ಒಂದು ಸಿನಿಮಾ ಚಿತ್ರೀಕರಣ ಎಂದರೆ ನಾವಂದುಕೊಂಡಷ್ಟು, ತೆರೆಯಮೇಲೆ ಕಾಣುವಷ್ಟು ಸುಲಭದ ವಿಷಯ ಅಂತೂ ಅಲ್ಲ. ಕೆಲವು ಶಾಟ್ ಗಳಲ್ಲಿ ಬಹಳ ರಿಸ್ಕ್ ಇರುತ್ತದೆ. ದೈಹಿಕವಾಗಿ ತೊಂದರೆ ಆಗುವ ಸಂಭವ ಕೂಡ ಇರುತ್ತದೆ. ಆದರೆ ಕಲಾವಿದರು ಅದ್ಯಾವುದನ್ನು ಲೆಕ್ಕಿಸದೇ ತಮ್ಮ ವೃತ್ತಿಯ ಮೇಲಿನ ಶ್ರದ್ಧೆಯಿಂದ ರಿಸ್ಕ್ ತೆಗೆದುಕೊಂಡು ಹಲವು ಪ್ರಯೋಗಗಳನ್ನು ಮಾಡುತ್ತಾರೆ. ಅಂಥವುಗಳು ನಮಗೆ ಅಪರೂಪಕ್ಕೊಮ್ಮೆ. ಇದೀಗ ಅಂಥದ್ದೇ ಒಂದು ಘಟನೆ ಬಗ್ಗೆ ನಿರ್ದೇಶಕ ಪಿ.ಹೆಚ್. ವಿಶ್ವನಾಥ್ ಅವರು ಮಾತನಾಡಿದ್ದಾರೆ. ಸಿನಿಮಾ ಹಾಡೊಂದರಲ್ಲಿ ನಟಿ ಸುಧಾರಾಣಿ ಅವರು ಘಟಾನುಘಟಿ ಅಂಬರೀಶ್ ಅವರನ್ನೇ ಎತ್ತಿರುವ ಬಗ್ಗೆ ಮಾತನಾಡಿದ್ದಾರೆ ನಿರ್ದೇಶಕ ಪಿ.ಹೆಚ್. ವಿಶ್ವನಾಥ್.

ಪಿ. ಹೆಚ್ ವಿಶ್ವನಾಥ್ ಅವರು ಕನ್ನಡದ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ಇವರು ಪುಟ್ಟಣ್ಣ ಕಣಗಾಲ್ ಅವರ ಶಿಷ್ಯ. ಅವರಂತೆಯೇ ಒಳ್ಳೆಯ ಕಥೆ ಹೊಂದಿರುವ ಸಿನಿಮಾಗಳನ್ನು ನಿರ್ದೇಶಿಸಿ, ಕನ್ನಡ ಪ್ರಿಯರಿಗೆ ನೀಡಿದವರು. ಪಂಚಮವೇದ, ಶ್ರೀಗಂಧ, ಅರಗಿಣಿ, ಅಂಡಮಾನ್ ಇಂಥ ಸುಂದರವಾದ ಸಿನಿಮಾಗಳನ್ನು ಕನ್ನಡ ಚಿತ್ರಪ್ರೇಮಿಗಳಿಗೆ ನೀಡಿದವರು ಪಿ. ಹೆಚ್. ವಿಶ್ವನಾಥ್. ಇವರು ಮುಂಜಾನೆಯ ಮಂಜು ಸಿನಿಮಾ ನಿರ್ದೇಶನ ಮಾಡುವಾಗ, ಒಂದು ಹಾಡಿನ ಚಿತ್ರೀಕರಣ ಸಮಯದಲ್ಲಿ ನಟಿ ಸುಧಾರಾಣಿ ಅವರು ಅಂಬರೀಶ್ ಅವರನ್ನೇ ಎತ್ತಿರುವ ಘಟನೆ ಬಗ್ಗೆ ಒಂದು ಸಂದರ್ಶನದಲ್ಲಿ ಮಾತನಾಡಿದ್ದು, ಇದೀಗ ಈ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೌದು, ಪಿ. ಹೆಚ್ ವಿಶ್ವನಾಥ್ ಅವರು ನಿರ್ದೇಶನ ಮಾಡಿದ ಮತ್ತೊಂದು ಸಿನಿಮಾ ಮುಂಜಾನೆಯ ಮಂಜು. ಇದೊಂದು ಕಾದಂಬರಿ ಆಧಾರಿತ ಸಿನಿಮಾ ಆಗಿದ್ದು, ಅಂಬರೀಶ್, ಸುಧಾರಾಣಿ ಹಾಗೂ ತಾರಾ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದ ಕೋಪಾನ ಮದನ ತಾಪಾನ ಮದನ ಹಾಡಿನಲ್ಲಿ ನಟಿ ಸುಧಾರಾಣಿ ಅವರು ಅಂಬರೀಶ್ ಅವರನ್ನು ಬೆನ್ನಿನ ಎತ್ತಿಕೊಂಡಿದ್ದು, ಆ ಶಾಟ್ ಹಾಡಿನಲ್ಲಿ ಕೂಡ ಇದೆ ಎಂದು ವಿಶ್ವನಾಥ್ ಅವರು ತಿಳಿಸಿದ್ದಾರೆ. ಡ್ಯಾನ್ಸ್ ಮಾಸ್ಟರ್ ಗಳಿಗೆ ಹಾಡು ಚೆನ್ನಾಗಿ ಬಂದ್ರೆ ಸಾಕು ಎಂದು ಇರುತ್ತದೆ. ಆದರೆ ರಿಸ್ಕ್ ಗಳ ಬಗ್ಗೆ ಕೂಡ ಗಮನ ಕೊಡಬೇಕು. ಆಗ ಅಂಬರೀಶ್ ತೂಕ ಜಾಸ್ತಿ ಇತ್ತು, ಸುಧಾರಾಣಿ ತುಂಬಾ ತೆಳ್ಳಗೆ ಇದ್ರು.
ಇವರು ಅವರನ್ನ ಎತ್ತೋದು ತುಂಬಾ ರಿಸ್ಕ್, ಏನಾದರೂ ತೊಂದರೆ ಆದರೆ ಅಂತ ನನಗೆ ಭಯ ಇತ್ತು. ಸುಧಾರಾಣಿ ನಾನು ಮಾಡ್ತೀನಿ ಸರ್ ಅಂದ್ರು, ಅವರಮ್ಮ ಒಪ್ಪಲಿಲ್ಲ. ಕೊನೆಗೆ ಸುಧಾರಾಣಿ ಅಮ್ಮನನ್ನ ಹೊರಗೆ ಕಳಿಸಿ ನಾನು ಮಾಡ್ತೀನಿ ಅಂತ ಅಂದ್ರು, ನನಗೆ ಭಯ ಇದೆಯಮ್ಮ ಎಂದು ಹೇಳಿದೆ. ಅವರು ಬಿಡಲಿಲ್ಲ, ಅಂಬರೀಶ್ ಅವರನ್ನ ಲಿಟರಲಿ ಬೆನ್ನ ಮೇಲೆ ಎತ್ತಿದ್ರು ಆ ಶಾಟ್ ಕೂಡ ಸಿನಿಮಾದಲ್ಲಿದೆ, ಕೋಪಾನ ಮದನ, ತಾಪಾನ ಮದನ ಹಾಡಿನಲ್ಲಿದೆ. ಸುಧಾರಾಣಿ ಅವರಿಗೆ ಪಾತ್ರ ಅಂದ್ರೆ ತುಂಬಾ ಮುಖ್ಯ ಎಂದು ಹೇಳಿದ್ದಾರೆ ನಿರ್ದೇಶಕ ಪಿ. ಹೆಚ್. ವಿಶ್ವನಾಥ್. ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಸಿನಿಮಾಗಳಲ್ಲಿ ಇಂಥ ಘಟನೆಗಳು ಸಾಕಷ್ಟು ನಡೆಯುತ್ತದೆ. ಹೀರೋಗಳು ಮಾತ್ರ ಫೈಟ್ ಮಾಡಿ, ರಿಸ್ಕ್ ತಗೊಳ್ಳೋದಲ್ಲ ಹೀರೋಯಿನ್ ಗಳು ಸಹ ಅದೇ ರೀತಿ ರಿಸ್ಕ್ ತೆಗೆದುಕೊಳ್ಳುವ ಸಂದರ್ಭಗಳು ಎದುರಾಗುತ್ತದೆ. ಈ ಘಟನೆಗಳ ಮೂಲಕ ನಾವು ಕಲಿಯುವುದು ಕೂಡ ಸಾಕಷ್ಟು ಇರುತ್ತದೆ. ಒಟ್ಟಿನಲ್ಲಿ ನಮ್ಮ ಕನ್ನಡ ಕಲಾವಿದರು ಯಾವುದೇ ರಿಸ್ಕ್ ತೆಗೆದುಕೊಂಡು, ಒಂದೊಳ್ಳೆಯ ಸಿನಿಮಾ ಕೊಡೋಕೆ ಸಿದ್ಧವಾಗಿದ್ದಾರೆ ಎನ್ನುವುದು ನಾವೆಲ್ಲರೂ ಖುಷಿ ಪಡುವ ವಿಷಯ. ಮುಂದಿನ ದಿನಗಳಲ್ಲಿ ಇಂಥ ಇನ್ನಷ್ಟು ವಿಚಾರಗಳನ್ನು ತಿಳಿಯೋಣ..



