ಕರ್ನಾಟಕದ ಮನೆಮಗ ಎಂದೇ ನಾವು ಅಪ್ಪು ಅವರನ್ನು ಕರೆಯುತ್ತೇವೆ. ಇಂದು ಅಪ್ಪು ಅವರು ನಮ್ಮ ಜೊತೆಗೆ ಇಲ್ಲದೇ ಹೋದರು ಸಹ ಅವರ ನೆನಪುಗಳು ಯಾವಾಗಲೂ ನಮ್ಮ ಜೊತೆಗೆ ಇದೆ. ಅಪ್ಪು ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಅವರ ಸುಂದರವಾದ ನಗು. ಯಾರನ್ನು ಕಂಡರೂ ಅಪ್ಪು ಅವರ ಮುಖದಲ್ಲಿ ಮೂಡುತ್ತಿದ್ದದ್ದು ಒಂದೇ ಥರದ ನಗು. ಆ ನಗುವನ್ನ ಇಂದಿಗೂ ಯಾರು ಮರೆತಿಲ್ಲ, ನಗುವಿನ ಪರಮಾತ್ಮ ಎಂದೇ ಎಲ್ಲರೂ ಅವರನ್ನು ಕರೆಯುತ್ತಾರೆ. ಅಪ್ಪು ಅವರು ಎಲ್ಲರಿಗೂ ಅಷ್ಟು ಇಷ್ಟ ಎಂದರು ತಪ್ಪಲ್ಲ. ಇನ್ನು ಚಿಕ್ಕವರಿದ್ದಾಗ ಅಪ್ಪು ಅವರು ಕಪ್ಪಾಗಿದ್ದಾರೆ ಎಂದು ಅವರ ಸಹೋದರಿ ಹೇಳುತ್ತಿದ್ದರಂತೆ. ಅದಕ್ಕೆ ಅಣ್ಣಾವ್ರು ಹೇಳಿದ್ದೇನು ಗೊತ್ತಾ?

ಅಪ್ಪು, ಮಾಸ್ಟರ್ ಲೋಹಿತ್ ಆಗಿದ್ದವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಿ ಬೆಳೆದ ಕಥೆ ನಮಗೆಲ್ಲಾ ಗೊತ್ತೇ ಇದೆ. ಅಪ್ಪು ಅವರು ದೊಡ್ಮನೆ ಕುಟುಂಬದ ಮುದ್ದಿನ ಕೊನೆಯ ಮಗ. 1975 ರಲ್ಲಿ ಪಾರ್ವತಮ್ಮ ಅವರು ಪುನೀತ್ ರಾಜ್ ಕುಮಾರ್ ಅವರಿಗೆ ಜನ್ಮ ನೀಡಿದರು. ಅಪ್ಪು ಅವರು ಹುಟ್ಟಿದಾಗ ಸ್ವಲ್ಪ ಕಪ್ಪಗಿದ್ದರು ಎಂದು ಅವರ ಅಕ್ಕ ಪೂರ್ಣಿಮಾ ಅವರು ತಮ್ಮ ಚೆನ್ನಾಗಿಲ್ಲ, ಕಪ್ಪಾಗಿದ್ದಾನೆ ಎಂದು ಅವರ ಅಮ್ಮನ ಹತ್ತಿರ ಹೇಳಿ ಕಂಪ್ಲೇಂಟ್ ಮಾಡುತ್ತಿದ್ದರಂತೆ. ಹೌದು ಅಪ್ಪು ಅವರ ಮನೆಯಲ್ಲಿ ಎಲ್ಲರೂ ಮಕ್ಕಳಾಗಿದ್ದಾಗ ಈ ಥರ ಮಾತುಗಳು ಕೂಡ ಕೇಳಿಬಂದಿತ್ತಂತೆ. ಆಗ ಅಣ್ಣಾವ್ರು ತಮ್ಮ ಮಗಳಿಗೆ ಒಂದು ಮಾತು ಹೇಳಿದ್ದರಂತೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ತಮ್ಮ ಕಪ್ಪು ಎಂದು ಮಗಳು ಹೇಳಿದಾಗ ಡಾ. ರಾಜ್ ಕುಮಾರ್ ಅವರು, ಕೃಷ್ಣನ ಬಣ್ಣ ಕಪ್ಪು, ಕಪ್ಪು ಕಸ್ತೂರಿ ಈ ಮಗು ದೇವರ ಹಾಗೆ, ಕೃಷ್ಣನಿಗೆ ಸಮಾನ, ಅವನನ್ನು ಚೆನ್ನಾಗಿ ಪ್ರೀತಿಯಿಂದ ನೋಡಿಕೊಳ್ಳಬೇಕು ಅಂದಿದ್ದರಂತೆ. ಅಣ್ಣಾವ್ರು ಈ ಮಾತು ಹೇಳಿದ ನಂತರ ಪೂರ್ಣಿಮಾ ಅವರು ಮಗುವಾಗಿದ್ದ ಅಪ್ಪು ಅವರನ್ನು ಪ್ರೀತಿಯಿಂದ ನೋಡಿಕೊಳ್ಳುವುದಕ್ಕೆ ಶುರು ಮಾಡಿದರಂತೆ. ಅಣ್ಣಾವ್ರು ಹೇಳಿದ ಈ ಒಂದೇ ಒಂದು ಮಾತು ಸಾಕು, ಮಕ್ಕಳ ಮೇಲೆ ಅವರಿಗೆ ಎಷ್ಟು ಪ್ರೀತಿ ಇರುತ್ತಿತ್ತು ಎಂದು ಹೇಳೋದಕ್ಕೆ. ಅದೇ ಥರ ಪಾರ್ವತಮ್ಮ ಅವರಾಗಲಿ, ಅಣ್ಣಾವ್ರೆ ಆಗಲಿ ಎಲ್ಲರೂ ಅಪ್ಪು ಅವರನ್ನು ಅಷ್ಟೇ ಪ್ರೀತಿಯಿಂದ ಬೆಳೆಸಿದರು.

ಮುಂದೆ ಅಪ್ಪು ಅವರು ಬಾಲನಟನಾಗಿ ಅಭಿನಯ ಶುರು ಮಾಡಿ, ಹೀರೋ ಆಗಿ, ಪ್ರೊಡ್ಯುಸರ್ ಆಗಿ, ಸಮಾಜ ಸೇವೆ ಮಾಡುತ್ತಾ ನಾಡಿಗೆ ಬೇಕಾದ ಮಗ ಆಗಿ ಬೆಳೆದರು. ಅಪ್ಪು ಅವರು ಪವರ್ ಸ್ಟಾರ್ ಆಗಿ, ಪವರ್ ಫುಲ್ ಹೀರೋ ಆಗಿದ್ದು ನಮಗೆಲ್ಲಾ ಗೊತ್ತೇ ಇದೆ. ಅವರ ಹಾಗೆ ಅದ್ಭುತವಾಗಿ ಡ್ಯಾನ್ಸ್ ಮಾಡುವವರು, ಫೈಟ್ ಮಾಡುವವರು, ಸ್ಟಂಟ್ಸ್ ಮಾಡುವವರು ಇವತ್ತಿಗೂ ಚಿತ್ರರಂಗದಲ್ಲಿ ಬಹಳ ಕಡಿಮೆ. ಯಾವುದೇ ಡ್ಯೂಪ್ ಇಲ್ಲದೇ ಅಪ್ಪು ಅವರು ಮಾಡುತ್ತಿದ್ದ ಸ್ಟಂಟ್ಸ್ ಗಳನ್ನು ಇಂದು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಾರೆ. ಇಂದು ಅಪ್ಪು ಅವರ ನೆನಪುಗಳು ಮಾತ್ರ ನಮ್ಮ ಜೊತೆಗಿದೆ.
ಇನ್ನು ಒಬ್ಬ ವ್ಯಕ್ತಿಯಾಗಿ ಸಮಾಜ ಸೇವೆಯ ವಿಷಯಗಳಲ್ಲಿ ಸದಾ ಮುಂದಿದ್ದವರು ಅಪ್ಪು, ತಾವು ಮಾಡಿದ ಸಹಾಯವನ್ನು ಎಲ್ಲಿಯೂ ಹೇಳಿಕೊಂಡವರಲ್ಲ. ಸಹಾಯ ಮಾಡಿದವರಿಗೂ ತಮ್ಮ ಹೆಸರು ಹೇಳಬಾರದು ಎಂದು ಹೇಳಿರುತ್ತಿದ್ದರು. ಅಂಥ ಪುಣ್ಯಾತ್ಮ ಅಪ್ಪು, ಸಿನಿಮಾ ರಂಗದಲ್ಲಿ ಟ್ಯಾಲೆಂಟ್ ಇದ್ದು, ಅವಕಾಶ ಸಿಗದವರಿಗೆ ಅವಕಾಶ ಕಲ್ಪಿಸಿಕೊಡುವುದಕ್ಕಾಗಿ ಶುರು ಮಾಡಿದ ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆ ಎಷ್ಟು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದೆ ಎಂದು ನಮಗೆಲ್ಲಾ ಗೊತ್ತೇ ಇದೆ. ಹಲವರಿಗೆ ಈ ಸಂಸ್ಥೆ ಬದುಕು ಕೊಟ್ಟಿದೆ ಎಂದು ಹೇಳಿದರು ಸಹ ತಪ್ಪಲ್ಲ. ಹೀಗೆ ಎಲ್ಲಾ ವಿಷಯದಲ್ಲೂ ಸಹ ಅಪ್ಪು ಅವರು ಮಹಾನುಭಾವ.