ನಟಿ “ಪವಿತ್ರಾ ಲೋಕೇಶ್” ಬಹಳ ತಿಂಗಳುಗಳಿಂದ ಸುದ್ದಿಯಲ್ಲಿ ಇರುವ ನಟಿ.ಈ ನಟಿ ತಮ್ಮ ಸಹ ಕಲಾವಿದನಾಗಿರುವ “ನರೇಶ್” ಎಂಬುವವರೊಟ್ಟಿಗೆ ಲಿವಿಂಗ್ ರಿಲೇಶನ್ ನಲ್ಲಿ ಇದ್ದಾರೆ. ಈ ಕಾರಣದಿಂದಲೇ ಕೆಲವು ತಿಂಗಳು ಗಳಿಂದ ಸಾಕಷ್ಟು ಅವಮಾನ ಹಾಗೂ ವಿರೋಧ ಗಳಿಗೆ ಸಿಲುಕಿಕೊಂಡಿದ್ದರು.ಹೀಗಿದ್ದರೂ ಈ ಜೋಡಿ ಇದರ ಸಲುವಾಗಿ ಯಾವ ಪ್ರತಿಕ್ರಿಯೆ ನೀಡಿರಲಿಲ್ಲ. ಪವಿತ್ರಾ ಅವರು ಒಂದು ಮದುವೆಯಾಗಿ ಅವರೊಟ್ಟಿಗೆ ಹೊಂದಾಣಿಕೆ ಮಾಡಿಕೊಲ್ಲಾಗದೆ ದೊರರಾಗಿದ್ದರು.ಆ ಸಂಧರ್ಭದಲ್ಲಿ “ಸುಚೇಂದ್ರ ಪ್ರಸಾದ್” ಅವರ ಭೇಟಿಯಾಗಿ ಹತ್ತು ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಇವರಿಬ್ಬರ ಪ್ರೀತಿಯ ಗುರುತಾಗಿ ಎರಡು ಮಕ್ಳಳು ಕೂಡ ಇದ್ದಾರೆ. ಆದರೆ ಇದೀಗ ಈ ಜೋಡಿ ವೈಮನಸ್ಸಿನಿಂದ ದೂರಾಗಿ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ನರೇಶ್ ಹಾಗೂ ಪವಿತ್ರಾ ಅವರ ಕಾಂಬಿನೇಶನ್ ಟಾಲಿವುಡ್ ನಲ್ಲಿ ಬಹಳ ಹಿಟ್ ಪಡೆದಿತ್ತು.

ಈ ಜೋಡಿ ಪೋಷಕ ನಟರಾಗಿ ಕಾಣಿಸಿಕೊಂಡ ಎಲ್ಲಾ ಸಿನಿಮಾಗಳು ದೊಡ್ಡ ಮಟ್ಟದ ಯಶಸ್ವಿ ಪಡೆಯುತ್ತದೆ ಎಂಬ ಮಾತುಗಳು ಕೂಡ ಇವೆ.ಹಾಗಾಗಿ ಇವರಿಬ್ಬರ ಒಡನಾಟ ಹೆಚ್ಚಾಗಿದ್ದ ಕಾರಣ ಈಗ ಅದು ಲಿವಿಂಗ್ ರಿಲೇಶನ್ ಶಿಪ್ ರೂಪ ಪಡೆದುಕೊಂಡಿದೆ.ನರೇಶ್ ಕೂಡ ಸಮಾನ್ಯದವರಲ್ಲ. ಈಗಾಗಲೇ ಮೂರು ಮದುವೆಯಾಗಿರುವ ಭೂಪ. ಇವರಿಬ್ಬರ ರಿಲೇಶನ್ ಬಗ್ಗೆ ಹೆಚ್ಚು ಸುದ್ದಿಯಾಗುವ ಸಂಧರ್ಭದಲ್ಲಿ ನಾವಿಬ್ಬರು ಒಳ್ಳೆಯ ಸ್ನೇಹಿತರು ಎನ್ನುತ್ತಿದ್ದರು.ಆದರೆ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಪ್ರತ್ಯಕ್ಷವಾಗಿ ಸಿಕ್ಕಿ ಬಿದ್ದಗಿನಿಂದ ಇವ್ರಿಬ್ಬರ ವರ್ತನೆ ಬದಲಾಗಿದೆ.
ಇದೀಗ ಪವಿತ್ರಾ ಅವರು ಮಾನಹಾನಿ ಪ್ರಕರಣ ದಾಖಲಾಗಿದ್ದು ಈ ಪ್ರಕರಣಗಳಲ್ಲಿ ಪವಿತ್ರಾ ಅವರು ನಮೂನೆ ಮಾಡಿರುವ ಹೆಸರುಗಳು ಎಲ್ಲರ ಉಬ್ಬೇರಿಸುವಂತೆ ಮಾಡಿದೆ. ಈ ಹಿಂದೆಯೇ ಪವಿತ್ರಾ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.ಇದೀಗ ಸೈಬರ್ ಕ್ರೈಮ್ ಅವರ ಮೊರೆ ಹೋಗಿ ಮಾನ ಹಾನಿ ಪ್ರಕರಣವನ್ನು ದಾಖಲು ಮಾಡಿದ್ದಾರೆ.ಇನ್ನು ಈ ದೂರಿನಲ್ಲಿ ಸಾಕಷ್ಟು ಯೂಟ್ಯೂಬ್ ಚಾನಲ್ ಜೊತೆಗೆ ನರೇಶ್ ಅವರ ಮೂವರು ಪತ್ನಿಯರ ಹೆಸರು ಕೂಡ ಸೇರಿಸಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಮುಂದೆ ಈ ಪ್ರಕರಣ ಯಾವ ದಾರಿ ಹಿಡಿಯಬಹುದು ಎಂದು ಕಾದು ನೋಡಬೇಕಿದೆ.