ಟ್ವಿಟರ್ ಪ್ರಸ್ತುತ ಹೊಸ ಚಂದಾದಾರಿಕೆಗಾಗಿ 19.99 ಡಾಲರ್ (ಸುಮಾರು 1600 ರೂಪಾಯಿ) ಶುಲ್ಕ ವಿಧಿಸಲು ಯೋಜಿಸುತ್ತಿದೆ. ಈ ಯೋಜನೆಯಡಿಯಲ್ಲಿ ಪರಿಶೀಲನೆಗೆ ಒಳಪಟ್ಟ ಬಳಕೆದಾರರು ಚಂದಾದಾರರಾಗಲು ಅಥವಾ ತಮ್ಮ ನೀಲಿ ಟಿಕ್ಮಾರ್ಕ್ ಅನ್ನು ಕಳೆದುಕೊಳ್ಳಲು 90 ದಿನಗಳ ಕಾಲಾವಧಿ ಹೊಂದಿರುತ್ತಾರೆ.
ಈ ಯೋಜನೆಯಡಿಯಲ್ಲಿ ಪರಿಶೀಲನೆಗೆ ಒಳಪಟ್ಟ ಬಳಕೆದಾರರು ಚಂದಾದಾರರಾಗಲು ಅಥವಾ ತಮ್ಮ ನೀಲಿ ಟಿಕ್ಮಾರ್ಕ್ ಅನ್ನು ಕಳೆದುಕೊಳ್ಳಲು 90 ದಿನಗಳ ಕಾಲಾವಧಿ ಹೊಂದಿರುತ್ತಾರೆ. ಬ್ಲೂ ಸಬ್ಸ್ಕ್ರಿಪ್ಷನ್ ಇದು ಟ್ವೀಟ್ಗಳನ್ನು ಎಡಿಟ್ ಮಾಡುವುದು ಮತ್ತು ಅನ್ಡು ಮಾಡುವಂಥ ಹೆಚ್ಚುವರಿ ವೈಶಿಷ್ಟ್ಯಗಳನ್ನು ನೀಡುತ್ತದೆ. ನವೆಂಬರ್ 7ರ ಒಳಗೆ ಈ ಫೀಚರ್ ಅನ್ನು ಜಾರಿಗೊಳಿಸುವಂತೆ ಈ ಯೋಜನೆಯ ಮೇಲೆ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ತಿಳಿಸಲಾಗಿದೆ.
ಟ್ವಿಟರ್ನಲ್ಲಿ ಅಧಿಕ ಫಾಲೋವರ್ಸ್ಗಳನ್ನು ಹೊಂದಿದಾಗ ಲಭ್ಯವಾಗುವಂತಹ ಬ್ಲೂ ಟಿಕ್ ಬಳಕೆಯಲ್ಲಿ ವ್ಯತ್ಯಾಸವಾಗುತ್ತಿದೆ. ಇನ್ನು ಮುಂದೆ ತಮ್ಮ ಟ್ವಿಟರ್ ಖಾತೆಯಲ್ಲಿ ಬ್ಲೂ ಟಿಕ್ ಲಭ್ಯವಾಗಬೇಕೆಂದರೆ ಬಳಕೆದಾರರು ಚಂದದಾರರಾಗಬೇಕೆಂಬ ಎಂಬ ಮಾಹಿತಿ ಹೊರಬಿದ್ದಿದೆ.ಪರಿಶೀಲನೆಗೊಂಡು ಬ್ಲೂ ಟಿಕ್ ಪಡೆದ ಗ್ರಾಹಕರು ಬ್ಲೂ ಟಿಕ್ ಮುಂದುವರಿಸಬೇಕಾದರೆ ಮಾಸಿಕ 20 ಡಾಲರ್ ಅಂದರೆ ಸುಮಾರು 1500 ರೂ. ಶುಲ್ಕ ಪಾವತಿಸಬೇಕಾಗುತ್ತದೆ.