ಕರ್ನಾಟಕದ ನಂಬರ್ 1 ನಿರೂಪಕಿ ಎಂದು ಹೆಸರು ಮಾಡಿರುವವರು ಅನುಶ್ರೀ. ಇವರ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಇಂದು ಈ ಸ್ಥಾನದಲ್ಲಿರುವ ಅನುಶ್ರೀ ಅವರು ಇಲ್ಲಿಯವರೆಗೂ ಬಂದು ತಲುಪಲು ಪಟ್ಟಿರುವ ಕಷ್ಟಗಳು ಒಂದೆರಡಲ್ಲ. ಅನುಶ್ರೀ ಅವರು ಹುಟ್ಟಿ ಬೆಳೆದಿದ್ದು ಬಡತನದ ಕುಟುಂಬದಲ್ಲಿ, ಮಂಗಳೂರಿನ ಸಣ್ಣ ಲೋಕಲ್ ಚಾನೆಲ್ ನಲ್ಲಿ ನಿರೂಪಣೆ ಶುರು ಮಾಡಿದ ಅನುಶ್ರೀ, ಬೆಂಗಳೂರಿಗೆ ಬಂದು ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ, ಸಿಕ್ಕ ಅವಕಾಶಗಳ ಸದುಪಯೋಗ ಪಡಿಸಿಕೊಳ್ಳುತ್ತಾ ಇಂದು ರಾಜ್ಯದ ನಂಬರ್1 ನಿರೂಪಕಿಯಾಗಿ ಹೆಸರು ಮಾಡಿದ್ದಾರೆ. ಜೀಕನ್ನಡ ವಾಹಿನಿಯ ಕಾರ್ಯಕ್ರಮದಲ್ಲಿ ಅನುಶ್ರೀ ಅವರೇ ಇರಬೇಕು. ಆದರೆ ಕಳೆದ ವಾರ ಇವರು ಸರಿಗಮಪ ಕಾರ್ಯಕ್ರಮಕ್ಕೆ ಬಂದಿರಲಿಲ್ಲ.
ಹೌದು, ಜೀಕನ್ನಡ ವಾಹಿನಿಯ ಸರಿಗಮಪ, ಡಿಕೆಡಿ ಈ ಎಲ್ಲಾ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವುದೇ ಅನುಶ್ರೀ ಅವರು. ಇವರು ಜಾಲಿಯಾಗಿ ಜೋಶ್ ಇಂದ ನಿರೂಪಣೆ ಮಾಡುವ ಶೈಲಿ ಯಾರಿಗೆ ತಾನೇ ಇಷ್ಟ ಆಗೋದಿಲ್ಲ ಹೇಳಿ. ಕಾರ್ಯಕ್ರಮ ನೋಡುತ್ತಿರುವ ವೀಕ್ಷಕರನ್ನು ತಮ್ಮ ಆಕರ್ಷಕವಾದ ಮಾತುಗಳ ಮೂಲಕ, ತಮಾಷೆಗಳ ಮೂಲಕ ಅನುಶ್ರೀ ಅವರು ಹಿಡಿದಿಟ್ಟುಕೊಳ್ಳುತ್ತಾರೆ. ಈ ಚಾಣಾಕ್ಷತೆ ಇರುವುದರಿಂದ ಜೀಕನ್ನಡ ವಾಹಿನಿಯ ಬಹುತೇಕ ಕಾರ್ಯಕ್ರಮಗಳಲ್ಲಿ ಅನುಶ್ರೀ ಅವರು ಇರಲೇಬೇಕು. ಅಷ್ಟೇ ಅಲ್ಲದೇ ಸಿನಿಮಾ ಕುರಿತು ನಡೆಯುವ ದೊಡ್ಡ ದೊಡ್ಡ ಈವೆಂಟ್ ಗಳಲ್ಲಿ ಸಹ ಅನುಶ್ರೀ ಅವರೇ ಇರುತ್ತಾರೆ. ಅವರಿಗೆ ಅಷ್ಟು ಬೇಡಿಕೆ ಇದೆ. ಸರಿಗಮಪ ಕಾರ್ಯಕ್ರಮ ಕಳೆಗಟ್ಟುವುದೇ ಇವರಿಂದ ಎಂದರು ತಪ್ಪಲ್ಲ.

ಜಡ್ಜ್ ಗಳಿಗೆ ಇವರು ಅಂದ್ರೆ ತುಂಬಾ ಇಷ್ಟ, ಸ್ಪರ್ಧಿಗಳ ಪ್ರೀತಿಯ ಅನುಶ್ರೀ ಅಕ್ಕ ಆಗಿ ಅನುಶ್ರೀ ಅವರು ಎಲ್ಲರ ಮೆಚ್ಚಿನ ವ್ಯಕ್ತಿ ಆಗಿದ್ದಾರೆ ಎಂದರು ತಪ್ಪಲ್ಲ. ಇಂಥ ಅನುಶ್ರೀ ಅವರು ಕಳೆದ ವಾರ ಸರಿಗಮಪ ಕಾರ್ಯಕ್ರಮ ನಿರೂಪಣೆ ಮಾಡಲಿಲ್ಲ. ಇದು ವೀಕ್ಷಕರಿಗೆ ಶಾಕ್ ಆಗಿತ್ತು, ಇದ್ದಕ್ಕಿದ್ದಂತೆ ಅನುಶ್ರೀ ಅವರು ಈ ಕಾರ್ಯಕ್ರಮದಿಂದ ಯಾಕೆ ಹಿಂದೆ ಸರಿದಿದ್ದಾರೆ? ಇವರು ಸರಿಗಮಪ ಶೋ ಮಿಸ್ ಮಾಡುವುದಿಲ್ಲವಲ್ಲ? ಅನುಶ್ರೀ ಇಲ್ಲದೇ ಸರಿಗಮಪ ಶೋ ಡಲ್ ಹೊಡೀತಿದೆ ಎಂದು ಜನರಿಗೆ ಅನ್ನಿಸಿತ್ತು. ಕಳೆದ ವಾರ ಮಾಸ್ಟರ್ ಆನಂದ್ ಅವರು ಬಂದು ಸರಿಗಮಪ ಕಾರ್ಯಕ್ರಮ ನಿರೂಪಣೆ ಮಾಡಿದರು. ಅನುಶ್ರೀ ಅವರನ್ನು ಎಲ್ಲರೂ ತುಂಬಾ ಮಿಸ್ ಮಡಿಕೊಂಡರು. ಇದರ ಹಿಂದೆ ಮತ್ತೊಂದು ಪ್ರಶ್ನೆ ಸಹ ಶುರುವಾಯಿತು.

ಅದು ಏನು ಎಂದರೆ ಅನುಶ್ರೀ ಹಾಗೂ ಅರ್ಜುನ್ ಜನ್ಯ ಅವರ ನಡುವೆ ಬಿರುಕು ಮೂಡಿದೆಯಾ ಎನ್ನುವ ಪ್ರಶ್ನೆ ಶುರುವಾಗಿದೆ. ಈ ಶೋ ನಲ್ಲಿ ಅರ್ಜುನ್ ಜನ್ಯ ಅವರನ್ನು ಲವ್ ಮಾಡುತ್ತಿರುವಂತೆ ಅನುಶ್ರೀ ಯಾವಾಗಲೂ ತಮಾಷೆ ಮಾಡುತ್ತಿದ್ದರು, ಇನ್ನು ಅರ್ಜುನ್ ಜನ್ಯ ರಿಜೆಕ್ಟ್ ಮಾಡುವಂತೆ ತೋರಿಸಲಾಗಿತ್ತು. ಅನುಶ್ರೀ ಅವರು ಒಂದು ವಾರ ಕಾರ್ಯಕ್ರಮಕ್ಕೆ ಬರದೇ ಇರುವುದು, ಅರ್ಜುನ್ ಜನ್ಯಾ ಅವರ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಿದ್ಯಾ ಎಂದು ಅನ್ನಿಸಿದೆ. ಆದರೆ ಅಸಲಿ ವಿಚಾರ ಏನು ಎಂದರೆ ಇದೆಲ್ಲವೂ ಸುಳ್ಳು. ಈ ವಾರದ ಸಂಚಿಕೆಯಲ್ಲಿ ಅನುಶ್ರೀ ಅವರು ಸರಿಗಮಪ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅದೇ ರೀತಿ ತಮಾಷೆಯಾಗಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಈ ವಾರ ಸರಿಗಮಪ ಮಹಾಮನರಂಜನೆ ನಡೆದಿದೆ.

ಚಂದನವನದ ಸ್ಟಾರ್ ಹೀರೋಯಿನ್ ಗಳಾದ ಶ್ರುತಿ, ಸುಧಾರಾಣಿ, ತಾರಾ ಈ ಮೂವರು ಬಂದಿದ್ದು ಇವರ ಹಾಡುಗಳನ್ನು ಹಾಡಲಾಗಿದೆ. ಅಷ್ಟೇ ಅಲ್ಲದೇ ಅಮೇರಿಕಾ ಇಂದ ವಾಪಸ್ ಬಂದಿರುವ ಕರುನಾಡ ಚಕ್ರವರ್ತಿ ಶಿವಣ್ಣ ಅವರು ಸಹ ಸರಿಗಮಪ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಬಂದಿದ್ದು, ಅನುಶ್ರೀ ಅವರ ಬರ್ತ್ ಡೇ ಸೆಲೆಬ್ರೇಟ್ ಮಾಡಲಾಗಿದೆ. ಒಟ್ಟಿನಲ್ಲಿ ಏನು ಆಗಿಲ್ಲ, ಅನುಶ್ರೀ ಅವರು ಜೀಕನ್ನಡ ವಾಹಿನಿಯಲ್ಲೇ ಇದ್ದಾರೆ ಎನ್ನುವುದಂತೂ ತಿಳಿದುಬಂದಿದೆ. ಜೀಕನ್ನಡ ವಾಹಿನಿ ಹಾಗೂ ಕನ್ನಡ ಚಿತ್ರರಂಗ ಅನುಶ್ರೀ ಅವರಿಗೆ ದೊಡ್ಡ ಸ್ಥಾನವನ್ನೇ ನೀಡಿದ್ದು, ಇವರ ಯೂಟ್ಯೂಬ್ ಚಾನೆಲ್ ಸಹ ಸಿಕ್ಕಾಪಟ್ಟೆ ಫೇಮಸ್. ಹಲವು ಕನ್ನಡ ಸಿನಿಮಾಗಳ ಪ್ರೊಮೋಷನ್ ಅನುಶ್ರೀ ಅವರ ಯೂಟ್ಯೂಬ್ ಚಾನೆಲ್ ಮೂಲಕ ನಡೆಯುತ್ತದೆ.
ಇನ್ನು ಅನುಶ್ರೀ ಅವರ ಮದುವೆ ಬಗ್ಗೆ ಭಾರಿ ಚರ್ಚೆ ಆಗುತ್ತಿದ್ದು, ಈ ವರ್ಷ ಆದರೂ ಅನುಶ್ರೀ ಅವರು ಮದುವೆ ಆಗುವ ಮನಸ್ಸು ಮಾಡುತ್ತಾರಾ ಎಂದು ಕಾದು ನೋಡಬೇಕಿದೆ. ಅನುಶ್ರೀ ಅವರು ಅಪ್ಪು ಅವರ ಹುಟ್ಟುಹಬ್ಬದ ದಿವಸ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡುತ್ತಾರಾ ಎಂದು ಕಾದು ನೋಡಬೇಕಿದೆ.