ನಟ ಸೈಫ್ ಅಲಿ ಖಾನ್ ಅವರ ಪ್ರಕರಣ ನಿನ್ನೆಯಿಂದ ಬಹಳ ಚರ್ಚೆಗೆ ಒಳಗಾಗಿದೆ. ಈ ಘಟನೆಯ ಬಗ್ಗೆ ಹಲವು ವಿಚಾರಗಳು ಚರ್ಚೆ ಆಗುತ್ತಿದೆ. ಇದರ ನಡುವೆ ನಾವು ಗಮನಿಸಬೇಕಾದ ಪ್ರಮುಖವಾದ ವಿಷಯ ಏನು ಎಂದರೆ, ಸೈಫ್ ಅಲಿ ಖಾನ್ ಅವರ ಬಳಿ ಎಲ್ಲವೂ ಇದೆ, ಸಾವಿರಾರು ಕೋಟಿ ಆಸ್ತಿ ಇದೆ. ಬಹಳಷ್ಟು ಕಾರ್ ಗಳಿಗೆ, ಅವರು ವಾಸ್ ಮಾಡುತ್ತಿರೋದು ಐಷಾರಾಮಿ ಏರಿಯಾದಲ್ಲಿ, ಐಷಾರಾಮಿ ಮನೆಯಲ್ಲಿ. ಹಾಗಿದ್ದರೂ ಈ ಘಟನೆ ನಡೆದಿದ್ದು, ನಿಜಕ್ಕೂ ಸೆಲೆಬ್ರಿಟಿಗಳಿಗೆ ಬಹಳ ಆಶ್ಚರ್ಯ ಹಾಗೂ ಭಯ ತಂದಿರುವ ವಿಷಯ. ಆದರೆ ಇವರ ಜೀವ ಉಳಿಸೋಕೆ ಸಹಾಯ ಮಾಡಿದ್ದು ಒಂದು ಆಟೋ..
ಮಧ್ಯರಾತ್ರಿಯಲ್ಲಿ ಮನೆಗೆ ನುಗ್ಗಿರುವ ಆ ಕಳ್ಳನನ್ನು ವಿಚಾರಿಸಿ, ಏನಾಗಿದೆ ನೋಡಲು ಹೋದಾಗ, ಆತ ಸೈಫ್ ಅಲಿ ಖಾನ್ ಅವರನ್ನು ಇರಿದಿದ್ದಾನೆ. ಒಂದಲ್ಲ, ಎರಡಲ್ಲ, 6 ಸಾರಿ ಇರಿದಿದ್ದಾನೆ ಎಂದು ತಿಳಿದುಬಂದಿದೆ.. ಆ ವೇಳೆ ಸೈಫ್ ಅವರ ದೇಹದಲ್ಲಿ 2.5 ಇಂಚ್ ಚಾಕು ಹಾಗೆಯೇ ಉಳಿದುಕೊಂಡಿತ್ತು ಎಂದು ಮಾಹಿತಿ ಸಿಕ್ಕಿದೆ. ಈ ಘಟನೆ ನಡೆದ ವೇಳೆ ಸೈಫ್ ಅಲಿ ಖಾನ್ ಅವರ ಮಗ ಇಬ್ರಾಹಿಂ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪ್ರಯತ್ನ ಪಡುವಾಗ, ಅವರ ಬಳಿ ಇದ್ದ ಐಷಾರಾಮಿ ಕಾರ್ ಆಗಲಿ, ಅವರ ಸಾವಿರಾರು ಕೋಟಿ ಹಣವಾಗಲಿ ಸಹಾಯಕ್ಕೆ ಬರಲಿಲ್ಲ. ಅಕ್ಕ ಪಕ್ಕದ ಮನೆಯವರ ಬಳಿ BMW ಇದ್ದರೂ ಸಮಯಕ್ಕೆ ಸರಿಯಾಗಿ ಕಾರ್ ರೆಡಿ ಆಗಲಿಲ್ಲ.

ಈ ರೀತಿ ಆದ ಕಾರಣ ಹೆಚ್ಚು ಹೊತ್ತು ಕಾಯಲು ಆಗೋದಿಲ್ಲ, ಬೇಗ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು, ತಡ ಮಾಡಿದಷ್ಟು ಅವರ ಆರೋಗ್ಯಕ್ಕೆ ಇನ್ನಷ್ಟು ಸಮಸ್ಯೆ ಅಗಬಹುದು, ಪರಿಸ್ಥಿತಿ ಕೈಮೀರಿ ಹೋಗಬಹುದು ಎಂದು ಅರಿವಾದ ಕೂಡಲೇ ಇಬ್ರಾಹಿಂ ತಕ್ಷಣಕ್ಕೆ ಆಟೋದಲ್ಲಿ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಪ್ಪನನ್ನು ಎತ್ತಿಕೊಂಡು ಹೋದ ಇಬ್ರಾಹಿಂ ಆಟೋದಲ್ಲಿ ಮಲಗಿಕೊಂಡು ಮುಂಬೈನ ಪ್ರತಿಷ್ಠಿತ ಲೀಲಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಡ್ಮಿಟ್ ಮಾಡಿದ್ದು, ಸೈಫ್ ಅವರನ್ನು ಕರೆದುಕೊಂಡು ಹೋದಾಗ ಸಮಯ ಸುಮಾರು 3:30 ಆಗಿತ್ತು ಎಂದು ಹೇಳಲಾಗುತ್ತಿದೆ.
ಈ ರೀತಿಯ ಘಟನೆಗಳನ್ನು ನೋಡಿದಾಗ ಅನ್ನಿಸುವುದು ಒಂದೇ, ಎಷ್ಟು ಸಾವಿರ ಕೋಟಿ ಇದ್ದರೆ ಏನು, ಕೋಟಿ ಕೋಟಿ ಬೆಲೆ ಬಾಳುವ ಕಾರ್ ಇದ್ದರೇನು? ನೂರಾರು ಜನ ಕೆಲಸದವರು ಇದ್ದರೆ ಏನು? ಐಷಾರಾಮಿ ಮನೆ? ಹೈ ಸೆಕ್ಯೂರಿಟಿ ಇದ್ದರೆ? ಕೆಟ್ಟದ್ದು ನಡೆಯುವ ಹಾಗಿದ್ದರೆ ಹೇಗೆ ಇದ್ದರು ನಡೆಯುತ್ತದೆ. ಇವರ ಪ್ರಾಣ ಉಳಿಸಿ ಆಸ್ಪತ್ರಗೆ ಕರೆದುಕೊಂಡು ಹೋಗಿ ಜೀವ ಉಳಿಸುವುದಕ್ಕೆ ಸಹಾಯ ಮಾಡಿದ್ದು ಒಬ್ಬ ಮಿಡ್ಲ್ ಕ್ಲಾಸ್ ವ್ಯಕ್ತಿಯ ಆಟೋ. ಈ ಒಂದು ಘಟನೆಯಲ್ಲೇ ಬದುಕು ಅಂದರೆ ಏನು, ಜೀವನ ಅಂದರೆ ಏನು ಎನ್ನುವುದು ಬಹಳ ಚೆನ್ನಾಗಿ ಅರ್ಥ ಆಗುತ್ತದೆ. ಇನ್ನೇನು ಹೇಳಲು ಸಾಧ್ಯವಿಲ್ಲ .

ಇನ್ನು ಸೈಫ್ ಅಲಿ ಖಾನ್ ಅವರಿಗೆ ಈಗ ಚಿಕಿತ್ಸೆ ಕೊಡಲಾಗುತ್ತಿದೆ. ಈಗಾಗಲೇ ಸರ್ಜರಿ ಕೂಡ ನಡೆದಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಈ ಘಟನೆ ನಡೆದಾಗ ಅವರ ಪತ್ನಿ ಕರೀನಾ ಕಪೂರ್ ಅವರು ಮನೆಯಲ್ಲಿ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಶಾರುಖ್ ಖಾನ್ ಸೇರಿದಂತೆ ಬಾಲಿವುಡ್ ನ ಸಾಕಷ್ಟು ನಟರು ಆಸ್ಪತ್ರೆಗೆ ಹೋಗಿ ಸೈಫ್ ಅಲಿ ಖಾನ್ ಅವರ ಜೊತೆ ಮಾತನಾಡಿ, ಅವರ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದಾರೆ. ಇನ್ನು ದಕ್ಷಿಣ ಭಾರತ ಚಿತ್ರರಂಗದ ಕಲಾವಿದರು ಸೈಫ್ ಅಲಿ ಖಾನ್ ಅವರಿಗೆ ಸೋಷಿಯಲ್ ಮೀಡಿಯಾ ಮೂಲಕ ಧೈರ್ಯ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ.