ನಟ ವಿನೋದ್ ರಾಜ್ ಅವರಿಗೆ ಮದುವೆ ಆಗಿದೆ, ಅಷ್ಟು ದೊಡ್ಡ ಮಗ ಇದ್ದಾನೆ ಎನ್ನುವ ವಿಷಯ ಹೆಚ್ಚಿನ ಜನರಿಗೆ ಗೊತ್ತಿರಲೇ ಇಲ್ಲ. ಈ ವಿಚಾರ ಎಲ್ಲವೂ ಗೊತ್ತಾಗಿದ್ದು, ಲೀಲಾವತಿ ಅವರು ಇಹಲೋಕ ತ್ಯಜಿಸಿದ ನಂತರ. ಇದೀಗ ಲೀಲಾವತಿ ಅವರು ಇಹಲೋಕ ತ್ಯಜಿಸಿ ಒಂದು ವರ್ಷ ಆಗಿದೆ. ಈ ಸಮಯಕ್ಕೆ ವಿನೋದ್ ರಾಜ್ ಅವರು ಅಮ್ಮನಿಗಾಗಿ ದೇವಸ್ಥಾನವನ್ನು ಕಟ್ಟಿಸಿ, ಅದರ ಉದ್ಘಾಟನೆಯನ್ನು ಸಹ ಮಾಡಿದರು. ಈ ವೇಳೆ ಅವರ ಪತ್ನಿ ಮತ್ತು ಮಗ ಸಹ ಕಾಣಿಸಿಕೊಂಡರು. ಇನ್ನು ವಿನೋದ್ ರಾಜ್ ಅವರು ಇದೇ ಮೊದಲ ಸಾರಿ ಅವರ ಪತ್ನಿಯ ಬಗ್ಗೆ ಒಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ..

ಅವರು ಇಲ್ಲಿದ್ದು ಪತ್ನಿ ಮತ್ತು ಮಗ ತಮಿಳುನಾಡಿನಲ್ಲಿ ಇರೋದಕ್ಕೆ ಕಾರಣ ಏನು? ಪತ್ನಿ ಅವರಿಗಾಗಿ ಎಷ್ಟು ತ್ಯಾಗ ಮಾಡಿದ್ದಾರೆ, ಈ ಎಲ್ಲಾ ವಿಷಯಗಳ ಬಗ್ಗೆ ವಿನೋದ್ ರಾಜ್ ಮಾತನಾಡಿದ್ದಾರೆ. ವಿನೋದ್ ರಾಜ್ ಅವರ ಮದುವೆಯಾಗಿ 25 ವರ್ಷ ಕಳೆದಿದೆ, ಅವರ ಮಗ ಚೆನ್ನಾಗಿ ಓದಿಕೊಂಡು ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗನಿಗೆ ಒಳ್ಳೆಯ ಕೆಲಸ ಸಿಕ್ಕಿದೆ. ಇದರಿಂದ ವಿನೋದ್ ರಾಜ್ ಅವರಿಗು ಬಹಳ ಸಂತೋಷ ಇದೆ. ಇನ್ನು ವಿನೋದ್ ರಾಜ್ ಅವರ ಪತ್ನಿ ಬಹಳ ತ್ಯಾಗ ಮಾಡಿದ್ದಾರೆ. ಅವರು ಗಂಡನನ್ನು ಬೇರೆ ರಾಜ್ಯದಲ್ಲಿ ಇರೋದಕ್ಕೆ ಮುಖ್ಯವಾದ ಕಾರಣ ಇದೆ, ಅದನ್ನು ವಿನೋದ್ ರಾಜ್ ಅವರೇ ತಿಳಿಸಿದ್ದಾರೆ..
ವಿನೋದ್ ರಾಜ್ ಅವರು ಹೇಳುವ ಹಾಗೆ, ಅವರ ಮಗ ಇಲ್ಲಿ ಬೆಳೆದರೆ ಅಜ್ಜಿ ಬೆಳೆಸಿರುವ ಮಗ ಎಂದು ಹೇಳುತ್ತಾರೆ, ಅವನು ಅದೇ ರೀತಿ ಆಗುತ್ತಾನೆ ಎನ್ನುವ ಕಾರಣಕ್ಕೆ ಲೀಲಾವತಿ ಅವರು ಮಗುವನ್ನು ನೋಡಿಕೊಂಡು ನೀನು ಚೆನ್ನೈನಲ್ಲೇ ಇರು ಎಂದು ವಿನೋದ್ ರಾಜ್ ಅವರ ಪತ್ನಿಗೆ ಹೇಳಿದರಂತೆ. ಚೆನ್ನೈನಲ್ಲಿ ಇರುವ ಆಸ್ತಿಯನ್ನು ನೋಡಿಕೊಳ್ಳುವುದಕ್ಕೆ ಸಹ ಯಾರು ಇಲ್ಲ, ಹಾಗಾಗಿ ಪತ್ನಿ ಮತ್ತು ಮಗ ಅಲ್ಲಿದ್ದರೆ ಒಳ್ಳೆಯದು, ತಾಯಿ ಅವನನ್ನು ನೋಡಿಕೊಳ್ಳುತ್ತಾಳೆ, ಅವನು ಚೆನ್ನಾಗಿ ಓದಬೇಕು ಎಂದು ಆಸೆ ಇದ್ದ ಕಾರಣ ಲೀಲಾವತಿ ಅವರು ಮಗನನ್ನು ಚೆನ್ನಿನಲ್ಲೇ ಇರಲಿ ಎಂದು ಹೇಳಿದರಂತೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಅದೇ ರೀತಿ ವಿನೋದ್ ರಾಜ್ ಅವರ ಪತ್ನಿ ಮತ್ತು ಅಲ್ಲೇ ಇದ್ದು, ಚೆನ್ನಾಗಿ ಓದಿದ್ದಾರೆ. ಈಗ ಅಮ್ಮನನ್ನು ಮಗ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ. ಈ ಬಗ್ಗೆ ವಿನೋದ್ ರಾಜ್ ಅವರಿಗೂ ಹೆಮ್ಮೆ ಇದೆ, ತಾವು ಇಷ್ಟು ವರ್ಷಗಳ ಕಾಲ ತಮ್ಮ ತಾಯಿಯನ್ನು ನೋಡಿಕೊಂಡ ಹಾಗೆ, ಮಗ ಅವರ ತಾಯಿಯನ್ನು ನೋಡಿಕೊಳ್ಳಬೇಕು ಎಂದು ಹೇಳಿದ್ದಾರಂತೆ. ಅಲ್ಲಿರೋದಕ್ಕೆ ಅಮ್ಮ ಅಳುತ್ತಾರೆ ಎಂದಾಗ, ಅಮ್ಮನ ಕಣ್ಣೀರನ್ನ ನೀನು ಒರೆಸಬೇಕು, ಅಮ್ಮನನ್ನ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಬುದ್ಧಿ ಹೇಳಿದ್ದಾರಂತೆ ವಿನೋದ್ ರಾಜ್. ಮಗ ಈಗ ಅಜ್ಜಿ ಮತ್ತು ಅಪ್ಪ ಕಲಿಸಿದ ದಾರಿಯಲ್ಲಿ ನಡೆಯುತ್ತಿದ್ದಾರೆ. ವಿನೋದ್ ರಾಜ್ ಅವರಿಗೆ ತಮ್ಮ ಕುಟುಂಬದ ಬಗ್ಗೆ ಹೆಮ್ಮೆಯಿದೆ.
ಹೌದು, ವಿನೋದ್ ರಾಜ್ ಅವರು ಮಗನ ಜೀವನಕ್ಕೆ ಒಂದು ಬುನಾದಿ ಹಾಕಿಕೊಟ್ಟಿದ್ದಾರೆ. ಮುಂದೆ ಅವನು ಎಲ್ಲವನ್ನು ನೋಡಿಕೊಂಡು ಹೋದರೆ ಸಾಕು ಅನ್ನೋದು ಅವರ ಅಭಿಪ್ರಾಯ. ಆದರೆ ಇಲ್ಲಿರುವ ಕೃಷಿ ಕೆಲಸ ಇದನ್ನೆಲ್ಲಾ ನೋಡಿಕೊಳ್ಳೋಕೆ ಅಪಾರವಾದ ಅನುಭವ ಬೇಕು ಎನ್ನುವ ವಿನೋದ್ ರಾಜ್ ಅವರು, ಮುಂದೆ ಬದುಕು ಸಾಗುತ್ತಾ ಮಗನಿಗೆ ಆ ಅನುಭವ ತಾನಾಗಿಯೇ ಬರುತ್ತದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಲೀಲಾವತಿ ಅವರು ಒಳ್ಳೇ ರೀತಿಯಲ್ಲಿ ಮಗ ಮತ್ತು ಮೊಮ್ಮಗನನ್ನು ಬೆಳೆಸಿದ್ದು, ಮುಂದೆ ಅವರೆಲ್ಲರ ಜೀವನ ಚೆನ್ನಾಗಿರಲಿ ಎಂದು ಹಾರೈಸೋಣ.