ನವಗ್ರಹ ಸಿನಿಮಾ ಎಷ್ಟು ಸ್ಪೆಷಲ್ ಎಂದು ನಮಗೆಲ್ಲ ಗೊತ್ತೇ ಇದೆ. ಈ ಸಿನಿಮಾ ಒಂದು ರೀತಿ ಹೊಸ ಥರದ ಎಕ್ಸ್ಪೆರಿಮೆಂಟ್. ನವಗ್ರಹ ಸಿನಿಮಾ ನಿರ್ದೇಶನ ಮಾಡಿದವರು ನಟ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ್. ಈ ಸಿನಿಮಾದಲ್ಲಿ 7 ಜನ ನಾಯಕರು, ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ವಿಲ್ಲನ್ ಗಳ. ಮಕ್ಕಳನ್ನು ಕರೆತಂದು, ಎಲ್ಲರನ್ನು ಜೊತೆಯಾಗಿ ಸೇರಿಸಿ ನವಗ್ರಹ ಸಿನಿಮಾ ಮಾಡಲಾಯಿತು. ಈ ಸಿನಿಮಾದಲ್ಲಿ ನಟಿಸಿದ ನಟರಲ್ಲಿ ಗಿರಿ ದಿನೇಶ್ ಅವರು ಸಹ ಕಬ್ಬರು. ನಿನ್ನೆ ರಾತ್ರಿ ನಟ ಗಿರಿ ದಿನೇಶ್ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದುಬಂದಿದೆ. ಇದು ಬಹಳ ದುಃಖದ ಸುದ್ದಿ ಆಗಿದೆ.
ಕನ್ನಡ ಚಿತ್ರರಂಗದ ನೂರಾರು ಸಿನಿಮಾಗಳಲ್ಲಿ ನಟಿಸಿ, ಹೆಸರು ಮಾಡಿದ್ದ ಖ್ಯಾತ ಖಳನಾಯಕ ಹಾಗೂ ಕೆಲವು ಸಿನಿಮಾಗಳಲ್ಲಿ ಹಾಸ್ಯನಟರಾಗಿ ಕೂಡ ನಟಿಸಿ, ಹೆಸರುವಾಸಿ ಆಗಿದ್ದ ಖ್ಯಾತ ನಟ ದಿನೇಶ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇವರು ವಿಭಿನ್ನವಾದ ಶೈಲಿಯಲ್ಲಿ ಮಾತನಾಡುವುದನ್ನು ಜನರು ಇಷ್ಟಪಡುತ್ತಿದ್ದರು. ಇವರ ಮಕ್ಕಳು ಎಲ್ಲರೂ ಸಹ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡವರಲ್ಲ. ಗಿರಿ ದಿನೇಶ್ ಅವರು ಮಾತ್ರ ಚಿತ್ರರಂಗದಲ್ಲಿ ಗುರುತಿಸಿಕೊಂಡವರು, ಆದರೆ ಇವರು ಏನು ಹೆಚ್ಚು ಸಿನಿಮಾಗಳಲ್ಲಿ ನಟಿಸಿದವರಲ್ಲಿ. ಒಂದೆರಡೇ ಸಿನಿಮಾಗಲ್ಲಿ ಇವರು ನಟಿಸಿದ್ದು. ಮೊದಲಿಗೆ ನವಗ್ರಹ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಸೂಪರ್ ಸಸ್ಕಸ್ ಆಗಿತ್ತು.

ನವಗ್ರಹ ಸಿನಿಮಾದಲ್ಲಿ ಡ್ಯುಪ್ಲಿಕೇಟ್ ವಸ್ತುಗಳನ್ನು ತಯಾರಿಸುವ ಶೆಟ್ಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಗಿರಿ ದಿನೇಶ್ ಅವರು. ಸಿನಿಮಾ ಮೂಲಕ ಇವರಿಗೆ ಜನರಿಂದ ಮನ್ನಣೆ ಸಿಕ್ಕಿತ್ತು, ಪಾತ್ರಕ್ಕೆ ಒಳ್ಳೆಯ ಹೆಸರು ಸಹ ಬಂದಿತ್ತು. ಆಗ ಸಿನಿಮಾ ಪ್ರೊಮೋಷನ್ ಗಳಲ್ಲಿ ಪಾಲ್ಗೊಂಡು ಜನರಿಗೆ ಕೂಡ ಹತ್ತಿರವಾಗಿದ್ದರು. ನವಗ್ರಹ ಬಳಿಕ ಗಿರಿ ದಿನೇಶ್ ಅವರು ಕಾಣಿಸಿಕೊಂಡಿದ್ದು ಚಮ್ಕಾಯಿಸಿ ಚಿಂದಿ ಉಡಾಯ್ಸಿ ಸಿನಿಮಾದಲ್ಲಿ. ಇದರಲ್ಲಿ ಸಹ ಒಂದು ಪಾತ್ರದಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾ ಅಷ್ಟೇನು ಯಶಸ್ಸು ಕೊಡಲಿಲ್ಲ. ಇದಾದ ಬಳಿಕ ಗಿರಿ ದಿನೇಶ್ ಅವರು ಇನ್ಯಾವುದೇ ಸಿನಿಮಾದಲ್ಲಿ ನಟಿಸಲೇ ಇಲ್ಲ. ಇವರ ಕೆರಿಯರ್ ಅನ್ನು ಬೇರೆ ಫೀಲ್ಡ್ ನಲ್ಲಿ ನೋಡಿಕೊಂಡಿದ್ದರು ಎನ್ನಲಾಗಿದೆ.
ಮತ್ತೆ ಇವರು ಸಿನಿಮಾದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಅನುಸಾರ ಗಿರಿ ದಿನೇಶ್ ಅವರು ಮದುವೆ ಸಹ ಆಗಿರಲಿಲ್ಲ ಎನ್ನಲಾಗಿದೆ. ತಮ್ಮ ಅಣ್ಣನ ಮನೆಯಲ್ಲಿ ಇದ್ದರು, ಅವರಿಗೆ ಅನಾರೋಗ್ಯ ಸಮಸ್ಯೆ ಉಂಟಾಗಿದ್ದು, ಎಲ್ಲಿಯೂ ಹೊರಗಡೆ ಕಾಣಿಸಿಕೊಳ್ಳುತ್ತಿರಲಿಲ್ಲ ಎಂದು ಹೇಳಲಾಗಿದೆ. ಗಿರಿ ದಿನೇಶ್ ಅವರು ಮನೆಯಲ್ಲಿದ್ದಾಗ ದಿಢೀರ್ ಎಂದು ಕುಸಿದು ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಗಿರಿ ದಿನೇಶ್ ಅವರು ಇನ್ನಿಲ್ಲ ಎಂದು ತಿಳಿದುಬಂದಿದೆ. ಹೆಚ್ಚು ಸಮಯ ಬಾಳಿ ಬದುಕಬೇಕಾದ ನಟ, ಚಂದನವನದಲ್ಲಿ ಗುರುತಿಸಿಕೊಂಡಿದ್ದರೆ ಒಳ್ಳೇ ಸ್ಥಾನಕ್ಕೆ ತಲುಪುತ್ತಿದ್ದರು ಎನ್ನುವುದನ್ನು ಈಗ ಗ್ರಹಿಸಿದರೆ ಇದು ಬಹಳ ಬೇಸರ ತರುವ ವಿಚಾರ.

ಕನ್ನಡ ಚಿತ್ರರಂಗಕ್ಕೆ ಯಾರ ದೃಷ್ಟಿ ಬಿದ್ದಿದೆಯೋ ಏನೋ, ಕಲಾವಿದರು ಬಹಳ ಬೇಗ ದೇವರ ಪಾದ ಸೇರುತ್ತಿದ್ದಾರೆ. ಗಿರಿ ದಿನೇಶ್ ಅವರ ವಿಷಯದಲ್ಲಿ ಸಹ ಇದೇ ರೀತಿ ಆಗಿದೆ. ಯಾರು ಕೂಡ ಇವರಿಗೆ ಇಷ್ಟು ಬೇಗ ಈ ರೀತಿ ಆಗುತ್ತದೆ ಎಂದು ಭಾವಿಸಿರಲಿಲ್ಲ. ಇವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂದು ಸಹ ಗೊತ್ತಿರಲಿಲ್ಲ. ಕೆಲವು ತಿಂಗಳುಗಳ ಹಿಂದೆ ನವಗ್ರಹ ಸಿನಿಮಾ ರೀರಿಲೀಸ್ ಆದಾಗ ಇವರನ್ನು ಸಿನಿಮಾ ಪ್ರಮೋಷನ್ ಗೆ ಬರುವುದಕ್ಕೆ ಕರೆದಾಗ, ತಾವು ಸಿನಿಮಾ ಇಂದ ಕ್ಯಾಮೆರಾ ಇಂದ ಸಂಪೂರ್ಣವಾಗಿ ದೂರ ಉಳಿದಿರುವುದಾಗಿ ಹೇಳಿದರಂತೆ. ಇದಾದ ಕೆಲವೇ ತಿಂಗಳಲ್ಲಿ ಈ ರೀತಿ ಆಗಿರುವುದು ಬೇಸರದ ವಿಷಯ. ಇಡೀ ನವಗ್ರಹ ತಂಡಕ್ಕೆ ಇದು ಅರಗಿಸಿಕೊಳ್ಳಲಾರದ ವಿಷಯ ಎಂದರೆ ತಪ್ಪಲ್ಲ.