ಚಿತ್ರರಂಗದಲ್ಲಿ ಹಲವು ಘಟನೆಗಳು ನಡೆಯುತ್ತವೆ, ಕೆಲವು ವಿಷಯಗಳು ಬಹಳ ತಡವಾಗಿ ಬೆಳಕಿಗೆ ಬರುತ್ತದೆ. ಅಂಥದ್ದೇ ಒಂದು ಘಟನೆ ಇದೀಗ ಗೊತ್ತಾಗಿದ್ದು, ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ರಾಧಿಕಾ ಅವರು ಸಾಹಸಸಿಂಹ ವಿಷ್ಣುವರ್ಧನ್ ಅವರೊಡನೆ ಲಿಪ್ ಲಾಕ್ ಮಾಡಬೇಕಾದ ದೃಶ್ಯವನ್ನು ನಿರಾಕರಿಸಿದ್ದರಂತೆ, ಈ ಬಗ್ಗೆ ನಿರ್ದೇಶಕ ಸಾಯಿ ಪ್ರಕಾಶ್ ಅವರು ಒಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. ಅಷ್ಟಕ್ಕೂ ಅದು ಯಾವ ಸಿನಿಮಾ? ರಾಧಿಕಾ ಅವರು ನಿರಾಕರಿಸಿದ್ದೇಕೆ? ಪೂರ್ತಿ ಮಾಹಿತಿ ತಿಳಿಯೋಣ…

ನಿರ್ದೇಶಕ ಸಾಯಿಪ್ರಕಾಶ್ ಅವರು ಇದುವರೆಗೂ ಹಲವು ಸೆಂಟಿಮೆಂಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇವರ ಸಿನಿಮಾಗಳು ಸೂಪರ್ ಹಿಟ್ ಆಗಿವೆ, ಕನ್ನಡದ ಸ್ಟಾರ್ ಕಲಾವಿದರ ಜೊತೆಗೆ ಸಿನಿಮಾ ಮಾಡಿ ಗೆದ್ದಿರುವ ನಿರ್ದೇಶಕ ಸಾಯಿ ಪ್ರಕಾಶ್ ಅವರು. ಹಾಗೆಯೇ ಇವರು ಕೆಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದಾರೆ. ಸಾಯಿಪ್ರಕಾಶ್ ಅವರು ಇತ್ತೀಚೆಗೆ ರಘುರಾಮ್ ಅವರ ಯೂಟ್ಯೂಬ್ ಚಾನೆಲ್ ಗೆ ಸಂದರ್ಶನ ನೀಡಿದ್ದಾರೆ. ಅದರಲ್ಲಿ ತಮ್ಮ ಬದುಕಿನ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಜೊತೆಗೆ ಚಿತ್ರರಂಗದ ಹಲವು ಅನುಭವಗಳ ಬಗ್ಗೆ ಕೂಡ ಮಾತನಾಡಿದ್ದಾರೆ. ಅದೇ ವೇಳೆ ನಟಿ ರಾಧಿಕಾ ಅವರು ವಿಷ್ಣುವರ್ಧನ್ ಅವರೊಡನೆ ಲಿಪ್ ಲಾಕ್ ದೃಶ್ಯವನ್ನು ರಿಜೆಕ್ಟ್ ಮಾಡಿದ ಸನ್ನಿವೇಶದ ಬಗ್ಗೆ ಮಾತನಾಡಿದ್ದಾರೆ ಸಾಯಿಪ್ರಕಾಶ್. ಅದು ಸತ್ಯಂ ಶಿವಂ ಸುಂದರಂ ಸಿನಿಮಾದ ಚಿತ್ರೀಕರಣ ಆಗಿತ್ತು, ಇದು ತೆಲುಗಿನಲ್ಲಿ ಅದೇ ಹೆಸರಿನ ಸಿನಿಮಾದ ರಿಮೇಕ್. ತೆಲುಗಿನಲ್ಲಿ ಚಿರಂಜೀವಿ ಅವರು ನಾಯಕನಾಗಿದ್ದರು, ಅವರಿಗೆ ನಾಯಕಿಯಾಗಿ ರಾಧಿಕಾ ಅವರು ನಟಿಸಿದ್ದರು. ಈ ಸಿನಿಮಾದಲ್ಲಿ ನಾಯಕನದ್ದು ತ್ರಿಪಾತ್ರ, ವಿಷ್ಣುವರ್ಧನ್ ಅವರು ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದರು.

ಸಿನಿಮಾ ಕ್ಲೈಮ್ಯಾಕ್ಸ್ ಹಂತದಲ್ಲಿ, ನಾಯಕಿ ಸಾಯುವ ದೃಶ್ಯವಿದ್ದು, ಆ ದೃಶ್ಯದಲ್ಲಿ ಇಂಟಿಮೆಟ್ ಆದ ಲಿಪ್ ಲಾಕ್ ದೃಶ್ಯವಿದೆ, ತೆಲುಗಿನಲ್ಲಿ ಚಿರಂಜೀವಿ ಅವರೊಡನೆ ಆ ದೃಶ್ಯದಲ್ಲಿ ನಟಿಸಲು ಒಪ್ಪಿದ್ದ ರಾಧಿಕಾ ಅವರು ಕನ್ನಡದಲ್ಲಿ ಒಪ್ಪಲಿಲ್ಲ. ಅದೇ ಸಿನಿಮಾಗೆ ಸಾಯಿಪ್ರಕಾಶ್ ಅವರು ಸಹಾಯಕ ನಿರ್ದೇಶಕರಾಗಿದ್ದ ಕಾರಣ, ಅವರು ಈ ಘಟನೆಯ ಬಗ್ಗೆ ತಿಳಿಸಿದ್ದಾರೆ. ಶಾಟ್ ರೆಡಿ ಆದಾಗ ರಾಧಿಕಾ ಅವರು ಬರೋದಿಲ್ಲ ಎಂದು ಹೇಳಿದರಂತೆ. ಆಗ ಅವರನ್ನು ಕರೆದುಕೊಂಡು ಬರಲು, ಸಾಯಿಪ್ರಕಾಶ್ ಅವರಿಗೆ ಹೇಳಿದರಂತೆ ಡೈರೆಕ್ಟರ್.
ತೆಲುಗಿನ ಹಾಗೆ ಇಲ್ಲಿಯೂ ದೃಶ್ಯವಿದೆ, ನೀವು ನಟಿಸಬೇಕು ಎಂದು ಹೇಳಿದರೆ, ಚಿರಂಜೀವಿ ನನ್ನ ಸ್ನೇಹಿತರು, ಅದಕ್ಕೆ ನಟಿಸಿದೆ ಹಾಗೆ ಹೀಗೆ ಎಂದು ಕಾರಣಗಳನ್ನು ಕೊಡುವುದಕ್ಕೆ ಶುರು ಮಾಡಿ, ಆ ದೃಶ್ಯ ಬದಲಾಯಿಸಿ ಎಂದು ನಿರ್ದೇಶಕರನ್ನು ಸಹ ಕೇಳಿದರಂತೆ. ಆದರೆ ದೃಶ್ಯ ಬದಲಾವಣೆ ಮಾಡದೇ, ಇಬ್ಬರು ಅಪ್ಪಿಕೊಂಡು ಮುತ್ತು ಕೊಡುವ ಹಾಗೆ ಶೂಟಿಂಗ್ ಮಾಡಿ, ಆ ದೃಶ್ಯವನ್ನು ಚೀಟಿಂಗ್ ಮಾಡಲಾಯಿತಂತೆ. ಈ ಘಟನೆ ಬಗ್ಗೆ ಕೇಳಿ, ಫ್ಯಾನ್ಸ್ ಆಶ್ಚರ್ಯಪಟ್ಟಿದ್ದಾರೆ.