ಕನ್ನಡ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳು ಪ್ರಸಾರವಾಗುತ್ತಿದೆ. ಕೆಲವೊಮ್ಮೆ ಒಂದು ಧಾರಾವಾಹಿಯಲ್ಲಿ ನಟಿಸುವ ಕಲಾವಿದರು, ಅರ್ಧಕ್ಕೆ ಬಿಟ್ಟು ಹೋಗುವುದು, ಬೇರೆ ಧಾರಾವಾಹಿಯಲ್ಲಿ ನಟಿಸುವುದು ಇದೆಲ್ಲವೂ ಕಾಮನ್ ಆಗಿದೆ. ಆದರೆ ಧಾರಾವಾಹಿ ನೋಡುವ ವೀಕ್ಷಕರಿಗೆ ಇದು ಸ್ವಲ್ಪ ಇರಿಸು ಮುರಿಸು ತರುತ್ತದೆ. ಒಂದು ಪಾತ್ರವನ್ನು ಶುರುವಿನಿಂದ ನಟಿಸಿರುವ ಕಲಾವಿದರಿಗೆ ಜನರು ಕನೆಕ್ಟ್ ಆಗಿರುತ್ತಾರೆ. ಆದರೆ ಇದ್ದಕ್ಕಿದ್ದಂತೆ ಮಧ್ಯದಲ್ಲಿ ಪಾತ್ರ ಬದಲಾಗಿ ಇನ್ನೊಬ್ಬ ಕಲಾವಿದರು ಬಂದರೆ, ಜನರಿಗೆ ಆ ಕಲಾವಿದರಿಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಕೆಲವು ಸಾರಿ ಇದು ಚೆನ್ನಾಗಿ ಕ್ಲಿಕ್ ಆಗುತ್ತದೆ, ಆದರೆ ಇನ್ನಷ್ಟು ಸಾರಿ ಜನರು ಒಪ್ಪಿಕೊಳ್ಳುವುದೇ ಇಲ್ಲ. ಅದು ಧಾರಾವಾಹಿಯ ಜನಪ್ರಿಯತೆ ಮೇಲೆ ಪರಿಣಾಮ ಬೀರುತ್ತದೆ.

ಕೆಲವೊಮ್ಮೆ ಅದು ಸಣ್ಣ ಪಾತ್ರವೇ ಆಗಿದ್ದರು ಸಹ, ಜನರಿಗೆ ಆ ಬದಲಾವಣೆಯನ್ನು ಆಕ್ಸೆಪ್ಟ್ ಮಾಡಿಕೊಳ್ಳುವುದಕ್ಕೆ ಬಹಳ ಕಷ್ಟ ಅಂತೂ ಆಗುತ್ತದೆ. ಇದೀಗ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ವೀಕ್ಷಕರಿಗೆ ಅದೇ ರೀತಿ ಆಗಿದೆ. ಈ ಧಾರಾವಾಹಿಯಲ್ಲಿ ನಾಯಕ ಸುಬ್ಬು ಅಕ್ಕನ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಹರ್ಷಿತಾ ಅವರು ಇದೀಗ ಧಾರಾವಾಹಿ ಇಂದ ಹೊರಬಂದಿದ್ದಾರೆ. ನ್ಯಾಚುರಲ್ ಆಗಿ ಕಾಮಿಡಿ ಮಾಡುವ ಹರ್ಷಿತಾ ಅವರಿಗೆ ಒಳ್ಳೆಯ ಫ್ಯಾನ್ ಫಾಲೋಯಿಂಗ್ ಸಹ ಇದೆ. ಇದೀಗ ಇವರು ಧಾರಾವಾಹಿ ಇಂದ ಹೊರಗಡೆ ಬಂದಿರುವುದು ಅವರ ಫ್ಯಾನ್ಸ್ ಗೆ ಬೇಸರ ತಂದಿದೆ. ಹರ್ಷಿತಾ ಅವರು ಯಾಕೆ ಹೊರಬಂದಿದ್ದಾರೆ ಎಂದು ಕಾರಣ ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಲ್ಲಿ ಇದೆ.
ಇನ್ನು ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ ಹೇಳುವುದಾದರೆ, ಶ್ರಾವಣಿ ಅಪ್ಪನ ಪ್ರೀತಿಯನ್ನು ಬಯಸುತ್ತಿರುವ ಹುಡುಗಿ, ಅವಳ ಕುಟುಂಬದಲ್ಲಿ ಏನೇನೋ ಸಮಸ್ಯೆಗಳು ವೈಮನಸ್ಸುಗಳು ಉಂಟಾಗಿ, ಶ್ರಾವಣಿಗೆ ತಂದೆಯ ಜೊತೆಗೆ ಒಳ್ಳೆಯ ಬಾಂಧವ್ಯ ಬೆಳೆಸಿಕೊಳ್ಳಲು ಆಗುತ್ತಿಲ್ಲ. ಇತ್ತ ತಂದೆಯೂ ಶ್ರಾವಣಿಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಇನ್ನು ಶ್ರಾವಣಿಗೆ ಇತ್ತೀಚೆಗಷ್ಟೇ ಸುಬ್ಬು ಜೊತೆಗೆ ಮದುವೆಯಾಗಿದೆ. ಇವರಿಬ್ಬರ ಮದುವೆಯಾದ ನಂತರ ಸುಬ್ಬು ಮನೆಯಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಕೇಳಿಬರುತ್ತಲೇ ಇದೆ. ಅದೆಲ್ಲವನ್ನು ತಾನು ಸರಿ ಮಾಡುವುದಾಗಿ ಶ್ರಾವಣಿ ಪಣ ತೊಟ್ಟಿದ್ದಾಳೆ. ಅದೇ ರೀತಿ ತಾಳ್ಮೆ ಇಂದ ಒಂದೊಂದೇ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಬರುತ್ತಿದ್ದಾಳೆ.

ಇನ್ನು ಸುಬ್ಬು ಮೇಲೆ ಅವನ ಅಮ್ಮನಿಗೆ ಬೇಸರ ಇತ್ತು, ಮಗನ ಜೊತೆಗೆ ಸುಬ್ಬುವಿನ ಅಮ್ಮ ವಿಶಾಲಾಕ್ಷಿ ಮಾತನಾಡುತ್ತಲೇ ಇರಲಿಲ್ಲ. ಅಮ್ಮ ಮಗ ಒಂದಾಗಬೇಕು ಎಂದು ಪ್ಲಾನ್ ಮಾಡಿದ ಶ್ರಾವಣಿ, ಅಮ್ಮ ಮಗನನ್ನು ಕುಕ್ಕೆ ಸಬ್ರಹ್ಮಣ್ಯಕ್ಕೆ ಕಳಿಸಿದ್ದಾಳೆ. ಅಲ್ಲಿ ಅಮ್ಮ ಮಗ ಇಬ್ಬರೂ ಕೂಡ ಒಂದಾಗಿದ್ದಾರೆ. ಇದು ಶ್ರಾವಣಿಗೆ ಬಹಳ ಸಂತೋಷ ತಂದಿದೆ. ಸುಬ್ಬು ಅಮ್ಮ ಮಗನನ್ನು ಒಪ್ಪಿಕೊಂಡಿದ್ದಾಳೆ, ಆದರೆ ಯಾರನ್ನು ಮನೆಯ ಸೊಸೆ ಅಂತ ಒಪ್ಪಿಕೊಳ್ಳೋದಿಲ್ಲ ಎಂದು ಕೂಡ ಹೇಳುತ್ತಾಳೆ. ಇದರಿಂದ ಶ್ರಾವಣಿ ಮನಸ್ಸಿಗೆ ತುಂಬಾ ನೋವಾಗಿದೆ. ಆದರೂ ಮುಂದೆ ಏನಾಗುತ್ತದೆ ಆಗಲಿ, ಎಲ್ಲವೂ ಒಳ್ಳೆಯದೇ ಆಗುತ್ತದೆ. ಸುಬ್ಬು ತಾಯಿ ಒಂದಲ್ಲಾ ಒಂದು ದಿವಸ ತನ್ನನ್ನು ಒಪ್ಪಿಕೊಳ್ಳುತ್ತಾರೆ ಎಂದು ನಂಬಿಕೆಯಲ್ಲೇ ಶ್ರಾವಣಿ ಸುಮ್ಮನಾಗಿದ್ದಾಳೆ. ಇದರ ಜೊತೆಗೆ ಸಾಕಷ್ಟು ಟ್ವಿಸ್ಟ್ ಗಳು ಸಹ ಧಾರಾವಾಹಿಯಲ್ಲಿ ಬಂದಿದೆ..
ಇನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಮ್ಮ ಮಗ ಒಂದಾಗಿ ಬಂದಿದ್ದಾರೆ. ಈ ಸಂಚಿಕೆಯನ್ನು ವೀಕ್ಷಕರು ಸಹ ಬಹಳ ಇಷ್ಟಪಟ್ಟರು. ಆದರೆ ಈ ಎಪಿಸೋಡ್ ಗಳು ಮುಗಿದು, ಮನೆಗೆ ಬಂದ ಸಂಚಿಕೆಯಲ್ಲಿ ಸುಬ್ಬು ಅಕ್ಕನ ಪಾತ್ರ ಬದಲಾಗಿರುವುದು ತಿಳಿದುಬಂದಿದೆ. ಹರ್ಷಿತಾ ಅವರು ಈ ಪಾತ್ರದಲ್ಲಿ ನಟಿಸುತ್ತಿದ್ದರು. ಆದರೆ ಈಗ ಇವರ ಬದಲಾಗಿ ನನ್ನಮ್ಮ ಸೂಪರ್ ಸ್ಟಾರ್ ಶೋ ಇಂದ ಜನಪ್ರಿಯತೆ ಪಡೆದು, ಪಂಚರಂಗಿ ಪೋಮ್ ಪೊಮ್ ಎನ್ನುವ ಧಾರಾವಾಹಿಯಲ್ಲಿ ನಟಿಸಿದ್ದ ಶಿಲ್ಪಾ ಅವರು ಶ್ರಾವಣಿ ಸುಬ್ರಹ್ಮಣ್ಯ ಧಾರವಾಹಿಯಲ್ಲಿ ಸುಬ್ಬುವಿನ ಅಕ್ಕನ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಇದನ್ನು ನೋಡಿ ಹರ್ಷಿತಾ ಅವರ ಫ್ಯಾನ್ಸ್ ಗೆ ಬೇಜಾರಾಗಿದೆ. ಅಷ್ಟಕ್ಕೂ ಆಗಿರುವುದೇನು ಎಂದು ನೋಡುವುದಾದರೆ, ಈ ಹಿಂದೆ ಕೂಡ ಇಂಥ ಘಟನೆ ನಡೆದಿದೆ ಎನ್ನುವುದು ಗೊತ್ತಾಗುತ್ತದೆ..

ನಟಿ ಹರ್ಷಿತಾ ಅವರು ಫೇಮಸ್ ಆಗಿದ್ದು ಕಲರ್ಸ್ ಕನ್ನಡ ವಾಹಿನಿಯ ಮಜಾ ಭಾರತ ಕಾರ್ಯಕ್ರಮದಿಂದ. ನಂತರ ಅದೇ ವಾಹಿನಿಯಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಗಂಗಕ್ಕ ಪಾತ್ರದಲ್ಲಿ ನಟಿಸುತ್ತಿದ್ದರು. ಈ ಪಾತ್ರ ಜನರಿಗೆ ಸಖತ್ ಇಷ್ಟವಾಗಿತ್ತು, ಗಂಗಾ ಪಾತ್ರಕ್ಕೆ ಇವರನ್ನು ಬಿಟ್ಟು ಇನ್ಯಾರು ಸರಿ ಹೋಗುವುದಿಲ್ಲ ಎನ್ನುವಷ್ಟು ಇಷ್ಟವಾಗಿತ್ತು. ಆದರೆ, ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ನಟಿಸುವಾಗಲೇ ಇವರು ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಕೂಡ ನಟಿಸುತ್ತಿದ್ದರು, ಇದರಿಂದ ಕ್ಲಾಶ್ ಆಗಿ ಲಕ್ಷ್ಮೀ ಬಾರಮ್ಮ ಧಾರಾವಾಹಿ ಇಂದ ಹೊರಗಡೆ ಬರಬೇಕಾಯಿತು. ಜಗಳ ಮಾಡಿಕೊಂಡು ಹೊರಗಡೆ ಬಂದಿದ್ದಾರೆ ಎನ್ನಲಾಗಿತ್ತು, ಆದರೆ ನಡೆದಿರುವುದು ಆ ರೀತಿ ಅಲ್ಲ ಎಂದು ಖುದ್ದಾಗಿ ಹರ್ಷಿತಾ ಅವರೇ ಇನ್ಸ್ಟಾಗ್ರಾಮ್ ಲೈವ್ ಮೂಲಕ ತಿಳಿಸಿದರು.
ಲಕ್ಷ್ಮೀ ಬಾರಮ್ಮ ಇಂದ ಹೊರಬಂದು ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಹಾಗೂ ರಾಧಿಕಾ ಧಾರವಾಹಿಯಲ್ಲಿ ಸಹ ನಟಿಸುತ್ತಿದ್ದರು. ಎರಡು ಧಾರಾವಾಹಿ ಕೂಡ ಚೆನ್ನಾಗಿ ಹೋಗುತ್ತಿತ್ತು, ಆದರೆ ಇದೀಗ ಇವರು ಇದ್ದಕ್ಕಿದ್ದಂತೆ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಇಂದ ಕೂಡ ಹೊರಗಡೆ ಬಂದಿದ್ದಾರೆ. ಇದಕ್ಕೆ ಕಾರಣ ಏನಿರಬಹುದು ಎಂದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಈ ಬಾರಿ ಕೂಡ ಹರ್ಷಿತಾ ಅವರು ಬಂದು ಸ್ಪಷ್ಟನೆ ನೀಡಿದೆ, ಅಸಲಿ ವಿಚಾರ ಏನು ಎಂದು ತಿಳಿಸಬೇಕಿದೆ. ಇನ್ನು ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಕೂಡ ಕರ್ನಾಟಕದ ಟಾಪ್ ಧಾರಾವಾಹಿಗಳ ಪಟ್ಟಿಗೆ ಸೇರುತ್ತದೆ. ಜನರಿಗೆ ಈ ಕಥೆ ಕೂಡ ಕನೆಕ್ಟ್ ಆಗುತ್ತಿದೆ. ಒಟ್ಟಿನಲ್ಲಿ ಜೀಕನ್ನಡ ವಾಹಿನಿ ಜನರಿಗೆ ಒಳ್ಳೆಯ ಕಾಂಟೆಂಟ್ ಕೊಡುತ್ತಿದೆ ಎಂದು ಹೇಳಬಹುದು.