ನಟಿ ಚಂದನ ಅನಂತಕೃಷ್ಣ ಅವರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಪ್ರಸ್ತುತ ಇವರು ಜೀಕನ್ನಡ ವಾಹಿನಿಯ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರ ಈಗ ಕುತೂಹಲಕಾರಿ ಹಂತವನ್ನು ತಲುಪಿದೆ. ಇತ್ತ ಚಂಡನಾ ಅವರು ವೈಯಕ್ತಿಕ ಜೀವನದಲ್ಲಿ ಕೂಡ ಮುಂದಿನ ಹಂತ ತಲುಪುವುದಕ್ಕೆ ಸಿದ್ಧವಾಗಿದ್ದಾರೆ. ಹೌದು, ಚಂದನಾ ಅನಂತಕೃಷ್ಣ ಅವರ ಮದುವೆ ಫಿಕ್ಸ್ ಆಗಿದ್ದು, ಕನ್ನಡದ ಖ್ಯಾತ ಹಿರಿಯ ನಟನ ಮಗನ ಜೊತೆಗೆ ಚಂದನ ಅವರ ಮದುವೆ ತಯಾರಿ ನಡೆದಿದೆ, ಇದೇ ತಿಂಗಳು ಮದುವೆ ಕೂಡ ಆಗಲಿದೆ. ಹಾಗಿದ್ದರೆ ಯಾರು ಗೊತ್ತಾ ಹುಡುಗ?

ನಟಿ ಚಂದನ ಅನಂತಕೃಷ್ಣ ಉತ್ತಮ ಅಭಿನಯದ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರು. ರಾಜ ರಾಣಿ, ಹೂಮಳೆ ಧಾರಾವಾಹಿ ಮೂಲಕ ಇವರು ಬಹಳ ಜನಪ್ರಿಯತೆ ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೇ ಬಿಗ್ ಬಾಸ್ ಶೋ ಗೆ ಕೂಡ ಸ್ಪರ್ಧಿಯಾಗಿ ಬಂದು, ಫಿನಾಲೆ ವರೆಗೂ ತಲುಪಿದ್ದರು ಚಂದನ. ಇವರು ನಟಿಯಾಗಿ ಗುರುತಿಸಿಕೊಂಡಿದ್ದಾರೆ, ಆದರೆ ಚಂದನಾ ಅವರು ಒಳ್ಳೆಯ ಹಾಡುಗಾರ್ತಿ ಹಾಗೂ ಉತ್ತಮವಾದ ಡ್ಯಾನ್ಸರ್ ಕೂಡ ಹೌದು. ಇತ್ತೀಚೆಗೆ ಇವರು ರಂಗಪ್ರವೇಶವನ್ನು ಕೂಡ ಮಾಡಿದರು. ಹೀಗೆ ಎಲ್ಲ ಕಡೆ ಗುರುತಿಸಿಕೊಂಡಿದ್ದಾರೆ ಚಂದನಾ..
ಇದೀಗ ಇವರು ಮದುವೆಗೆ ರೆಡಿ ಆಗಿದ್ದು, ಚಂದನಾ ಅವರ ಮದುವೆ ನವೆಂಬರ್ 28ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಇವರು ಮದುವೆ ಆಗುತ್ತಿರುವ ಹುಡುಗನ ಹೆಸರು ಪ್ರತ್ಯುಕ್ಷ್. ಇವರು ಮತ್ಯಾರು ಅಲ್ಲ, ಕನ್ನಡ ಚಿತ್ರರಂಗದಲ್ಲಿ ಹಿರಿಯನಟನಾಗಿ ಗುರುತಿಸಿಕೊಂಡಿದ್ದ ಉದಯ್ ಹತ್ತಿನಗದ್ದೆ ಅವರ ಮಗ, ಹೌದು ಉದಯ್ ಹಾಗೂ ಲಲಿತಾಂಜಲಿ ದಂಪತಿಗೆ ಮೂವರು ಮಕ್ಕಳಿದ್ದು, ಪ್ರತ್ಯುಕ್ಶ್ ಮೊದಲನೆಯ ಮಗ. ಇವರೊಡನೆ ಚಂದನ ಅವರ ಮದುವೆ ಫಿಕ್ಸ್ ಆಗಿದೆ. ಇಬ್ಬರ ಮದುವೆ ಇದೇ ತಿಂಗಳು ಕುಟುಂಬದವರ ಸಮ್ಮುಖದಲ್ಲಿ ನಡೆಯಲಿದೆ.

ಈ ಜೋಡಿಯದ್ದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಆಗಿದ್ದು, ಅಪ್ಪ ಅಮ್ಮ ನೋಡಿದ ಹುಡುಗನನ್ನು ಚಂದನ ಮದುವೆ ಆಗಲಿದ್ದಾರೆ. ಇನ್ನು ಉದಯ್ ಅವರ ಬಗ್ಗೆ ಹೇಳುವುದಾದರೆ, ಅನೇಕ ಸಿನಿಮಾಗಳಲ್ಲಿ ನಟಿಸಿದವರು, ಆರಂಭ, ಶುಭಮಿಲನ, ಅಗ್ನಿಪರ್ವ, ಉದ್ಭವ ಸೇರಿದಂತೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಉದಯ್ ನಟಿಸಿದ್ದಾರೆ. ಇವರು ಕನ್ನಡದ ನಟಿ ಲಲಿತಾಂಜಲಿ ಅವರೊಡನೆ ಮದುವೆಯಾದರು. ಲಲಿತಾಂಜಲಿ ಅವರು ಸಹ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಕಿನ್ನರಿ, ಒಲವಿನ ನಿಲ್ದಾಣ ಈ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಉದಯ್ ಅವರು 2022ರಲ್ಲಿ ರಾಜಾಜಿನಗರದಲ್ಲಿ ಇರುವ ತಮ್ಮ ಮನೆಯಲ್ಲಿ ವಿಧಿವಶರಾದರು. ಇದೀಗ ಇವರ ಮಗ ಪ್ರತ್ಯುಕ್ಶ್ ಅವರ ಮದುವೆ ನಟಿ ಚಂದನ ಅವರೊಡನೆ ಫಿಕ್ಸ್ ಆಗಿದೆ. ಇವರ ಕುಟುಂಬ ಚಿಕ್ಕಮಗಳೂರಿನವರು, ತಂದೆಯ ಹಾಗೆ ಪ್ರತ್ಯುಕ್ಶ್ ಅವರು ಕಾಫಿ ಎಸ್ಟೇಟ್ ಬ್ಯುಸಿನೆಸ್ ನೋಡಿಕೊಳ್ಳುತ್ತಿದ್ದಾರೆ. ಇವರಿಗೆ ಅಕ್ಕ ಇದ್ದರು, ಅವರು ವಿಶೇಷಚೇತನರಾಗಿದ್ದು, ತೀರಿಹೋಗಿದ್ದಾರೆ ಎನ್ನಲಾಗಿದೆ. ಇನ್ನು ಇವರ ತಮ್ಮ ಇನ್ನು ಓದುತ್ತಿದ್ದಾರೆ. ಇದೀಗ ಇವರು ಚಂದನಾ ಅವರೊಡನೆ ಮದುವೆಯಾಗಲಿದ್ದಾರೆ.