ಸಾಹಸಿಂಹ ವಿಷ್ಣುವರ್ಧನ್ ಅವರ ಬಗ್ಗೆ ಮತ್ತು ಅವರ ಸಾಧನೆಗಳ ಬಗ್ಗೆ ಎಷ್ಟೇ ಮಾತನಾಡುತ್ತಾ ಹೋದರು ಕಡಿಮೆಯೇ. ಕನ್ನಡ ಚಿತ್ರರಂಗದ ಅತ್ಯಂತ ಮುಖ್ಯವಾದ ಪಿಲ್ಲರ್ ಗಳಲ್ಲಿ ಡಾ. ರಾಜ್ ಕುಮಾರ್ ಅವರು ಒಬ್ಬರಾದರೆ, ವಿಷ್ಣುವರ್ಧನ್ ಅವರು ಮತ್ತೊಂದು ಪಿಲ್ಲರ್. ಕನ್ನಡ ಚಿತ್ರರಂಗಕ್ಕೆ ಇವರಿಬ್ಬರ ಕೊಡುಗೆ ಅಪಾರವಾದದ್ದು, ಇಡೀ ಭಾರತ ಚಿತ್ರರಂಗದಲ್ಲೇ ಶ್ರೇಷ್ಠ ಕಲಾವಿದರು ಎಂದು ಹೆಸರು ಮಾಡಿದವರಲ್ಲಿ ವಿಷ್ಣುವರ್ಧನ್ ಅವರು ಸಹ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರನ್ನು ಫೀನಿಕ್ಸ್ ಆಫ್ ಇಂಡಿಯನ್ ಸಿನಿಮಾ ಎಂದು ಸಹ ಕರೆಯುತ್ತಾರೆ. ವಿಷ್ಣುವರ್ಧನ್ ಅವರು ಕನ್ನಡಕ್ಕೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ ಅದರಲ್ಲಿ ಯಜಮಾನ ಕೂಡ ಪ್ರಮುಖವಾದ ಸಿನಿಮಾ. 40 ಕೋಟಿ ಗಳಿಸಿದ ಈ ಸಿನಿಮಾಗೆ ವಿಷ್ಣುವರ್ಧನ್ ಅವರು ಪಡೆದ ಸಂಭಾವನೆ ಎಷ್ಟು ಗೊತ್ತಾ?
ನಟ ವಿಷ್ಣುವರ್ಧನ್ ಅವರು ಮೈಸೂರಿನಲ್ಲಿ ಹುಟ್ಟಿ ಬೆಳೆದವರು, ಇವರು ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ವಂಶವೃಕ್ಷ ಸಿನಿಮಾ ಮೂಲಕ, ನಂತರ ನಾಗರಹಾವು ಸಿನಿಮಾದಲ್ಲಿ ಸಹ ಖಳ ನಾಯಕನ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ನಂತರ ನಾಗರಹಾವು ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕನಾಗಿ ನಟಿಸಿದರು. ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶನ ಮಾಡಿದ್ದ ಈ ಸಿನಿಮಾದಲ್ಲಿ ರಾಮಾಚಾರಿ ಪಾತ್ರದಲ್ಲಿ ವಿಷ್ಣುವರ್ಧನ್ ಅವರ ಅಭಿನಯ ಎಷ್ಟು ಅದ್ಭುತವಾಗಿತ್ತು ಎಂದು ನಾವೆಲ್ಲರೂ ನೋಡಿದ್ದೇವೆ. ವಿಷ್ಣುವರ್ಧನ್ ಅವರಿಗೆ ಮೊದಲ ಸಿನಿಮಾ ದೊಡ್ಡ ಹಿಟ್, ಯಶಸ್ಸು ಕೀರ್ತಿ ಕೊಡುವುದರ ಜೊತೆಗೆ, ಚಿತ್ರರಂಗದಲ್ಲಿ ಗಟ್ಟಿ ಸ್ಥಾನ ಮತ್ತು ದೊಡ್ಡ ಅಭಿಮಾನಿ ಬಳಗವನ್ನು ಸಹ ನೀಡಿತ್ತು. ಜೊತೆಗೆ ಕನ್ನಡ ಚಿತ್ರರಂಗಕ್ಕೆ ಆಂಗ್ರಿ ಯಂಗ್ ಮ್ಯಾನ್ ಆಗಿ ಎಂಟ್ರಿ ಕೊಟ್ಟಿದ್ದರು ವಿಷ್ಣುದಾದ.

ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ, ಒಳ್ಳೆಯ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದ ಅವಿಸ್ಮರಣೀಯ ನಟನಾಗಿ ಬೆಳೆದರು. ವಿಷ್ಣುವರ್ಧನ್ ಅವರು ತಮ್ಮ ಸುದೀರ್ಘ ಸಿನಿಮಾ ಕೆರಿಯರ್ ನಲ್ಲಿ 201 ಸಿನಿಮಾಗಳಲ್ಲಿ ನಟಿಸಿದರು. ಇವುಗಳ ಪೈಕಿ ಬಹಳಷ್ಟು ಹಿಟ್ ಸಿನಿಮಾಗಳಿವೆ, ಆಲ್ ಟೈಮ್ ಬ್ಲಾಕ್ ಬಸ್ಟರ್ ಗಳಿವೆ. ಅವುಗಳ ಪೈಕಿ ಯಜಮಾನ ಸಿನಿಮಾ ಕೂಡ ಒಂದು. ಡಿಸೆಂಬರ್ 1 2000ದಲ್ಲಿ ಯಜಮಾನ ಸಿನಿಮಾ ತೆರೆಕಂಡಿತ್ತು. ತೆರೆಕಂಡ ಮೇಲೆ ಈ ಸಿನಿಮಾ ಹಿಂದಿನ ಎಲ್ಲಾ ದಾಖಲೆಗಳನ್ನು ಪುಡಿಪುಡಿ ಮಾಡಿತ್ತು. ಅಷ್ಟು ದೊಡ್ಡ ಮಟ್ಟದಲ್ಲಿ ಹಣ ಗಳಿಸುವುದರ ಜೊತೆಗೆ ಸಮಾಜದ ಮೇಲೆ ಕೂಡ ಒಳ್ಳೆಯ ಪರಿಣಾಮ ಬೀರಿತ್ತು. ಈ ಸಿನಿಮಾ ಜನರ ಜೀವನಗಳನ್ನ ಸರಿಪಡಿಸಿತ್ತು ಎನ್ನುವುದು ಅದ್ಭುತವಾದ ವಿಷಯ ಆಗಿತ್ತು.
ಅಷ್ಟಕ್ಕೂ ಯಜಮಾನ ತಮಿಳು ಸಿನಿಮಾ ಒಂದರ ರಿಮೇಕ್ ಆಗಿತ್ತು. ವಿಜಯಕಾಂತ್ ಅವರು ಅಭಿನಯಿಸಿದ್ದ ವಾನತ್ತೈ ಪೋಲ ಸಿನಿಮಾ. ಈ ಸಿನಿಮಾದಲ್ಲಿ ವಿಜಯಕಾಂತ್ ಅವರು ನಿರ್ವಹಿಸಿದ್ದ ಪಾತ್ರವನ್ನೇ ವಿಷ್ಣುವರ್ಧನ್ ಅವರು ಕನ್ನಡದಲ್ಲಿ ನಟಿಸಿದ್ದರು. ಈ ಸಿನಿಮಾವನ್ನು ನಿರ್ಮಾಪಕ ರೆಹಮಾನ್ ಅವರು ನೋಡಿ, ಅದೇ ದಿನವೇ ರಿಮೇಕ್ ರೈಟ್ಸ್ ಅನ್ನು ತಂದಿದ್ದರು. ಇನ್ನು ತೆಲುಗಿಗೆ ಕೂಡ ಸಿನಿಮಾ ರಿಮೇಕ್ ಆಗಿತ್ತು, ಆದರೆ ಕನ್ನಡದಲ್ಲಿ ಸಿಕ್ಕಂಥ ಯಶಸ್ಸು ಇನ್ಯಾವುದೇ ಭಾಷೆಯಲ್ಲಿ ಸಿಗಲಿಲ್ಲ. ಕನ್ನಡದಲ್ಲಿ ಯಜಮಾನ ಹೆಸರಿನಲ್ಲಿ ರಿಮೇಕ್ ಆದ ಈ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರಿಗೆ ನಾಯಕಿಯಾಗಿ ಪ್ರೇಮ ಅವರು ಆಯ್ಕೆಯಾದರು, ಇನ್ನು ತಮ್ಮಂದಿರ ಪಾತ್ರದಲ್ಲಿ ಶಶಿಕುಮಾರ್ ಅವರು ಮತ್ತು ಅಭಿಜಿತ್ ಅವರು ಆಯ್ಕೆಯಾದರು. ವಿಷ್ಣುವರ್ಧನ್ ಅವರು ದ್ವಿಪಾತ್ರದಲ್ಲಿ ನಟಿಸಿದರು.

ಈ ಸಿನಿಮಾ ಬಿಡುಗಡೆಯಾದ ಮೇಲೆ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಹಣಗಳಿಕೆ ಮಾಡಿತು, ಅಂದು ಈ ಸಿನಿಮಾವನ್ನು ಸುಮಾರು 2.5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಯಿತು, ಕನ್ನಡದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆಯುತ್ತದೆ ಎಂದು ನಿರೀಕ್ಷೆ ಇರಲಿಲ್ಲ, ಹಾಗಾಗಿ ನಿರ್ಮಾಪಕರು 1.5 ಕೋಟಿ ಲಾಭ ಇಟ್ಟುಕೊಂಡು ವಿತರಕರಿಗೆ ಮಾರಾಟ ಮಾಡಿದ್ದರು. ಆದರೆ ಬಿಡುಗಡೆಯಾದ ಬಳಿಕ ಸಿನಿಮಾ ಭರ್ಜರಿ ಯಶಸ್ಸಿನ ಜೊತೆಗೆ ಗಳಿಸಿದ್ದು ಬರೋಬ್ಬರಿ 40 ಕೋಟಿ. ಅದುವರೆಗೂ ಕನ್ನಡ ಸಿನಿಮಾಗಳು ಗಳಿಕೆ ವಿಷಯದಲ್ಲಿ ಮಾಡಿದ್ದ ಎಲ್ಲಾ ದಾಖಲೆಗಳನ್ನು ಯಜಮಾನ ಸಿನಿಮಾ ಮುರಿದು, ಹೊಸ ದಾಖಲೆ ಬರೆದಿತ್ತು. ಈ ಸಿನಿಮಾದ ಬ್ಲ್ಯಾಕ್ ಟಿಕೆಟ್ ಮಾರಿದವರು ಹೊಸ ಮನೆ ಕಟ್ಟಿಸಿಕೊಳ್ಳುವಷ್ಟು ದುಡಿದರು ಎಂದು ಹಳೆಯ ಕಥೆಗಳೇ ಹೇಳುತ್ತದೆ. ಅಂಥ ಸಿನಿಮಾ ಯಜಮಾನ.
ಹಿಂದಿನ ಇಂಟರ್ವ್ಯೂ ಗಳಲ್ಲಿ ಯಜಮಾನ ಸಿನಿಮಾ ನಿರ್ಮಾಪಕ ರೆಹಮಾನ್ ಅವರು ಸಿನಿಮಾ ಯಶಸ್ಸಿನ ಬಗ್ಗೆ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದರು, ಆದರೆ ಇತ್ತೀಚಿನ ಒಂದು ಇಂಟರ್ವ್ಯೂ ನಲ್ಲಿ ವಿಷ್ಣುವರ್ಧನ್ ಅವರು ಯಜಮಾನ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಎಂದು ತಿಳಿಸಿದ್ದಾರೆ. ರೆಹಮಾನ್ ಅವರು ತಿಳಿಸಿರುವ ಈ ಒಂದು ವಿಷಯ ನಿಜಕ್ಕೂ ಆಶ್ಚರ್ಯ ಎಂದರೂ ತಪ್ಪಲ್ಲ. ಅವರ ಮಾತಿನ ಅನುಸಾರ, ವಿಷ್ಣುವರ್ಧನ್ ಅವರು ಯಜಮಾನ ಸಿನಿಮಾಗೆ ಪಡೆದಿರುವ ಸಂಭಾವನೆ ₹20 ಲಕ್ಷ ರೂಪಾಯಿ ಮಾತ್ರ. ಇದು ಇವರ ಸ್ಟ್ಯಾಂಡರ್ಡ್ ಸಂಭಾವನೆ ಎಂದಿದ್ದಾರೆ ರೆಹಮಾನ್ ಅವರು. 1987 ರಲ್ಲಿ ಶುಭಮಿಲನಾ ಸಿನಿಮಾ ಮಾಡಿದಾಗ ಅದಕ್ಕೂ 20 ಲಕ್ಷ ಸಂಭಾವನೆ ಪಡೆದಿದ್ದರು,. ಧಣಿ ಸಿನಿಮಾ, ಮಂಗಳಸೂತ್ರ ಸಿನಿಮಾ ಇದಕ್ಕೂ ಸಹ 20 ಲಕ್ಷ ಸಂಭಾವನೆಯನ್ನೇ ಪಡೆದಿದ್ದರು.

ಅದೇ ರೀತಿ ಯಜಮಾನ ಸಿನಿಮಾಗು 20 ಲಕ್ಷ ಸಂಭಾವನೆ. ಈಗಿನ ಹೀರೋಗಳ ಹಾಗೆ ಒಂದು ಸಿನಿಮಾ ಗೆಲ್ಲುತ್ತಿದ್ದ ಹಾಗೆ, 2 ಕೋಟಿ, 3 ಕೋಟಿ ಎಂದು ಸಂಭಾವನೆ ಹೆಚ್ಚಿಸಿಕೊಳ್ಳುತ್ತಿರಲಿಲ್ಲ ಎಂದು ರೆಹಮಾನ್ ಅವರು ತಿಳಿಸಿದ್ದಾರೆ. ಇದನ್ನೆಲ್ಲಾ ಕೇಳಿದರೆ, ಆಗಿನ ಕಲಾವಿದರು ಹಣಕ್ಕಿಂತ ಹೆಚ್ಚಾಗಿ ಒಳ್ಳೆಯ ಸಿನಿಮಾಗೆ,.ಒಳ್ಳೆಯ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಿದ್ದರು ಎನ್ನುವುದು ಗೊತ್ತಾಗುತ್ತದೆ. ನಟನಟಿಯರಲ್ಲಿ ಇದ್ದ ಶ್ರದ್ಧೆ ಇಂದಲೇ ಈ ಸಿನಿಮಾಗಳು ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ವಿ ಆಗಿವೆ. ಜನರ ಮೇಲು ಅಷ್ಟೇ ಪರಿಣಾಮ ಬೀರಿವೆ.



