ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವವರು ನಟಿ ವೈಷ್ಣವಿ ಗೌಡ. ಇವರ ಅಗ್ನಿಸಾಕ್ಷಿ ಧಾರಾವಾಹಿ ಯಾವ ಮಟ್ಟಕ್ಕೆ ಕ್ರೇಜ್ ಹೊಂದಿತ್ತು ಎಂದು ನಮಗೆಲ್ಲ ಗೊತ್ತೇ ಇದೆ. ಆ ಸಮಯದಲ್ಲಿ ಅಗ್ನಿಸಾಕ್ಷಿಯ ಸನ್ನಿಧಿ ಎಲ್ಲರ ಮನೆ ಮಗಳು, ಎಲ್ಲಾ ಹುಡುಗರ ಕ್ರಶ್ ಎಂದು ಹೇಳಿದರು ತಪ್ಪಲ್ಲ. ಅಷ್ಟರ ಮಟ್ಟಿಗೆ ಜನಪ್ರಿಯತೆ ಹೊಂದಿತ್ತು ಈ ಪಾತ್ರ. ಈಗ ವೈಷ್ಣವಿ ಅವರು ಸೀತಾರಾಮ ಧಾರಾವಾಹಿಯ ಸೀತಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಪಾತ್ರ ಸಹ ಜನರಿಗೆ ಅಷ್ಟೇ ಇಷ್ಟವಾಗಿದೆ. ಸೀತಾರಾಮನ ಪ್ರೀತಿ, ಸೀತಾ ಸಿಹಿ ಬಾಂಡಿಂಗ್ ಇದೆಲ್ಲವೂ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ.. ಇಷ್ಟು ಒಳ್ಳೆಯ ಪಾತ್ರದ ಮೂಲಕ ಗುರುತಿಸಿಕೊಂಡಿರುವ ವೈಷ್ಣವಿ ಅವರು ಇದೀಗ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಆ ಒಂದು ಪೋಸ್ಟ್ ಕಾರಣಕ್ಕಾಗಿ ತಮ್ಮ ಕಾಮೆಂಟ್ಸ್ ಸೆಕ್ಷನ್ ಅನ್ನೇ ಆಫ್ ಮಾಡಿದ್ದಾರೆ. ಅಷ್ಟಕ್ಕೂ ಆ ಪೋಸ್ಟ್ ಆದರೂ ಏನು? ಫುಲ್ ಡೀಟೇಲ್ಸ್ ಇಲ್ಲಿದೆ.

ನಟಿ ವೈಷ್ಣವಿ ಅವರ ಜರ್ನಿ ಕೆಲವು ವರ್ಷಗಳದ್ದಷ್ಟೇ ಅಲ್ಲ. ಇವರು. ಬಹಳ ಚಿಕ್ಕವರಿರುವಾಗಲೇ, ಡ್ಯಾನ್ಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದು, ಅದ್ಭುತವಾದ ಡ್ಯಾನ್ಸರ್ ಸಹ ಹೌದು. ಕ್ಲಾಸಿಕಲ್ ಡ್ಯಾನ್ಸ್ ಅನ್ನು ಕಲಿತಿರುವ ಇವರು ಬಹಳ ಟ್ಯಾಲೆಂಟೆಡ್ ಹುಡುಗಿ. ಡ್ಯಾನ್ಸ್ ಶೋ ಬಳಿಕ ವೈಷ್ಣವಿ ಅವರು ಜೀಕನ್ನಡ ವಾಹಿನಿಯಲ್ಲೇ ದೇವಿ ಎನ್ನುವ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಈ ಧಾರಾವಾಹಿ ಸಹ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ನಂತರ ಸ್ವಲ್ಪ ಗ್ಯಾಪ್ ಪಡೆದು ನಟಿಸಿದ ಧಾರಾವಾಹಿಯೇ ಅಗ್ನಿಸಾಕ್ಷಿ. ಈ ಧಾರಾವಾಹಿಯ ಕ್ರೇಜ್ ಇವತ್ತಿಗೂ ಕಡಿಮೆ ಆಗಿಲ್ಲ. ಜನರು ಅಗ್ನಿಸಾಕ್ಷಿ ಸಿದ್ಧಾರ್ಥ್ ಸನ್ನಿಧಿಯನ್ನ ಇಂದಿಗು ಮರೆತಿಲ್ಲ. ಈಗಲೂ ಈ ಧಾರಾವಾಹಿಯನ್ನು ಮತ್ತೆ ಟೆಲಿಕಾಸ್ಟ್ ಮಾಡಿದರೆ, ಮೊದಲು ಇದ್ದಷ್ಟೇ ಕ್ರೇಜ್ ಇರುತ್ತದೆ..

ಅಷ್ಟು ಕ್ರೇಜ್ ಹೊಂದಿದೆ ಅಗ್ನಿಸಾಕ್ಷಿ ಧಾರವಾಹಿ. ಅಗ್ನಿಸಾಕ್ಷಿ ನಂತರ ಇನ್ಯಾವುದೇ ಧಾರಾವಾಹಿಯನ್ನು ಒಪ್ಪಿಕೊಳ್ಳದೇ ದೊಡ್ಡ ಗ್ಯಾಪ್ ಪಡೆದ ಬಳಿಕ ವೈಷ್ಣವಿ ಅವರು ಕಾಣಿಸಿಕೊಳ್ಳುತ್ತಿರುವುದು ಸೀತಾರಾಮ ಧಾರಾವಾಹಿಯಲ್ಲಿ. ಈ ಧಾರಾವಾಹಿ ಸಹ ಅಗ್ನಿಸಾಕ್ಷಿ ತರಹವೆ ಕ್ರೇಜ್ ಹೊಂದಿದೆ. ಇದರಲ್ಲಿ ಜನರಿಗೆ ಸಿಹಿ ಮತ್ತು ಸೀತಾಳ ತಾಯಿ ಮಗಳ ಬಾಂಧವ್ಯ ಸಹ ತುಂಬಾ ಇಷ್ಟವಾಯಿತು. ಉತ್ತಮವಾಗಿ ಮುನ್ನುಗ್ಗುತ್ತಿದೆ ಸೀತಾರಾಮ ಧಾರಾವಾಹಿ. ಧಾರಾವಾಹಿಯ ಜೊತೆಗೆ ವೈಷ್ಣವಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಹ ತುಂಬಾ ಆಕ್ಟಿವ್. ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಇವರು ಒಂದು ವಿಡಿಯೋ ಪೋಸ್ಟ್ ಮಾಡಿದ್ದು, ಆ ವಿಡಿಯೋ ಇಂದ ನೆಗಟಿವ್ ಕಾಮೆಂಟ್ಸ್ ಬರುತ್ತದೆ ಎಂದು ಗೊತ್ತಿರುವ ಕಾರಣ ಮೊದಲೇ ಕಾಮೆಂಟ್ಸ್ ಆಫ್ ಮಾಡಿದ್ದಾರೆ. ಅಷ್ಟಕ್ಕೂ ಏನದು ವಿಡಿಯೋ?
ನಟಿ ವೈಷ್ಣವಿ ಅವರ ಇನ್ಸ್ಟಾಗ್ರಾಮ್ ಖಾತೆ ನೋಡಿದರೆ ಅವರು ಅನೇಕ ಪ್ರಾಡಕ್ಟ್ ಗಳನ್ನು ಪ್ರೊಮೋಟ್ ಮಾಡುತ್ತಾರೆ ಎನ್ನುವುದು ಗೊತ್ತಾಗುತ್ತದೆ. ಬ್ಯೂಟಿ ಪ್ರಾಡಕ್ಟ್ ಗಳಿಂದ ಹಿಡಿದು, ದೊಡ್ಡ ಬ್ರಾಂಡ್ ನ ಅಡುಗೆ ಮನೆ ಬಳಕೆ ಪದಾರ್ಥಗಳು, ಹಾಗೂ ಇನ್ನು ಅನೇಕ ರೀತಿಯ ಪ್ರಾಡಕ್ಟ್ ಗಳನ್ನು ವೈಷ್ಣವಿ ಪ್ರೊಮೋಟ್ ಮಾಡುತ್ತಾರೆ. ಸೀರೆ, ಆಭರಣ ಇವುಗಳನ್ನು ಸಹ ಪ್ರೊಮೋಟ್ ಮಾಡುತ್ತಾರೆ. ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಹೀಗೆ ಪ್ರೊಮೋಟ್ ಮಾಡುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಈ ವಸ್ತುಗಳ ಜೊತೆಗೆ ವೈಷ್ಣವಿ ಈಗ ಒಂದು ಆಪ್ ಪ್ರೊಮೋಟ್ ಮಾಡಿದ್ದಾರೆ, ಇದರಿಂದ ವಿವಾದ ಉಂಟಾಗಬಹುದು ಎಂದು ಅರಿತು, ಮೊದಲೇ ತಮ್ಮ ಕಾಮೆಂಟ್ಸ್ ಸೆಕ್ಷನ್ ಆಫ್ ಮಾಡಿದ್ದಾರೆ ವೈಷ್ಣವಿ. ಇನ್ನು ಅವರ ಅಭಿಮಾನಿಗಳಿಗೆ ಕೂಡ ವೈಷ್ಣವಿ ಅವರು ಇದೊಂದು ಕೆಲಸ ಮಾಡಬಾರದಿತ್ತು ಎಂದು ಅನ್ನಿಸುವುದಕ್ಕೆ ಶುರುವಾಗಿದೆ. ಯಾರಿಗೆ ಆದರೂ ಹೀಗೆ ಅನ್ನಿಸಬಹುದು.

ಅಷ್ಟಕ್ಕೂ ವೈಷ್ಣವಿ ಅವರು ಪ್ರೊಮೋಟ್ ಮಾಡಿರುವುದು ಏನು ಏನೆಂದರೆ, ಅದು ಜಂಗ್ಲಿ ರಮ್ಮಿ ಆಪ್. ಹೌದು, ರಮ್ಮಿ ಆಡುವ ಆಪ್ ಅನ್ನು ವೈಷ್ಣವಿ ಅವರು ಪ್ರಮೋಟ್ ಮಾಡಿದ್ದು, ಇದಕ್ಕೆ ಸಂಬಂಧಿಸಿದ ಪ್ರೊಮೋಷನಲ್ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೊದಲು ಕನ್ನಡದ ಕೆಲವು ಸೆಲೆಬ್ರಿಟಿಗಳು ಈ ರಮ್ಮಿ ಆಪ್ ಪ್ರೊಮೋಟ್ ಮಾಡಿ ಜನರ ಹಾಗೂ ಅಭಿಮಾನಿಗಳ ವಿರೋಧ ಎದುರಿಸಿದ್ದಾರೆ. ಈ ರೀತಿ ಆದ ಬಳಿಕ ಈ ಜಾಹೀರಾತಿನಿಂದ ಹೊರಬಂದಿದ್ದಾರೆ. ವೈಷ್ಣವಿ ಅವರು ಸಹ ಇದೇ ರೀತಿ ಮಾಡಿದ್ದಾರೆ. ಆದರೆ ಈ ರಮ್ಮಿ ಆಪ್ ಒಳ್ಳೆಯದಲ್ಲ. ಹಲವು ಜನರು ಇದಕ್ಕೆ ಅಡಿಕ್ಟ್ ಆಗಿ ಲಕ್ಷಗಟ್ಟಲೆ ಹಣ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ರಮ್ಮಿ ಆಪ್ ಗೆ ಸೇರಿದಂತೆ ಒಂದು ಅಹಿತಕರ ಘಟನೆ ಸಹ ನಡೆದಿದೆ. ಒಬ್ಬ ವ್ಯಕ್ತಿ ಇದರಿಂದ ಹಣ ಕಳೆದುಕೊಂಡು, 7 ಲಕ್ಷವನ್ನು ಮತ್ತೆ ಕದ್ದು ಪರಾರಿ ಆಗಿದ್ದಾನೆ.
ಈ ರೀತಿ ರಮ್ಮಿ ಆಪ್ ಜನರ ಮೇಲೆ ನೆಗಟಿವ್ ಆಗಿ ಪರಿಣಾಮ ಬೀರುತ್ತಿರುವ ಕಾರಣ, ಅಲ್ಲಿನ ಪೊಲೀಸ್ ಸಿಬ್ಬಂದಿಗಳು ರಮ್ಮಿ ಆಪ್ ಬ್ಯಾನ್ ಮಾಡಬೇಕು ಎಂದು ಅರ್ಜಿಯನ್ನು ಸಹ ಕೊಟ್ಟಿದ್ದಾರೆ. ಈ ಆಪ್ ಇಂದ ಹಲವು ಜನರ ಜೀವನವೇ ಹಾಳಾಗಿದೆ.. ಇಂಥದ್ದೊಂದು ಆಪ್ ಅನ್ನು ವೈಷ್ಣವಿ ಅವರು ಪ್ರೊಮೋಟ್ ಮಾಡುತ್ತಿದ್ದಾರೆ ಎಂದರೆ ಅವರ ಅಭಿಮಾನಿಗಳು ಮತ್ತು ನೆಟ್ಟಿಗರು ಸಹಿಸಿಕೊಳ್ಳುವುದಿಲ್ಲ, ಹಾಗಾಗಿ ವೈಷ್ಣವಿ ಅವರು ಯಾರಿಂದಲೂ ನೆಗಟಿವ್ ಕಾಮೆಂಟ್ಸ್ ಬರಬಾರದು ಎಂದು ಮೊದಲೇ ಕಾಮೆಂಟ್ಸ್ ಎಲ್ಲವನ್ನು ಆಫ್ ಮಾಡಿದ್ದಾರೆ. ಆದರೆ ವೈಷ್ಣವಿ ಅವರ ಅಭಿಮಾನಿಗಳಿಗೆ ಬೇಸರ ಆಗಿರುವುದಂತೂ ನಿಜ. ಒಳ್ಳೇ ವ್ಯಕ್ತಿತ್ವ ಇರೋ ಕಾರಣಕ್ಕೆ ಗುರುತಿಸಿಕೊಂಡವರು ವೈಷ್ಣವಿ. ಬಿಗ್ ಬಾಸ್ ಶೋಗೆ ಹೋಗಿದ್ದಾಗಲು ಸಹ ಇವರು ಎಲ್ಲರಿಗೂ ತುಂಬಾ ಇಷ್ಟವಾಗಿದ್ದು ತುಂಬಾ ಒಳ್ಳೆಯ ಹುಡುಗಿ ಅನ್ನೋ ಕಾರಣಕ್ಕೆ.
ಹಾಗಿದ್ದಾಗ ರಮ್ಮಿ ಆಪ್ ಪ್ರೊಮೋಟ್ ಮಾಡುವ ಆವಶ್ಯಕತೆ ಇರಲಿಲ್ಲ ಅಂತಿದ್ದಾರೆ ಫ್ಯಾನ್ಸ್. ಇನ್ನು ವೈಷ್ಣವಿ ಅವರು ಹಲವು ಫೋಟೋಶೂಟ್ ಗಳನ್ನು ಸಹ ಮಾಡಿಸಿ, ಅವುಗಳನ್ನು ಕೂಡ ಶೇರ್ ಮಾಡುತ್ತಾರೆ. ಹಾಗೆಯೇ ವೈಷ್ಣವಿ ಅವರ ಯೂಟ್ಯೂಬ್ ಚಾನೆಲ್ ಸಹ ಇದೆ. ಅದರಲ್ಲಿ ಕೂಡ ಅನೇಕ ವಿಚಾರಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಾರೆ. ಹಲವು ಬ್ರ್ಯಾಂಡ್ ಗಳನ್ನು ಪ್ರೊಮೋಟ್ ಮಾಡುತ್ತಾರೆ.ವೈಷ್ಣವಿ ಅವರ ಫಿಟ್ನೆಸ್ ವಿಡಿಯೋಗಳು, ಅವರು ಯೋಗ ಹೇಳಿಕೊಡುವುದು ಇದೆಲ್ಲವೂ ಸಹ ಜನರಿಗೆ ಹತ್ತಿರ ಆಗಿದೆ. ಇವರ ಯೂಟ್ಯೂಬ್ ಚಾನೆಲ್ ಇಂದ ಒಂದಷ್ಟು ಹೊಸ ವಿಚಾರಗಳನ್ನು ಸಹ ಜನರು ತಿಳಿದುಕೊಳ್ಳುತ್ತಿದ್ದಾರೆ. ಇನ್ನು ಸೀತಾರಾಮ ಧಾರಾವಾಹಿ ಸಹ ವೈಷ್ಣವಿ ಅವರಿಗೆ ಒಳ್ಳೆಯ ಹೆಸರನ್ನ ತಂದುಕೊಟ್ಟಿದೆ.