ್ತಂತೆ. ಅಷ್ಟು ದೊಡ್ಡ ಮಟ್ಟದಲ್ಲಿ ಓಂ ಸಿನಿಮಾ ಜನಪ್ರಿಯತೆ ಹೊಂದಿದೆ. ಇದು ಆಲ್ ಟೈಮ್ ಬ್ಲಾಕ್ ಬಸ್ಟರ್.

ಇವರನ್ನು ಬಿಟ್ಟು ಬೇರೆ ಕಲಾವಿದರ ಕೆಲವು ಸಿನಿಮಾಗಳು ಸಹ ರೀರಿಲೀಸ್ ಆಗಿ, ಯಶಸ್ಸು ಕಂಡಿವೆ. ಆದರೆ ಅಪ್ಪು ಸಿನಿಮಾಗಳ ಹಾಗೆ ಆ ಮಟ್ಟಕ್ಕೆ ಯಶಸ್ಸು ಅಪರೂಪ ಎಂದೇ ಹೇಳಬಹುದು. ಅಪ್ಪು ಅವರ ಎರಡು ಸಿನಿಮಾಗಳು ಮರು ಬಿಡುಗಡೆ ಆಗಿದೆ, ಕಳೆದ ವರ್ಷ ಅಪ್ಪು ಅವರ ಹುಟ್ಟುಹಬ್ಬಕ್ಕೆ ಜಾಕಿ ಸಿನಿಮಾ ಮರು ಬಿಡುಗಡೆ ಆದಾಗ, ಮುಂದಿನ ವರ್ಷ ಅಪ್ಪು ಸಿನಿಮಾ ಮರುಬಿಡುಗಡೆ ಆಗುತ್ತದೆ ಎಂದು ಸೂಚನೆ ಸಿಕ್ಕಿತ್ತು. ಈ ವರ್ಷ ಅಧಿಕೃತವಾಗಿ ಮುಂದಿನ ವರ್ಷ ಯಾವ ಸಿನಿಮಾ ಮರುಬಿಡುಗಡೆ ಆಗುತ್ತದೆ ಎಂದು ತಿಳಿದುಬಂದಿಲ್ಲ. ಆದರೆ ನೆಟ್ಟಿಗರ ವಲಯದಲ್ಲಿ ಈಗಾಗಲೇ ಚರ್ಚೆ ಶುರುವಾಗಿದ್ದು, ಕೆಲವು ಸಿನಿಮಾಗಳ ಹೆಸರು ಕೇಳಿಬಂದಿದೆ. ಅಭಿಮಾನಿಗಳು ವೀರ ಕನ್ನಡಿಗ, ಅರಸು, ಮಿಲನಾ ಸಿನಿಮಾಗಳನ್ನು ಮರುಬಿಡುಗದೆ ಮಾಡಿ ಎಂದು ಕೇಳಿಕೊಂಡಿದ್ದಾರೆ..

ಇನ್ನು ಕೆಲವರು ನಮ್ಮ ಬಸವ ಸಿನಿಮಾವನ್ನು ಮರುಬಿಡುಗಡೆ ಮಾಡಿ ಎಂದು ಕೇಳಿಕೊಂಡಿದ್ದಾರೆ. ಇದೆಲ್ಲದರ ಜೊತೆಗೆ ಮತ್ತೊಂದು ಹೊಸ ವಿಚಾರ ಶುರುವಾಗಿದ್ದು, ಪರಮಾತ್ಮ ಸಿನಿಮಾದ ಮರುಬಿಡುಗಡೆಗೆ ತಯಾರಿ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಇದು 13 ವರ್ಷಗಳ ಹಿಂದೆ ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ, ಪುನೀತ್ ರಾಜ್ ಕುಮಾರ್ ಅವರು, ಐಂದ್ರಿತಾ ರೈ, ದೀಪಾ ಸನ್ನಿಧಿ ಜೊತೆಯಾಗಿ ಅಭಿನಯಿಸಿದ ಸಿನಿಮಾ. ಈ ಸಿನಿಮಾ ಪಕ್ಕಾ ಕ್ಲಾಸ್ ಹಾಗೂ ಕಲ್ಟ್ ಕ್ಲಾಸಿಕ್ ಎಂದರು ತಪ್ಪಲ್ಲ. ಇವತ್ತಿಗು ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ತುಂಬಾ ಇಷ್ಟಪಡುವ ಪಾತ್ರ ಪರಮಾತ್ಮ. ಈ ಸಿನಿಮಾ ಬಿಡುಗಡೆ ಆದಾಗ ಅಂದುಕೊಂಡ ಹಾಗೆ ಯಶಸ್ಸು ಕಾಣಲಿಲ್ಲ. ಟಿವಿಯಲ್ಲಿ, ಯೂಟ್ಯೂಬ್ ನಲ್ಲಿ ಸಿನಿಮಾ ನೋಡಿ, ಜನರು ಬೇಸರ ಮಾಡಿಕೊಂಡರು.

ಇಂಥ ಸಿನಿಮಾ ಥಿಯೇಟರ್ ನಲ್ಲಿ ನೋಡೋದು ಮಿಸ್ ಆಯ್ತು ಎಂದು ಜನ ಬೇಸರ ಪಟ್ಟುಕೊಂಡಿದ್ದು ಇದೆ. ಹಾಗಾಗಿ ಇದು ಬಹಳ ಸ್ಪೆಷಲ್ ಸಿನಿಮಾ. ಇದರಲ್ಲಿ ಪುನೀತ್ ಅವರ ಪಾತ್ರದ ಚಿತ್ರಣವೇ ಅದ್ಭುತ ಎಂದರು ತಪ್ಪಲ್ಲ. ಇದೀಗ ಪರಮಾತ್ಮ ಸಿನಿಮಾ ಮರುಬಿಡುಗಡೆಗೆ ಸಿದ್ಧವಾಗಿದ್ದು, ಮತ್ತೆ ಪರಂ ಅನ್ನು ನೋಡಲು ಅಪ್ಪು ಅವರ ಹುಟ್ಟುಹಬ್ಬದವರೆಗು ಕಾಯೋದು ಬೇಡ, ಶೀಘ್ರದಲ್ಲೇ ಪರಮಾತ್ಮ ಸಿನಿಮಾ ಮರು ಬಿಡುಗಡೆ ಆಗುತ್ತದೆ ಎಂದು ಹೇಳಲಾಗುತ್ತಿದೆ. ಕೆಲವೇ ತಿಂಗಳುಗಳಲ್ಲಿ ಮತ್ತೊಮ್ಮೆ ಅಪ್ಪು ಅವರನ್ನು ತೆರೆಮೇಲೆ ನೋಡುವ ಅವಕಾಶ ಸಿಗುತ್ತದೆ ಎನ್ನಲಾಗಿದ್ದು, ಅಧಿಕೃತ ಸುದ್ದಿಗಾಗಿ ಕಾಯಬೇಕಿದೆ. ಇವರ ಸಿನಿಮಾಗಳನ್ನು ಬೆಳ್ಳಿ ಪರದೆಯ ಮೇಲೆ ನೋಡೋದಕ್ಕಿಂತ ಸಂತೋಷ ಇನ್ನೇನಿದೆ ಹೇಳಿ…