ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಹಾಗೂ ಧಾರಾವಾಹಿಗಳ ಮೂಲಕ ಗುರುತಿಸಿಕೊಂಡಿರುವ ನಟಿ ಮಾಳವಿಕಾ ಅವಿನಾಶ್ ಅವರ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಮಾಳವಿಕಾ ಅವರು ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡದ ನಟಿ ಆಗಿದ್ದಾರೆ. ಮಾಳವಿಕಾ ಅವಿನಾಶ್ ಅವರನ್ನು ಹೊರಗಿನಿಂದ ನೋಡಿದರೆ, ಗಟ್ಟಿಗಿತ್ತಿ, ಜೋರು ಸ್ವಭಾವದವರು, ಯಾರಿಗು ಕೇರ್ ಮಾಡದ ಹೆಣ್ಣು ಎಂದು ಅನ್ನಿಸುವುದು ನಿಜ. ಆದರೆ ನಿಜ ಜೀವನದಲ್ಲಿ ಇವರು ಇರುವುದೇ ಬೇರೆ ರೀತಿ. ಆ ಧೈರ್ಯ, ನೇರನುಡಿಯ ಸ್ವಭಾವ ಅದೆಲ್ಲವೂ ಕೂಡ ಹಾಗೆ ಇದೆ.. ಆದರೆ ಮಗನ ವಿಚಾರದಲ್ಲಿ ಅವರು ಇರುವುದೇ ಬೇರೆ ರೀತಿ. ಆ ಒಂದು ವಿಷಯಕ್ಕೆ ಮಾಳವಿಕಾ ಅವರು ಬಹಳ ಭಾವುಕರಾಹಿತ್ತಾರೆ. ಇವರ ಮಗ ಸಾ*ವನ್ನೇ ಗೆದ್ದು ಬಂದಿದ್ದಾರೆ..

ಮಾಳವಿಕಾ ಅವರು ನಟ ಅವಿನಾಶ್ ಅವರೊಡನೆ ಮದುವೆಯಾದರು. ಈ ಜೋಡಿ ಇತ್ತೀಚೆಗೆ 24 ವರ್ಷಗಳ ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಇವರು ಈಗಿನ ಪೀಳಿಗೆಗೆ ಆದರ್ಶ ದಂಪತಿಗಳು ಎಂದು ಹೇಳಿದರು ಸಹ ತಪ್ಪಲ್ಲ. ಬಹಳ ಅನ್ಯೋನ್ಯವಾಗಿ ಚೆನ್ನಾಗಿ ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ. ಇಬ್ಬರು ಚಿತ್ರರಂಗದಲ್ಲಿ ಹೆಸರು ಮಾಡಿರುವ, ಒಳ್ಳೆಯ ಜನಪ್ರಿಯತೆ ಹೊಂದಿರುವ, ಅದ್ಭುತ ಪಾತ್ರಗಳಲ್ಲಿ ನಟಿಸಿರುವ ಕಲಾವಿದರು. ಆದರೆ ವೈಯಕ್ತಿಕ ಜೀವನದಲ್ಲಿ, ಅದರಲ್ಲೂ ಮಗನ ವಿಚಾರದಲ್ಲಿ ಇವರಿಗೆ ನೋವೇ ತುಂಬಿದೆ. ಮಗನ ಬಗ್ಗೆ ಮಾತನಾಡುವಾಗ, ಭಾವುಕರಾಗುತ್ತಾರೆ ಈ ಜೋಡಿ. ವಿಶೇಷ ಮಕ್ಕಳನ್ನು ಹೊಂದಿರುವ ತಂದೆ ತಾಯಿಗೆ ಮಾತ್ರ ಇವರ ನೋವು ಅರ್ಥವಾಗುತ್ತದೆ.

ಮಾಳವಿಕಾ ಹಾಗೂ ಅವಿನಾಶ್ ದಂಪತಿಗೆ ಇರುವುದು ಒಬ್ಬನೇ ಮಗ. ಇವರ ಮಗನ ಹೆಸರು ಗಾಲವ್. ಮಗನನ್ನು ಇಬ್ಬರು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಇವರ ಮಗ ಸ್ಪೆಷಲ್ ಕಿಡ್, ಮಗನಿಗೆ ಯಾವಾಗ ಏನಾಗುತ್ತದೆ ಎಂದು ಹೇಳೋದಕ್ಕೆ ಆಗೋದಿಲ್ಲ. ಹಾಗಿದ್ದರೂ ಈ ಜೋಡಿ, ದೇವರ ಮೇಲೆ ಭರವಸೆ ಇಟ್ಟು ಮಗನನ್ನು ಪ್ರೀತಿಯಿಂದ ನೋಡಿಕೊಳುತ್ತಿದ್ದಾರೆ. ಮಗನ ಬಗ್ಗೆ ಇತ್ತೀಚೆಗೆ ಮಾತನಾಡಿದ ಮಾಳವಿಕಾ ಅವರು ಭಾವುಕರಾಗಿದ್ದಾರೆ. ಅವರು ಮಗನ ಬಗ್ಗೆ ಹೇಳಿದ್ದು ಏನು ಎಂದರೆ, ಗರ್ಭಿಣಿ ಆದಾಗ ಮಗುವಿಗೆ ಸಮಸ್ಯೆ ಇದೆ ಎಂದು ಗೊತ್ತಾಗಿರಲಿಲ್ಲವಂತೆ. 5 ತಿಂಗಳಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ, ಮಗುವಿಗೆ ಏನಾದರೂ ಸಮಸ್ಯೆ ಇದೆಯಾ ಎಂದು ಗೊತ್ತಾಗುತ್ತದೆ, ಆಗ ಮಗು ಬೇಕೋ ಬೇಡವೋ ಎಂದು ಕೂಡ ಆಯ್ಕೆ ಇರುತ್ತದೆ.

ಆದರೆ ನಮ್ಮ ಮಗುವಿಗೆ ಏನಾದರೂ ಸಮಸ್ಯೆ ಇದೆ ಎಂದು ಆಗ ಗೊತ್ತಾಗಲಿಲ್ಲ. 33-34 ವಾರಕ್ಕೆ ಅವನು ಹುಟ್ಟಿದ, ಮಗು 3-4 ಕೆಜಿ ಇದ್ದರೆ ನಾರ್ಮಲ್ ಆಗಿರುತ್ತದೆ. ಆದರೆ ನಮ್ಮ ಮಗು ಪ್ರೀ ಮೆಚ್ಯುರ್ ಬೇಬಿ 1.9ಕೆಜಿ ಇದ್ದ, ಮಗು ಹುಟ್ಟಿ 15 ದಿನ ಆಗಿದ್ದರೂ ನನಗೆ ಮಗುವನ್ನು ತೋರಿಸಿರಲಿಲ್ಲ. ಏನೋ ಸಮಸ್ಯೆ ಇದೆ ಎಂದು ಗೊತ್ತಾಗಿತ್ತು, ಆದರೆ ಏನಾಗಿದೆ ಎಂದು ತಿಳಿದಿರಲಿಲ್ಲ. 3 ರಿಂದ 4 ತಿಂಗಳು ಇದ್ದಾಗಲೇ, ಡಾಕ್ಟರ್ ನಿಮ್ಮ ಮಗು ಬದು*ಕುವುದಿಲ್ಲ ಎಂದುಬಿಟ್ಟಿದ್ದರು ಆದರೆ ಬದುಕಿಬಿಟ್ಟ. ಅವನಿಗೆ ತುಂಬಾ ಕಡಿಮೆ ಫೀಡ್ ಮಾಡಬೇಕಿತ್ತು, ಅದೆಲ್ಲವೂ ಅರ್ಥ ಅಗೋಕೆ 2 ರಿಂದ 3 ವರ್ಷ ಆಗೋಯ್ತು. ಅವನನ್ನ ನೋಡಿಕೊಳ್ಳೋದು ಹೇಗೆ, ಅವನಿಗೆ ಆಗಿರೋದು ಎಂದು ಗೊತ್ತಾಗುವ ವೇಳೆಗೆ 10 ವರ್ಷ ಆಗಿ ಹೋಗಿತ್ತು.

ಅವನಿಗೆ ಮೂ*ರ್ಛೆ ರೋಗ ಬರುವುದಕ್ಕೆ ಶುರುವಾಯ್ತು, ತಿಂಗಳಿಗೆ 1 ಅಥವಾ 2 ಸಾರಿ ಬರುತ್ತಿತ್ತು, ನಮಗೆ ಇದೆಲ್ಲವೂ ಹೊಸದು. ಏನು ಮಾಡಬೇಕು ಅನ್ನೋದೇ ಗೊತ್ತಾಗುತ್ತಾ ಇರಲಿಲ್ಲ. ನೋಡೋದಕ್ಕೂ ಸುಂದರವಾಗಿದ್ದ ಅನ್ನೋ ಕಾರಣಕ್ಕೆ ನ್ಯೂರಾಲಜಿಸ್ಟ್ ಗೆ ಕೂಡ ಗೊತ್ತಾಗೋಕೆ ಕಷ್ಟ ಆಗಿ ಹೋಯಿತು..ಒಬ್ಬರು ಡಾಕ್ಟರ್ ನಿಮ್ಮ ಮಗ ಇಡೀ ಜೀವನದಲ್ಲಿ ಮಾತಾಡೋಕೆ ಆಗೋದಿಲ್ಲ, ಒಂದು ಸಮಯದಲ್ಲಿ ನಡೆಯಬಹುದು. ಆಯಸ್ಸು ಚೆನ್ನಾಗಿದೆ ಅಂತ ಕೂಡ ಹೇಳೋಕೆ ಆಗೋದಿಲ್ಲ ಎಂದಿದ್ದರು. ನಮ್ಮ ಮಗನಿಗೆ ಎರಡನೇ ಸಾರಿ ನಿಮೋನಿಯಾ ಆದಾಗ, ಒಂದು ಲಂಗ್ ಕೆಲಸ ಮಾಡೋದು ನಿಂತು ಹೋಗಿತ್ತು, ಮತ್ತೊಂದು ಲಂಗ್ ಇನ್ಫೆಕ್ಟ್ ಆಗಿತ್ತು. ಇದೆಲ್ಲಾ ಆದ ನಂತರ ನಮ್ಮ ಮಗನ ಆರೋಗ್ಯವನ್ನ ಸರಿಮಾಡಬಹುದು ಎನ್ನುವ ಭರವಸೆ ಕೂಡ ಕಳಚಿಕೊಂಡಿತ್ತು.
ನಮ್ಮ ಮಗ ಎಲ್ಲಾ ಮಕ್ಕಳ ಹಾಗಲ್ಲ, ಅವನು ನಾರ್ಮಲ್ ಅಗೋಕೆ ಆಗೋದು ಇಲ್ಲ ಎಂದು ಡಾಕ್ಟರ್ ಗಳು ಹೇಳಿಬಿಟ್ಟಿದ್ದಾರೆ. ನಮಗೆ ಆಗಾಗ ಈ ವಿಷಯದ ಬಗ್ಗೆ ನೋವಾಗುತ್ತದೆ, ಅಳು ಬರುತ್ತದೆ. ಮುಂದೆ ನಮ್ಮ ಗತಿ ಏನು ಅನ್ನಿಸುತ್ತದೆ. ನಾವು ದೊಡ್ಡವರಾದ ಮೇಲೆ, ವಯಸ್ಸಾದ ನಮ್ಮ ತಂದೆ ತಾಯಿಯನ್ನ ನೋಡಿಕೊಳ್ಳುತ್ತಿದ್ದೇವೆ. ಮುಂದೆ ನಮ್ಮನ್ನ ನೋಡಿಕೊಳ್ಳೋರು ಯಾರು? ನಮ್ಮ ನಂತರ ಅವನನ್ನ ಯಾರು ನೋಡಿಕೊಳ್ಳುತ್ತಾರೆ? ಅನ್ನೋ ಪ್ರಶ್ನೆಗಳು ಬಂದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ಆದರೆ ದಿನಾ ಅಳುತ್ತಾ ಕೂರೋಕಾಗಲ್ಲ..” ಎಂದಿದ್ದಾರೆ ಮಾಳವಿಕಾ ಅವಿನಾಶ್. ಹೊರಗಡೆ ಅಷ್ಟು ಚೆನ್ನಾಗಿ ಮಾತನಾಡುವ ಅವರ ಮನಸ್ಸಿನಲ್ಲಿ ಇಷ್ಟೊಂದು ನೋ*ವಿದೆಯ ಅನ್ನಿಸುತ್ತದೆ. ಆದರೂ ಹೇಗೆ ನಗುನಗುತ್ತಾ ಇರುವುದು ಹೇಗೆ ಎಂದು ಕೂಡ ಅನ್ನಿಸುತ್ತದೆ..

ಮಾಳವಿಕಾ ಅವಿನಾಶ್ ಅವರು ಮಾತ್ರವಲ್ಲ, ಅವಿನಾಶ್ ಅವರು ಸಹ ಇದೇ ರೀತಿ. ಮಗನ ವಿಷಯ ಎಂದು ಬಂದರೆ, ಭಾವುಕರಾಗಿಬಿಡುತ್ತಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಅವಿನಾಶ್ ಅವರು ಅತಿಥಿಯಾಗಿ ಬಂದಿದ್ದಾಗ, ಮಗನ ಬಗ್ಗೆ ಮಾತನಾಡಿ ಭಾವುಕರಾಗಿದ್ದರು, ಕಣ್ಣೀರು ಹಾಕಿದ್ದರು. ಇವರಿಬ್ಬರ ಲೈಫ್ ನೋಡಿದರೆ ಒಂದು ಅನ್ನಿಸುತ್ತದೆ. ಸಾಮಾನ್ಯ ಜನರೇ ಆಗಿರಲಿ, ಸೆಲೆಬ್ರಿಟಿಗಳೇ ಆಗಿರಲಿ, ಅವರವರ ಜೀವನದಲ್ಲಿ ಅವರವರು ಅನೇಕ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಾ ಇರುತ್ತಾರೆ, ಅವರದ್ದೇ ಆದ ಯುದ್ಧ ಮಾಡುತ್ತಾ ಇರುತ್ತಾರೆ. ಅವರನ್ನು ಹೊರಗಿನಿಂದ ನೋಡಿ, ಜಡ್ಜ್ ಮಾಡಿಬಿಡಬಾರದು. ಅವರು ಬದುಕುತ್ತಿರವ ನಾವು ಅಂದುಕೊಳ್ಳದ ರೀತಿಯಲ್ಲೂ ಇರಬಹುದು. ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆಯದಾಗಬೇಕು ಅಷ್ಟೇ..