ನಟ ಧನಂಜಯ್ ಅವರ ಮದುವೆ ತಯಾರಿ ಬಹಳ ಜೋರಾಗಿ ನಡೆಯುತ್ತಿದೆ. ತಮ್ಮ ಗೆಳತಿ ಡಾ. ಧನ್ಯತಾ ಅವರ ಜೊತೆಗೆ ಫೆಬ್ರವರಿ 16ರಂದು ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆ ಆಗುತ್ತಿದ್ದಾರೆ ನಟ ಧನಂಜಯ್. ಇವರ ಮದುವೆಗೆ ರಾಜಕೀಯ ರಂಗದವರು, ಚಿತ್ರರಂಗದವರು, ಕ್ರೀಡಾಪಟುಗಳು ಇವರೆಲ್ಲರನ್ನು ಸಹ ಕರೆಯುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಹ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಎಲ್ಲರನ್ನು ಕರೆದಿರುವ ನಟ ಧನಂಜಯ್ ನಟ ದರ್ಶನ್ ಅವರಿಗೆ ಮಾತ್ರ ಇನ್ನೂ ಕೂಡ ಮದುವೆ ಆಮಂತ್ರಣ ನೀಡಿಲ್ಲ. ಇದು ಯಾಕೆ? ದರ್ಶನ್ ಅವರನ್ನು ಮಾತ್ರ ಯಾಕೆ ಮದುವೆಗೆ ಕರೆದಿಲ್ಲ ಎನ್ನುವ ಪ್ರಶ್ನೆ ಈಗ ಶುರುವಾಗಿದ್ದು, ಅಭಿಮಾನಿಗಳ ವಲಯದಲ್ಲಿ ಮಾತ್ರವಲ್ಲ ಮಾಧ್ಯಮಗಳ ವಲಯದಲ್ಲಿ ಸಹ ಇದೇ ಪ್ರಶ್ನೆ ಕೇಳಿಬರುತ್ತಿದೆ. ಇದಕ್ಕೆಲ್ಲಾ ಇದೀಗ ಧನಂಜಯ್ ಅವರು ಉತ್ತರ ಕೊಟ್ಟಿದ್ದಾರೆ..
ನಟ ದರ್ಶನ್ ಅವರ ಜೊತೆಗೆ ಸಹ ಧನಂಜಯ್ ಆಪ್ತರಾಗಿದ್ದವರು. ದರ್ಶನ್ ಅವರ ಯಜಮಾನ ಸಿನಿಮಾದಲ್ಲಿ ಧನಂಜಯ್ ಮಿಠಾಯಿ ಸೂರಿ ಅನ್ನೋ ಪಾತ್ರದಲ್ಲಿ ಅಭಿನಯಿಸಿದ್ದು ಗೊತ್ತೇ ಇದೆ. ಆಗಿನಿಂದ ಇವರಿಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇದೆ. ಹಲವು ಬೇರೆ ಕಾರ್ಯಕ್ರಮಗಳಲ್ಲಿ ಧನಂಜಯ್ ಅವರು ದರ್ಶನ್ ಅವರ ಜೊತೆಗೆ ಕಾಣಿಸಿಕೊಂಡಿದ್ದನ್ನು ನೋಡಿದ್ದೇವೆ. ಇಷ್ಟೆಲ್ಲಾ ಆಪ್ತತೆ ಇರುವಾಗ ದರ್ಶನ್ ಅವರನ್ನು ಮದುವೆಗೆ ಕರೆಯದೆ ಇರುವುದು ಯಾಕೆ ಎನ್ನುವ ಒಂದು ಪ್ರಶ್ನೆ ಶುರುವಾಗಿದೆ. ಅದಕ್ಕೆಲ್ಲಾ ಧನಂಜಯ್ ಅವರು ಉತ್ತರ ಕೊಟ್ಟಿದ್ದಾರೆ. ನಿನ್ನೆ ಮಾಧ್ಯಮಗಳ ಎದುರು ತಮ್ಮ ಪತ್ನಿ ಧನ್ಯತಾ ಅವರನ್ನು ಎಲ್ಲರಿಗೂ ಪರಿಚಯ ಮಾಡಿಸಿದ್ದಾರೆ ಧನಂಜಯ್. ಧನ್ಯತಾ ಅವರ ಕೆಲಸದ ಬಗ್ಗೆ ಮಾತನಾಡಿ, ತಮ್ಮಿಬ್ಬರ ಪ್ರೀತಿ ಹೇಗೆ ಶುರುವಾಯಿತು ಎನ್ನುವುದರ ಬಗ್ಗೆ ಮಾತನಾಡಿ, ಇನ್ನು ಅನೇಕ ವಿಚಾರಗಳನ್ನು ಇಬ್ಬರು ಹಂಚಿಕೊಂಡಿದ್ದಾರೆ..

ಅದೇ ವೇಳೆ ದರ್ಶನ್ ಅವರನ್ನು ಯಾಕೆ ಮದುವೆಗೆ ಕರೆದಿಲ್ಲ ಎನ್ನುವ ಪ್ರಶ್ನೆಯನ್ನು ಮಾಧ್ಯಮದವರು ಕೇಳಿದ್ದು, ಅದಕ್ಕೆ ಧನಂಜಯ್ ಅವರು ಉತ್ತರ ನೀಡಿದ್ದಾರೆ. “ಎಲ್ಲರನ್ನು ಮದುವೆಗೆ ಕರೆದಿರೋ ನನಗೆ ದರ್ಶನ್ ಸರ್ ನ ಮದುವೆಗೆ ಕರೀಬೇಕು ಅಂತ ಇರೋದಿಲ್ವಾ. ಅವರನ್ನು ಕರೆಯೋಕೆ ತುಂಬಾ ಪ್ರಯತ್ನ ಪಡ್ತಿದ್ದೀನಿ ಆದರೆ ಅವರು ರೀಚ್ ಗೆ ಸಿಗ್ತಿಲ್ಲ. ಹಾಗಾಗಿ ಇಲ್ಲಿಂದಲೇ ಅವರನ್ನ ಪ್ರೀತಿಯಿಂದ ಮದುವೆಗೆ ಕರೀತಿನಿ..” ಎಂದು ಹೇಳಿದ್ದಾರೆ ನಟ ಧನಂಜಯ್. ದರ್ಶನ್ ಅವರನ್ನು ಮದುವೆಗೆ ಕರೆಯುವ ವಿಚಾರವಾಗಿ ಇದ್ದಿದ್ದ ಗೊಂದಲಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಆದರೆ ನೆಟ್ಟಿಗರ ವಲಯದಲ್ಲಿ ಹಾಗೂ ದರ್ಶನ್ ಅವರ ಅಭಿಮಾನಿಗಳು ಈ ಮಾತಿಗೆ ಬೇರೆಯದೇ ಅರ್ಥ ಕೊಡುತ್ತಿದ್ದಾರೆ. ಅವರಃ ಸಿನಿಮಾಗಳನ್ನು ಪ್ರೊಮೋಟ್ ಮಾಡಿ ಕೊಡೋದಕ್ಕೆ ದರ್ಶನ್ ಅವರು ಬೇಕಿತ್ತು.

ಈಗ ಮದುವೆಗೆ ಕರೆಯೋದಕ್ಕೆ ದರ್ಶನ್ ಅವರು ರೀಚ್ ಗೆ ಸಿಗ್ತಿಲ್ಲ ಅಂತಾರೆ. ಬೆಳೆಯೋದಕ್ಕೆ ಮಾತ್ರ ಇವರಿಗೆಲ್ಲ ದರ್ಶನ್ ಅವರು ಬೇಕು ಎಂದು ಡಾಲಿ ಧನಂಜಯ್ ಅವರ ಮಾತಿಗೆ ಟಾಂಗ್ ಕೊಟ್ಟಿದ್ದಾರೆ ನಟ ದರ್ಶನ್ ಅವರ ಅಭಿಮಾನಿಗಳು. ಆದರೆ ಧನಂಜಯ್ ಅವರು ಹೇಳಿರುವ ಮಾತೇ ಬೇರೆ. ನಿಜಕ್ಕೂ ಅವರಿಬ್ಬರ ನಡುವೆ ಏನಾದರೂ ಸಮಸ್ಯೆ ಇದೆಯಾ? ಹಾಗೊಂದು ವೇಳೆ ಸಮಸ್ಯೆ ಇದ್ದರೆ ಅದು ಅವರಿಬ್ಬರ ವೈಯಕ್ತಿಕ ವಿಷಯ, ಅದನ್ನು ಅವರಿಬ್ಬರು ಕೂತು ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಅಭಿಮಾನಿಗಳು ನೆಟ್ಟಿಗರು ಈ ವಿಷಯದ ಬಗ್ಗೆ ತಲೆ ಕೆಡಿಸಿಕೊಂಡು ಕೂತರೆ ಏನು ಸಿಗುತ್ತದೆ ಎನ್ನುವ ಪ್ರಶ್ನೆಗೆ ಮಾತ್ರ ಉತ್ತರವಿಲ್ಲ. ಆದರೆ ದರ್ಶನ್ ಅವರ ವಿಷಯ ಎಂದು ಬಂದಾಗ, ಅಭಿಮಾನಿಗಳ ಬಗ್ಗೆ ಎಲ್ಲರೂ ಸ್ವಲ್ಪ ಎಚ್ಚರಿಕೆ ಇಂದಲೇ ಇರಬೇಕು. ಇವರ ಫ್ಯಾನ್ಸ್ ಹೇಗೆ ಅಂತ ಎಲ್ಲರಿಗೂ ಗೊತ್ತಲ್ಲ..
ಇನ್ನು ಧನಂಜಯ್ ಅವರ ಬಗ್ಗೆ ನಾವ್ಯಾರು ಹೊಸದಾಗಿ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ. ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿದ್ದು, ಕಷ್ಟಪಟ್ಟು ಇಂದು ಎತ್ತರಕ್ಕೆ ಬೆಳೆದಿರುವ ಹುಡುಗ ಇವರು. ಚೆನ್ನಾಗಿ ಓದಿ, ಇನ್ಫೋಸಿಸ್ ನಲ್ಲಿ ಕೆಲಸ ಪಡೆದು, ಆ ಕೆಲಸ ಬಿಟ್ಟು ನಟನೆಗೆ ಬಂದು, ಇಲ್ಲಿಯೂ ಕಷ್ಟಪಟ್ಟು, ಅವಮಾನಗಳನ್ನು ಅನುಭವಿಸಿ ಇಂದು ಡಾಲಿ ಧನಂಜಯ್ ಆಗಿ ಬೆಳೆದು ನಿಂತಿದ್ದಾರೆ. ಹೀರೋ ಆಗಿ ಧನಂಜಯ್ ಅವರು ಅಂದುಕೊಂಡ ಹಾಗೆ ಯಶಸ್ಸು ಸಿಗದೇ, ಅವಮಾನಗಳು ಹೆಚ್ಚಾದಾಗ ಇವರ ಕೈಹಿಡಿದಿದ್ದು ಟಗರು ಸಿನಿಮಾದ ಡಾಲಿ ಪಾತ್ರ. ವಿಲ್ಲನ್ ಆಗಿ ಅಬ್ಬರಿಸಿದ ಧನಂಜಯ್ ಅವರು ಎಲ್ಲರಿಗೂ ಇಷ್ಟವಾದರು. ಡಾಲಿ ಪಾತ್ರ ಇವರಿಗೆ ಮರುಹುಟ್ಟು ನೀಡಿತು ಎಂದರು ತಪ್ಪಲ್ಲ. ಇವರ ಹೆಸರ ಜೊತೆಯಲ್ಲೇ ಈಗ ಡಾಲಿ ಅನ್ನೋ ಹೆಸರು ಸಹ ಸೇರಿಕೊಂಡಿದೆ. ಇಂದು ನಟನಾಗಿ ಮತ್ತು ನಿರ್ಮಾಪಕನಾಗಿ ಸಹ ಹೆಸರು ಮಾಡಿದ್ದಾರೆ ಧನಂಜಯ್.

ತಾವು ಬೆಳೆಯುವುದರ ಜೊತೆಗೆ ತಮ್ಮ ಜೊತೆಗೆ ಇರುವವರನ್ನು ಸಹ ಬೆಳೆಸುತ್ತಿದ್ದಾರೆ. ಸ್ನೇಹಿತರಿಗಾಗಿ ಒಳ್ಳೊಳ್ಳೆಯ ಕಥೆ ಇರುವ ಸಿನಿಮಾಗಳನ್ನು ಧನಂಜಯ್ ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಇವರು ವೈಯಕ್ತಿಕ ಜೀವನದಲ್ಲಿ ಮುಂದಿನ ಹಂತಕ್ಕೆ ಹೋಗುವುದಕ್ಕೆ ಸಿದ್ಧವಾಗಿದ್ದು, ಇದೇ ತಿಂಗಳು 16ರಂದು ಧನಂಜಯ್ ಅವರ ಮದುವೆ ನಡೆಯಲಿದೆ. ಗೈನಕಾಲಜಿಸ್ಟ್ ಆಗಿರುವ ಡಾಕ್ಟರ್ ಧನ್ಯತಾ ಅವರ ಜೊತೆಗೆ ಧನಂಜಯ್ ಅವರ ಮದುವೆ ನಡೆಯುತ್ತಿದೆ. ಇವರಿಬ್ಬರಿಗೂ ಆಡಂಬರದ ಮದುವೆ ಇಷ್ಟವಿಲ್ಲ, ಮೊದಲಿಗೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಬೇಕು ಎಂದು ಪ್ಲಾನ್ ಮಾಡಿದ್ದರಂತೆ, ಆದರೆ ಮನೆಯವರು ಮತ್ತು ಸ್ನೇಹಿತರ ಒತ್ತಾಯದ ಕಾರಣ ಇಬ್ಬರು ಅದ್ಧೂರಿಯಾಗಿ ಮದುವೆಯಾಗುತ್ತಿದ್ದಾರೆ. ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ಸ್ ನಲ್ಲಿ ಇವರಿಬ್ಬರ ಮದುವೆ ನಡೆಯಲಿದೆ.

ಮದುವೆಗೆ ಸ್ಯಾಂಡಲ್ ವುಡ್ ಸ್ಟಾರ್ ಗಳು, ರಾಜಕೀಯ ರಂಗದ ಗಣ್ಯರು, ಕ್ರೀಡಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಇರುವವರು ಎಲ್ಲರೂ ಸಹ ಬರಲಿದ್ದಾರೆ. ಮೈಸೂರು ಅದ್ಧೂರಿ ಮದುವೆಯೊಂದಕ್ಕೆ ಸಾಕ್ಷಿ ಆಗಲಿದೆ. ಇನ್ನು ಧನಂಜಯ್ ಧನ್ಯತಾ ಇಬ್ಬರದ್ದು ಲವ್ ಮ್ಯಾರೇಜ್. ಕಾಮನ್ ಫ್ರೆಂಡ್ಸ್ ಮೂಲಕ ಭೇಟಿಯಾದ ಇವರು, ಮೊದಲಿಗೆ ಫ್ರೆಂಡ್ಸ್ ಆಗಿದ್ದು, ನಂತರ ಪ್ರೀತಿ ಮಾಡುವುದಕ್ಕೆ ಶುರು ಮಾಡಿದರು. ಇವರಿಬ್ಬರ ಪ್ರೀತಿಯನ್ನ ಮನೆಯವರು ಒಪ್ಪಿಕೊಂಡು, ಮದುವೆ ಮಾಡುತ್ತಿದ್ದಾರೆ . ಇಷ್ಟು ದಿವಸ ಸಿಂಗಲ್ ಆಗಿದ್ದ ಧನಂಜಯ್ ಅವರು ಈಗ ಮದುವೆಯಾಗಿ, ಹೊಸ ಜೀವಮ ಶುರು ಮಾಡುತ್ತಿದ್ದು, ಹೊಸ ಜೋಡಿಗೆ ಒಳ್ಳೆಯದಾಗಲಿ ಎಂದು ನಾವು ಸಹ ವಿಶ್ ಮಾಡೋಣ.