ಸ್ಯಾಂಡಲ್ವುಡ್ನ ಬೇಡಿಕೆಯ ನಟಿಯರಲ್ಲಿ ಒಬ್ಬರಾದ ನಟಿ ಅದಿತಿ ಪ್ರಭುದೇವ ಯಶಸ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ನವೆಂಬರ್ 28 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್ನ ಗಾಯತ್ರಿ ವಿಹಾರ ಗ್ರ್ಯಾಂಡ್ನಲ್ಲಿ ಈ ಜೋಡಿ ಅದ್ದೂರಿಯಾಗಿ ಮದುವೆ ಮಾಡಿಕೊಂಡಿದೆ. ಹಲವು ಸೆಲೆಬ್ರಿಟಿಗಳು, ಕುಟುಂಬದವರು, ಗೆಳೆಯರ ಸಮ್ಮುಖದಲ್ಲಿ ಈ ವಿವಾಹ ಕಾರ್ಯ ನೆರವೇರಿದೆ.

ಅದಿತಿ ಪ್ರಭುದೇವ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭಾಶಯ ತಿಳಿಸಿದ್ದರು. ಅದಿತಿ ಪ್ರಭುದೇವ ಮತ್ತು ಯಶಸ್ ಅವರ ಮದುವೆಯಾಗಿ ಕೇವಲ ಎರಡು ದಿನವಾಗಿದೆ. ಮದುವೆ ಖುಷಿಯಲ್ಲಿದ್ದ ದಂಪತಿಗೆ ಈಗ ಶಾಕ್ ಎದುರಾಗಿದೆ. ಈಗ ನಟಿ ಅದಿತಿ ಪ್ರಭುದೇವ ಅವರ ಪತಿ ಯಶಸ್ ಅವರ ಸೋಶಿಯಲ್ ಮೀಡಿಯಾ ಖಾತೆಯನ್ನು ಯಾರೋ ಕಿ*ಡಿಗೇ*ಡಿಗಳು ಹ್ಯಾಕ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಯಶಸ್ ಅವರ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿದೆ. ಈ ಕುರಿತಾಗಿ ಯಶಸ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ನನ್ನ ಇನ್ಸ್ಟಾಗ್ರಾಮ್ ಖಾತೆಯೂ ಹ್ಯಾಕ್ ಆಗಿದೆ. ನನ್ನ ಖಾತೆಯಿಂದ ಯಾವುದೇ ಮಸೇಜ್ ಬಂದರೆ ರಿಪ್ಲೈ ಮಾಡಬೇಡಿ. ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದೇನೆ’ ಎಂದು ಯಶಸ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಮದುವೆ ಕಾರ್ಯಕ್ರಮಗಳು ಪ್ರಾರಂಭವಾದ ದಿನಗಳಿಂದಲೇ ನಟಿ ಅದಿತಿ ಪ್ರಭುದೇವ ಅವರು ತಮ್ಮ ಅದ್ದೂರಿ ಮದುವೆಯ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಅವರ ಮದುವೆ ಸಂಭ್ರಮ ನೋಡಲು ಮಿಸ್ ಮಾಡಿಕೊಂಡಿದ್ದ ಅಭಿಮಾನಿಗಳಿಗಾಗಿ ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ಅದಿತಿ ಫ್ಯಾನ್ಸ್ ಸೂಪರ್ ಅಂತ ಕಾಮೆಂಟ್ ಮಾಡುತ್ತಿದ್ದಾರೆ.