ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀರಿಯಲ್ ಗಳಲ್ಲಿ ಜನಪ್ರಿಯವಾದ ಧಾರಾವಾಹಿ ಎಂದರೆ ಅದು ಭಾಗ್ಯಲಕ್ಷ್ಮಿ. ಇದು ಅತ್ತೆ ಸೊಸೆ ಭಾಂದವ್ಯ ಮತ್ತು ಕುಟುಂಬದ ಸಂಬಂಧವನ್ನು ಅದ್ಭುತವಾಗಿ ತೋರಿಸುವ ಮೂಲಕ ಜನರ ಪ್ರೀತಿಗೆ ಪಾತ್ರವಾಗಿದೆ. ಆದರೆ ಇದೀಗ ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿ ಧೀಡಿರಾಗಿ ಹೊರ ಬಂದಿದ್ದಾರೆ.
ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಭಾಗ್ಯ ಪಾತ್ರಧಾರಿಯ ತಂಗಿಯಾಗಿ ನಟಿಸುತ್ತಿರುವ ಪೂಜಾ ಪಾತ್ರಧಾರಿ. ಆಶಾ ಅಯ್ಯನಾರ್ ತಂಗಿ ಎಂದರೆ ಹೀಗಿರಬೇಕು ಎಂಬ ರೀತಿಯಲ್ಲಿ ನಟಿಸಿ ಅಭಿಮಾನಿಗಳನ್ನು ಸಂಪಾದನೆ ಮಾಡಿರುವಂತಹ ನಟಿ. ಆದರೆ ಇದೀಗ ದಿಡೀರ್ ಆಗಿ ಧಾರಾವಾಹಿಯಿಂದ ಹೊರ ಬಂದಿರುವುದು ಪ್ರೇಕ್ಷಕರೆಲ್ಲರಿಗೂ ಅಚ್ಚರಿ ಉಂಟು ಮಾಡಿದೆ.

ಇನ್ನು ಮುಂದೆ ನಾನು ಬಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಈ ವಿಷಯ ನನಗೆ ಬೇಸರ ತಂದಿದೆ. ಮೂರು ವರ್ಷಗಳ ಕಾಲ ಭಾಗ್ಯಲಕ್ಷ್ಮಿ ಟೀಮ್ ನನಗೆ ತುಂಬಾ ಸಪೋರ್ಟ್ ಮಾಡಿದೆ ಮತ್ತೆ ಒಳ್ಳೆಯ ಮೆಮೊರಿಗಳನ್ನು ಕೂಡ ಕೊಟ್ಟಿದೆ. ಜೀವನದಲ್ಲಿ ಎಲ್ಲವನ್ನು ಅಳವಡಿಸಿಕೊಳ್ಳುತ್ತೇನೆ. ಜೀ ಕನ್ನಡ ವಾಹಿನಿ ಮತ್ತು ಸಹಕಲಾವಿದರಿಗೆ ಧನ್ಯವಾದಗಳು ಹೇಳಿದ್ದಾರೆ. ಅಲ್ಲದೆ ಭಾಗ್ಯಲಕ್ಷ್ಮಿ ಧಾರಾವಾಹಿಯೇ ಸಪೋರ್ಟ್ ಮಾಡಿ ಅದನ್ನು ಜನಪ್ರಿಯಗೊಳಿಸಿ ಎಂದು ಪ್ರೇಕ್ಷಕರನ್ನ ಕೇಳಿಕೊಂಡಿದ್ದಾರೆ. ಇಷ್ಟು ದಿನ ಪ್ರೀತಿಸಿ ಪ್ರೋತ್ಸಾಹಿಸಿ ಬೆಂಬಲ ನೀಡಿದ್ದಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದಗಳು ತಿಳಿಸಿದ್ದಾರೆ. ನನಗೆ ನಿಮ್ಮ ಆಶೀರ್ವಾದ ಬೆಂಬಲ ಸದಾ ಇರಲಿ ಎಂದು ಅಭಿಮಾನಿಗಳಿಗೆ ಕೇಳಿ ಕೊಂಡಿದ್ದಾರೆ.
ಭಾಗ್ಯಲಕ್ಷ್ಮಿ ಧಾರಾವಾಹಿ ಪೂಜಾ ಅಲಿಯಾಸ್ ಆಶಾ ಅಯ್ಯನಾರ್ ಧಾರಾವಾಹಿಯಿಂದ ಹೊರಬರಲು ಪ್ರಮುಖವಾದ ಕಾರಣವಿದೆ. ಅದೇನೆಂದರೆ ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಟೆಸ್ಟ್ ಗಳ ಮೇಲೆ ಟ್ವಿಸ್ಟ್ ನೀಡುತ್ತಾ ಮೊದಲ ಫೈನಲ್ ನಡೆಯುತ್ತಿದೆ ಇದರಲ್ಲಿ ಬಹುತೇಕ ಸ್ಪರ್ಧಿಗಳು ಖಚಿತವಾಗಿದ್ದು ಮತ್ತೆ ಕೆಲವು ಸ್ಪರ್ಧಿಗಳು ಎಂಟ್ರಿ ಕೊಡುವ ಸಾಧ್ಯತೆ ಇದೆ. ಹೀಗಾಗಿ ವೈಲ್ಡ್ ಕಾರ್ಡ್ ಎಂಟ್ರಿ ಯ ಮೂಲಕ ಆಶಾ ಅಯ್ಯನಾರ್ ಎಂಟ್ರಿ ಕೋಡ್ ಕೊಡಲಿದ್ದಾರೆ. ಆಶಾ ಅಯ್ಯನಾರ್ ಬಿಗ್ ಬಾಸ್ ಮನೆಯಲ್ಲಿ ಮನರಂಜನೆ ನೀಡುವ ಮೂಲಕ ಜನರನ್ನು ರಂಜಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಆಶಾ ಅಯ್ಯನಾರ್ ಧಾರಾವಾಹಿಯಲ್ಲಿ ಇಲ್ಲದಿದ್ದರೂ ಕೂಡ ಬಿಗ್ ಬಾಸ್ ಮನೆಯ ಮೂಲಕ ಅವರನ್ನು ಅವರ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು. ಪೂಜಾ ಅಲಿಯಾಸ್ ಆಶಾ ರವರನ್ನು ಬಿಗ್ ಬಾಸ್ ನಲ್ಲಿ ಬೆಂಬಲಿಸಿ



