ಕ್ರೇಜಿಬಾಯ್, ರಾಜು ಕನ್ನಡ ಮೀಡಿಯಂ, ತಾಯಿಗೆ ತಕ್ಕ ಮಗ, ಮದಗಜ, ಅವತಾರ, ರೆಮೋ, ಅಮಿಗೋಸ್, ಓಟು ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ಆಶಿಕಾ ರಂಗನಾಥ್ ಇದೀಗ ತಮಿಳು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ.
ಹೌದು, ಸದ್ಯಕ್ಕೆ ತಮಿಳು ಸಿನಿಮಾ ರಂಗದಲ್ಲಿ ಎರಡು ಮೂವಿಗಳಲ್ಲಿ ಬ್ಯುಸಿಯಾಗಿರುವ ನಟಿ ಆಶಿಕಾ ರಂಗನಾಥ್ ಅವರ ಮಿಸ್ ಯೂ ಸಿನಿಮಾ ರಿಲೀಸ್ ಡೇಟ್ ಮುಂದೂಡಿಕೆಯಾಗಿದೆ. ಹೌದು, ನವೆಂಬರ್ 29ರಂದು ರಿಲೀಸ್ ಆಗಬೇಕಿದ್ದ ಅವರ ಸಿನಿಮಾ ಸದ್ಯಕ್ಕೆ ಕ್ಯಾನ್ಸಲ್ ಆಗಿತ್ತು. ಸೈಕ್ಲೋನ್ ಮಳೆ ಬರುವ ಸೂಚನೆಯಿದ್ದುದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ ನಟಿ ಆಶಿಕಾ ರಂಗನಾಥ್.

ತಮಿಳುನಾಡು ಅದರಲ್ಲೂ ಚೆನ್ನೈನಲ್ಲಿ ಆಗಾಗ ಸೈಕ್ಲೋನ್ ಮಳೆಯ ಭೀತಿ ಇರುವುದು ಸಾಮಾನ್ಯವಾಗಿ ಹೋಗಿದೆ. ಇದೇ ನವೆಂಬರ್ 29 ಹಾಗೂ 30 ರಂದು ಸೈಕ್ಲೋನ್ ಮಳೆ ಭೀತಿ ಇದ್ದುದರಿಂದ, ಚೆನ್ನೈ ಎಲ್ಲೆ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಈ ಕಾರಣದಿಂದಲೇ ಆಶಿಕಾ ರಂಗನಾಥ್ ಅವರ ಸಿನಿಮಾದ ರಿಲೀಸ್ ಡೇಟ್ ಮುಂದೂಡಿಕೆಯಾಗಿದೆ.
ಈ ಬಗ್ಗೆ ಮಾತನಾಡಿದ ನಟಿ
” ಸೈಕ್ಲೋನ್ ಮಳೆ ಭೀತಿ ಇರುವುದರಿಂದ ನಾವು ಈ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡುವುದು ಸರಿಯಾದ ನಿರ್ಧಾರವಲ್ಲ ಎಂದು ನಮ್ಮ ತಂಡ ನಿರ್ಧರಿಸಿತು. ಭೀಕರ ಮಳೆ ಇದ್ದರೆ ಖಂಡಿತ ಪ್ರೇಕ್ಷಕರಿಗೆ ಸಿನಿಮಾ ಥಿಯೇಟರ್ ವರೆಗೂ ಬರಲು ಸಾಧ್ಯವಾಗುವುದಿಲ್ಲ, ಇದರಿಂದ ಪ್ರೇಕ್ಷಕರಿಗಷ್ಟೇ ಅಲ್ಲದೆ ಎರಡು ವರ್ಷಗಳ ಕಾಲ ಈ ಸಿನಿಮಾಗೋಸ್ಕರ ಸತತವಾಗಿ ದುಡಿದಿರುವ ನಮ್ಮ ಸಿನಿಮಾ ತಂಡದವರಿಗೂ ನಷ್ಟವಾಗುತ್ತದೆ. ಹಾಗಾಗಿ ಇದು ಸರಿಯಾದ ನಿರ್ಧಾರ ಎಂದು ನಾವೆಲ್ಲರೂ ಒಪ್ಪಿಕೊಂಡೆವು. ಖಂಡಿತ ಸಿನಿಮಾ ರಿಲೀಸ್ ಡೇಟ್ ಮುಂದೆ ಹೋಗಿರುವುದರ ಬಗ್ಗೆ ನನಗೂ ಬೇಸರವಿದೆ ಆದರೆ ಆಗುವುದಿಲ್ಲ ಒಳ್ಳೆಯದಕ್ಕೆ ಎಂದು ನಾನು ನಂಬಿದ್ದೇನೆ. ಮುಂದೆ ಇನ್ನೂ ಸೂಕ್ತವಾದ ಡೇಟ್ ನಮಗೆ ಸಿಗಲಿದೆ ಎಂಬ ಆಸೆಯಲ್ಲಿದ್ದೇನೆ.” ಎಂದಿದ್ದಾರೆ.
ಅಂದ ಹಾಗೆ ಮಿಸ್ ಯು ಸಿನಿಮಾದಲ್ಲಿ ಆಶಿಕಾ ರಂಗನಾಥ್ ನಾಯಕ ನಟಿಯಾಗಿ ಕಾಣಿಸಿಕೊಂಡರೆ ನಟ ಸಿದ್ದಾರ್ಥ್ ನಾಯಕ ನಟನಾಗಿ ನಟಿಸಿದ್ದಾರೆ.

ಈ ಸಿನಿಮಾ ಅಷ್ಟೇ ಅಲ್ಲದೆ ಸರ್ದಾರ್ ಟು ಎಂಬ ಸಿನಿಮಾದ ಚಿತ್ರೀಕರಣ ಇದೀಗ ನಡೆಯುತ್ತಿದೆ. ನಟ ಕಾರ್ತಿಕ್ ಅವರು ನಾಯಕನಟನಾಗಿ ಹಾಗೂ ಆಶಿಕ ರಂಗನಾಥ್ ನಾಯಕ ನಟಿಯಾಗಿ ನಟಿಸುತ್ತಿರುವ ಸರ್ದಾರ್ ಟು ಸಿನಿಮಾದ ಚಿತ್ರೀಕರಣ ಮುಂದುವರಿಯುತ್ತಿದ್ದು ಸದ್ಯಕ್ಕೆ ಇರುವ ವಾತಾವರಣ ವೈಪರೀತ್ಯದಿಂದ ಸಿನಿಮಾ ಚಿತ್ರೀಕರಣಕ್ಕೆ ಒಂದಷ್ಟು ಕುತ್ತಾಗಬಹುದು ಎಂಬ ಮಾತುಗಳು ಕೇಳಿ ಬಂದಿದೆ.
ಸರ್ದಾರ್ ಟು ಸಿನಿಮಾದ ಚಿತ್ರೀಕರಣ ಮುಂದುವರಿಯುತ್ತಿದೆ. ಸದ್ಯಕ್ಕೆ ನಾವು ಇಂಡೋರ್ ಶೂಟಿಂಗ್ ನಡೆಸುತ್ತಿರುವುದರಿಂದ, ವಾತಾವರಣದಲ್ಲಿನ ವೈಪರಿಚಯ ಯಾವುದೇ ರೀತಿಯ ಸಮಸ್ಯೆ ತರುವುದಿಲ್ಲ ಎಂದು ನಂಬಿದ್ದೇವೆ. ಈ ಸಿನಿಮಾದಲ್ಲಿ ನಾನು ಸ್ಪೈ ಆಗಿ ಕಾಣಿಸಿಕೊಂಡಿದ್ದು, ನನ್ನದು ಒಂದಷ್ಟು ಫೈಟಿಂಗ್ ಸೀನ್ ಇರುವುದರಿಂದ ಸಿನಿಮಾ ಶೂಟಿಂಗ್ ನನಗೆ ಬಹಳ ಇಂಟರೆಸ್ಟಿಂಗ್ ಆಗಿ ಕಾಣಿಸುತ್ತಿದೆ. ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಆದಷ್ಟು ಬೇಗ ಇದ್ದರೆ ಚಿತ್ರೀಕರಣ ಮುಗಿಯುವುದರಲ್ಲಿದೆ ಎಂದು ಸರ್ದಾರ್ ಟು ಸಿನಿಮಾದ ಬಗ್ಗೆ ಮಾಹಿತಿ ನೀಡಿದ್ದಾರೆ ಆಶಿಕಾ ರಂಗನಾಥ್.



