ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳು ಬಹಳ ದಿನಗಳಿಂದ ಕೇಳಿಬರುತ್ತಿದೆ. ಫೆಬ್ರವರಿ 5 ರಂದು ಅಮಿತಾಬ್ ಅವರ ಪ್ರೀತಿಯ ಮಗ ಅಭಿಷೇಕ್ ತಮ್ಮ 49 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಐಶ್ವರ್ಯಾ ತಮ್ಮ ಪತಿ ಅಭಿಷೇಕ್ ಗಾಗಿ ವಿಶೇಷ ಪೋಸ್ಟ್ ಶೇರ್ ಮಾಡಿದ್ದಾರೆ. ಅವರ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ಅವರ ಪೋಸ್ಟ್ನ ವಿಶೇಷತೆ ಏನು ನೋಡೋಣ ಬನ್ನಿ…
ಬಾಲಿವುಡ್ನಲ್ಲಿ ಬಚ್ಚನ್ ಕುಟುಂಬವು ಹೆಚ್ಚು ಚರ್ಚೆಯಲ್ಲಿದೆ. ಅಭಿಷೇಕ್ ಬಚ್ಚನ್ ಮತ್ತು ಅವರ ಪತ್ನಿ ಐಶ್ವರ್ಯಾ ರೈ ನಡುವಿನ ವಿಚ್ಛೇದನದ ವದಂತಿಗಳು ನಿಂತಿಲ್ಲ. ಬಿಗ್ ಬಿ ಕೂಡ ಹಲವಾರು ಬಾರಿ ರಹಸ್ಯ ಪೋಸ್ಟ್ಗಳ ಮೂಲಕ ವದಂತಿಗಳನ್ನು ಟೀಕಿಸಿದ್ದಾರೆ. ಫೆಬ್ರವರಿ 5 ರಂದು ಅಭಿಷೇಕ್ ತಮ್ಮ 49 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ, ಅವರ ಪತ್ನಿ ಯಾವ ಪೋಸ್ಟ್ ಕಳುಹಿಸುತ್ತಾರೆಂದು ಎಲ್ಲರೂ ಕಾಯುತ್ತಿದ್ದರು. ಆಗ ಐಶ್ವರ್ಯಾ ತಮ್ಮ ಪತಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ವಿಶೇಷ ಚಿತ್ರ ಮತ್ತು ಸುಂದರವಾದ ಟಿಪ್ಪಣಿಯೊಂದಿಗೆ ಹಂಚಿಕೊಂಡರು.

ಬಾಲ್ಯದ ನೆನಪುಗಳು ಮತ್ತು ಫೋಟೋಗಳು ಎಲ್ಲರಿಗೂ ವಿಶೇಷ. ಹಾಗಾಗಿ ತಮ್ಮ ಪತಿಯ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ, ಐಶ್ವರ್ಯಾ ರೈ ಅವರ ಹಳೆಯ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅಭಿ ಸಣ್ಣ ಕಾರಿನ ಮೇಲೆ ಕುಳಿತಿರುವುದನ್ನು ಕಾಣಬಹುದು. ಈ ಫೋಟೋ ಅಮಿತಾಬ್ ಅವರ ಪ್ರೀತಿಯ ಮಗನ ಬಾಲ್ಯದ ಫೋಟೋ ಆಗಿದ್ದು, ಇದನ್ನು ಹಂಚಿಕೊಳ್ಳುವಾಗ ಐಶ್ವರ್ಯಾ ವಿಶೇಷ ಟಿಪ್ಪಣಿಯನ್ನೂ ಬರೆದಿದ್ದಾರೆ. Here’s wishing you Happy Birthday with happiness, good health, love and light God Bless ಎಂದು ವಿಶ್ ಮಾಡಿರುವುದನ್ನು ನಾವಿಲ್ಲಿ ನೋಡಬಹುದು.
ವೈರಲ್ ಆಯ್ತು ಐಶ್ವರ್ಯಾ ಪೋಸ್ಟ್
ಐಶ್ವರ್ಯಾ ರೈ ಅವರ ಪೋಸ್ಟ್ ಈಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ, ಬಳಕೆದಾರರು ನಟಿಯ ಪೋಸ್ಟ್ಗೆ ಪ್ರತಿಕ್ರಿಯಿಸುತ್ತಿದ್ದಾರೆ. “ವಿಚ್ಛೇದನದ ವದಂತಿಗಳು ಈಗ ಎಲ್ಲಿಗೆ ಹೋಗಿವೆ?, “ತುಂಬಾ ಮುದ್ದಾಗಿದೆ.” ಎಂದು ಕೆಲವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಅಭಿಷೇಕ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿರುವುದು ಕಂಡುಬರುತ್ತದೆ.
ಐಶ್ವರ್ಯಾ ಅವರ ಹುಟ್ಟುಹಬ್ಬಕ್ಕೆ ಅಭಿಷೇಕ್ ವಿಶ್ ಮಾಡಿಲ್ಲ
ಹೌದು, ಐಶ್ವರ್ಯಾ ಹುಟ್ಟುಹಬ್ಬದಂದು ಅವರ ಪತಿ ಅಭಿಷೇಕ್ ಯಾವುದೇ ಪೋಸ್ಟ್ ಹಂಚಿಕೊಂಡಿಲ್ಲ. ಆದರೆ ಕಳೆದ ವರ್ಷದಿಂದ ಅವರ ವಿಚ್ಛೇದನದ ವದಂತಿಗಳು ಕೇಳಿ ಬರುತ್ತಲೇ ಇದೆ. ಜನರು ಇವರಿಬ್ಬರ ಸಂಬಂಧದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಊಹಿಸಿದ್ದರು. ಹಾಗೆ ನೋಡಿದರೆ ಇದಾದ ನಂತರ ಅಭಿಷೇಕ್ ಮತ್ತು ಐಶ್ವರ್ಯಾ ಅನೇಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು.

ವಿಚ್ಛೇದನ ವದಂತಿಗಳಿಗೆ ತೆರೆ
ಐಶ್ವರ್ಯಾ ರೈ ಅವರ ಇತ್ತೀಚಿನ ಪೋಸ್ಟ್ ಅವರ ವಿಚ್ಛೇದನದ ವದಂತಿಗಳಿಗೆ ಅಂತ್ಯ ಹಾಡಿದೆ. ಅಭಿಷೇಕ್ಗಾಗಿ ಅವರು ಹಾಕಿರುವ ವಿಶೇಷ ಪೋಸ್ಟ್, ಇಬ್ಬರ ನಡುವಿನ ಸಂಬಂಧ ಇನ್ನೂ ಬಲವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ʼಲವ್ ಯು…’ ಎಂದು ಐಶ್ವರ್ಯಾ ರೈ ತಮ್ಮ ಪತಿಯ ಹುಟ್ಟುಹಬ್ಬದಂದು ವಿಶೇಷ ಪೋಸ್ಟ್ ಹಂಚಿಕೊಂಡು ವಿಚ್ಛೇದನ ವದಂತಿಗಳಿಗೆ ಅಂತ್ಯ ಹಾಡಿದ್ದಾರೆ.