ನಟಿ ಐಶ್ವರ್ಯಾ ರೈ ಅವರನ್ನು ಮದುವೆಯಾಗುವ ಮುನ್ನ ಅಭಿಷೇಕ್ ಬಚ್ಚನ್ ಮತ್ತು ಕರಿಷ್ಮಾ ಕಪೂರ್ ವಿವಾಹವಾಗುವ ಬಗ್ಗೆ ಮಾತುಕತೆ ನಡೆದಿತ್ತು. ಜಯಾ ಬಚ್ಚನ್ ಸಹ ಕರಿಷ್ಮಾ ತಮ್ಮ ಸೊಸೆ ಎಂದು ಒಪ್ಪಿಕೊಂಡಿದ್ದರು. ಆದರೆ ಏಕೋ ಏನೋ ಈ ಮದುವೆ ನಡೆಯಲಿಲ್ಲ. ಸದ್ಯ ಅಭಿಷೇಕ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳ ಮಧ್ಯೆ, ಜಯಾ ಬಚ್ಚನ್ ಅವರ ಹಳೆಯ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಅವರು ಕರಿಷ್ಮಾ ಕಪೂರ್ ಅವರನ್ನು ತನ್ನ ಸೊಸೆ ಎಂದು ಕರೆದು, ಅವರ ಮಗ ಅಭಿಷೇಕ್ ಬಚ್ಚನ್ ಅವರೊಂದಿಗೆ ನಿಶ್ಚಿತಾರ್ಥವನ್ನು ಘೋಷಿಸಿರುವುದನ್ನು ನೋಡಬಹುದು.


ವದಂತಿಗಳು ನಿಜವಾಯ್ತಾ?
ಕಳೆದ ಕೆಲವು ತಿಂಗಳುಗಳಿಂದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಇಬ್ಬರೂ ವಿಚ್ಛೇದನದ ವದಂತಿಗಳಿಂದ ಸುದ್ದಿಯಾಗುತ್ತಿದ್ದಾರೆ. ಯಾವಾಗ ಐಶ್ವರ್ಯಾ ಅವರ ಜನ್ಮದಿನದಂದು ಬಚ್ಚನ್ ಕುಟುಂಬದ ಯಾರೂ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರಲಿಲ್ಲವೋ ಆಗ ವದಂತಿಗಳಲ್ಲಿ ಸ್ವಲ್ಪ ಸತ್ಯವಿದೆ ಎಂದು ಜನರು ಅರಿತುಕೊಂಡರು. ಸದ್ಯ ನೆಟಿಜನ್ಗಳು ಬಚ್ಚನ್ ಕುಟುಂಬದ ಭೂತಕಾಲವನ್ನು ಅಗೆಯುತ್ತಿದ್ದಾರೆ. ಅಂದರೆ ಅವರ ಥ್ರೋಬ್ಯಾಕ್ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಮರು-ಹಂಚಿಕೊಳ್ಳುತ್ತಿದ್ದಾರೆ. ಇದೀಗ ಐಶ್ವರ್ಯಾ ರೈ ವಿಚ್ಛೇದನದ ಊಹಾಪೋಹಗಳ ನಡುವೆ, ಜಯಾ ಬಚ್ಚನ್ ಅವರ ಹಳೆಯ ವಿಡಿಯೋ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಅದು ಪುಸ್ತಕ ಬಿಡುಗಡೆ ಸಮಾರಂಭ. ಸಮಾರಂಭದಲ್ಲಿ ಜಯಾ, ಅಮಿತಾಬ್ ಬಚ್ಚನ್, ಶ್ವೇತಾ ನಂದಾ, ಅಭಿಷೇಕ್ ಮತ್ತು ನವ್ಯಾ ನವೇಲಿಯನ್ನು ನೀವು ವೀಡಿಯೊದಲ್ಲಿ ನೋಡಬಹುದು. ಈ ಸಮಯದಲ್ಲಿ, ಜಯಾ ಬಚ್ಚನ್ ತಮ್ಮ ಮಗನ ನಿಶ್ಚಿತಾರ್ಥವನ್ನು ಕರಿಷ್ಮಾ ಕಪೂರ್ ಅವರೊಂದಿಗೆ ಘೋಷಿಸಿದರು. ಆದರೆ ಇದು ಮದುವೆ ಹಂತಕ್ಕೆ ತಲುಪಲಿಲ್ಲ. ವಿಡಿಯೋದಲ್ಲಿ, ಜಯಾ ನಗುತ್ತಾ ಕರಿಷ್ಮಾಳನ್ನು ಕುಟುಂಬಕ್ಕೆ ಸ್ವಾಗತಿಸುತ್ತಿರುವುದನ್ನು ಕಾಣಬಹುದು. ಇದಾದ ನಂತರ ಕರಿಷ್ಮಾ ವೇದಿಕೆಯ ಮೇಲೆ ಬಂದು ಜಯಾ ಬಚ್ಚನ್ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡು ಬಚ್ಚನ್ ಕುಟುಂಬದೊಂದಿಗೆ ಪೋಸ್ ನೀಡಿದ್ದಾರೆ.
ಬಚ್ಚನ್ ಕುಟುಂಬದ ಬಗ್ಗೆ ನೆಟ್ಟಿಗರ ಕಮೆಂಟ್
ವೈರಲ್ ಆದ ವಿಡಿಯೋ ನೋಡಿದ ಅಭಿಮಾನಿಗಳು ‘ಕರಿಷ್ಮಾ ಕಷ್ಟಪಟ್ಟು ಬದುಕುಳಿದಿದ್ದಾಳೆ, ಪೂವರ್ ಐಶ್ವರ್ಯಾ’ ಎಂದು ಕಾಮೆಂಟ್ ಮಾಡಿದರೆ, ಇನ್ನೊರ್ವ ಬಳಕೆದಾರ “ಐಶ್ವರ್ಯಾ ಅವರಂತೆಯೇ ಕರಿಷ್ಮಾ ಕೂಡ ಇದೇ ಪರಿಸ್ಥಿತಿಯನ್ನು ಎದುರಿಸಿರಬೇಕು ಎಂದು ನಾನು ಭಾವಿಸುತ್ತೇನೆ. ಇದು ಸಾಕಷ್ಟು ಒಗ್ಗಟ್ಟನ್ನು ಹೊಂದಿರುವ ಶಕ್ತಿಯುತ ಕುಟುಂಬವಾಗಿದೆ. ಬಚ್ಚನ್ ಕುಟುಂಬದ ನಡುವೆ ಬದುಕುವುದು ಕಷ್ಟ. ಬಲಿಷ್ಠ ಮಹಿಳೆಯರು ಅಂತಹ ಕುಟುಂಬಗಳನ್ನು ಎದುರಿಸಲು ಸಾಧ್ಯವಾಗುವುದಿಲ್ಲ ಏಕೆಂದರೆ ಅವರು ತಮ್ಮ ಧ್ವನಿಯನ್ನು ಎತ್ತುತ್ತಾರೆ. ಜೂನಿಯರ್ ಬಚ್ಚನ್ಗೆ ಅರೇಂಜ್ಡ್ ಮ್ಯಾರೇಜ್ ಉತ್ತಮ ಎಂದು ನಾನು ಭಾವಿಸುತ್ತೇನೆ” ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಹೆಚ್ಚುತ್ತಲೇ ಇದೆ ಭಿನ್ನಾಭಿಪ್ರಾಯ
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಭಿನ್ನಾಭಿಪ್ರಾಯಗಳ ಸುದ್ದಿ ಮೊದಲು ಬೆಳಕಿಗೆ ಬಂದದ್ದು ಅನಂತ್ ಅಂಬಾನಿ ಅವರ ಮದುವೆಯಲ್ಲಿ. ಅಂದು ಬಚ್ಚನ್ ಕುಟುಂಬದ ಜೊತೆ ಬರದೆ, ಮಗಳ ಜೊತೆ ಪ್ರತ್ಯೇಕವಾಗಿ ಬಂದಿದ್ದರು ಐಶ್ವರ್ಯಾ. ಅಂದಿನಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಹೆಚ್ಚುತ್ತಿದೆ ಎಂಬ ಸುದ್ದಿಯೂ ಹರಿದಾಡುತ್ತಿದ್ದು, ಶೀಘ್ರದಲ್ಲೇ ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ, ಐಶ್ವರ್ಯಾ ರೈ ಬಚ್ಚನ್ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ಐಶ್ವರ್ಯಾ ರೈ ಆಗಲಿ ಅಥವಾ ಬಚ್ಚನ್ ಕುಟುಂಬದ ಯಾವುದೇ ಸದಸ್ಯರಿಂದ ಈ ವಿಷಯದ ಬಗ್ಗೆ ಬಗ್ಗೆ ಯಾವುದೇ ಔಪಚಾರಿಕ ಹೇಳಿಕೆ ಹೊರಬಿದ್ದಿಲ್ಲ.