ಸ್ಯಾಂಡಲ್ ವುಡ್ ಮಾತ್ರವಲ್ಲ ದಕ್ಷಿಣ ಭಾರತದಲ್ಲಿ ಸ್ಟಾರ್ ಗಳಾಗಿ ಮೆರೆದ ನಟಿಯರು ಮದುವೆ ಆಗುತ್ತಿದ್ದ ಹಾಗೆ ನಟನೆ ಇಂದ ಬ್ರೇಕ್ ತೆಗೆದುಕೊಂಡಿದ್ದಿದೆ. ಆದರೆ ಇನ್ನೂ ಕೆಲವು ನಟಿಯರು ಮದುವೆಯಾದ ನಂತರ ಕೂಡ ಆಕ್ಟಿಂಗ್ ನಲ್ಲಿ ತೊಡಗಿಸಿಕೊಂಡು, ಹೆಸರು ಮಾಡಿದ್ದಾರೆ. ಆದರೆ ನಟನೆಯಿಂದ ದೂರ ಉಳಿದವರು ಸಂಪೂರ್ಣವಾಗಿ ಕುಟುಂಬಕ್ಕಾಗಿ, ಮಕ್ಕಳಿಗಾಗಿ ಸಮಯ ಕೊಟ್ಟು, ಲೈಫ್ ನಲ್ಲಿ ಸೆಟ್ಲ್ ಆಗಿದ್ದಾರೆ. ಇಂಥ ಕೆಲವು ನಟಿಯರ ಬಗ್ಗೆ ಇಂದು ತಿಳಿಯೋಣ.. ರಾಧಿಕಾ ಪಂಡಿತ್ ಅವರಿಂದ ಹಿಡಿದು ಇನ್ನು ಕೆಲವು ನಟಿಯರು ಈ ಸಾಲಿನಲ್ಲಿದ್ದು, ಇವರ ಬಗ್ಗೆ ಇಂದು ಪೂರ್ತಿಯಾಗಿ ಮಾಹಿತಿ ನೀಡುತ್ತೇವೆ ನೋಡಿ. ಇವರೆಲ್ಲರೂ ಬಿಗ್ ಸ್ಕ್ರೀನ್ ಗೆ ಯಾವಾಗ ಕಂಬ್ಯಾಕ್ ಮಾಡುತ್ತಾರೆ ಎಂದು ಇವರ ಫ್ಯಾನ್ಸ್ ಕೂಡ ಕಾಯುತ್ತಿದ್ದಾರೆ. ಹಾಗಿದ್ದಲ್ಲಿ ಆ ನಟಿಯರು ಯಾರ್ಯಾರು ಎಂದು ಈಗ ನೋಡೋಣ..

ಅಮೂಲ್ಯ : ಕನ್ನಡ ಚಿತ್ರರಂಗಕ್ಕೆ ಚೈಲ್ಡ್ ಆರ್ಟಿಸ್ಟ್ ಆಗಿ ಎಂಟ್ರಿ ಕೊಟ್ಟವರು ಅಮೂಲ್ಯ. ಇವರು ಹಲವು ಸಿನಿಮಾಗಳಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ ನಟಿಸಿ, 8ನೇ ತರಗತಿ ಓದುವಾಗ ಗಣೇಶ್ ಅವರೊಡನೆ ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದರು. ಓದನ್ನು ಪೂರ್ಣಗೊಳಿಸಿಕೊಂಡು, ಸಿನಿಮಾಗಳನ್ನು ಮಾಡಿದರು ಅಮೂಲ್ಯ.. ಇವರು ಸಹ ಹೀರೋಯಿನ್ ಆಗಿ ಸಿಕ್ಕಾಪಟ್ಟೆ ಸಕ್ಸಸ್ ಕಂಡರು. ಅಮೂಲ್ಯ ಅವರು ನಾಯಕಿಯಾಗಿ ಯಶ್ ಅವರೊಡನೆ, ನೆನಪಿರಲಿ ಪ್ರೇಮ್ ಅವರೊಡನೆ, ಅಜಯ್ ರಾವ್ ಅವರೊಡನೆ ಹೀಗೆ ಸಾಕಷ್ಟು ಕಲಾವಿದರ ಜೊತೆಗೆ ನಟಿಸಿದ್ದಾರೆ. ಅಮೂಲ್ಯ ಅವರು ಜಗದೀಶ್ ಅವರೊಡನೆ ಮದುವೆಯಾದ ನಂತರ ನಟನೆ ಇಂದ ದೂರವೇ ಉಳಿದು ಬಿಟ್ಟರು. ಈಗ ಅವಳಿ ಮಕ್ಕಳಿಗೆ ಜನ್ಮ ನೀಡಿ, ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ಬ್ಯುಸಿ ಆಗಿದ್ದಾರೆ. ಇವರು ಮತ್ತೆ ನಟನೆಗೆ ಬರಲಿ ಎನ್ನುವುದು ಎಲ್ಲರ ಆಸೆ.

ರಾಧಿಕಾ ಪಂಡಿತ್ : ಸ್ಯಾಂಡಲ್ ವುಡ್ ನ ಸಿಂಡ್ರೆಲಾ ಎಂದೇ ಹೆಸರು ಮಾಡಿದ್ದವರು ರಾಧಿಕಾ ಪಂಡಿತ್. ಮೊಗ್ಗಿನ ಮನಸ್ಸು ಸಿನಿಮಾ ಇಂದ ಹೀರೋಯಿನ್ ಆಗಿ ನಟನೆ ಶುರು ಮಾಡಿದರು, ಅದಕ್ಕಿಂತ ಮೊದಲು ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು ರಾಧಿಕಾ. ಮೊಗ್ಗಿನ ಮನಸ್ಸು ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾದ ನಂತರ ರಾಧಿಕಾ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಿದರು. ಇವರು ನಟಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್ ಹಿಟ್. ಕನ್ನಡದ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ಕೂಡ ರಾಧಿಕಾ ನಟಿಸಿದರು. ಯಶ್ ಅವರ ಜೊತೆಗೆ ಮೂರು ಸಿನಿಮಾಗಳಲ್ಲಿ ನಟಿಸಿದರು. ಯಶ್ ಅವರೊಡನೆ ಮದುವೆಯಾದ ನಂತರ ಒಂದೇ ಒಂದು ಸಿನಿಮಾದಲ್ಲಿ ನಟಿಸಿದರು ರಾಧಿಕಾ. ಮಕ್ಕಳಾದ ನಂತರ ರಾಧಿಕಾ ಅವರು ಸಿನಿಮಾದಲ್ಲಿ ನಟಿಸಿಲ್ಲ, ಕೆಲವು ಜಾಹೀರಾತಿನಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಇವರು ಕಂಬ್ಯಾಕ್ ಮಾಡಲಿ ಎಂದು ಫ್ಯಾನ್ಸ್ ಈಗಲೂ ಕಾಯುತ್ತಿದ್ದಾರೆ.

ನಜರಿಯಾ : ಮಲಯಾಳಂ ನ ಖ್ಯಾತ ನಟಿ ನಜರಿಯಾ ನಾಜಿಮ್ ಅವರ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಇವರು ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚು ಸಕ್ರಿಯವಾಗಿ ಇರೋರು..ಆಗಾಗ ಒಂದೊಂದು ತೆಲುಗು ಸಿನಿಮಾದಲ್ಲಿ ಕೂಡ ನಟಿಸುತ್ತಾರೆ. ಬಹಳ ಬೇಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಜರಿಯಾ ಅವರು, ಅಷ್ಟೇ ಬೇಗ ಮದುವೆ ಮಾಡಿಕೊಂಡು ನಟನೆ ಇಂದ ಬ್ರೇಕ್ ತೆಗೆದುಕೊಂಡರು. ನಜರಿಯಾ ಅವರು ಮಲಯಾಳಂ ಖ್ಯಾತ ನಟ ಫಹಾದ್ ಫಾಸಿಲ್ ಅವರೊಡನೆ ಮದುವೆಯಾದರು. ನಜರಿಯಾ ಅವರಿಗಿಂತ 11 ವರ್ಷ ದೊಡ್ಡವರು ಫಹಾದ್. ಮದುವೆ ನಂತರ ನಜರಿಯಾ ಅವರು 4 ವರ್ಷಗಳ ಕಾಲ ನಟನೆ ಇಂದ ಬ್ರೇಕ್ ಪಡೆದುಕೊಂಡಿದ್ದರು. ಬಳಿಕ ಮತ್ತೆ ನಟನೆ ಶುರು ಮಾಡಿದರು. ಇತ್ತೀಚೆಗೆ ಇವರು ನಟಿಸಿದ ಸೂಕ್ಷ್ಮದರ್ಶಿನಿ ಸಿನಿಮಾ ಸಖತ್ ಸೌಂಡ್ ಮಾಡಿದೆ.

ಜ್ಯೋತಿಕಾ : ಒಂದು ಕಾಲದಲ್ಲಿ ಇಡೀ ದಕ್ಷಿಣ ಭಾರತ ಚಿತ್ರರಂಗವನ್ನು ಆಳಿದ ನಟಿಯರ ಪೈಕಿ ಜ್ಯೋತಿಕಾ ಸಹ ಒಬ್ಬರು. ಮೂಲತಃ ಉತ್ತರ ಭಾರತದವರಾದರು ಸಹ ಜ್ಯೋತಿಕಾ ಅವರಿಗೆ ಹೆಸರು, ಕೀರ್ತಿ ಎಲ್ಲವೂ ಸಿಕ್ಕಿದ್ದು ದಕ್ಷಿಣ ಭಾರತದಲ್ಲಿ. ಅದರಲ್ಲೂ ತಮಿಳು ಸಿನಿಮಾರಂಗದಲ್ಲಿ. ತಮಿಳು, ತೆಲುಗು, ಹಿಂದಿ ಹಾಗೂ ಕನ್ನಡದ ಒಂದೆರಡು ಸಿನಿಮಾಗಳಲ್ಲಿ ಜ್ಯೋತಿಕಾ ನಟಿಸಿದ್ದಾರೆ. ಇತ್ತೀಚೆಗೆ ಮಲಯಾಳಂ ಚಿತ್ರರಂಗಕ್ಕೆ ಕೂಡ ಎಂಟ್ರಿ ಕೊಟ್ಟಿದ್ದಾರೆ. ಜ್ಯೋತಿಕಾ ಅವರು ಸಹ ತಮಿಳಿನ ಖ್ಯಾತ ನಟ ಸೂರ್ಯ ಅವರನ್ನು ಪ್ರೀತಿಸಿ ಮದುವೆಯಾದರು.. ಮದುವೆಯ ನಂತರ ಜ್ಯೋತಿಕಾ ಅವರು ನಟನೆ ಇಂದ ಸಂಪೂರ್ಣ ದೂರ ಉಳಿದು, ಫ್ಯಾಮಿಲಿಗಾಗಿ ಪೂರ್ತಿ ಸಮಯ ಕೊಟ್ಟರು. ಇತ್ತೀಚೆಗೆ ಮತ್ತೆ ಆಕ್ಟಿಂಗ್ ಗೆ ಮರಳಿ ಬಂದಿದ್ದಾರೆ.

ನಮ್ರತಾ ಶಿರೋಡ್ಕರ್ : ಇವರು 1993 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಕಾಂಟೆಸ್ಟ್ ಗೆದ್ದಂಥ ಬ್ಯೂಟಿ. ಇವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವುದಕ್ಕೆ ಏನಿದೆ ಹೇಳಿ? ಇವರು ಕೂಡ ಉತ್ತರ ಭಾರತದವರೆ ಆದರೂ, ಹೆಸರು ಮಾಡಿದ್ದು ದಕ್ಷಿಣದಲ್ಲಿ. ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದ ನಮ್ರತಾ ಅವರು, ಕನ್ನಡದಲ್ಲಿ ರವಿಚಂದ್ರನ್ ಅವರೊಡನೆ ಒಂದು ಸಿನಿಮಾ ಮಾಡಿದ್ದಾರೆ. ನಟ ಮಹೇಶ್ ಬಾಬು ಅವರನ್ನು ಪ್ರೀತಿಸಿ ಮದುವೆಯಾದರು, ಮದುವೆಯ ನಂತರ ಇವರು ನಟನೆ ಇಂದ ಪೂರ್ತಿಯಾಗಿ ದೂರವೇ ಉಳಿದಿದ್ದಾರೆ. ಮಹೇಶ್ ಬಾಬು ಅವರ ಕುಟುಂಬಕ್ಕೆ ಮನೆಯ ಸೊಸೆ ನಟಿಯಾಗಿ ಕೆಲಸ ಮಾಡುವುದು ಇಷ್ಟವಿರಲಿಲ್ಲ. ಹಾಗಾಗಿ ಸಂಪೂರ್ಣವಾಗಿ ನಟನೆ ಇಂದ ದೂರವಿದ್ದಾರೆ. ಒಮ್ಮೆಯಾದರೂ ಇವರು ಕಂಬ್ಯಾಕ್ ಮಾಡಲಿ ಎನ್ನುವುದು ಇವರ ಫ್ಯಾನ್ಸ್ ಆಸೆ.

ಅಸಿನ್ : ದಕ್ಷಿಣ ಭಾರತ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟಿ ಅಸಿನ್ ಅವರು. ಇವರು ಮೂಲತಃ ಕೇರಳದವರು, ತಮಿಳು ಮಲಯಾಳಂ ಹಾಗೂ ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದ ಅಸಿನ್ ಅವರು, ಮುಂದೆ ಬಾಲಿವುಡ್ ನಲ್ಲಿ ಸಹ ಅವಕಾಶಗಳನ್ನು ಪಡೆದು, ಅಲ್ಲಿಯೂ ಹಿಟ್ ನಟಿ ಎಂದು ಹೆಸರು ಮಾಡಿದರು. ಎಲ್ಲಾ ಭಾಷೆಗಳಲ್ಲಿ ಗುರುತಿಸಿಕೊಂಡಿದ್ದ ಇವರು ಕೂಡ ಮದುವೆಯಾದ ನಂತರ ನಟನೆ ಇಂದ ದೂರವೇ ಉಳಿದುಬಿಟ್ಟಿದ್ದಾರೆ. ಅಸಿನ್ ನಟನೆಯ ಸಿನಿಮಾ ತೆರೆಕಂಡು ಬಹಳ ವರ್ಷಗಳೇ ಆಗಿ ಹೋಗಿದೆ. ಇವರನ್ನು ಮತ್ತೆ ತೆರೆಯ ಮೇಲೆ ನೋಡೋಕೆ ಫ್ಯಾನ್ಸ್ ಕೂಡ ಕಾಯುತ್ತಲಿದ್ದಾರೆ.