ಒಂದು ಜಮಾನದಲ್ಲಿ ಟಾಲಿವುಡ್ ಅಂಗಳದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದ ಈ ನಟಿ ಇಂದು ಐರನ್ ಲೆಗ್ ಎಂದು ಗುರುತಿಸಿಕೊಂಡಿದ್ದಾರೆ.ಈ ನಟಿ ಟಾಲಿವುಡ್ ನಲ್ಲಿ ಪರಿಚಯಿಸಿಕೊಂಡು ಸಾಕಷ್ಟು ವರ್ಷಗಳು ಕಳೆದಿವೆ.ತನ್ನ ಮೊದಲ ಸಿನಿಮಾದಲ್ಲಿಯೇ ಈ ನಟಿ ಬರೋಬ್ಬರಿ ದೊಡ್ಡ ಅಂಕಿಯ ಅಭಿಮನಿಗಳನ್ನು ಸಂಪಾದನೆ ಮಾಡಿಕೊಂಡರು.ಹೀಗೆ ತಮ್ಮ ಮೊದಲನೆಯ ಸಿನಿಮಾ ನಂತರ ಈ ನಟಿಯ ಸೌಂದರ್ಯ ಹೆಚ್ಚುತ್ತಿದ್ದಂತೆ ಈ ನಟಿಯ ಅವಕಾಶ ಹಾಗೂ ಬೇಡಿಕೆಯೂ ಹೆಚ್ಚುತ್ತಾ ಹೋಗುತ್ತದೆ. ಹೀಗೆ ತಾನು ಮುತ್ತಿದ್ದೆಲ್ಲಾ ಚಿನ್ನಾ ಮಾಡಿಕೊಳ್ಳುತ್ತಾ ಟಾಲಿವುಡ್ ಅಲ್ಲದೆ ಕಾಲಿವುಡ್ ಹಾಗೂ ಬಾಲಿವುಡ್ ನನ್ನು ಕೂಡ ಪ್ರವೇಶ ಪಡೆದುಕೊಳ್ಳುತ್ತಾರೆ.

ಆ ನಂತರ ಈ ನಟಿಯ ಬೆಳವಣಿಗೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ.ಒಂದು ಕಾಲ ಇರುತ್ತದೆ ಈ ನಟಿಯ ಸಿನಿಮಾ ಟಾಲಿವುಡ್ ಅಂಗಳದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದ್ದ ಸಿನಿಮಾಗಳೆಲ್ಲವು ಇಂದು ಚಿತ್ರ ಮಂದಿರಗಳಲ್ಲಿ ನಿಲುವು ಪಡೆದುಕೊಳ್ಳುವುದೇ ಕಷ್ಟವಾಗಿದೆ.ಅಷ್ಟೇ ಅಲ್ಲದೇ ತನ್ನ ಸಹ ಕಲವಿಧರ ಸಿನಿ ಜೀವನವನ್ನು ಹಾಳುಮಾಡುತ್ತಿದ್ದಾರೆಂದು ಈ ನಟಿಯನ್ನು ಐರನ್ ಲೆಗ್ ಎಂಬ ಬಿರುದನ್ನು ಕೂಡ ಪಡೆದುಕೊಂಡಿದ್ದಾರೆ.ಕಳೆದ ಎರಡು ವರ್ಷಗಳಿಂದ ಈ ನಟಿಯ ಸಿನಿಮಾ ಜಯ ಗಳಿಸುತ್ತಿಲ್ಲ. ಇನ್ನು ಆ ಕಥೆ ಹಾಗೂ ಪ್ರಖ್ಯಾತಿ ಇರುವ ಕಲವಿಧರು ಕೂಡ ಈ ಸಿನಿಮಾದಲ್ಲಿ ಇದ್ದರು ಆ ಸಿನಿಮಾ ಗೆಲ್ಲುತ್ತಿಲ್ಲ ಎಂಬುದು ಎಲ್ಲರಲ್ಲೂ ಗೊಂದಲ ಕಾಡುತ್ತಿದೆ.
ಇನ್ನು ಪೂಜಾ ಹೆಗ್ಡೆ ನಟನೆಯ ಇದೇ ವರ್ಷದಲ್ಲಿ ಬಿಡುಗಡೆ ಪಡೆದ ಪ್ರಭಾಸ್ ಅವರ ‘ರಾಧೆಶ್ಯಾಮ್’, ತಳಪತಿ ವಿಜಯ್ ಅವರ ‘ಬೀಸ್ಟ್’ ಹಾಗೂ ‘ಆಚಾರ್ಯ’ ಸಿನಿಮಾ ಬಾಕ್ಸಾಫೀಸ್ನಲ್ಲಿ ಎಡವಿ ಬಿದ್ದಿದೆ.ಇನ್ನು ವಿಜಯ್ ದೇವರಕೊಂಡ ನಟನೆಯ ‘ಜನ ಗಣ ಮನ’ ಚಿತ್ರಕ್ಕೆ ಪೂಜಾ ನಾಯಕಿಯಾಗಿ ಆಯ್ಕೆ ಆಗಿದ್ದರು. ಆದರೆ ಈ ಸಿನಿಮಾ ಸಿದ್ಧವಾಗೋದೇ ಅನುಮಾನ ಎನ್ನುವ ಮಾತು ಕೇಳಿಬಂದಿದೆ. ಇನ್ನು ಇದರ ಬೆನ್ನಲ್ಲೇ “ಪವನ್ ಕಲ್ಯಾಣ್” ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಚಿತ್ರಕ್ಕೂ ನಾಯಕಿ ಆಗಿ ಆಯ್ಕೆ ಆಗಿದ್ದರು.ಆದ್ರೆ ಇದೀಗ ಚಿತ್ರದಿಂದಲೂ ಪೂಜಾ ಹೊರಬಂದಿದ್ದಾರೆ ಎನ್ನಲಾಗ್ತಿದೆ.
ಇತ್ತೀಚೆಗೆ ಕಳೆದ ಎರಡು ದಿನಗಳ ಹಿಂದೆ ಹೈದರಾಬಾದ್ನಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಶ್ರೀಶೈಕೆಯ ಚಿತ್ರಕ್ಕೆ ಮುಹೂರ್ತ ನೆರವೇರಿದೇ. ಹರೀಶ್ ಶಂಕರ್ ಈ ಚಿತ್ರಕ್ಕೆ ನಿರ್ದೇಶನದ ಕ್ಯಾಪ್ ಧರಿಸಿದ್ದಾರೆ. ರಾಮಾನಾಯ್ಡು ಸ್ಟುಡಿಯೋದಲ್ಲಿ ದುಭಾರಿ ಸೆಟ್ ಹಾಕಿ ಚಿತ್ರೀಕರಣ ಆರಂಭ ಮಾಡಲಾಗಿದೆ. ಇನ್ನು ಈ ಚಿತ್ರದ ಚಿತ್ರೀಕರಣ ಸದ್ಯದಲ್ಲಿ 1 ವಾರ ಮುಂದುವರೆಯಲಿದೆ ಎನ್ನಲಾಗುತ್ತಿದೆ. ಆದರೆ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎನ್ನಲಾಗುತ್ತಿದೆ. ಬಹಳ ಹಿಂದೆಯೇ ‘ಭವದೀಯುಡು ಭಗತ್ ಸಿಂಗ್’ ಹೆಸರಿನಲ್ಲಿ ಈ ಸಿನಿಮಾ ಘೋಷಣೆ ಆಗಿತ್ತು. ಆದರೆ ಕಾರಣಾಂತರಗಳಿಂದ ಸೆಟ್ಟೇರುವುದು ಸಮಯ ತೆಗೆದುಕೊಳ್ಳುತ್ತದೆ ಎನ್ನಲಾಗುತ್ತಿದೆ.
ಸಿನಿಮಾ ಘೋಷಣೆ ಆದ ಸಮಯದಲ್ಲೇ ಪೂಜಾ ಹೆಗ್ಡೆ ನಾಯಕಿ ಎನ್ನುವ ಮಾತುಗಳು ಹೊರಬಿದಿದ್ದಿತ್ತು. ಆದರೆ ಇದೀಗ ಈ ಸಿನಿಮಾ ಸೆಟ್ಟೇರಿದ ಮೇಲೆ ಆಕೆ ಚಿತ್ರದಲ್ಲಿ ಭಾಗಿಯಾಗುವುದಿಲ್ಲ ಎನ್ನಲಾಗ್ತಿದೆ. ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇದ್ದು ಸಮಯದ ಅಭಾವ ಹೆಚ್ಚಾಗಿ ಇರುವುದರಿಂದ ಪೂಜಾ ಈ ಚಿತ್ರದಲ್ಲಿ ನಟಿಸೋಕೆ ಸಾಧ್ಯವಾಗುತ್ತಿಲ್ಲವಂತೆ ಎಂಬ ಮಾತುಗಳು ಕೇಕಿ ಬರುತ್ತಿವೆ. ಸದ್ಯ ಈಕೆ ನಟಿಸಿರುವ ‘ಸರ್ಕಸ್’ ಸಿನಿಮಾ ರಿಲೀಸ್ಗೆ ಸಜ್ಜಾಗಿದೆ. “ಸಲ್ಮಾನ್ ಖಾನ್” ಜೋಡಿಯಾಗಿ ‘ಕಿಸಿ ಕಾ ಭಾಯ್ ಕಿಸಿ ಕಾ ಜಾನ್’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.