ಆಂಕರ್ ಅನುಶ್ರೀ ಕನ್ನಡದ ಅತಿ ಜನಪ್ರಿಯ ನಿರೂಪಕಿಯರಲ್ಲಿ ಒಬ್ಬರು. ಕನ್ನಡ ಸಿನಿಮಾಗಳ ಬಹುತೇಕ ಕಾರ್ಯಕ್ರಮಗಳಲ್ಲಿ ಅನುಶ್ರೀ ಅವರು ನಿರೂಪಣೆ ಮಾಡುತ್ತಾರೆ. ಸಿನಿಮಾ ಪ್ರೊಮೋಷನ್ ಈವೆಂಟ್ ಗಳಲ್ಲಿ ಕೂಡ ಅನುಶ್ರೀ ಅವರು ಕಾಣಿಸಿಕೊಳ್ಳುತ್ತಾರೆ. ಆದರೆ ಅನುಶ್ರೀ ಅವರಿಗೆ ಇನ್ನು ಮದುವೆಯಾಗಿಲ್ಲ. ಇವರ ವಯಸ್ಸು 35 ದಾಟಿದೆ, ಆದರೆ ಇನ್ನೂ ಸಿಂಗಲ್ ಆಗಿಯೇ ಇದ್ದಾರೆ ಅನುಶ್ರೀ. ಇದೀಗ ಅನುಶ್ರೀ ಅವರ ಮದುವೆ ಬಗ್ಗೆ ಹೊಸ ಸುದ್ದಿ ಕೇಳಿ ಬಂದಿದ್ದು, ಅನುಶ್ರೀ ಅವರು ಈ ಸ್ಯಾಂಡಲ್ ವುಡ್ ನಟನ ಜೊತೆ ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ..
ಹೌದು, ಅನುಶ್ರೀ ಅವರ ಬಗ್ಗೆ ಆಗಾಗ ಸುದ್ದಿಗಳು ಕೇಳಿಬರುತ್ತಲೇ ಇರುತ್ತದೆ. ಅನುಶ್ರೀ ಮದುವೆ ಇವರ ಜೊತೆಗೆ ನಡೆದು ಹೋಗಿದೆ ಎಂದು ಯೂಟ್ಯೂಬ್ ನಲ್ಲಿ ವಿಡಿಯೋಗಳು, ಫೇಕ್ ಫೋಟೋಗಳು ಕಂಡುಬರುತ್ತಲೇ ಇರುತ್ತದೆ. ಆದರೆ ಅದ್ಯಾವುದು ನಿಜವಂತು ಅಲ್ಲ. ಅನುಶ್ರೀ ಅವರಿಗೆ ಎಲ್ಲಾ ವೇದಿಕೆಗಳಲ್ಲಿ ಕೂಡ ನಿಮ್ಮ ಮದುವೆ ಯಾವಾಗ ಎನ್ನುವ ಪ್ರಶ್ನೆ ಕೇಳಿಬರುತ್ತಲೇ ಇರುತ್ತದೆ. ಆದರೆ ಅನುಶ್ರೀ ಅವರು ಇನ್ನು ಮದುವೆಯಾಗುವ ಮನಸ್ಸು ಮಾಡಿಲ್ಲ. ಹಾಗಿದ್ದರು ಇದೀಗ ಅನುಶ್ರೀ ಅವರ ಮದುವೆ ಬಗ್ಗೆ ಹೊಸ ಸುದ್ದಿ ಕೇಳಿ ಬರುತ್ತದೆ. ಈ ಒಬ್ಬ ನಟನ ಜೊತೆಗೆ ಅನುಶ್ರೀ ಮದುವೆ ನಡೆದು ಹೋಗಿದೆಯಂತೆ.
ಹೌದು, ಸ್ಯಾಂಡಲ್ ವುಡ್ ನ ಆ ಸ್ಟಾರ್ ಹೀರೋ ಮತ್ಯಾರು ಅಲ್ಲ, ನಟ ಶರಣ್ ಅವರು. ಅನುಶ್ರೀ ಅವರು ಶರಣ್ ಅವರೊಡನೆ ಮದುವೆಯಾಗಿದ್ದಾರೆ ಎನ್ನುವ ಒಂದು ವಿಡಿಯೋ ಮತ್ತು ಫೋಟೋ ಎರಡು ಕೂಡ ವೈರಲ್ ಆಗಿದೆ. ಮದುವೆ ಆಗಿರುವುದೇನೋ ನಿಜ, ಆದರೆ ಇದು ನಿಜವಾದ ಮದುವೆಯಲ್ಲ. ಕಾಮಿಡಿ ಕಿಲಾಡಿಗಳು ಶೋಗೆ ಶರಣ್ ಅವರು ಅತಿಥಿಯಾಗಿ ಬಂದಿದ್ದಾಗ, ಅನುಶ್ರೀ ಅವರೊಡನೆ ಮದುವೆಯಾಗುವ ಸನ್ನಿವೇಶ ಬಂದಿತ್ತು. ಆಗ ಶರಣ್ ಅವರು ಅನುಶ್ರೀ ಅವರಿಗೆ ಹಾರ ಹಾಕಿ, ಮದುವೆಯಾಗಿದ್ದರು. ಆ ಫೋಟೋಗಳು ಈಗ ವೈರಲ್ ಆಗಿದೆ. ಅಂದು ಮದುವೆ ನಡೆದ ಹಾಗೆಯೇ ಸಂಚಿಕೆ ಇತ್ತು.

ಇನ್ನು ಕುರಿ ಪ್ರತಾಪ್ ಅವರು, ನಟ ಶರಣ್ ಅವರೊಡನ್ರ ಅನುಶ್ರೀ ಅವರ ಮದುವೆ ನಡೆದು ಹೋಗಿದೆ ಎಂದು ಘೋಷಣೆ ಸಹ ಮಾಡಿದ್ದರು. ಅದೊಂದು ಒಳ್ಳೆಯ ತಮಾಷೆದಾಯಕ ಸಂಚಿಕೆ ಆಗಿತ್ತು. ಇದೇ ಫೋಟೋಗಳು ಈಗ ವೈರಲ್ ಆಗಿದೆ, ಆದರೆ ನಿಜಕ್ಕೂ ಅವರ ಮದುವೆಯಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಇಂಥ ಫೋಟೋಗಳು ಮತ್ತು ವಿಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತದೆ. ಅದೇ ರೀತಿ ಈಗಲೂ ವೈರಲ್ ಆಗಿದೆ. ಒಟ್ಟಿನಲ್ಲಿ ಅನುಶ್ರೀ ಅವರ ಮದುವೆ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರವಂತು ಸಿಕ್ಕಿಲ್ಲ.
ಇನ್ನು ಅನುಶ್ರೀ ಅವರು ಏನು ಇಲ್ಲದೇ, ಸಣ್ಣ ಕಾರ್ಯಕ್ರಮ ನಿರೂಪಣೆ ಮಾಡುವುದಕ್ಕೆ ಬೆಂಗಳೂರಿಗೆ ಬಂದವರು, ಆದರೆ ಇಂದು ರಾಜ್ಯದ ಅತ್ಯಂತ ಯಶಸ್ವಿ ನಿರೂಪಕಿಯರಲ್ಲಿ ಒಬ್ಬರು ಎನ್ನುವ ಹಂತಕ್ಕೆ ಬೆಳೆದು ನಿಂತಿದ್ದಾರೆ. ಇಂದು ಅನುಶ್ರೀ ಅವರು ಕನ್ನಡದ ಬಹುತೇಕ ಸಿನಿಮಾಗಳ ಪ್ರೀ ರಿಲೀಸ್ ಈವೆಂಟ್ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಾರೆ. ಜೀಕನ್ನಡ ವಾಹಿನಿಯ ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡುತ್ತಾರೆ. ಅವರದ್ದೇ ಆದ ಯೂಟ್ಯೂಬ್ ಚಾನೆಲ್ ಕೂಡ ಇದ್ದು, ಅದರಲ್ಲಿಯೂ ಸಿನಿಮಾ ಪ್ರೊಮೋಷನ್ ಮಾಡುತ್ತಾರೆ.